ಬೆಂಗಳೂರು | 214ನೇ ಫಲಪುಷ್ಪ ಪ್ರದರ್ಶನ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

Date:

  • ಇಂದಿನಿಂದ ಆ.15 ರವರೆಗೆ ಲಾಲ್‌ಬಾಗ್​ನಲ್ಲಿ ಫಲಪುಷ್ಪ ಪ್ರದರ್ಶನ
  • ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯ ಪ್ರತಿಮೆ ಈ ಬಾರಿಯ ವಿಶೇಷ

76ನೇ ಸ್ವಾತಂತ್ರೋತ್ಸವದ ಹಿನ್ನೆಲೆಯಲ್ಲಿ ಬೆಂಗಳೂರಿನ ಲಾಲ್‌ಬಾಗ್​ನಲ್ಲಿ ಆಯೋಜಿಸಲಾಗಿರುವ 214ನೇ ಫಲಪುಷ್ಪ ಪ್ರದರ್ಶನವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ‘ಲಾಲ್‌ಬಾಗ್ ವಿಶ್ವದಲ್ಲೇ ಪ್ರಸಿದ್ಧವಾದಂತಹ ಒಂದು ಉದ್ಯಾನವನ. ಸುಮಾರು 240 ಎಕರೆ ವಿಸ್ತೀರ್ಣ ಇರುವ ಉದ್ಯಾನವನ. ಎಲ್ಲ ರೀತಿಯ ಮರಗಿಡಗಳನ್ನು ಹೊಂದಿದೆ. ಬ್ರಿಟೀಷರ ಕಾಲದಿಂದಲೇ ಇದ್ದ ಐತಿಹಾಸಿಕ ಉದ್ಯಾನವನ. 140 ಎಕರೆ ಇದ್ದ ಪ್ರದೇಶವನ್ನು ಕೆಂಗಲ್ ಹನುಮಂತಯ್ಯನವರ ಕಾಲದಲ್ಲಿ 240 ಎಕರೆಯಾಗಿ ಮೇಲ್ದರ್ಜೆಗೇರಿಸಿ, ಅಭಿವೃದ್ಧಿಪಡಿಸಲಾಗಿದೆ. ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯ ಅವರ ಪ್ರತಿಮೆ ಈ ಬಾರಿಯ ವಿಶೇಷ ಆಕರ್ಷಣೆ’ ಎಂದರು.

ಈ ಸಂದರ್ಭದಲ್ಲಿ ತೋಟಗಾರಿಕಾ ಸಚಿವ ಎಸ್ ಎಸ್ ಮಲ್ಲಿಕಾರ್ಜುನ, ಸ್ಥಳೀಯ ಶಾಸಕ ಉದಯ್ ಗರುಡಾಚಾರ್, ಕೆಂಗಲ್ ಹನುಮಂತಯ್ಯ ಅವರ ಮೊಮ್ಮಗ ಶ್ರೀಪಾದು ರೇಣು, ಗೋವಿಂದರಾಜು, ಪರಿಷತ್ ಸದಸ್ಯ ಶರವಣ ಮತ್ತಿತರರು ಉಪಸ್ಥಿತರಿದ್ದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಆಗಸ್ಟ್ 15ರವರೆಗೆ ಪ್ರದರ್ಶನ

ಇಂದು ಉದ್ಘಾಟನೆಯಾಗಿರುವ ಫಲಪುಷ್ಪ ಪ್ರದರ್ಶನವು ಆ.15 ರವರೆಗೆ ನಡೆಯಲಿದೆ. ತೋಟಗಾರಿಕಾ ಇಲಾಖೆಯಿಂದ ಆಯೋಜನೆಯಾಗಿರುವ ಹನ್ನೆರಡು ದಿನಗಳ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಸುಮಾರು ಎಂಟರಿಂದ ಹತ್ತು ಲಕ್ಷ ಜನರ ಆಗಮನದ ನಿರೀಕ್ಷೆಯಿದ್ದು, ಸಂಚಾರ ದಟ್ಟಣೆಯಾಗದಂತೆ ಕೆಲ ಮಾರ್ಪಾಡುಗಳನ್ನು ಮಾಡಲಾಗಿದೆ.

ವಿಶೇಷ ಆಕರ್ಷಣೆಯಾಗಿರಲಿದೆ ಕೆಂಗಲ್ ಹನುಮಂತಯ್ಯ ಪ್ರತಿಮೆ

ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯ ಅವರ ಸ್ಮರಣಾರ್ಥವಾಗಿ ಈ ಬಾರಿಯ ಪ್ರದರ್ಶನವನ್ನು ಅರ್ಪಿಸಲಾಗಿದೆ. ಈ ಪ್ರದರ್ಶನ 214ನೇಯದ್ದಾಗಿದ್ದು ಕೆಂಗಲ್ ಹನುಮಂತಯ್ಯ ಅವರ ಹಿರಿಮೆ ಮತ್ತು ನಾಡಿಗೆ ಅವರು ನೀಡಿದ ಕೊಡುಗೆಗಳನ್ನು ತಿಳಿಸುವ ಪ್ರಯತ್ನ ಮಾಡಲಾಗಿದೆ.

ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಪ್ರದರ್ಶನ ನಡೆಸಲಾಗುತ್ತಿದೆ. 4 ಅಡಿ ಎತ್ತರದ ಪೀಠದ ಮೇಲೆ 14 ಅಡಿ ಎತ್ತರದ ಬೃಹತ್ ಹೂವಿನ ಕೆಂಗಲ್ ಹನುಮಂತಯ್ಯ ಅವರ ಪ್ರತಿಮೆ ವಿಶೇಷ ಆಕರ್ಷಣೆಯಾಗಿದೆ.

ಇನ್ನುಳಿದಂತೆ, ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ಅವರು ನಿರ್ಮಿಸಿದ ವಿಧಾನಸೌಧದ ಮತ್ತು ಶಿವಪುರ ಸತ್ಯಾಗ್ರಹಸೌಧದ ಪುಷ್ಪ ಮಾದರಿ ಜನರನ್ನು ಆಕರ್ಷಿಸಲಿವೆ. ರೈಲ್ವೆ ಸಚಿವರಾಗಿ ಕೆಂಗಲ್ ಹನುಮಂತಯ್ಯ ಅವರ ಕೊಡುಗೆಗಳನ್ನು ನೆನಪಿಸುವ ಸಲುವಾಗಿ ವರ್ಟಿಕಲ್ ಗಾರ್ಡನ್ ಪರಿಕಲ್ಪನೆಯಲ್ಲಿ ಪುಷ್ಪಗಳಿಂದ ಸಜ್ಜಾದ ರೈಲು ಕೂಡ ಮುಖ್ಯ ಆಕರ್ಷಣೆಗಳಲ್ಲಿ ಒಂದಾಗಿದೆ.

ಲಕ್ಷಾಂತರ ಎಕ್ಕೋಟಿಕ್ ಆರ್ಕಿಡ್ ಬರ್ಡ್ ಆಫ್ ಪ್ಯಾರಡೈಸ್, ಬೋಮಿಲಿಯಾದ್ ಅಂದೂರಿಯಂ, ಹತ್ತಾರು ಬಗೆಯ ವಾರ್ಷಿಕ ಹೂಗಳು ವಿವಿಧ ಪೊಲೀಸ್ ಜಾತಿಯ ಗಿಡಗಳನ್ನು ಬಳಸಿ ಅಮೆರಿಕನ್ ಹೈಬ್ರಿಡ್ ಸೀಡ್ ಕಂಪನಿ ಕಿಂಗಲ್ ಹನುಮಂತಯ್ಯ ಪ್ರತಿಮೆ ವಿನ್ಯಾಸ ಮಾಡಲಾಗಿದೆ.

18 ಅಡಿ ಎತ್ತರದ ವಿಧಾನಸೌಧದ ಪುಷ್ಪ ಮಾದರಿಯನ್ನು ಕಬ್ಬಿಣ ಮೆಷ್ ಮೊದಲಾದ ವಸ್ತುಗಳನ್ನು ಬಳಸಿ ಕೆಂಪು, ಪೀಚ್, ಹಳದಿ, ರಗ್ಸ್ ಆರೇಂಜ್ ಮತ್ತು ಶ್ವೇತ ವರ್ಣದ ಡಚ್ ಗುಲಾಬಿ ಹೂಗಳು, ಪಿಂಚ್ ಕೆಂಪು ಗುಲಾಬಿ, ಶ್ವೇತ ವರ್ಣದ ಸೇವಂತಿಗೆ ಹೂಗಳನ್ನು ಬಳಸಿ ನಿರ್ಮಿಸಲಾಗಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಮೌಢ್ಯತೆ ಆಚರಿಸುವ ದೇಶಗಳ ಅಭಿವೃದ್ಧಿ ಸಾಧ್ಯವಿಲ್ಲ: ಡಾ. ಜಯದೇವಿ ಗಾಯಕವಾಡ

ಯಾವ ದೇಶದಲ್ಲಿ ಮೌಢ್ಯ ಸಂಪ್ರದಾಯಗಳ ಆಚರಣೆ ಇರುತ್ತವೆಯೋ, ಅಂತಹ ದೇಶಗಳ ಅಭಿವೃದ್ಧಿ...

ಗದಗ | ₹5 ಕೋಟಿ ವೆಚ್ಚದಲ್ಲಿ 13 ಸ್ಮಾರಕಗಳ ರಕ್ಷಣೆ; ಕಾಮಗಾರಿಗೆ ಶಿಲಾನ್ಯಾಸ

13 ಅಸುರಕ್ಷಿತ ಸ್ಮಾರಕಗಳ ಸಂರಕ್ಷಣೆ ಮಾಡಲು ₹5 ಕೋಟಿ ವೆಚ್ಚದಲ್ಲಿ ಕಾಮಗಾರಿಗಳ...

ಕೊಪ್ಪಳ | ಗಣೇಶ ಚತುರ್ಥಿಯ ಮರುದಿನ ಮುಸ್ಲಿಮರ ಈ ಮನೆಯಲ್ಲಿ ಇಲಿ ಪೂಜೆ!

ಡೊಳ್ಳು ಹೊಟ್ಟೆ ಗಣಪನಿಗೆ ಮೂಷಿಕ(ಇಲಿ)ವು ವಾಹನ ಎಂಬುದು ಹಿಂದೂಗಳ ನಂಬಿಕೆ. ಗಣೇಶ...

ಮಂಡ್ಯ | ವಚನ ದರ್ಶನ ಪುಸ್ತಕದ ಮೂಲಕ ಬಸವಣ್ಣನ ಆಲೋಚನೆಗಳಿಗೆ ಧಕ್ಕೆ: ಮುಕುಂದರಾಜ್

ಕನ್ನಡ ಸಾರಸ್ವತ ಲೋಕದಲ್ಲಿ ವಚನ ದರ್ಶನ ಪುಸ್ತಕ ಹೊರತರುವ ಮೂಲಕ ಇತಿಹಾಸವನ್ನು...