ಸಿಎಎ ಜಾರಿ | ಪಾಕಿಸ್ತಾನದವ ನಿಮ್ಮ ಮನೆ ಬಳಿ ಬಂದು ಮೊಕ್ಕಾಂ ಹೂಡಿದರೆ ಸುಮ್ಮನಿರ್ತೀರಾ? ಕೇಜ್ರಿವಾಲ್

Date:

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಾಗಲೇ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಮೋದಿ ಸರ್ಕಾರವು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ದೇಶಾದ್ಯಂತ ಜಾರಿ ಮಾಡಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವ ನಡುವೆಯೇ, ದೇಶದ ಜನರನ್ನುದ್ದೇಶಿಸಿ ಮಾತನಾಡಿರುವ ದೆಹಲಿಯ ಸಿಎಂ ಅರವಿಂದ್ ಕೇಜ್ರಿವಾಲ್, “ಸಿಎಎಯ ಮೂಲಕ ನಾಗರಿಕ ಪಡೆದ ಪಾಕಿಸ್ತಾನದವನೊಬ್ಬ, ನಿಮ್ಮ ಮನೆ ಬಳಿ ಬಂದು ಮೊಕ್ಕಾಂ ಹೂಡಿದರೆ ನೀವು ಸುಮ್ಮನಿರ್ತೀರಾ?” ಎಂದು ಕೇಳಿದ್ದಾರೆ.

“ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಸುಮಾರು 3 ಕೋಟಿ ಜನರು ಅಲ್ಪಸಂಖ್ಯಾತರಿದ್ದಾರೆ. ಇವೆಲ್ಲವೂ ಬಡ ರಾಷ್ಟ್ರಗಳು. ಈ ಪೈಕಿ 2.5-3 ಕೋಟಿ ಜನರು ಆಶ್ರಯ ಕೇಳಿಕೊಂಡು ನಮ್ಮ ದೇಶಕ್ಕೆ ವಲಸೆ ಬರಲು ಪ್ರಾರಂಭಿಸುತ್ತಾರೆ. ಒಂದು ವೇಳೆ ಒಂದೂವರೆ ಕೋಟಿ ಜನರು ಭಾರತಕ್ಕೆ ಬಂದರೆ ಅವರಿಗೆ ಎಲ್ಲಿ ನೆಲೆ ನೀಡುತ್ತೀರಾ? ಅವರಿಗೆ ನಾವು ಉದ್ಯೋಗ ಕೊಡುವುದು ಹೇಗೆ? ನಮ್ಮ ಜನರಿಗೆ ಇರುವ ಉದ್ಯೋಗಗಳು ಅವರಿಗೆ ಹೋಗುತ್ತವೆ. ಇಡೀ ಕಾನೂನು ಸುವ್ಯವಸ್ಥೆ ಕುಸಿಯಲಿದೆ. ದರೋಡೆ, ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತವೆ. ಗಲಭೆಗಳು ಕೂಡ ಆಗಬಹುದು. ನಮ್ಮ ದೇಶದ ಭದ್ರತೆಯ ಸ್ಥಿತಿ ಏನಾಗಬಹುದು? ಒಮ್ಮೆ ಯೋಚಿಸಿ” ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.

“ನಿಮ್ಮ ಮನೆಯ ಬಳಿ ಪಾಕಿಸ್ತಾನದವನೊಬ್ಬ ಬಂದು ಮೊಕ್ಕಾಂ ಹೂಡಿದರೆ ನೀವು ಸುಮ್ಮನಿರ್ತೀರಾ?” ಎಂದು ದೇಶದ ನಾಗರಿಕರಲ್ಲಿ ಪ್ರಶ್ನಿಸಿದ ಕೇಜ್ರಿವಾಲ್, “ನಾವು ಬೇರೆ ದೇಶಗಳಿಂದ ಪಾಠ ಕಲಿಯಬೇಕು. ಯುಕೆ, ಕೆನಡಾದವರು ಕೂಡ ಬಂದವರಿಗೆಲ್ಲ ಪೌರತ್ವ ಕೊಡುತ್ತಾ ಹೋದರು. ಇವತ್ತು ಕೆನಡಾದ ಪರಿಸ್ಥಿತಿ ಏನಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಬಂದವರಿಗೆಲ್ಲಾ ಪೌರತ್ವ ಕೊಟ್ಟು ಇಂದು ಕೆನಡಾದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಆರ್ಥಿಕ ವ್ಯವಸ್ಥೆಯೇ ಬುಡಮೇಲಾಗಿದೆ. ಬುದ್ಧಿ ಬಂದ ಬಳಿಕ ಪೌರತ್ವ ನೀಡುವುದನ್ನು ನಿಲ್ಲಿಸಿದ್ದಾರೆ” ಎಂದು ತಿಳಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಒಂದು ವೇಳೆ ನೀವು ಕರೆತರುವುದಾದದರೆ ದೇಶಬಿಟ್ಟು ಹೋಗಿರುವ 11 ಲಕ್ಷ ಶ್ರೀಮಂತರನ್ನು ಮರಳಿ ಕರೆತನ್ನಿ. ಅವರ ಮೂಲಕ ಕಂಪೆನಿಗಳನ್ನು ಆರಂಭಿಸಿ, ನಮ್ಮಲ್ಲಿನ ಯುವಕರಿಗೆ ಉದ್ಯೋಗ ನೀಡಿ” ಎಂದು ಮನವಿ ಮಾಡಿದ ಕೇಜ್ರಿವಾಲ್, “ಬಿಜೆಪಿಯ ನೀಚ ವೋಟ್‌ ಬ್ಯಾಂಕ್ ರಾಜಕಾರಣಕ್ಕಾಗಿ ನೆರೆ ರಾಷ್ಟ್ರಗಳಲ್ಲಿರುವ ಜನರನ್ನು ಭಾರತಕ್ಕೆ ಕರೆತರಲಾಗುತ್ತಿದೆ. ಸಿಎಎ ಈಶಾನ್ಯ ರಾಜ್ಯಗಳಿಗೆ ಹೆಚ್ಚಿನ ಹಾನಿಯನ್ನುಂಟು ಮಾಡುತ್ತದೆ. ಇತರ ದೇಶಗಳು ಹೊರಗಿನವರು ಬರುವುದನ್ನು ನಿಲ್ಲಿಸುತ್ತವೆ. ಆದರೆ ಬಿಜೆಪಿ ಚುನಾವಣಾ ಲಾಭಕ್ಕಾಗಿ ಸಿಎಎ ತಂದಿದೆ. ತಮ್ಮ ದೇಶದ ಹಕ್ಕುಗಳನ್ನು ಪಾಕಿಸ್ತಾನಿಗಳಿಗೆ ನೀಡುತ್ತಿದ್ದಾರೆ. ಸಿಎಎ ಹಿಂಪಡೆಯಬೇಕು ಎಂದು ದೇಶ ಒತ್ತಾಯಿಸುತ್ತಿದೆ” ಎಂದರು.

ಇದನ್ನು ಓದಿದ್ದೀರಾ? ‘ಫ್ರೇಸರ್‌ ಟೌನ್‌ ರಮಝಾನ್ ಫುಡ್ ಫೆಸ್ಟ್‌’ಗೆ ಬ್ರೇಕ್‌: ಸ್ಥಳೀಯರ ಗಟ್ಟಿ ನಿರ್ಧಾರಕ್ಕೆ ಬಿಬಿಎಂಪಿ ಸಾಥ್

“ಬಿಜೆಪಿಯವರಿಗೆ ಇಲ್ಲಿರುವ ನಮ್ಮ ಮಕ್ಕಳಿಗೆ ಕೆಲಸ ಕೊಡಲು ಸಾಧ್ಯವಿಲ್ಲ. ಆದರೆ ಪಾಕಿಸ್ತಾನದಿಂದ ಬರುವ ಮಕ್ಕಳಿಗೆ ಕೆಲಸ ಕೊಡಲು ಬಯಸುತ್ತಾರೆ. ನಮ್ಮ ಅನೇಕ ಜನರು ನಿರಾಶ್ರಿತರಾಗಿದ್ದಾರೆ. ಆದರೆ ಬಿಜೆಪಿ ಪಾಕಿಸ್ತಾನದಿಂದ ಬರುವ ಜನರನ್ನು ಇಲ್ಲಿ ನೆಲೆ ನೀಡಲು ಬಯಸುತ್ತದೆ. ಅವರು ನಮ್ಮ ಕೆಲಸವನ್ನು ವಿದೇಶಿ ಮಕ್ಕಳಿಗೆ ನೀಡಲು ಬಯಸುತ್ತಾರೆ. ಪಾಕಿಸ್ತಾನಿಗಳನ್ನು ನಮ್ಮ ಹಕ್ಕಿನ ಮನೆಗಳಲ್ಲಿ ನೆಲೆಸಲು ಬಿಜೆಪಿ ನಾಯಕರು ಬಯಸುತ್ತಾರೆ. ಭಾರತ ಸರ್ಕಾರದ ಬಳಿ ಇರುವ ಹಣವನ್ನು ನಮ್ಮ ಕುಟುಂಬ ಮತ್ತು ದೇಶದ ಅಭಿವೃದ್ಧಿಗೆ ಬಳಸಬೇಕು. ಆದರೆ ಪಾಕಿಸ್ತಾನಿಗಳನ್ನು ನೆಲೆಗೊಳಿಸಲು ಇದನ್ನು ಬಳಸಲಾಗುತ್ತಿದೆ” ಎಂದು ದೆಹಲಿ ಸಿಎಂ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

26/11 ದಾಳಿಯ ಉಗ್ರ ಕಸಬ್‌ನನ್ನು ಗಲ್ಲಿಗೇರಿಸಲು ವಾದ ಮಂಡಿಸಿದ್ದ ವಕೀಲ ಮುಂಬೈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ

ಮುಂಬೈನ 26/11ರ ಭಯೋತ್ಪಾದನಾ ದಾಳಿಯಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದ ವಕೀಲ ಉಜ್ವಲ್...

ಪಿಎಂ ಮೋದಿ ಸೂಪರ್‌ ಮ್ಯಾನ್ ಅಲ್ಲ ದುಬಾರಿ ಮ್ಯಾನ್: ಪ್ರಿಯಾಂಕಾ ಗಾಂಧಿ ವ್ಯಂಗ್ಯ

ಪ್ರಧಾನಿ ನರೇಂದ್ರ ಮೋದಿ ಸೂಪರ್ ಮ್ಯಾನ್ ಅಲ್ಲ ಬದಲಾಗಿ ಅವರು ದುಬಾರಿ...

ಅರವಿಂದ್ ಕೇಜ್ರಿವಾಲ್ ಆರೋಗ್ಯವಾಗಿದ್ದಾರೆ, ಆದರೆ ದಿನಕ್ಕೆ ಎರಡು ಡೋಸ್ ಇನ್ಸುಲಿನ್ ನೀಡಲಾಗುತ್ತಿದೆ: ವೈದ್ಯರು

ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್...

Fact Check | ಹಿಮಾಚಲದಲ್ಲಿ ಪ್ರಿಯಾಂಕಾ ಗಾಂಧಿ ಅಕ್ರಮವಾಗಿ ಬಂಗಲೆ ಖರೀದಿಸಿಲ್ಲ!

ಲೋಕಸಭಾ ಚುನಾವಣೆಯ ಸಮಯದಲ್ಲಿ ಹಿಮಾಚಲ ಪ್ರದೇಶದ ಛರಾಬ್ರಾದಲ್ಲಿರುವ ಪ್ರಿಯಾಂಕಾ ಗಾಂಧಿ ಅವರ...