20 ವರ್ಷಗಳಾದರೂ ಸೇನೆಗೆ ಸಿಗದ ಬಂದೂಕು; ಸಿಎಜಿ ವರದಿಯಲ್ಲಿ ಮಹತ್ವದ ಅಂಶ ಬಹಿರಂಗ

Date:

ಮಾರ್ಚ್ 2022ರ ವೇಳೆಗೆ ಶೇ 8ರಷ್ಟು ಆಧುನಿಕ ಫಿರಂಗಿ ಬಂದೂಕುಗಳನ್ನು (ಹೊವಿಟ್ಜರ್‌) ಮಾತ್ರ ಭೂಸೇನೆಗೆ ಒದಗಿಸಲಾಗಿದೆ ಎಂಬ ಮಹತ್ವದ ಮಾಹಿತಿಯು ಸಿಎಜಿ ವರದಿಯಲ್ಲಿ ಹೊರಬಿದ್ದಿದೆ.

ಭಾರತೀಯ ಸೇನೆಯಲ್ಲಿರುವ ಹಳೆಯ ತಲೆಮಾರಿನ ಫಿರಂಗಿ ಬಂದೂಕುಗಳನ್ನು ಬದಲಾಯಿಸುವ ಪ್ರಸ್ತಾವನೆಗೆ 20 ವರ್ಷ ಕಳೆದರೂ ಮುಕ್ತಿ ಸಿಕ್ಕಿಲ್ಲ. ಉದ್ದೇಶಿತ ಸ್ವಾಧೀನದ ಶೇ 77ರಲ್ಲಿ ಯಾವುದೇ ಪ್ರಗತಿ ಆಗಿಲ್ಲ ಎಂದು ಲೆಕ್ಕಪರಿಶೋಧನೆ ಮತ್ತು ನಿಯಂತ್ರಕ (ಸಿಎಜಿ) ವರದಿ ಹೇಳಿದೆ.

ಮಾರ್ಚ್ 2022ರ ವೇಳೆಗೆ ಶೇ 8ರಷ್ಟು ಆಧುನಿಕ ಫಿರಂಗಿ ಬಂದೂಕುಗಳನ್ನು (ಹೊವಿಟ್ಜರ್‌) ಮಾತ್ರ ಭೂಸೇನೆಗೆ ಒದಗಿಸಲಾಗಿದೆ ಎಂಬ ಮಹತ್ವದ ಮಾಹಿತಿಯು ಸಿಎಜಿ ವರದಿಯಲ್ಲಿ ಹೊರಬಿದ್ದಿದೆ.

ಭಾರತೀಯ ಸೇನೆಗೆ ವಿವಿಧ ಶ್ರೇಣಿಯ ಆಧುನಿಕ ಫಿರಂಗಿಗಳನ್ನು ಖರೀದಿಸುವ ಐದು ಯೋಜನೆಗಳಲ್ಲಿ, ಕೇವಲ ಎರಡು ಮಾತ್ರ ಇಲ್ಲಿಯವರೆಗೆ ಸಾಕಾರಗೊಂಡಿದೆ. ಇದರಲ್ಲಿ ಕೆ-9 ವಜ್ರ ಮತ್ತು ಎಂ-777 ಹಗುರ ಫಿರಂಗಿ ಬಂದೂಕುಗಳ (ಅಲ್ಟ್ರಾ ಲೈಟ್ ಹೊವಿಟ್ಜರ್‌) ಪೈಕಿ ಕೇವಲ 9 ಪ್ರತಿಶತದಷ್ಟು ಮಾತ್ರ ಸೇನೆಯ ಬಳಕೆಗೆ ಲಭ್ಯವಾಗಿದೆ ಎಂದು ಸಿಎಜಿ ವರದಿ ತಿಳಿಸಿದೆ.

ಹಳೆಯ ತಲೆಮಾರಿನ 130 ಎಂಎಂ ಬಂದೂಕುಗಳನ್ನು ಬದಲಾಯಿಸುವ ಆರನೇ ಯೋಜನೆಯಡಿ ಮಾರ್ಚ್ 2022ರ ವೇಳೆಗೆ ಶೇ 16ರಷ್ಟು ಮಾತ್ರ ಸೇನೆಗೆ ಪೂರೈಕೆಯಾಗಿದೆ ಎಂದು ಸಿಎಜಿ ಹೇಳಿದೆ.

155mm/52-ಕ್ಯಾಲಿಬರ್ ಟೋವ್ಡ್ ಮತ್ತು ಕ್ಯಾಲಿಬರ್ ಮೌಂಟೆಡ್ ಬಂದೂಕುಗಳ ಪೂರೈಕೆಗೆ 2007 ಮತ್ತು 2009ರಲ್ಲೇ ರಕ್ಷಣಾ ಸಚಿವಾಲಯದ ಅನುಮೋದನೆ ದೊರಕಿತ್ತಾದರೂ ಈವರೆಗೂ ಸೇನೆಯ ಬಳಕೆಗೆ ಲಭ್ಯವಾಗಿಲ್ಲ. 155mm/52 ಒಳಗೊಂಡಿರುವ ಪ್ರಸ್ತಾವಿತ ಹೊವಿಟ್ಜರ್ ಸ್ವಾಧೀನದ ಶೇ 77ರಷ್ಟು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

ಈ ಸುದ್ದಿ ಓದಿದ್ದೀರಾ?: ಐಪಿಎಲ್ 2023 | ಶುಭಮನ್‌ ಅಮೋಘ ಆಟ; ಗುಜರಾತ್‌ಗೆ ರೋಚಕ ಜಯ

“ಹಳೆಯ ತಲೆಮಾರಿನ ಫಿರಂಗಿ, ಬಂದೂಕುಗಳನ್ನು ಬದಲಾಯಿಸಿ ಆಧುನೀಕರಣಗೊಳಿಸುವ  ಕುರಿತಾದ ಆರು ಯೋಜನೆಗಳಲ್ಲಿ ಮೂರು ಮಾತ್ರ ಒಪ್ಪಂದಗಳಾಗಿ ಬದಲಾಗಿದೆ. ಇದರಲ್ಲೂ ಕೇವಲ ಶೇ 17ರಷ್ಟು ಶಸ್ತ್ರಾಸ್ತ್ರಗಳು ಮಾತ್ರ ಈವರೆಗೂ ಪೂರೈಕೆಯಾಗಿದೆ ಎಂದು ಕಳೆದ ವಾರ ಸಂಸತ್‌ಗೆ ಸಲ್ಲಿಸಲಾದ ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಒಟ್ಟಾರೆಯಾಗಿ ಸೇನೆಯಲ್ಲಿರುವ ಶಸ್ತ್ರಾಸ್ತ್ರಗಳನ್ನು ಮೇಲ್ದರ್ಜೆಗೇರಿಸುವ ಪ್ರಕ್ರಿಯೆಯು ಕಳೆದ ಎರಡು ದಶಕಗಳಿಂದ ಅತ್ಯಂತ ನಿಧಾನಗತಿಯ ಪ್ರಗತಿಯನ್ನಷ್ಟೇ ಸಾಧಿಸಿದೆ ಎಂದು ಸಿಎಜಿ ವರದಿ ಹೇಳಿದೆ.

ಒಟ್ಟು145 ಎಂ-777 ಹಗುರ ಫಿರಂಗಿ ಬಂದೂಕುಗಳ ಪೂರೈಕೆ ಕುರಿತಂತೆ ಅಮೆರಿಕದ  ಬಿಎಇ ಸಿಸ್ಟಮ್ಸ್ ಸಂಸ್ಥೆ ಜೊತೆ ಭಾರತ 2016ರಲ್ಲಿ ಸುಮಾರು 737 ಶತಕೋಟಿ ಡಾಲರ್ ಮೊತ್ತದ (5,000 ಕೋಟಿ ರೂ) ಒಪ್ಪಂದ ಮಾಡಿಕೊಂಡಿದೆ. ಎಂ-777 ಫಿರಂಗಿಗಳ ತಯಾರಿಕೆಗೆ ಪ್ರಮುಖವಾಗಿ ಟೈಟಾನಿಯಂ ಅನ್ನು ಉಪಯೋಗಿಸಲಾಗುತ್ತದೆ, ಪ್ರತಿ ಬಂದೂಕು ಗನ್‌ 4000 ಕೆಜಿ (4 ಟನ್‌) ತೂಕವಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಿಚಾಂಗ್ ಚಂಡಮಾರುತ | ತಮಿಳುನಾಡಿನಲ್ಲಿ ಹೈ ಅಲರ್ಟ್‌; ಶಾಲಾ-ಕಾಲೇಜು ರಜೆ ಘೋಷಣೆ

ಬಂಗಾಳಕೊಲ್ಲಿಯಲ್ಲಿ ಮಿಚಾಂಗ್ ಚಂಡಮಾರುತ ರೂಪುಗೊಂಡಿದೆ. ಈ ಹಿನ್ನೆಲೆ, ಆಂಧ್ರಪ್ರದೇಶ ಮತ್ತು ತಮಿಳುನಾಡಿನತ್ತ...

ಮಿಚಾಂಗ್ ಚಂಡಮಾರುತಕ್ಕೆ ಆಂಧ್ರ – ತಮಿಳುನಾಡು ತತ್ತರ; 120 ರೈಲುಗಳ ಸಂಚಾರ ರದ್ದು

ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಮಿಚಾಂಗ್ ಚಂಡಮಾರುತ ಅಬ್ಬರ ಹೆಚ್ಚಾಗಿದೆ. ದಕ್ಷಿಣ ಆಂಧ್ರ...

ಅಧಿಕೃತ ಚುನಾವಣಾ ಫಲಿತಾಂಶ ಪ್ರಕಟಿಸಿದ ಆಯೋಗ: ಯಾವ ರಾಜ್ಯಗಳಲ್ಲಿ ಯಾರಿಗೆ ಎಷ್ಟು ಸ್ಥಾನ?

ಇಂದು ಪ್ರಕಟಗೊಂಡ ಚುನಾವಣಾ ಫಲಿತಾಂಶಗಳ ಬಗ್ಗೆ ಚುನಾವಣಾ ಆಯೋಗ ಎಲ್ಲ ರಾಜ್ಯಗಳ...

ಈ ಫಲಿತಾಂಶ ಲೋಕಸಭೆ ಚುನಾವಣೆಯ ಹ್ಯಾಟ್ರಿಕ್‌ ಗೆಲುವಿನ ಮುನ್ಸೂಚನೆ: ಪ್ರಧಾನಿ ನರೇಂದ್ರ ಮೋದಿ

'ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯ ಹ್ಯಾಟ್ರಿಕ್‌ ಗೆಲುವು 2024ರ...