ಐಪಿಎಲ್ 2023 | ಶುಭಮನ್‌ ಅಮೋಘ ಆಟ; ಗುಜರಾತ್‌ಗೆ ರೋಚಕ ಜಯ

Date:

ಯುವ ಆಟಗಾರ ಶುಭಮನ್ ಗಿಲ್ ಅವರ ಭರ್ಜರಿ ಅರ್ಧ ಶತಕ ಹಾಗೂ ರಶೀದ್‌ ಖಾನ್‌ ಅವರ ಆಲ್‌ರೌಂಡ್‌ ಆಟದ ನೆರವಿನಿಂದ ಗುಜರಾತ್‌ ಟೈಟಾನ್ಸ್‌ ತಂಡ ಚೆನ್ನೈ ತಂಡದ ವಿರುದ್ಧ 5 ವಿಕೆಟ್‌ಗಳ ಜಯಗಳಿಸಿದರು

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ನ 16ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್‌ ಸಿಕ್ಸ್‌ ನೀಡಿದ 178 ನೀಡಿದ ರನ್‌ಗಳ ಗುರಿಯನ್ನು ಹಾರ್ದಿಕ್‌ ಪಾಂಡ್ಯ ನೇತೃತ್ವದ ಗುಜರಾತ್‌ ತಂಡ 19.2 ಓವರ್‌ಗಳಲ್ಲಿ ಗೆಲುವು ಸಾಧಿಸಿದರು.

ಚೆನ್ನೈ ನೀಡಿದ 179 ರನ್‌ ಗುರಿಯೊಂದಿಗೆ ಬ್ಯಾಟಿಂಗ್‌ ಇಳಿದ ಗುಜರಾತ್‌ ಟೈಟಾನ್ಸ್ ತಂಡದ ಆರಂಭಿಕ ಆಟಗಾರ ವೃದ್ಧಿಮಾನ್‌ ಸಾಹ (16 ಎಸೆತದಲ್ಲಿ 25 ರನ್‌,2 ಬೌಂಡರಿ, 2 ಸಿಕ್ಸರ್) ಬಿರುಸಿನ ಇನ್ನಿಂಗ್ಸ್‌ನೊಂದಿಗೆ ಆಟವಾಡುತ್ತಿದ್ದರು. ನಾಲ್ಕನೇ ಓವರ್‌ನಲ್ಲಿ ಬೌಲಿಂಗ್‌ ಮಾಡಿದ ರಾಜವರ್ಧನ್ ಹಂಗರಗೇಕರ್, ಸಾಹ ಅವರನ್ನು ಪೆವಿಲಿಯನ್‌ಗೆ ಕಳಿಸಿದರು.   

ನಂತರ ಆಟ ಮುಂದುವರೆಸಿದ  ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್  ಉತ್ತಮವಾಗಿ ಇನ್ನಿಂಗ್ಸ್ ಕಟ್ಟಿದರು.  ಆದರೆ ಯುವ ಆಟಗಾರ ಸಾಯಿ, 10 ಓವರ್‌ನಲ್ಲಿ 22 ರನ್‌ ಗಳಿಸಿದ್ದಾಗ ರಾಜವರ್ಧನ್ ಹಂಗರಗೇಕರ್ ಬೌಲಿಂಗ್‌ನಲ್ಲಿ ಧೋನಿಗೆ ಕ್ಯಾಚಿತ್ತು ನಿರ್ಗಮಿಸಿದರು.

ಮೂರನೇ ಕ್ರಮಾಂಕದಲ್ಲಿ ಆಗಮಿಸಿದ ನಾಯಕ ಹಾರ್ದಿಕ್‌ ಪಾಂಡ್ಯ, ಶುಭಮನ್ ಗಿಲ್‌ಗೆ  ಉತ್ತಮ ಜೊತೆಯಾಟ ನೀಡತೊಡಗಿದರು.  ಆದರೆ 13ನೇ ಓವರ್‌ನಲ್ಲಿ  ಸ್ಪಿನ್ನರ್ ರವೀಂದ್ರ ಜಡೇಜಾ, ಪಾಂಡ್ಯರನ್ನು ಬೌಲ್ಡ್‌ ಮಾಡುವ ಮೂಲಕ ಪೆವಿಲಿಯನ್‌ಗೆ ಕಡೆ ದಾರಿ ತೋರಿಸಿದರು.

ಅದ್ಭುತ ಆಟವಾಡಿದ ಶುಭಮನ್ 15ನೇ ಓವರ್‌ನ ಕಡೆಯ ಎಸೆತದಲ್ಲಿ ತುಷಾರ್‌ ದೇಶಪಾಂಡೆ ಬೌಲಿಂಗ್‌ನಲ್ಲಿ ರುತುರಾಜ್‌ ಗಾಯಕ್‌ವಾಡ್‌ಗೆ ಕ್ಯಾಚ್‌ ನೀಡಿ ಔಟಾದರು. ಇವರ ಮನಮೋಹಕ 36 ಎಸೆತಗಳ 63 ರನ್‌ಗಳ ಅಮೋಘ ಆಟದಲ್ಲಿ 6 ಬೌಂಡರಿ ಮತ್ತು 3 ಭರ್ಜರಿ ಸಿಕ್ಸರ್‌ ಒಳಗೊಂಡಿತ್ತು.

ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಿದ ವಿಜಯ್‌ ಶಂಕರ್‌ 21 ಎಸೆತಗಳಲ್ಲಿ 27 ರನ್ ಬಾರಿಸಿ ಔಟಾದರು. ಆಪತ್ಬಾಂಧವನಂತೆ ಆಗಮಿಸಿದ ಆಲ್‌ರೌಂಡರ್‌ ರಶೀದ್‌ ಖಾನ್‌ 3 ಎಸೆತಗಳಲ್ಲಿ 10 ರನ್‌ ಗಳಿಸುವ ಮೂಲಕ ಗುಜರಾತ್‌ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಚೆನ್ನೈ ತಂಡದ ಪರ ರಾಜವರ್ಧನ್ ಹಂಗರಗೇಕರ್ /2, ಹಾಗೂ ರವೀಂದ್ರ ಜಡೇಜಾ ತುಷಾರ್‌ ದೇಶಪಾಂಡೆ ತಲಾ ಒಂದೊಂದು ವಿಕೆಟ್ ಪಡೆದರು.

ಇದಕ್ಕೂ ಮುನ್ನ  ಟಾಸ್‌ ಸೋತು ಬ್ಯಾಟಿಂಗ್‌ ಮಾಡಿದ ರುತುರಾಜ್‌ ಗಾಯಕ್ವಾಡ್ ಅವರ ಭರ್ಜರಿ ಆಟದೊಂದಿಗೆ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ  178 ರನ್‌ ಗಳಿಸಿತ್ತು.  50 ಎಸೆತಗಳಲ್ಲಿ 92 ರನ್‌ ಬಾರಿಸಿದ ಗಾಯಕ್ವಾಡ್ ಸ್ಫೋಟಕ 9 ಸಿಕ್ಸರ್ ಹಾಗೂ 4 ಆಕರ್ಷಕ ಬೌಂಡರಿ ಚಚ್ಚಿದ್ದರು. ಉಳಿದಂತೆ ಚೆನ್ನೈ ಪರ ಮೊಯಿನ್ ಆಲಿ 23, ಶಿವಂ ದುಬೆ 19 ಹಾಗೂ ನಾಯಕ ಧೋನಿ 14 ರನ್‌ ಗಳಿಸಿದರು.

ಗುಜರಾತ್‌ ಪರ ರಶೀದ್‌ ಖಾನ್ 26/2, ಅಲ್ಜಾರಿ ಜೊಸೆಫ್ 33/2 ,ಮೊಹಮ್ಮದ್ ಶಮಿ 29/2 ವಿಕೆಟ್ ಗಳಿಸಿ ಯಶಸ್ವಿ ಬೌಲರ್‌ ಎನಿಸಿದರು.

100 ವಿಕೆಟ್​ ಪಡೆದು ಶಮಿ ಸಾಧನೆ

ಗುಜರಾತ್‌ ತಂಡದ ಅನುಭವಿ ವೇಗಿ ಮೊಹಮ್ಮದ್ ಶಮಿ  ಐಪಿಎಲ್‌ನಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಶಮಿ ತಮ್ಮ 94ನೇ  ಐಪಿಎಲ್​ ಪಂದ್ಯದಲ್ಲಿ 100 ವಿಕೆಟ್‌ಗಳನ್ನು ಪೂರೈಸಿದ ಸಾಧನೆ ಮಾಡಿದರು. ಮೊಹಮ್ಮದ್ ಶಮಿ ಅವರು ಚೆನ್ನೈ ಸೂಪರ್‌ ಕಿಂಗ್ಸ್ ವಿರುದ್ಧದ ಪಂದ್ಯದ ಎರಡನೇ ಓವರ್‌ನಲ್ಲಿ ಮೊದಲ ವಿಕೆಟ್ ಪಡೆಯುವ ಮೂಲಕ ಈ ಸಾಧನೆ ಮಾಡಿದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕರ್ತವ್ಯಕ್ಕೆ ಮರಳಿದ ಕುಸ್ತಿಪಟುಗಳು: ಪ್ರತಿಭಟನೆ ಮುಂದುವರಿಯಲಿದೆ ಎಂದ ಸಾಕ್ಷಿ, ಪುನಿಯಾ

ಭಾರತೀಯ ಕುಸ್ತಿ ಒಕ್ಕೂಟದ ​​ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್...

ಒಡಿಶಾ ರೈಲು ದುರಂತ | ಪೋಷಕರ ಕಳೆದುಕೊಂಡ ಮಕ್ಕಳಿಗೆ ಸೆಹ್ವಾಗ್, ಗೌತಮ್‌ ಅದಾನಿ ಸಹಾಯಹಸ್ತ; ಉಚಿತ ಶಿಕ್ಷಣ 

ಒಡಿಶಾದಲ್ಲಿ ಶುಕ್ರವಾರ ಸಂಭವಿಸಿದ  ಭೀಕರ ರೈಲು ಅಪಘಾತದಲ್ಲಿ ಕನಿಷ್ಠ 275 ಮಂದಿ...

ಕೋಝಿಕ್ಕೋಡ್ | ಫುಟ್‌ಬಾಲ್ ಆಡುತ್ತಿದ್ದ ಇಬ್ಬರು ಬಾಲಕರು ಸಮುದ್ರಪಾಲು

ಸಮುದ್ರ ತೀರದಲ್ಲಿ ಫುಟ್‌ಬಾಲ್‌ ಆಟವಾಡುತ್ತಿದ್ದ ವೇಳೆ ಇಬ್ಬರು ಯುವಕರು ನೀರುಪಾಲಾದ ಘಟನೆ...

ಟೆಸ್ಟ್‌ ಕ್ರಿಕೆಟ್‌ | ನಿವೃತ್ತಿ ದಿನಾಂಕ ಘೋಷಿಸಿದ ಡೇವಿಡ್‌ ವಾರ್ನರ್‌

ಆಸ್ಟ್ರೇಲಿಯಾ ತಂಡದ ದಿಗ್ಗಜ ಆಟಗಾರ, ಎಡಗೈ ಬ್ಯಾಟರ್‌ ಡೇವಿಡ್‌ ವಾರ್ನರ್‌ ಟೆಸ್ಟ್‌...