ಮಮತಾ ಬ್ಯಾನರ್ಜಿ ತಮ್ಮ ಸ್ವಂತ ತಂದೆಯನ್ನು ಮೊದಲು ಪತ್ತೆ ಹಚ್ಚಲಿ: ಬಿಜೆಪಿ ಸಂಸದನ ವಿವಾದಾತ್ಮಕ ಹೇಳಿಕೆ

Date:

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಬಗ್ಗೆ ಬಿಜೆಪಿ ಹಿರಿಯ ನಾಯಕ ಹಾಗೂ ಹಾಲಿ ಸಂಸದರೊಬ್ಬರು ನೀಡಿದ ವಿವಾದಾತ್ಮಕ ಹೇಳಿಕೆ ಆಕ್ರೋಶಕ್ಕೆ ಕಾರಣವಾಗಿದೆ.

ಬಿಜೆಪಿ ನಾಯಕನ ಹೇಳಿಕೆಯನ್ನು ಖಂಡಿಸಿರುವ ಟಿಎಂಸಿ, ಬಿಜೆಪಿ ನಾಯಕನ ಮಾತುಗಳು ಕೇಸರಿ ಪಡೆಯ ಡಿಎನ್‌ಎಯನ್ನು ಪ್ರತಿಬಿಂಬಿಸುತ್ತವೆ ಎಂದು ಟೀಕಿಸಿದ್ದಾರೆ.

ವೈರಲ್‌ ಆಗಿರುವ ವಿಡಿಯೋದಲ್ಲಿ ಮಾತನಾಡಿರುವ ಬಿಜೆಪಿ ಸಂಸದ ದಿಲೀಪ್ ಘೋಷ್, “ದೀದಿ ಗೋವಾಕ್ಕೆ ಹೋದರೂ ತಾನು ಗೋವಾದ ಮಗಳು ಎನ್ನುತ್ತಾರೆ, ತ್ರಿಪುರಾಗೆ ಹೋದರೂ ತಾನು ತ್ರಿಪುರಾದ ಪುತ್ರಿ ಎನ್ನುತ್ತಾರೆ. ಅವರು ಮೊದಲು ತನ್ನ ಸ್ವಂತ ತಂದೆಯನ್ನು ಪತ್ತೆಹಚ್ಚಲಿ ಎಂದು ಹೇಳಿದ್ದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಆದಾಗ್ಯೂ ವೈರಲ್‌ ಆಗಿರುವ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಸಾಧ್ಯವಾಗಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪಶ್ಚಿಮ ಬಂಗಾಳ ಬಿಜೆಪಿ ಘಟಕದ ಮಾಜಿ ಅಧ್ಯಕ್ಷರಾದ ದಿಲೀಪ್ ಘೋಷ್ ಬರ್ದಮಾನ್-ದುರ್ಗಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ತಾವು ಪ್ರಚಾರ ಮಾಡುವ ಸಂದರ್ಭದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಡಿಕೆ ಕದ್ದ ಕಳ್ಳ ಜೈಲಿಗೆ, ಆನೆ ಕದ್ದ ಕಳ್ಳ ಎಲ್ಲಿಗೆ?

ಬಿಜೆಪಿ ನಾಯಕನ ಹೇಳಿಕೆಯ ಬಗ್ಗೆ ಚುನಾವಣಾ ಆಯೋಗಕ್ಕೆ ಟಿಎಂಸಿ ದೂರು ನೀಡಿದ್ದು, ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.

ಪಶ್ಚಿಮ ಬಂಗಾಳದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಸಚಿವೆ ಶಶಿ ಪಾಂಜಾ ಅವರು ಕೇಸರಿ ಪಡೆಯ ಪ್ರತಿರೂಪವಾಗಿರುವ ಇಂತಹ ಹೇಳಿಕೆಗಳನ್ನು ನೀಡಿರುವ ದಿಲೀಪ್‌ ಘೋಷ್‌ ಅವರು ಕ್ಷಮೆ ಕೇಳಬೇಕು. ಇದು ಸ್ತ್ರೀದ್ವೇಷದ ಮನಸ್ಥಿತಿಯನ್ನು ತೋರಿಸುತ್ತದೆ. ಈ ಬಗ್ಗೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಬಿಜೆಪಿ ನಾಯಕತ್ವಕ್ಕೆ ದಿಲೀಪ್‌ ಘೋಷ್ ನಾಚಿಕೆಗೇಡಿನ ವ್ಯಕ್ತಿ. ಅವರು ದುರ್ಗಾ ಮಾತೆಯ ವಂಶಾವಳಿಯಿಂದ ಮಮತಾ ಬ್ಯಾನರ್ಜಿಯವರ ಪೂರ್ವಜರ ಬಗ್ಗೆ ಪ್ರಶ್ನೆ ಮಾಡುತ್ತಾರೆ. ಮಮತಾ ಅವರನ್ನು ನಿಂದಿಸಿರುವುದು ವ್ಯಕ್ತಿಯ ನೈತಿಕ ದಿವಾಳಿಯನ್ನು ತೋರಿಸುತ್ತದೆ ಎಂದು ಶಶಿ ಪಾಂಜಾ ಹೇಳಿದ್ದಾರೆ.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಜೆಪಿ ಸೋಲಿಸುವ ಅಭ್ಯರ್ಥಿಗಳಿಗೆ ಮತ ನೀಡಿ: ರೈತ ನಾಯಕ ರಾಕೇಶ್ ಟಿಕಾಯತ್ ಮನವಿ

ಲೋಕಸಭಾ ಚುನಾವಣೆಯಲ್ಲಿ ಮೇ.25 ಹಾಗೂ ಜೂನ್‌ 1ರ  ಕೊನೆಯ ಎರಡು ಹಂತದ...

ಹರಿಯಾಣದಲ್ಲಿ ಭೀಕರ ಅಪಘಾತ: ಒಂದೇ ಕುಟುಂಬದ 7 ಜನರ ಸಾವು, 25 ಮಂದಿಗೆ ಗಾಯ

ಹರಿಯಾಣ ದ ಅಂಬಾಲದಲ್ಲಿ ಇಂದು ಬೆಳಗಿನ ಜಾವ ಟ್ರಕ್‌ವೊಂದು ಮಿನಿ ಬಸ್‌ಗೆ...

5ನೇ ಹಂತದ ಲೋಕಸಭೆ ಚುನಾವಣೆ: ಶೇ. 62.2 ರಷ್ಟು ಮತದಾನ

ಮೇ 20 ರಂದು ನಡೆದ 5ನೇ ಹಂತದ ಲೋಕಸಭೆ ಚುನಾವಣೆಯಲ್ಲಿ ಶೇ....

ಲೋಕಸಭೆ ಚುನಾವಣೆ 6ನೇಹಂತ: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

ಲೋಕಸಭಾ ಚುನಾವಣೆ 6ನೇ ಹಂತದ ಮತದಾನ ಇದೇ ಮೇ 25 ರಂದು...