‘ಮೋದಿ-ಅದಾನಿ ಏಕ್ ಹೈ’ (ಮೋದಿ ಮತ್ತು ಅದಾನಿ ಒಂದೇ) ಎಂಬ ಜಾಕೆಟ್ ಧರಿಸಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಸಹಿತ ವಿಪಕ್ಷದ ನಾಯಕರು ಸಂಸತ್ತಿನಲ್ಲಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಅದಾನಿ ವಿರುದ್ಧ ಅಮೆರಿಕದಲ್ಲಿ ದೋಷಾರೋಪಣೆ ವಿಚಾರದಲ್ಲಿ ಸಂಸತ್ತಿನಲ್ಲಿ ಚರ್ಚೆ ನಡೆಸಬೇಕು ಎಂದು ವಿಪಕ್ಷ ನಾಯಕರು ಆಗ್ರಹಿಸಿದ್ದಾರೆ. ಗುರುವಾರ ಈ ಬೇಡಿಕೆಯನ್ನು ಮುಂದಿಟ್ಟು ‘ಮೋದಿ-ಅದಾನಿ ಏಕ್ ಹೈ’ ಎಂಬ ಟೀ ಶರ್ಟ್, ಜಾಕೆಟ್ ಧರಿಸಿ ವಿಪಕ್ಷ ನಾಯಕರುಗಳು ಪ್ರತಿಭಟಿಸಿದ್ದಾರೆ. ಇನ್ನು ಕೆಲವು ಟೀ ಶರ್ಟ್‌ಗಳಲ್ಲಿ ಅದಾನಿ ಸೇಫ್ ಹೈ (ಅದಾನಿ ಸುರಕ್ಷಿತರು) ಎಂದು ಬರೆಯಲಾಗಿತ್ತು.
ಇದನ್ನು ಓದಿದ್ದೀರಾ? ಮೋದಾನಿ ಫೈಲ್ಸ್ | ಜಾರ್ಖಂಡ್‌ನ ಅದಾನಿ ವಿದ್ಯುತ್ ಸ್ಥಾವರದ ವಿಚಿತ್ರ ಕಥೆ ಇದು!
ಇನ್ನು ಪ್ರತಿಭಟನೆ ವೇಳೆ ಮಾತನಾಡಿದ ವಿಪಕ್ಷ ನಾಯಕ ರಾಹುಲ್ ಗಾಂಧಿ, “ಅದಾನಿ ವಿರುದ್ಧ ಮೋದಿ ಅವರು ತನಿಖೆಗೆ ಆದೇಶಿಸಲು ಸಾಧ್ಯವೇ ಇಲ್ಲ. ಮೋದಿ ಅವರು ಅದಾನಿ ವಿರುದ್ಧ ತನಿಖೆಗೆ ಆದೇಶಿಸಿದರೆ ತಮ್ಮ ಮೇಲೆ ತನಿಖೆಗೆ ತಾನೇ ಆದೇಶಿಸಿದಂತಾಗುತ್ತದೆ. ಮೋದಿ ಮತ್ತು ಅದಾನಿ ಒಂದೇ (ಮೋದಿ ಔರ್ ಅದಾನಿ ಏಕ್ ಹೈ). ಅವರು ಇಬ್ಬರಲ್ಲ ಅವರು ಒಂದೇ” ಎಂದು ಆರೋಪಿಸಿದರು.
VIDEO | "Modiji cannot order investigation against Adani ji because if he does so it will mean his own investigation. Modi and Adani are one," says Congress MP and Leader of Opposition in Lok Sabha Rahul Gandhi (@RahulGandhi) amid opposition's protest over Adani issue inside… pic.twitter.com/XH8dpSR6MV
— Press Trust of India (@PTI_News) December 5, 2024
ಇನ್ನು ಈ ಸಂದರ್ಭದಲ್ಲಿಯೇ ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯನ ವಿರುದ್ಧದ ಲಂಚ ಮತ್ತು ವಂಚನೆ ಆರೋಪದ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ವಿಪಕ್ಷಗಳು ಆಗ್ರಹಿಸಿದೆ.
