ಚಿತ್ರದುರ್ಗ | ಅಜ್ಞಾನಕ್ಕೆ ಅಂತ್ಯವಿದೆ, ಜ್ಞಾನವೆಂಬುದು ಅಮರ: ಬಸವ ಹರಳಯ್ಯ ಶ್ರೀ

Date:

ಅಜ್ಞಾನಕ್ಕೆ ಅಂತ್ಯವಿದೆ, ಆದರೆ ಜ್ಞಾನಕ್ಕೆ ಎಂದಿಗೂ ಸಾವು ಎಂಬುದೇ ಇರುವುದಿಲ್ಲ, ಅದು ಅಂತ್ಯವಿಲ್ಲದ್ದು. ಜ್ಞಾನವೆಂಬುದು ಅಮರ. ಅಜ್ಞಾನವು ಅಂತ್ಯವನ್ನು ಕಾಣುತ್ತದೆ. ಆದರೆ ಯಾವುದೇ ಅಂತ್ಯ, ಅಂತರ ಜ್ಞಾನಕ್ಕಿರುವುದಿಲ್ಲ. ಶರಣರು ಜ್ಞಾನದ ಬೆಳಕಿನಲ್ಲಿ ಸಾಗಿದ್ದರಿಂದ ಅವರು ಅಜರಾಮರವಾಗಿ ಉಳಿದಿದ್ದಾರೆ ಎಂದು ಬಸವ ಹರಳಯ್ಯ ಶ್ರೀ ಹೇಳಿದರು.

- Advertisement -

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಐಮಂಗಲ ಗ್ರಾಮದ ಮಹಾ ಶಿವಶರಣ ಹರಳಯ್ಯಗುರು ಶ್ರೀಪೀಠದಲ್ಲಿ  ಆಯೋಜಿಸಿದ್ದ ಜ್ಞಾನದ ಬೆಳಕು ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

“ಜ್ಞಾನದ ಬೆಳಕು ಶರಣರನ್ನು ಸದಾ ಸನ್ಮಾರ್ಗದಲ್ಲಿ ಮುನ್ನಡೆಸಿತು. ಜ್ಞಾನದ ಸನ್ಮಾರ್ಗವೇ ಸದ್ಗತಿಯನ್ನು ತೋರಿಸಿತು. ಜ್ಞಾನದ ಹಾದಿಯಲ್ಲಿ ನಡೆದವರಿಗೆ ಸೋಲೆಂಬುದೇ ಇಲ್ಲ. ಅಜ್ಞಾನದ ಹಾದಿಯಲ್ಲಿ ನಡೆದವರಿಗೆ ಸದಾ ಸೋಲು ಬೆನ್ನೆತ್ತಿರುತ್ತದೆ. ಭಕ್ತಿ, ಜ್ಞಾನ, ವೈರಾಗ್ಯ ಇವುಗಳನ್ನು ಪಡೆಯಲು ಗುರು ಬೇಕು. ಗುರುವಿನಿಂದ ಮಾತ್ರ ಇವುಗಳು ಸಿದ್ದಿಸಲು ಸಾಧ್ಯ” ಎಂದು ಅಭಿಪ್ರಾಯಪಟ್ಟರು.‌

ಈ ಸುದ್ದಿ ಓದಿದ್ದೀರಾ? ವಿಜಯಪುರ | ಶಾಲೆಗೆ ಹೋಗುವಾಗ ಪುಡಾರಿಗಳ ಕಿರುಕುಳ; ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜನಪದ ಕಲಾವಿದರು, ಸಂಗೀತ ವಿದ್ವಾಂಸರು ಆಗಿರುವ ಗೊಂದಾಳಪ್ಪನವರು ಮಾತನಾಡಿ, “ಗುರುವಿಲ್ಲದ ವಿದ್ಯೆ ಅಜ್ಞಾನದ ಮುದ್ದೆಯಂತೆ, ಗುರುವಿಲ್ಲದೆ ಯಾವ ವಿದ್ಯೆಯೂ ವಿಧ್ಯಾರ್ಥಿಗೆ ಸಿದ್ದಿಸದು. ಗುರುವಿನ ಮಹಿಮೆ ಬಲ್ಲವರೇ ಬಲ್ಲರು. ಗುರು ಒಂದು ದೊಡ್ಡ ಶಕ್ತಿ. ಸೋಲು ಗೆಲುವಿನ ಮೆಟ್ಟಿಲಾಗಬೇಕು, ಸೋತು ಗೆಲ್ಲಬೇಕು, ಗೆದ್ದು ಸೋಲಬಾರದೆಂದು” ಎಂದು ತಿಳಿಸಿದರು.

ಕಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯ ಶಿಕ್ಷಕ ಹರಳಯ್ಯ, ಮುಕ್ತಾಂಬ, ಶಿಕ್ಷಕಿಯರಾದ ರಕ್ಷಿತಾ, ಛಾಯಾ, ಪವಿತ್ರ ಸೇರಿದಂತೆ ಇಡೀ ಶಿಕ್ಷಕ ವೃಂದ, ವಿಧ್ಯಾರ್ಥಿಗಳು ಇದ್ದರು. 

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿರಸಿ | ರಾಜೇಂದ್ರ ಸಿರ್ಸಿಕರ್‌ಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೌರವ

ಶಿರಸಿ: ಪ್ರಾಣಿ-ಪಕ್ಷಿಗಳ ರಕ್ಷಣೆ ಮತ್ತು ಪುನರ್ವಸತಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿರಸಿಯ ರಾಜೇಂದ್ರ...

ಧಾರವಾಡ | ಪೊಲೀಸ್ ಹೆಸರೇಳಿ ರೂ. 15,700 ವಂಚನೆ: ನಾಲ್ಕು ಬೈಕ್‍ಗಳು ನಗದು ವಶ

ಪೊಲೀಸ್ ಹೆಸರೇಳಿ ವ್ಯಕ್ತಿಯೊಬ್ಬರಿಂದ ₹15,700 ಹಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ...

ಗೋಕರ್ಣ | ಕುಡ್ಲೆ ಕಡಲತೀರದಲ್ಲಿ ಸಮುದ್ರ ಸುಳಿಗೆ ಸಿಲುಕಿದ್ದ ಬೆಂಗಳೂರಿನ ಇಬ್ಬರು ಪ್ರವಾಸಿಗರ ರಕ್ಷಣೆ

ಗೋಕರ್ಣ: ಸಮುದ್ರದಲ್ಲಿ ಈಜುತ್ತಿದ್ದ ವೇಳೆ ಅಪಾಯಕಾರಿ ಸುಳಿಗೆ ಸಿಲುಕಿದ ಬೆಂಗಳೂರಿನ ಇಬ್ಬರು...