‘ಮೋದಿ-ಅದಾನಿ ಏಕ್ ಹೈ’ | ಸಂಸತ್ತಿನಲ್ಲಿ ಜಾಕೆಟ್ ಧರಿಸಿ ವಿಪಕ್ಷ ನಾಯಕರಿಂದ ವಿನೂತನ ಪ್ರತಿಭಟನೆ

Date:

‘ಮೋದಿ-ಅದಾನಿ ಏಕ್ ಹೈ’ (ಮೋದಿ ಮತ್ತು ಅದಾನಿ ಒಂದೇ) ಎಂಬ ಜಾಕೆಟ್ ಧರಿಸಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಸಹಿತ ವಿಪಕ್ಷದ ನಾಯಕರು ಸಂಸತ್ತಿನಲ್ಲಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

- Advertisement -

ಅದಾನಿ ವಿರುದ್ಧ ಅಮೆರಿಕದಲ್ಲಿ ದೋಷಾರೋಪಣೆ ವಿಚಾರದಲ್ಲಿ ಸಂಸತ್ತಿನಲ್ಲಿ ಚರ್ಚೆ ನಡೆಸಬೇಕು ಎಂದು ವಿಪಕ್ಷ ನಾಯಕರು ಆಗ್ರಹಿಸಿದ್ದಾರೆ. ಗುರುವಾರ ಈ ಬೇಡಿಕೆಯನ್ನು ಮುಂದಿಟ್ಟು ‘ಮೋದಿ-ಅದಾನಿ ಏಕ್ ಹೈ’ ಎಂಬ ಟೀ ಶರ್ಟ್, ಜಾಕೆಟ್ ಧರಿಸಿ ವಿಪಕ್ಷ ನಾಯಕರುಗಳು ಪ್ರತಿಭಟಿಸಿದ್ದಾರೆ. ಇನ್ನು ಕೆಲವು ಟೀ ಶರ್ಟ್‌ಗಳಲ್ಲಿ ಅದಾನಿ ಸೇಫ್‌ ಹೈ (ಅದಾನಿ ಸುರಕ್ಷಿತರು) ಎಂದು ಬರೆಯಲಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಮ್ ಔರತೇನ್ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ಇದನ್ನು ಓದಿದ್ದೀರಾ? ಮೋದಾನಿ ಫೈಲ್ಸ್ | ಜಾರ್ಖಂಡ್‌ನ ಅದಾನಿ ವಿದ್ಯುತ್ ಸ್ಥಾವರದ ವಿಚಿತ್ರ ಕಥೆ ಇದು!

ಇನ್ನು ಪ್ರತಿಭಟನೆ ವೇಳೆ ಮಾತನಾಡಿದ ವಿಪಕ್ಷ ನಾಯಕ ರಾಹುಲ್ ಗಾಂಧಿ, “ಅದಾನಿ ವಿರುದ್ಧ ಮೋದಿ ಅವರು ತನಿಖೆಗೆ ಆದೇಶಿಸಲು ಸಾಧ್ಯವೇ ಇಲ್ಲ. ಮೋದಿ ಅವರು ಅದಾನಿ ವಿರುದ್ಧ ತನಿಖೆಗೆ ಆದೇಶಿಸಿದರೆ ತಮ್ಮ ಮೇಲೆ ತನಿಖೆಗೆ ತಾನೇ ಆದೇಶಿಸಿದಂತಾಗುತ್ತದೆ. ಮೋದಿ ಮತ್ತು ಅದಾನಿ ಒಂದೇ (ಮೋದಿ ಔರ್ ಅದಾನಿ ಏಕ್ ಹೈ). ಅವರು ಇಬ್ಬರಲ್ಲ ಅವರು ಒಂದೇ” ಎಂದು ಆರೋಪಿಸಿದರು.

ಇನ್ನು ಈ ಸಂದರ್ಭದಲ್ಲಿಯೇ ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯನ ವಿರುದ್ಧದ ಲಂಚ ಮತ್ತು ವಂಚನೆ ಆರೋಪದ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ವಿಪಕ್ಷಗಳು ಆಗ್ರಹಿಸಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಮತಾ ಬ್ಯಾನರ್ಜಿ ಬೆಂಬಲ ಘೋಷಿಸಿದ ಬಳಿಕ ಬಂಧನವಾಗಿದ್ದ ಕಾಂಗ್ರೆಸ್‌ ಅಭ್ಯರ್ಥಿ ಪ್ರಧಾನ್‌ಗೆ ಮಧ್ಯಂತರ ಜಾಮೀನು

2007ರ ನಂದಿಗ್ರಾಮ್ ಭೂಸ್ವಾಧೀನ ವಿರೋಧಿ ಹೋರಾಟಕ್ಕೆ ಸಂಬಂಧಿಸಿದ ಕೊಲೆ ಪ್ರಕರಣಗಳಲ್ಲಿ ಆರೋಪಿಯಾಗಿ...

1929ರ ಸೈಮನ್ ವಿರುದ್ಧದ ಹೋರಾಟದಂತೆ ‘SIR ಗೋ ಬ್ಯಾಕ್’ ಆಂದೋಲನ ನಡೆಯಬೇಕು: ಸಿಎಂ ರೇವಂತ್ ರೆಡ್ಡಿ ಕರೆ

ಮತದಾರರ ಪಟ್ಟಿಯ ಮೇಲೆ ಮೋದಿ-ಶಾ ಜೋಡಿ ಮತ್ತು ಗ್ಯಾನೇಶ್‌ ಕುಮಾರ್‌ ನಡೆಸುತ್ತಿರುವ...

‘ನಥಿಂಗ್ ನೈಸ್’: ಸಿಎಂ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ಭೂಕಬಳಿಕೆ ಆರೋಪ

ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ...

ಅಮೇಥಿ ಸೋಲಿನ ಬಳಿಕ ಯುಪಿ ರಾಜ್ಯಸಭೆ ರೇಸ್‌ನಲ್ಲಿ ಸ್ಮೃತಿ ಇರಾನಿ; ಸಂಭಾವ್ಯ ಪಟ್ಟಿಯಲ್ಲಿ ಯಾರ್ಯಾರಿದ್ದಾರೆ?

ಉತ್ತರ ಪ್ರದೇಶದಿಂದ ಅಕ್ಟೋಬರ್ 16ರಂದು ನಡೆಯಲಿರುವ 10 ರಾಜ್ಯಸಭಾ ಸ್ಥಾನಗಳ ಚುನಾವಣೆಗೆ...