ಅಮೆರಿಕದಲ್ಲಿ ಮೈಸೂರು ಮೂಲದ ಪಿಟೀಲು ವಾದಕ ಭಾಸ್ಕರ್ ಅರೆಸ್ಟ್; ಅಪ್ರಾಪ್ತರ ಮೇಲೆ ದೌರ್ಜನ್ಯ ಆರೋಪ

Date:

ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದ ಪ್ರಮುಖ ಪಿಟೀಲು ವಾದಕ, ಮೈಸೂರು ಮೂಲದ ಎಚ್.ಎನ್. ಭಾಸ್ಕರ್ (50) ವಿರುದ್ಧ ಅಮೆರಿಕದ ಕ್ಯಾಲಿಫೋರ್ನಿಯಾ ನ್ಯಾಯಾಲಯದಲ್ಲಿ ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ನಾಲ್ಕು ಗಂಭೀರ ಕ್ರಿಮಿನಲ್ ಆರೋಪಗಳನ್ನು ದಾಖಲಿಸಲಾಗಿದೆ. ಈ ಪ್ರಕರಣವು ಭಾರತೀಯ ಶಾಸ್ತ್ರೀಯ ಸಂಗೀತ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

- Advertisement -

ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಸುಪೀರಿಯರ್ ಕೋರ್ಟ್‌ನಲ್ಲಿ ನವೆಂಬರ್ 6, ರಂದು ಈ ದೂರು ದಾಖಲಾಗಿದೆ. ನ್ಯಾಯಾಲಯದ ಆನ್‌ಲೈನ್ ದಾಖಲೆಗಳ ಪ್ರಕಾರ,  ಸೆಪ್ಟೆಂಬರ್ 4 ರಿಂದ ಸೆಪ್ಟೆಂಬರ್ 26ರ ನಡುವಿನ ಅವಧಿಯಲ್ಲಿ 18 ವರ್ಷದೊಳಗಿನ ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಭಾಸ್ಕರ್ ಮೇಲಿದೆ. ದೂರಿನಲ್ಲಿ ಎರಡು ಪ್ರಕರಣಗಳು ಅಪ್ರಾಪ್ತರೊಂದಿಗೆ ಬಲವಂತದ ಅಸ್ವಾಭಾವಿಕ ಲೈಂಗಿಕ ಕ್ರಿಯೆ  ಮತ್ತು ಇನ್ನೆರಡು ಪ್ರಕರಣಗಳು ವಿದೇಶಿ ವಸ್ತುವಿನ ಬಳಕೆಯ ಮೂಲಕ ಲೈಂಗಿಕ ದೌರ್ಜನ್ಯ ನಡೆಸಿದ ಗಂಭೀರ ಆರೋಪಗಳನ್ನು ಒಳಗೊಂಡಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮತ ಬದಲಾಗಿಲ್ಲ, ಮನಸ್ಸು ಬದಲಾಗಿದೆ: ಮತಾಂತರವೋ? ಮನಸಾಂತರವೋ?

ಭಾರತದ ಸಂವಿಧಾನ ಪ್ರತಿಯೊಬ್ಬ ನಾಗರಿಕನಿಗೂ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿದೆ. ಆದರೆ ಬಲವಂತ, ಬೆದರಿಕೆ, ವಂಚನೆ ಅಥವಾ ಆಮಿಷದ ಮೂಲಕ ಧಾರ್ಮಿಕ ನಂಬಿಕೆಯನ್ನು ಬದಲಾಯಿಸುವುದು ಕಾನೂನು ಮತ್ತು ನೈತಿಕತೆಯ ದೃಷ್ಟಿಯಿಂದ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ....

ಯುಪಿ ಚುನಾವಣೆ | BJPಗೆ ಕ್ಷೇತ್ರ ಹಂಚಿಕೆ ಸವಾಲು;...

ಉತ್ತರ ಪ್ರದೇಶದ 2027ರ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧತೆ ಆರಂಭಿಸಿವೆ. ಸತತ ಮೂರನೇ ಬಾರಿಗೆ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಹೆಣಗಾಡುತ್ತಿದ್ದು, ಎನ್‌ಡಿಎ ಮಿತ್ರಪಕ್ಷಗಳೊಂದಿಗೆ ಸ್ಥಾನ ಹಂಚಿಕೆ ಮಾತುಕತೆ ಆರಂಭಿಸಿದೆ. ಮತ್ತೊಂದೆಡೆ ಸಮಾಜವಾದಿ...

ಬಾಕ್ಸ್ ಆಫೀಸ್‌ನಲ್ಲಿ ರಾವಣನೇ ವಿಜೃಂಭಿಸಿರುವ ‘ರಾಮಾಯಣ’ದ ಅಬ್ಬರ: ₹1,600...

ರಾವಣನೇ ವಿಜೃಂಭಿಸಿರುವ ಬಾಲಿವುಡ್‌ ಸಿನಿಮಾ 'ರಾಮಾಯಣ: ಭಾಗ-1' ಬಿಡುಗಡೆಯಾದ ಕೇವಲ 17 ದಿನಗಳಲ್ಲಿ ಜಾಗತಿಕವಾಗಿ ₹1,600 ಕೋಟಿಗೂ ಅಧಿಕ ಕಮಾಯಿ ಮಾಡಿ ದಾಖಲೆ ಬರೆದಿದೆ. ಈ ಮೂಲಕ 'ದಂಗಲ್', 'ಧುರಂಧರ್-2', 'ಬಾಹುಬಲಿ-2' ಹಾಗೂ...

ದೂರು ದಾಖಲಾದ ನವೆಂಬರ್ 6 ರಂದೇ ನ್ಯಾಯಾಲಯವು ಭಾಸ್ಕರ್ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಿದೆ. ಸ್ಯಾನ್ ಡಿಯಾಗೋ ಸುಪೀರಿಯರ್ ಕೋರ್ಟ್ ಈ ನಾಲ್ಕು ಆರೋಪಗಳನ್ನು ದೃಢಪಡಿಸಿದ್ದು, ನವೆಂಬರ್ 21 ರವರೆಗೂ ಭಾಸ್ಕರ್ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿಲ್ಲ ಹಾಗೂ ಅವರ ವಿಚಾರಣೆಯ ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದು ತಿಳಿಸಿದೆ.

ನ್ಯಾಯಾಲಯದ ಅಧಿಕೃತ ದಾಖಲೆಗಳಲ್ಲಿ ಬಂಧನದ ಸ್ಥಳ ಸ್ಪಷ್ಟವಾಗಿಲ್ಲದಿದ್ದರೂ, ಮೂಲಗಳ ಪ್ರಕಾರ ಭಾಸ್ಕರ್ ಪ್ರಸ್ತುತ ಮ್ಯಾಸಚೂಸೆಟ್ಸ್‌ನ ಬೋಸ್ಟನ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಕ್ಯಾಲಿಫೋರ್ನಿಯಾ ನ್ಯಾಯಾಲಯದ ಸಾರ್ವಜನಿಕ ಸಂಪರ್ಕ ಕಚೇರಿಯು ಇದನ್ನು ಅಲ್ಲಗಳೆದಿಲ್ಲ. ಬೋಸ್ಟನ್‌ನಿಂದ ಕ್ಯಾಲಿಫೋರ್ನಿಯಾಗೆ ಅವರನ್ನು ಕರೆತರಲು ಹಸ್ತಾಂತರ ವಿಚಾರಣೆ ನಡೆಯುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಮೆರಿಕದ ಕಾನೂನಿನ ಪ್ರಕಾರ, ಅಪ್ರಾಪ್ತರ ಮೇಲಿನ ಇಂತಹ ಗಂಭೀರ ಲೈಂಗಿಕ ಅಪರಾಧಗಳು ಸಾಬೀತಾದರೆ ದೀರ್ಘಾವಧಿಯ ಜೈಲು ಶಿಕ್ಷೆ ಮತ್ತು ಲೈಂಗಿಕ ಅಪರಾಧಿಗಳ ಪಟ್ಟಿಯಲ್ಲಿ  ಶಾಶ್ವತವಾಗಿ ಹೆಸರು ಸೇರ್ಪಡೆಯಾಗುವಂತಹ ಕಠಿಣ ಶಿಕ್ಷೆ ಎದುರಿಸಬೇಕಾಗುತ್ತದೆ.

ಮೈಸೂರಿನ ಸಂಗೀತ ಪರಂಪರೆಯ ಕುಟುಂಬದಿಂದ ಬಂದ 50 ವರ್ಷದ ಎಚ್.ಎನ್. ಭಾಸ್ಕರ್, ಖ್ಯಾತ ಪಿಟೀಲು ವಾದಕ ಎಂ.ಎಸ್. ಗೋಪಾಲಕೃಷ್ಣನ್ ಮತ್ತು ಆರ್.ಎನ್. ತ್ಯಾಗರಾಜನ್ ಅವರ ಬಳಿ ಶಿಕ್ಷಣ ಪಡೆದವರು. ಆಕಾಶವಾಣಿ ಮತ್ತು ದೂರದರ್ಶನದ ‘ಎ’ ಗ್ರೇಡ್ ಕಲಾವಿದರಾಗಿರುವ ಇವರು, ದೇಶ-ವಿದೇಶಗಳ ಪ್ರತಿಷ್ಠಿತ ವೇದಿಕೆಗಳಲ್ಲಿ ಖ್ಯಾತ ಗಾಯಕರೊಂದಿಗೆ ವಾದ್ಯ ನುಡಿಸಿ ಅಪಾರ ಮನ್ನಣೆ ಗಳಿಸಿದ್ದರು.

ಈ ಬೆಳವಣಿಗೆಯ ಬೆನ್ನಲ್ಲೇ ಖ್ಯಾತ ಕರ್ನಾಟಕ ಶಾಸ್ತ್ರೀಯ ಗಾಯಕ ಟಿ.ಎಂ. ಕೃಷ್ಣ ಮತ್ತು ಹಿನ್ನೆಲೆ ಗಾಯಕಿ ಚಿನ್ಮಯಿ ಶ್ರೀಪಾದ ಅವರು ಸಂತ್ರಸ್ತ ಅಪ್ರಾಪ್ತರ ಪರವಾಗಿ ಧ್ವನಿ ಎತ್ತಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ಪ್ರತಿಕ್ರಿಯಿಸಿರುವ ಟಿ.ಎಂ. ಕೃಷ್ಣ, “ಭಾಸ್ಕರ್ ನನ್ನ ಎರಡು ದಶಕಗಳ ಸ್ನೇಹಿತ ಹಾಗೂ ಅನೇಕ ವೇದಿಕೆಗಳನ್ನು ಹಂಚಿಕೊಂಡ ಸಹೋದ್ಯೋಗಿ. ಈ ಕಾರಣಕ್ಕಾಗಿ ಕಳೆದ ಒಂದು ವಾರ ನನಗೆ ಅತ್ಯಂತ ಕಷ್ಟಕರವಾಗಿತ್ತು. ನನ್ನಲ್ಲಿ ಈಗ ಕೋಪ ಮತ್ತು ಆಳವಾದ ದುಃಖವಿದೆ. ಆದರೆ, ಸಂತ್ರಸ್ತರಿಗೆ ನ್ಯಾಯ ಸಿಗಬೇಕೆಂಬ ನನ್ನ ಬದ್ಧತೆ ಅಚಲವಾಗಿದೆ. ಅಮೆರಿಕದಲ್ಲಿ ತನಿಖೆ ನಡೆಯುತ್ತಿರುವುದರಿಂದ ಸದ್ಯಕ್ಕೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ” ಎಂದಿದ್ದಾರೆ.

ಈ ಬಂಧನ ತಮಗೆ ಆಶ್ಚರ್ಯ ತಂದಿಲ್ಲ ಎಂದಿರುವ ಗಾಯಕಿ ಚಿನ್ಮಯಿ, ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ವಲಯದ ಒಳಗಿನ ಕರಾಳ ಮುಖವನ್ನು ಬಿಚ್ಚಿಟ್ಟಿದ್ದಾರೆ. “ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ವಲಯಗಳು ಅತ್ಯಂತ ಸಣ್ಣ ಹಾಗೂ ಪರಸ್ಪರ ಬೆಸೆದುಕೊಂಡಿರುವ ಗುಂಪುಗಳಾಗಿವೆ. ಇಲ್ಲಿ ಪ್ರತಿಯೊಬ್ಬರಿಗೂ ಪ್ರತಿಯೊಬ್ಬರ ಪರಿಚಯವಿರುತ್ತದೆ, ಜೊತೆಗೆ ಇಲ್ಲಿ ಶೋಷಣೆಯ ಪ್ರವೃತ್ತಿಯೂ ಹೆಚ್ಚಾಗಿದೆ. ಕೇವಲ ಇದನ್ನೇ ಆದಾಯದ ಮೂಲವಾಗಿಸಿಕೊಂಡವರ ಇಡೀ ವೃತ್ತಿಜೀವನವನ್ನೇ ನಾಶಪಡಿಸುವ ಶಕ್ತಿ ಇಲ್ಲಿನವರಿಗಿದೆ. ನನ್ನ ಕುಟುಂಬದ ಮೂರು ತಲೆಮಾರುಗಳು ಈ ವಲಯದಲ್ಲಿ ಗುರುತಿಸಿಕೊಂಡಿದ್ದ ಅನುಭವದ ಮೇಲೆ ಹೇಳುತ್ತಿದ್ದೇನೆ, ಶಾಸ್ತ್ರೀಯ ಸಂಗೀತ ವಲಯಕ್ಕಿಂತ ಚಿತ್ರರಂಗವೇ ಎಷ್ಟೋ ಸುರಕ್ಷಿತ. ಇದೇ ಕಾರಣಕ್ಕೆ ನಾನು ಆ ವಲಯದಿಂದ ದೂರ ಸರಿದೆ” ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ಪ್ರಕರಣವು 2018ರಲ್ಲಿ ಶಾಸ್ತ್ರೀಯ ಸಂಗೀತ ವಲಯದಲ್ಲಿ ಭುಗಿಲೆದ್ದಿದ್ದ ‘ಮೀಟೂ’ ಅಭಿಯಾನ ಮತ್ತು ಗುರು-ಶಿಷ್ಯ ಪರಂಪರೆಯ ಹೆಸರಿನಲ್ಲಿ ನಡೆಯುವ ಅಧಿಕಾರ ದುರುಪಯೋಗದ ಕುರಿತಾದ ಹಳೆಯ ಚರ್ಚೆಗಳನ್ನು ಮತ್ತೆ ಮುನ್ನೆಲೆಗೆ ತಂದಿದೆ. ಮುಂದಿನ ದಿನಗಳಲ್ಲಿ ಬೋಸ್ಟನ್ ನ್ಯಾಯಾಲಯದ ಹಸ್ತಾಂತರ ಪ್ರಕ್ರಿಯೆ ಮತ್ತು ಸ್ಯಾನ್ ಡಿಯಾಗೋ ನ್ಯಾಯಾಲಯದ ವಿಚಾರಣೆಯತ್ತ ಎಲ್ಲರ ಚಿತ್ತ ನೆಟ್ಟಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅರುಣಾಚಲ ಗಡಿ ಸಮೀಪ ಚೀನಾದ ಬೃಹತ್ ಅಣೆಕಟ್ಟು ನಿರ್ಮಾಣ ಚುರುಕು: ಉಪಗ್ರಹ ದತ್ತಾಂಶದಿಂದ ಬಹಿರಂಗ

ದೆಹಲಿ ಐಐಟಿಯ ಎಫ್‌ಐಟಿಟಿ (FITT) ಕೇಂದ್ರದಲ್ಲಿ ರೂಪುಗೊಂಡಿರುವ ಭಾರತದ ‘ಅರ್ಥ್‌ಸೆನ್ಸ್ ಲ್ಯಾಬ್ಸ್’...

ಭಾರತಕ್ಕೆ 1,000 ಹೆಲಿಕಾಪ್ಟರ್‌ಗಳು ಬೇಕು, ಆದರೆ ಕೇವಲ 270 ಇವೆ; ಪೈಲಟ್‌ಗಳ ತೀವ್ರ ಕೊರತೆಯೂ ಇದೆ

ಭಾರತಕ್ಕೆ ಕನಿಷ್ಠ 1,000 ಹೆಲಿಕಾಪ್ಟರ್‌ಗಳ ಅಗತ್ಯವಿದ್ದರೂ, ಪ್ರಸ್ತುತ ದೇಶದಲ್ಲಿ ಅದರ ನಾಲ್ಕನೇ...

ಎನ್‌ವಿಡಿಯಾ ಸಿಇಒ ಆಗಿ ಜೆನ್ಸನ್ ಹುವಾಂಗ್ ಮರುನೇಮಕ

ವಿಶ್ವದ ಅತ್ಯಂತ ಮೌಲ್ಯಯುತ ಚಿಪ್ ತಯಾರಿಕಾ ಕಂಪನಿ ಎನ್‌ವಿಡಿಯಾದ ಮುಖ್ಯ ಕಾರ್ಯನಿರ್ವಾಹಕ...