ಗಾಲ್ವಾನ್ ಸಂಘರ್ಷದಲ್ಲಿ ಹುತಾತ್ಮ ಯೋಧನ ಪತ್ನಿ ರೇಖಾ ಸಿಂಗ್ ಭಾರತೀಯ ಸೇನೆಗೆ ನಿಯೋಜನೆ

Date:

Advertisements
  • ಲೆಫ್ಟಿನೆಂಟ್ ಆಗಿ ಭಾರತೀಯ ಸೇನೆಯಲ್ಲಿ ನಿಯೋಜನೆಗೊಂಡ ರೇಖಾ ಸಿಂಗ್
  • 2020ರ ಪೂರ್ವ ಲಡಾಖ್‌ನ ಗಾಲ್ವಾನ್ ಸಂಘರ್ಷದಲ್ಲಿ ಯೋಧನ ಸಾವು

ಗಾಲ್ವಾನ್ ಕಣಿವೆ ಸಂಘರ್ಷದಲ್ಲಿ ಮಡಿದ ವೀರ ಯೋಧನ ಪತ್ನಿ ರೇಖಾ ಸಿಂಗ್ ಅವರನ್ನು ಇದೀಗ ಭಾರತೀಯ ಸೇನೆಯಲ್ಲಿ ಸೇರ್ಪಡೆಗೊಳಿಸಲಾಗಿದೆ.

ಪತಿಯನ್ನು ಕಳೆದುಕೊಂಡ ಮೂರು ವರ್ಷಗಳ ನಂತರ ರೇಖಾ ಅವರಿಗೆ ಶನಿವಾರ (ಏಪ್ರಿಲ್ 29) ಭಾರತೀಯ ಸೇನೆಯಲ್ಲಿ ಸ್ಥಾನ ನೀಡಲಾಗಿದೆ. ಅವರು ಭಾರತೀಯ ಸೇನೆಗೆ ಲೆಫ್ಟಿನೆಂಟ್ ಆಗಿ ನೇಮಕಗೊಂಡಿದ್ದಾರೆ.

ಕಳೆದ ಮೂರು ವರ್ಷಗಳಿಂದ ಸಂಘರ್ಷದ ತಾಣವಾಗಿರುವ ಪೂರ್ವ ಲಡಾಖ್‌ಗೆ ರೇಖಾ ಅವರನ್ನು ನಿಯೋಜಿಸಲು ಸೇನೆ ಆದೇಶಿಸಿದೆ.

Advertisements

ಗಾಲ್ವಾನ್ ಕಣಿವೆ ಸಂಘರ್ಷದಲ್ಲಿ ರೇಖಾ ಅವರ ಪತಿ ಯೋಧ ನಾಯಕ್ ದೀಪಕ್‌ ಸಿಂಗ್ ಹುತಾತ್ಮರಾಗಿದ್ದರು.

“ಮರಣೋತ್ತರ ವೀರಚಕ್ರ ಪಡೆದ ನಾಯಕ್ ದೀಪಕ್ ಸಿಂಗ್ ಅವರ ಪತ್ನಿಯಾಗಿರುವ ಮಹಿಳಾ ಕೆಡೆಟ್ ರೇಖಾ ಅವರು ಚೆನ್ನೈನಲ್ಲಿ ತರಬೇತಿ ಪೂರ್ಣಗೊಳಿಸಿದ ನಂತರ ಭಾರತೀಯ ಸೇನೆಗೆ ನೇಮಕಗೊಂಡಿದ್ದಾರೆ. ದೀಪಕ್ ಅವರು ಗಾಲ್ವಾನ್ ಘರ್ಷಣೆಯ ಸಮಯದಲ್ಲಿ ಹುತಾತ್ಮರಾಗಿದ್ದರು” ಎಂದು ಭಾರತೀಯ ಸೇನೆ ಟ್ವೀಟ್ ಮಾಡಿದೆ.

ದೀಪಕ್‌ ಸಿಂಗ್‌ ಅವರು ಬಿಹಾರ ರೆಜಿಮೆಂಟ್‌ನ 16ನೇ ಬೆಟಾಲಿಯನ್‌ ಯೋಧ. ದೀಪಕ್ ಅವರಿಗೆ 2021ರ ನವೆಂಬರ್‌ನಲ್ಲಿ ಮರಣೋತ್ತರವಾಗಿ ವೀರ ಚಕ್ರ ನೀಡಲಾಗಿದೆ. ಪರಮ ವೀರ ಚಕ್ರ ಮತ್ತು ಮಹಾ ವೀರ ಚಕ್ರದ ನಂತರ ಭಾರತದ ಮೂರನೇ ಅತ್ಯುನ್ನತ ಮಿಲಿಟರಿ ಗೌರವ ಇದಾಗಿದೆ.

ರೇಖಾ ಸಿಂಗ್‌ ಸೇರಿದಂತೆ ಚೆನ್ನೈ ಮೂಲದ ಆಫೀಸರ್ಸ್ ಟ್ರೇನಿಂಗ್ ಅಕಾಡೆಮಿಯಿಂದ ಉತ್ತೀರ್ಣರಾದ ಐವರು ಮಹಿಳೆಯರನ್ನು ಮೊದಲ ಬಾರಿಗೆ ಫಿರಂಗಿದಳದ ರೆಜಿಮೆಂಟ್‌ಗೆ ಸೇರಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? ಸಕ್ಕರೆ ಉತ್ಪಾದನೆಯಲ್ಲಿ ಕುಸಿತ; ರಫ್ತು ನಿಷೇಧಿಸಲಿರುವ ಕೇಂದ್ರ

ಐವರಲ್ಲಿ ಮೂವರನ್ನು ಚೀನಾ ಗಡಿ ಕಾಯುವ ಘಟಕಗಳಿಗೆ ನಿಯೋಜನೆಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

2020ರ ಜೂನ್ 15ರಂದು ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಚೀನಿ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್ಎ) ಮತ್ತು ಭಾರತೀಯ ಯೋಧರ ನಡುವೆ ಸಂಘರ್ಷ ನಡೆಯಿತು. ಇದರಲ್ಲಿ ಭಾರತೀಯ ಸೇನೆಯ 20 ಯೋಧರು ಹುತಾತ್ಮರಾಗಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರಾಖಂಡ | ಕಪಾಳ ಮೋಕ್ಷ ಮಾಡಿದ ಶಿಕ್ಷಕನಿಗೆ ಗುಂಡು ಹಾರಿಸಿದ ವಿದ್ಯಾರ್ಥಿ

ತರಗತಿಯಲ್ಲಿ ಕಪಾಳ ಮೋಕ್ಷ ಮಾಡಿದ ಕಾರಣಕ್ಕೆ ಕುಪಿತಗೊಂಡ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ...

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

Download Eedina App Android / iOS

X