1,322 ಕೋಟಿ ರೂ. ವಂಚನೆ: ಉದ್ಯಮಿ ಸುಭಾಷ್ ಚಂದ್ರ ವಿರುದ್ಧ ಇ.ಡಿ ಪ್ರಕರಣ ದಾಖಲು

Date:

ಎಲ್ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್‌ಗೆ (LICHFL) 1,322 ಕೋಟಿ ರೂ. ನಷ್ಟ ಉಂಟುಮಾಡಿದ ಆರೋಪದ ಮೇಲೆ ಮಾಧ್ಯಮ ಉದ್ಯಮಿ ಸುಭಾಷ್ ಚಂದ್ರ ಅವರ ವಿರುದ್ಧ ಜಾರಿ ನಿರ್ದೇಶನಾಲಯ (ED) ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿದೆ.

- Advertisement -

​ಸಾಲ ಪಡೆಯುವ ಉದ್ದೇಶದಿಂದ ಸುಭಾಷ್ ಚಂದ್ರ ಅವರು ತಮ್ಮ ಆಸ್ತಿಯ ನಿವ್ವಳ ಮೌಲ್ಯವನ್ನು (Net worth) ನಕಲಿಯಾಗಿ ಹೆಚ್ಚಿಸಿ ತೋರಿಸಿ ಎಲ್ಐಸಿಎಚ್‌ಎಫ್‌ಎಲ್‌ನಿಂದ 980 ಕೋಟಿ ರೂ. ಸಾಲ ಪಡೆದು, ಮರುಪಾವತಿಸದೆ ವಂಚಿಸಿದ್ದಾರೆ ಎಂಬ ಸಿಬಿಐ ಎಫ್‌ಐಆರ್ ಆಧರಿಸಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (PMLA) ಈ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸುಭಾಷ್ ಚಂದ್ರ ಅವರಿಗೆ ಸೇರಿದ ಕಂಪನಿಗಳಿಗೆ ಸಾಲ ಮಂಜೂರು ಮಾಡಲು ನಕಲಿ ಆರ್ಥಿಕ ಪ್ರಮಾಣಪತ್ರಗಳನ್ನು ಬಳಸಲಾಗಿದೆ ಎಂದು ಎಲ್ಐಸಿಎಚ್‌ಎಫ್‌ಎಲ್ ದೂರಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗೆಲ್ಲಬಹುದಾಗಿದ್ದ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಲ್ಟಿ ಹೊಡೆದದ್ದು...

ಪದವೀಧರ ಮತ್ತು ಶಿಕ್ಷಕ ಕ್ಷೇತ್ರಗಳಿಂದ ವಿಧಾನ ಪರಿಷತ್ತಿಗೆ ನಡೆದ ನಾಲ್ಕು ಎಮ್ಮೆಲ್ಸಿ ಸ್ಥಾನಗಳ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಒಂದೇ ಒಂದು ಸೀಟನ್ನೂ ಪಡೆಯಲಾಗದೆ ಮುಗ್ಗರಿಸಿರುವುದು ರಾಜಕೀಯ ಪಡಸಾಲೆಯಲ್ಲಿ ನಾನಾ ನಮೂನೆಯ ವ್ಯಾಖ್ಯಾನ-ವಿಶ್ಲೇಷಣೆ ಹುಟ್ಟುಹಾಕಿದೆ....

ಗ್ರಾಮೀಣ ಜಾನಪದ ಪರಂಪರೆಯನ್ನು ಜೀವಂತವಾಗಿರಿಸಿದ ಚಾಮರಾಜನಗರದ ಗೌರಮ್ಮ

ಹಳ್ಳಿಗಳ ಮಣ್ಣಿನ ಸೊಗಡು, ಮಹಿಳೆಯರ ಬದುಕಿನ ಅನುಭವ, ಕುಟುಂಬದ ಸಂಪ್ರದಾಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಹಾಡಿನ ಮೂಲಕ ಅಭಿವ್ಯಕ್ತಿಸುವ ಸೋಬಾನೆ ಪದಗಳ ಗಾಯನಕ್ಕೆ ದಶಕಗಳಿಂದ ತಮ್ಮ ಬದುಕನ್ನೇ ಮುಡಿಪಾಗಿಟ್ಟಿರುವ ಚಾಮರಾಜನಗರದ ಹಿರಿಯ ಜಾನಪದ...

ನವೆಂಬರ್ 1 | ಕರ್ನಾಟಕ ರಾಜ್ಯೋತ್ಸವ ಮಾತ್ರವಲ್ಲ; ಭಾರತದ...

ನವೆಂಬರ್ 1 ಕನ್ನಡಿಗರ ಹೆಮ್ಮೆಯ ಕರ್ನಾಟಕ ರಾಜ್ಯೋತ್ಸವ. ಇದೇ ದಿನ ದೇಶದ ಎಂಟು ರಾಜ್ಯಗಳು ಮತ್ತು ಐದು ಕೇಂದ್ರಾಡಳಿತ ಪ್ರದೇಶಗಳ ರಚನೆ, ಮರುರಚನೆ ಹಾಗೂ ವಿಮೋಚನೆಯ ಇತಿಹಾಸವೂ ಇದೆ. ಭಾಷಾವಾರು ರಾಜ್ಯಗಳಿಗಾಗಿ ನಡೆದ...

​ದೂರಿನ ಪ್ರಕಾರ, ವಸಂತ್ ಸಾಗರ್ ಪ್ರಾಪರ್ಟೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ 500 ಕೋಟಿ ರೂ. (ಪ್ಯಾನ್ ಇಂಡಿಯಾ ಇನ್ಫ್ರಾ ಪ್ರಾಜೆಕ್ಟ್ಸ್ ಸಹ-ಸಾಲಗಾರ) ಹಾಗೂ ಡಿಜಿಟಲ್ ಸಬ್‌ಸ್ಕ್ರೈಬರ್ ಮ್ಯಾನೇಜ್‌ಮೆಂಟ್ ಅಂಡ್ ಕನ್ಸಲ್ಟೆನ್ಸಿ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್‌ಗೆ 480 ಕೋಟಿ ರೂ. (ಸ್ಪಿರಿಟ್ ಇನ್ಫ್ರಾ ಪವರ್ ಸಹ-ಸಾಲಗಾರ) ಸಾಲ ನೀಡಲಾಗಿತ್ತು.

​ಸಾಲ ಮಂಜೂರಾತಿಗಾಗಿ ಮಾರ್ಚ್ 2018ರಲ್ಲಿ ಡಿಜೆಎಂ ಅಂಡ್ ಕಂ ಮೂಲಕ 59,000 ಕೋಟಿ ರೂ. ಹಾಗೂ ಜುಲೈ 2018ರಲ್ಲಿ ಎಂಪಿಜೆ ಅಂಡ್ ಕಂ ಮೂಲಕ 40,562 ಕೋಟಿ ರೂ. ನಿವ್ವಳ ಮೌಲ್ಯ ಹೊಂದಿರುವ ಬಗ್ಗೆ ಸುಭಾಷ್ ಚಂದ್ರ ಪ್ರಮಾಣಪತ್ರಗಳನ್ನು ಸಲ್ಲಿಸಿದ್ದರು. ತರುವಾಯ ಈ ಎರಡೂ ಸಾಲಗಳು ಅನುತ್ಪಾದಕ ಆಸ್ತಿಯಾಗಿ (NPA) ಮಾರ್ಪಟ್ಟಿದ್ದು, ಸಾಲದಾತ ಸಂಸ್ಥೆಗೆ ಒಟ್ಟು 1,322 ಕೋಟಿ ರೂ. ನಷ್ಟವಾಗಿದೆ.

​ದಿವಾಳಿತನ ಕಾಯ್ದೆ (IBC) ಅಡಿ 2024ರಲ್ಲಿ ನಡೆದ ವಿಚಾರಣೆ ವೇಳೆ ಸುಭಾಷ್ ಚಂದ್ರ ಅವರು, ಪ್ರಸ್ತುತ ತಮ್ಮ ನಿವ್ವಳ ಮೌಲ್ಯ ಕೇವಲ 31.79 ಕೋಟಿ ರೂ. ಇದೆ ಮತ್ತು 2017-18ರ ಅವಧಿಯಲ್ಲಿ ಅದು 40,000 ಕೋಟಿ ರೂ.ಗಿಂತ ಹೆಚ್ಚಿರಲಿಲ್ಲ ಎಂದು ಹೇಳಿಕೆ ನೀಡಿದ್ದರು. ಸಾಲ ಪಡೆಯುವಾಗ ನೀಡಿದ್ದ ದಾಖಲೆಗೂ, ಈ ಹೇಳಿಕೆಗೂ ಇರುವ ಬೃಹತ್ ವ್ಯತ್ಯಾಸವನ್ನು ಸಿಬಿಐ ತನ್ನ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದೆ.

​ಸಾಲ ಪಡೆದ ಕಂಪನಿಗಳು ಹಾಗೂ ಅದರ ನಿರ್ದೇಶಕರ ಜೊತೆ ಶಾಮೀಲಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಾಲದ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬುದು ಪ್ರಮುಖ ಆರೋಪ. 22,006 ಕೋಟಿ ರೂ.ಗಳ ಒಟ್ಟು ಕ್ಲೈಮ್‌ಗಳ ವಿರುದ್ಧ ಸುಭಾಷ್ ಚಂದ್ರ ಅವರ ವೈಯಕ್ತಿಕ ಆಸ್ತಿಯಿಂದ ಕೇವಲ 6.5 ಕೋಟಿ ರೂ.ಗಳನ್ನು ಮಾತ್ರ ಸಾಲಗಾರರಿಗೆ ಮರುಪಡೆಯಲು ಅವಕಾಶ ನೀಡಿದ್ದ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧೀಕರಣದ (NCLT) ಆದೇಶವನ್ನು ಎಲ್ಐಸಿಎಚ್‌ಎಫ್‌ಎಲ್ ಇತ್ತೀಚೆಗಷ್ಟೇ ಮೇಲ್ಮನವಿ ನ್ಯಾಯಾಧೀಕರಣದಲ್ಲಿ (NCLAT) ಪ್ರಶ್ನಿಸಿತ್ತು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಪ್ರಾಪ್ತ ಬಾಲಕಿಯರ ಖಾಸಗಿ ವಿಡಿಯೋ ಚಿತ್ರೀಕರಿಸಿ ವಿದೇಶಕ್ಕೆ ಮಾರಾಟ: ಮಥುರಾ ಅರ್ಚಕನಿಗೆ ಜೀವಾವಧಿ ಶಿಕ್ಷೆ

ಉತ್ತರ ಪ್ರದೇಶದ ಮಥುರಾದಲ್ಲಿ ದೇವಸ್ಥಾನಕ್ಕೆ ಬರುತ್ತಿದ್ದ ಅಪ್ರಾಪ್ತ ಬಾಲಕಿಯರ ಖಾಸಗಿ ವಿಡಿಯೋಗಳನ್ನು...

ಮಹದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣ: ಒಮನ್‌ನಿಂದ ಆರೋಪಿ ಸೌರಭ್ ಚಂದ್ರಾಕರ್‌ ಭಾರತಕ್ಕೆ ಹಸ್ತಾಂತರ

ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಜಾಲ ನಡೆಸಿದ ಆರೋಪ ಎದುರಿಸುತ್ತಿರುವ ಮಹದೇವ್ ಬೆಟ್ಟಿಂಗ್...

ಪಂಜಾಬ್‌ | ಎಎಪಿಗೆ ಬಿಗ್ ಶಾಕ್: ಕನ್ವರ್ ವಿಜಯ್ ಪ್ರತಾಪ್ ರಾಜೀನಾಮೆ!

ಪಂಜಾಬ್ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿರುವ ಪ್ರಮುಖ ಬೆಳವಣಿಗೆಯೊಂದರಲ್ಲಿ, ಅಮೃತಸರ ಉತ್ತರ...

ಗಗನಯಾತ್ರಿಗಳ ರಕ್ಷಣೆಗೆ ಗೂಗಲ್-ನಾಸಾ ‘ರೋಬೊ ವೈದ್ಯ’: ಮಂಗಳ ಯಾನಕ್ಕೆ ‘ಎಐ’ ನೆರವು

ಭವಿಷ್ಯದ ಆಳ ಬಾಹ್ಯಾಕಾಶ ಮತ್ತು ಮಂಗಳ ಗ್ರಹದ ಸುದೀರ್ಘ ಯಾನಗಳಲ್ಲಿ ಗಗನಯಾತ್ರಿಗಳಿಗೆ...