ನಕಲಿ ಸುದ್ದಿಗಳ ಸವಾಲನ್ನು ಎದುರಿಸಲು ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ ಸತ್ಯ ಶೋಧನಾ ಘಟಕ ಆರಂಭ ಕುರಿತಂತೆ ಕೇಂದ್ರ ಸರ್ಕಾರದ ಅಧಿಸೂಚನೆಗೆ ಸುಪ್ರೀಂ ಕೋರ್ಟ್ ಇಂದು(ಗುರುವಾರ) ತಡೆಯಾಜ್ಞೆ ವಿಧಿಸಿದೆ.
ಫ್ಯಾಕ್ಟ್ ಚೆಕ್ ಘಟಕದ ಕುರಿತು ಬುಧವಾರವಷ್ಟೇ (ಮಾರ್ಚ್ 20) ಅಧಿಸೂಚನೆ ಹೊರಡಿಸಿದ್ದ ಕೇಂದ್ರ ಸರ್ಕಾರಕ್ಕೆ ಇದರಿಂದ ಹಿನ್ನಡೆಯಾಗಿದೆ.
ಫ್ಯಾಕ್ಟ್ ಚೆಕ್ ಘಟಕದ ಸ್ಥಾಪನೆ ಪ್ರಶ್ನಿಸಿ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಕುನಾಲ್ ಕಮ್ರಾ ಹಾಗೂ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ನ್ಯಾಯಪೀಠವು, ಫ್ಯಾಕ್ಟ್ಚೆಕ್ ಘಟಕಕ್ಕೆ ತಡೆಯಾಜ್ಞೆ ನೀಡಿತು. “ಫ್ಯಾಕ್ಟ್ಚೆಕ್ ಘಟಕದಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ. ಹಾಗಾಗಿ, ಘಟಕಕ್ಕೆ ತಡೆಯಾಜ್ಞೆ ನೀಡಲಾಗುತ್ತಿದೆ” ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.
BREAKING| Supreme Court Stays Centre’s Notification Of ‘Fact Check Unit’ Under IT Rules Till Final Decision By Bombay HC |@TheBeshbaha @kunalkamra88 @IndEditorsGuild #SupremeCourt https://t.co/WRhEM0wij4
— Live Law (@LiveLawIndia) March 21, 2024
‘ಈ ವಿಚಾರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದೆ’ ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲ ಮತ್ತು ಮನೋಜ್ ಮಿಶ್ರಾ ಆವರ ಪೀಠ ಈ ತಡೆಯಾಜ್ಞೆ ನೀಡಿತು.
ಫ್ಯಾಕ್ಟ್ ಚೆಕ್ ಘಟಕದ ಸ್ಥಾಪನೆ ಪ್ರಶ್ನಿಸಿ ಕುನಾಲ್ ಕಮ್ರಾ ಹಾಗೂ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಸಲ್ಲಿಸಿದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿತ್ತು. ಕೇಂದ್ರ ಸರ್ಕಾರವು ಫ್ಯಾಕ್ಟ್ ಚೆಕ್ ಘಟಕ ಸ್ಥಾಪನೆಗೆ ತಡೆ ನೀಡಬೇಕು ಎಂದು ಮೊದಲೇ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಫ್ಯಾಕ್ಟ್ ಚೆಕ್ ಘಟಕ ಸ್ಥಾಪನೆಗೆ ಬಾಂಬೆ ಹೈಕೋರ್ಟ್ ತಡೆಯಾಜ್ಞೆ ನೀಡಿರಲಿಲ್ಲ. ಈಗ ಬಾಂಬೆ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.
ಇದನ್ನು ಓದಿದ್ದೀರಾ? ವಾಟ್ಸಾಪ್ ಮೂಲಕ ಪ್ರಧಾನಿಯ ‘ವಿಕ್ಷಿತ್ ಭಾರತ್ ಸಂದೇಶ’ಕ್ಕೆ ಚುನಾವಣಾ ಆಯೋಗ ತಡೆ
“ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯದ ಅಡಿಯಲ್ಲಿ ಪಿಐಬಿ ಫ್ಯಾಕ್ಟ್ಚೆಕ್ ಘಟಕವನ್ನು ತರಲಾಗಿದೆ. 2021ರ ಮಾಹಿತಿ ತಂತ್ರಜ್ಞಾನ ನಿಯಮಗಳ (IT Rules) ಅಡಿಯಲ್ಲಿ ಫ್ಯಾಕ್ಟ್ಚೆಕ್ ಘಟಕವು ಕಾರ್ಯನಿರ್ವಹಿಸಲಿದೆ” ಎಂದು ಕೇಂದ್ರ ಸರ್ಕಾರದ ಅಧಿಸೂಚನೆ ತಿಳಿಸಿತ್ತು. ಈಗಾಗಲೇ ಪಿಐಬಿ ಫ್ಯಾಕ್ಟ್ಚೆಕ್ ಘಟಕವಿದ್ದು, ಇದನ್ನು ಈಗ ಸರ್ಕಾರವು ಐಟಿ ನಿಯಮಗಳ ಅಡಿಯಲ್ಲಿ ಜಾರಿಗೆ ತಂದಿದೆ. ನಕಲಿ ಸುದ್ದಿಗಳ ಹಾವಳಿ ತಡೆಯುವ ಜತೆಗೆ, ಜನರಿಗೆ ಅಸಲಿ ಸುದ್ದಿಗಳು ಯಾವುವು ಎಂಬುದನ್ನು ತಿಳಿಸುವುದು ಫ್ಯಾಕ್ಟ್ಚೆಕ್ ಘಟಕದ ಪ್ರಮುಖ ಉದ್ದೇಶವಾಗಿದೆ” ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು.
