ಶ್ರೀರಾಮನವಮಿ | ಬಂಗಾಳ, ಗುಜರಾತ್‌, ಮಹಾರಾಷ್ಟ್ರದಲ್ಲಿ ಗಲಭೆ

Date:

  • ಮಹಾರಾಷ್ಟ್ರದಲ್ಲಿ ನಡೆದ ಗಲಭೆಯಲ್ಲಿ 12 ಮಂದಿಗೆ ಗಾಯ
  • ಗುಜರಾತಿನ ವಡೋದರದಲ್ಲಿ ಮೆರವಣಿಗೆ ವೇಳೆ ಕಲ್ಲು ತೂರಾಟ

ಶ್ರೀರಾಮನವಮಿ ಆಚರಣೆ ಸಂದರ್ಭದಲ್ಲಿ ಪಶ್ಚಿಮ ಬಂಗಾಳ, ಗುಜರಾತ್‌ ಹಾಗೂ ಮಹಾರಾಷ್ಟ್ರ ಸೇರಿ ದೇಶದ ವಿವಿಧಡೆ ಗಲಭೆ ಉಂಟಾಗಿದೆ.

ಪಶ್ಚಿಮ ಬಂಗಾಳದ ಹೌರಾದಲ್ಲಿ ಶ್ರೀರಾಮನವಮಿ ಮೆರವಣಿಗೆ ವೇಳೆ ಗಲಭೆ ಉಂಟಾದ ನಂತರ ಪೊಲೀಸ್ ಸಿಬ್ಬಂದಿ ಪರೇಡ್‌ ನಡೆಸಿದರು.

ಸುದ್ದಿಸಂಸ್ಥೆಯೊಂದು ಈ ಕುರಿತ ವಿಡಿಯೋಗಳನ್ನು ಹಂಚಿಕೊಂಡಿದ್ದು, ಘರ್ಷಣೆಯ ಸಮಯದಲ್ಲಿ ವಾಹನಗಳು ಸುಟ್ಟುಹೋಗಿರುವುದು ಹಾಗೂ ಗಲಭೆ ಸಮಯದಲ್ಲಿ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿರುವುದನ್ನು ತೋರಿಸಿದೆ.

ಹೌರಾ ಮಾತ್ರವಲ್ಲದೆ, ರಾಮನವಮಿಯ ಸಂದರ್ಭದಲ್ಲಿ ಇತರ ರಾಜ್ಯಗಳಿಂದ ಗಲಭೆಯಾಗಿರುವ ಘಟನೆಗಳು ವರದಿಯಾಗಿವೆ.

ಗುಜರಾತಿನ ವಡೋದರದ ಫತೇಪುರ ಪ್ರದೇಶದಲ್ಲಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಘಟನೆಯಲ್ಲಿ ಕೆಲವು ವಾಹನಗಳು ಜಖಂಗೊಂಡಿದ್ದರೂ ಯಾರಿಗೂ ಗಾಯಗಳಾಗಿಲ್ಲ.

“ನಾವು ಸ್ಥಳೀಯ ಪೊಲೀಸ್, ಅಪರಾಧ ವಿಭಾಗ, ಎಸ್‌ಒಜಿ ಮತ್ತು ರಾಜ್ಯ ಮೀಸಲು ಪೊಲೀಸ್ ಪಡೆಗಳ ಜೊತೆ ಸಶಸ್ತ್ರ ಸಿಬ್ಬಂದಿಯನ್ನು ನಿಯೋಜಿಸಿದ್ದೇವೆ. ಸದ್ಯಕ್ಕೆ, ಕಲ್ಲು ತೂರಾಟದಿಂದಾಗಿ ಯಾರಿಗೂ ಗಾಯಗಳಾಗಿರುವ ವರದಿಗಳಿಲ್ಲ. ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದೇವೆ” ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಮನೋಜ ನಿನಾಮ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ| ಶ್ರೀರಾಮ ‘ಅಸ್ಪೃಶ್ಯ’ರ ಮೈಮೇಲೆ ಹಚ್ಚೆಯಾದ- ಸ್ಥಾವರ ಇಳಿದು ಜಂಗಮನಾದ

ಮಹಾರಾಷ್ಟ್ರದಲ್ಲಿ 12 ಮಂದಿಗೆ ಗಾಯ

ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಸುಮಾರು 500 ಜನರ ಗುಂಪು ಕಲ್ಲು ಮತ್ತು ಪೆಟ್ರೋಲ್ ತುಂಬಿದ ಬಾಟಲಿಗಳನ್ನು ಎಸೆದ ಪರಿಣಾಮ ಹತ್ತು ಪೊಲೀಸ್ ಸಿಬ್ಬಂದಿ ಸೇರಿದಂತೆ 12 ಜನರು ಗಾಯಗೊಂಡಿದ್ದಾರೆ.

ಸುದ್ದಿಸಂಸ್ಥೆ ನೀಡಿರುವ ಮಾಹಿತಿ ಪ್ರಕಾರ, ದುಷ್ಕರ್ಮಿಗಳು ಕನಿಷ್ಠ 13 ವಾಹನಗಳನ್ನು ಸುಟ್ಟು ಹಾಕಿದ ನಂತರ ಜನಸಮೂಹವನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಹಾಗೂ ಕೆಲವು ಸುತ್ತು ಗುಂಡುಗಳನ್ನು ಹಾರಿಸಿದರು.

“ರಾಮ ಮಂದಿರದ ಬಳಿ ತಲಾ ಐದಾರು ಜನರಿದ್ದ ಎರಡು ಗುಂಪುಗಳ ನಡುವೆ ಘರ್ಷಣೆಯಾದ ನಂತರ ಗಲಭೆ ಪ್ರಾರಂಭವಾಯಿತು. ಸ್ವಲ್ಪ ಸಮಯದ ನಂತರ, ಒಂದು ಗುಂಪು ಸ್ಥಳದಿಂದ ಹೊರಟುಹೋಯಿತು ಮತ್ತು ಪೊಲೀಸರು ಶೀಘ್ರದಲ್ಲೇ ಸ್ಥಳಕ್ಕೆ ಆಗಮಿಸಿದರು.

ಒಂದು ಗಂಟೆಯ ನಂತರ ಇನ್ನೊಂದು ಗುಂಪು ಮಂದಿರದತ್ತ ಜಮಾಯಿಸಿ, ಕಲ್ಲು,ಬಾಟಲಿಗಳು ಮತ್ತು ಪೆಟ್ರೋಲ್ ತಂದಿತು. ತುಂಬಿದ ಬಾಟಲಿಗಳನ್ನು ಅವರು ಪೊಲೀಸ್ ಸಿಬ್ಬಂದಿಯತ್ತ ಎಸೆದರು” ಎಂದು ಔರಂಗಾಬಾದ್ ಪೊಲೀಸ್ ಆಯುಕ್ತ ನಿಖಿಲ್ ಗುಪ್ತಾ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತೆಲಂಗಾಣ ಚುನಾವಣೆ | ಬೆಳಗ್ಗೆ 11ರವರೆಗೆ ಶೇ.27ರಷ್ಟು ಹಕ್ಕು ಚಲಾಯಿಸಿದ ಮತದಾರರು

ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಘಡ, ಮಿಝೋರಾಂ, ರಾಜಸ್ಥಾನ ಸೇರಿದಂತೆ ಪಂಚ ರಾಜ್ಯಗಳ ವಿಧಾನಸಭಾ...

ಮಲ್ಲಿಕಾರ್ಜುನ ಖರ್ಗೆ ರಾಜಕೀಯ ಪಯಣ ಕುರಿತ ಪುಸ್ತಕ ಬಿಡುಗಡೆ ಮಾಡಿದ ಸೋನಿಯಾ ಗಾಂಧಿ

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಚುನಾವಣಾ ರಾಜಕೀಯದಲ್ಲಿ 50 ವರ್ಷಗಳನ್ನು...

ಉತ್ತರ ಪ್ರದೇಶ : ನಲ್ಲಿ ನೀರು ಕುಡಿದಿದ್ದಕ್ಕೆ ದಲಿತ ಯುವಕನ ಹತ್ಯೆ

ಸಾರ್ವಜನಿಕ ನಲ್ಲಿ ನೀರು ಕುಡಿದ ಕಾರಣಕ್ಕಾಗಿ ದಲಿತ ಸಮುದಾಯದ ಯುವಕನೊಬ್ಬನನ್ನು ಅಮಾನುಷವಾಗಿ...

ಏಕರೂಪ ನಾಗರಿಕ ಸಂಹಿತೆ ಅನುಷ್ಠಾನ ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಅಮಿತ್ ಶಾ

ಕೇಂದ್ರ ಸರ್ಕಾರ ಜಾರಿಗೊಳಿಸಲಿರುವ ಏಕರೂಪ ನಾಗರಿಕ ಸಂಹಿತೆ ಕಾಯ್ದೆಯನ್ನು ತಡೆಯಲು ಯಾರಿಂದಲೂ...