ವಾಟ್ಸಾಪ್‌ನಲ್ಲಿ ಇಂಟರ್‌ನೆಟ್ ಇಲ್ಲದೆ ಫೈಲ್‌ಗಳು, ಇಮೇಜ್‌ಗಳ ಶೇರಿಂಗ್ ಆಯ್ಕೆ

Date:

Advertisements

ಸರಿಸುಮಾರು ಮುನ್ನೂರು ಕೋಟಿಗೂ ಸಕ್ರಿಯ ಬಳಕೆದಾರರನ್ನು ಹೊಂದಿರುವ ಪ್ರಬಲ ಸಾಮಾಜಿಕ ಮಾಧ್ಯಮ ವಾಟ್ಸಾಪ್‌ ಹೊಸ ಫೀಚರ್‌ ಪರಿಚಯಿಸಲು ಮುಂದಾಗಿದೆ.

ನೂತನ ಫೀಚರ್‌ ಇಂಟರ್‌ನೆಟ್‌ ಇಲ್ಲದೆ ಫೈಲ್‌ಗಳು ಹಾಗೂ ಇಮೇಜ್‌ಗಳನ್ನು ಪಡೆಯುವುದಾಗಿದೆ. ಈ ನೂತನ ಫೀಚರ್‌ನಲ್ಲಿ ಫೈಲ್‌ಗಳು ಅಥವಾ ಮಲ್ಟಿಮೀಡಿಯಾ ಕಂಟೆಂಟ್‌ಗಳನ್ನು ಇಂಟರ್‌ನೆಟ್‌ ಸಂಪರ್ಕವಿಲ್ಲದೆ ಹತ್ತಿರದಲ್ಲಿರುವ ಬಳಕೆದಾರರಿಗೆ ಶೇರ್‌ ಮಾಡಬಹುದಾಗಿದೆ.

ಹೊಸದಾದ ಫೀಚರ್‌ ಹೆಸರು ‘ಪೀಪಲ್‌ ನಿಯರ್‌ಬೈ’. ಈ ಪೀಚರ್‌ನಿಂದ ಯಾವುದೇ ರೀತಿಯ ವೈರಸ್‌ ದಾಳಿಯ ಭಯವಿಲ್ಲದೆ ಸುರಕ್ಷಿತವಾಗಿ ಒಬ್ಬ ಬಳಕೆದಾರರು ಮತ್ತೊಬ್ಬ ಬಳಕೆದಾರರಿಗೆ ಫೈಲ್‌ಗಳನ್ನು ಕಳಿಸಬಹುದಾಗಿದೆ.

Advertisements

ಈ ಸುದ್ದಿ ಓದಿದ್ದೀರಾ? ಟ್ವಿಟರ್‌ ಹೊಸ ಸಿಇಒ ಲಿಂಡಾ ಹೆಸರು ಪ್ರಕಟಿಸಿದ ಎಲಾನ್‌ ಮಸ್ಕ್

ನೂತನ ಫೀಚರ್‌ ಸೇರ್ಪಡೆಯ ಬಗ್ಗೆ ವಾಟ್ಸಾಪ್‌ ಯಾವುದೇ ಆಧಿಕೃತ ಆದೇಶ ಹೊರಡಿಸಿಲ್ಲ. ಸದ್ಯ ಪ್ರಯೋಗ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಅಧಿಕೃತವಾಗಿ ಪ್ರಕಟಿಸಲಾಗುತ್ತದೆ. ಈ ಫೀಚರ್‌ನ ಮತ್ತೊಂದು ವಿಷಯವೆಂದರೆ ಪ್ರಯೋಗ ಹಂತದಲ್ಲಿ ಈ ಫೀಚರ್‌ನಲ್ಲಿ ವೈರಸ್‌ ಅಥವಾ ಬಗ್ಸ್‌ ಕಂಡುಬಂದರೆ ಫೀಚರ್‌ ಪರಿಚಯಿಸದೆ ಇರುವ ಸಾಧ್ಯತೆ ಇರಬಹುದು.

ಇತ್ತೀಚಿಗಷ್ಟೆ ವಾಟ್ಸಾಪ್ ಚಾಟ್‌ ಫಿಲ್ಟರ್, ಸರ್ಚ್‌ ಬೈ ಡೇಟ್‌ ಆಪ್ಷನ್‌, ಟಿಕ್ಸ್ಟ್‌ ಫಾರ್ಮಾಟಿಂಗ್‌ ಫೀಚರ್‌ ಸೇರಿ ಹಲವು ಆಯ್ಕೆಗಳನ್ನು ಪರಿಚಯಿಸಿತ್ತು.

Whatsapp nearby 1

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X