ಭಾರತ, ಟರ್ಕಿಯಲ್ಲಿ ನಕಲಿ ಯಕೃತ್ತಿನ ಔಷಧಿ ಮಾರಾಟ: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

Date:

ಡೆಫಿಟೋಲಿಯೊ ಹೆಸರಿನಲ್ಲಿ ನಕಲಿ ಯಕೃತ್ತಿನ ಔಷಧಿ ಭಾರತ ಹಾಗೂ ಟರ್ಕಿಯಲ್ಲಿ ಮಾರಾಟವಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

ಡೆಫಿಟೆಲಿಯೊ (ಡೆಫಿಬ್ರೊಟೈಡ್ ಸೋಡಿಯಂ) ಔಷಧಿಯ ಒಂದು ಬ್ಯಾಚ್ ನಕಲಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ಎಚ್ಚರಿಕೆಯ ಸಂದೇಶದಲ್ಲಿ ತಿಳಿಸಿದೆ. ಈ ನಕಲಿ ಔಷಧ ಭಾರತಕ್ಕೆ 2023ರ ಏಪ್ರಿಲ್‌ನಲ್ಲಿ ಹಾಗೂ ಟರ್ಕಿಯಲ್ಲಿ ಜುಲೈ 2023ರಲ್ಲಿ ಪತ್ತೆಯಾಗಿದ್ದು, ಇದನ್ನು ನಿಯಂತ್ರಿತ ಹಾಗೂ ಅಧಿಕೃತ ಸ್ಥಳಗಳಿಂದ ಹೊರಗೆ ಸರಬರಾಜು ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ.

ವಿಓಡಿ (ವೆನೊ ಒಕ್ಲುಸಿವ್ ಡಿಸೀಸ್) ರೋಗಕ್ಕೆ ಹೆಮಿಟೊಪೊಯೆಟಿಕ್ ಅಂಗಾಂಶ ಕಸಿ (ಎಚ್ಎಸ್ಸಿಟಿ) ಚಿಕಿತ್ಸೆಗೆ ಡೆಫಿಟೆಲಿಯೊ ಔಷಧ ಬಳಸಲಾಗುತ್ತದೆ. ಇದನ್ನು ವಯಸ್ಕರು, ಪ್ರೌಢಾವಸ್ಥೆಯವರು, ಮಕ್ಕಳು ಮತ್ತು ಒಂದು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳ ಚಿಕಿತ್ಸೆಗೆ ನೀಡಲಾಗುತ್ತದೆ. ವಿಓಡಿ ಎನ್ನುವುದು ಯಕೃತ್ತಿನ ರಕ್ತನಾಳಗಳಲ್ಲಿ ತಡೆ ಉಂಟಾಗುವ ಕಾಯಿಲೆಯಾಗಿದ್ದು, ಇದರಿಂದ ಈ ಅಂಗಾಂಗ ಸಮರ್ಪಕವಾಗಿ ಕಾರ್ಯನಿರ್ವಹಿಸುವುದಿಲ್ಲ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ನಾಲ್ಕು ಓಟು ಕಡಿಮೆ ಆಗುತ್ತದೆ ಎಂದರೆ, ದೇಶದ ಹೆಸರನ್ನು ಬದಲಿಸಬಹುದೇ?: ಕೇಜ್ರಿವಾಲ್‌ ಖಂಡನೆ

ಒಂದು ವೇಳೆ ನೀವು ಅಥವಾ ನಿಮಗೆ ತಿಳಿದಿರುವ ಯಾರಾದರೂ, ಈ ನಕಲಿ ಉತ್ಪನ್ನವನ್ನು ಬಳಸಿದ್ದರೆ ಅಥವಾ ಬಳಕೆಯ ನಂತರ ಪ್ರತಿಕೂಲ ಅಡ್ಡಪರಿಣಾಮವನ್ನು ಅನುಭವಿಸಿದರೆ, ಆರೋಗ್ಯ ವೃತ್ತಿಪರರಿಂದ ತಕ್ಷಣದ ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಇದರ ಜೊತೆಗೆ ವೈದ್ಯ ಸಿಬ್ಬಂದಿ ಕೂಡ ರಾಷ್ಟ್ರೀಯ ನಿಯಂತ್ರಣ ಪ್ರಾಧಿಕಾರಗಳು/ರಾಷ್ಟ್ರೀಯ ಫಾರ್ಮಾಕೋವಿಜಿಲೆನ್ಸ್ ಕೇಂದ್ರಕ್ಕೆ ವರದಿ ಮಾಡಬೇಕು. ರಾಷ್ಟ್ರೀಯ ನಿಯಂತ್ರಕ/ಆರೋಗ್ಯ ಅಧಿಕಾರಿಗಳು ಈ ನಕಲಿ ಉತ್ಪನ್ನಗಳನ್ನು ಗುರುತಿಸಿದರೆ ತಕ್ಷಣವೇ ವಿಶ್ವ ಆರೋಗ್ಯ ಸಂಸ್ಥೆಗೆ ವರದಿ ಮಾಡಬೇಕು ಎಂದು ಸಂದೇಶದಲ್ಲಿ ತಿಳಿಸಲಾಗಿದೆ.

ಡೆಫಿಟೆಲಿಯೊ ಔಷಧವನ್ನು ವಿಶ್ವಸಂಸ್ಥೆಯ ಈ ಅಂಗಸಂಸ್ಥೆ ಅಧಿಕೃತವಾಗಿ ಉತ್ಪಾದನೆ ಮಾಡುತ್ತದೆ. ಆದರೆ ಈ ಔಷಧಿಯ 20ಜಿ20ಎ ಲಾಟ್, ಜರ್ಮನ್/ಆಸ್ಟ್ರೇಲಿಯನ್ ಪ್ಯಾಕೇಜಿಂಗ್‌ನಲ್ಲಿ ಪ್ಯಾಕ್ ಆಗಿತ್ತು. ಆದರೆ ಈ ನಕಲಿ ಉತ್ಪನ್ನ ಇಂಗ್ಲೆಂಡ್/ ಐರ್ಲೆಂಡ್ ಪ್ಯಾಕೇಜಿಂಗ್ ಹೊಂದಿದೆ. ಇದರ ಅವಧಿ ಮೀರುವ ದಿನಾಂಕ ಕೂಡಾ ತಪ್ಪಾಗಿದ್ದು, ನೋಂದಾಯಿತ ಅವಧಿಯ ಕ್ರಮಕ್ಕೆ ಬದ್ಧವಾಗಿಲ್ಲ. ಮೇಲೆ ಹೇಳಲಾದ ಸೀರಿಯಲ್ ನಂಬರ್ ಗೂ 20ಜಿ20ಎಗೂ ಸಂಬಂಧ ಇಲ್ಲ. ಈ ಔಷಧಿಯನ್ನು ಭಾರತ ಹಾಗೂ ಟರ್ಕಿಯಲ್ಲಿ ಮಾರಾಟ ಮಾಡುವುದಕ್ಕೆ ಅನುಮತಿ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟಪಡಿಸಿದೆ.

ಎಲ್ಲ ಔಷಧಗಳು ಮತ್ತು ಇತರ ವೈದ್ಯಕೀಯ ಉತ್ಪನ್ನಗಳನ್ನು ಅಧಿಕೃತ ಮತ್ತು ಪರವಾನಗಿ ಪೂರೈಕೆದಾರರಿಂದ ಖರೀದಿಸಬೇಕು.

ಈ ನಕಲಿ ಉತ್ಪನ್ನಗಳು ಎಲ್ಲಿಯಾದರೂ ಮಾರಾಟವಾಗುತ್ತಿರುವ ಹಾಗೂ ತಯಾರಿಕೆಯ ಬಗ್ಗೆ ಸಾರ್ವಜನಿಕರಿಗೆ ತಿಳಿದು ಬಂದರೆ ವಿಶ್ವ ಆರೋಗ್ಯ ಸಂಸ್ಥೆಯ ಇಮೇಲ್‌ [email protected] ಗೆ ಸಂಪರ್ಕಿಸಿ ದೂರು ನೀಡಬಹುದು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತೆಲಂಗಾಣ | 4,568 ಕೋಟಿ ರೂ. ಒಡೆಯ ಕೆ.ವಿಶ್ವೇಶ್ವರ ರೆಡ್ಡಿ ರಾಜ್ಯದ ಅತ್ಯಂತ ಶ್ರೀಮಂತ ಬಿಜೆಪಿ ಅಭ್ಯರ್ಥಿ

ತೆಲಂಗಾಣದ ಲೋಕಸಭಾ ಚುನಾವಣೆ ಕಣದಲ್ಲಿರುವ ಅಭ್ಯರ್ಥಿಗಳಲ್ಲಿ ಚೆವೆಳ್ಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ...

ಮಣಿಪುರ ಹಿಂಸಾಚಾರ | ಇಬ್ಬರು ಸಿಆರ್‌ಪಿಎಫ್ ಯೋಧರು ಹುತಾತ್ಮ

ಮಣಿಪುರದ ನರಂಸೇನಾ ಪ್ರದೇಶದಲ್ಲಿ ಶುಕ್ರವಾರ ಮಧ್ಯರಾತ್ರಿಯಲ್ಲಿ ನಡೆದ ಹಿಂಸಾಚಾರದಲ್ಲಿ ಇಬ್ಬರು ಕೇಂದ್ರೀಯ...

ಪಶ್ಚಿಮ ಬಂಗಾಳ | ಪ್ರಧಾನಿ ಚುನಾವಣಾ ರ್‍ಯಾಲಿ ಬಳಿಕ ಟಿಎಂಸಿಯಿಂದ ಮೋದಿ ಹೇಳಿಕೆಗಳ ಫ್ಯಾಕ್ಟ್‌ಚೆಕ್!

ಪಶ್ಚಿಮ ಬಂಗಾಳದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭರ್ಜರಿಯಾಗಿ ರ್‍ಯಾಲಿ ನಡೆಸಿ ಚುನಾವಣಾ...

2ನೇ ಹಂತದ ಲೋಕಸಭಾ ಚುನಾವಣೆ: ಶೇ.61 ಮತದಾನ

ದೇಶಾದ್ಯಂತ 13 ರಾಜ್ಯ ಹಾಗೂ ಒಂದು ಕೆಂದ್ರಾಡಳಿತ ಪ್ರದೇಶದ 88 ಕ್ಷೇತ್ರಗಳಿಗೆ...