ಪ್ರಭಾಕರ ಭಟ್ಟರ ಹೇಳಿಕೆ ಬಿಜೆಪಿ ಪರಿವಾರದ ಚುನಾವಣಾ ‘ಟೂಲ್ ಕಿಟ್’

Date:

ಸದಾ ಸಂಸ್ಕೃತಿಯ ಬಗ್ಗೆ ಉಪದೇಶ ಮಾಡುವ ಸಂಘದ ಸಂಸ್ಕಾರ ಯಾವುದು? ತಮ್ಮ ರಾಜಕೀಯ ಸಾಧನೆಗಾಗಿ ಮುಗ್ಧ ತಾಯಂದಿರನ್ನೇ ವೇಶ್ಯೆಯರಿಗೆ ಹೋಲಿಸುವುದನ್ನ ಸಂಘ ಪ್ರಭಾಕರ ಭಟ್ಟರಿಗೆ ಕಲಿಸಿದೆಯಾ? ಇದು ಖಂಡಿತ ಈ ನೆಲದ ಅಥವಾ ಸನಾತನ ಸಂಸ್ಕೃತಿ ಅಲ್ಲವೇ ಅಲ್ಲ.

 

- Advertisement -

ಮುಸ್ಲಿಂ ಮಹಿಳೆಯರ ಕುರಿತು ಕಲ್ಲಡ್ಕ ಪ್ರಭಾಕರ ಭಟ್ಟರ ಹೇಳಿಕೆ ವಿಕೃತ ಮನಸ್ಥಿತಿಯದ್ದಾಗಿದೆ. ಚುನಾವಣೆ ಹತ್ತಿರದಲ್ಲಿರುವಾಗ ಇಂತಹ ಹೇಳಿಕೆ ನೀಡಿ ಕೋಮು ಗಲಭೆ ನಡೆಸುವ ಬಿಜೆಪಿ ಪರಿವಾರದ ಟೂಲ್‌ಕಿಟ್‌ನ ಮೊದಲ ಹಂತ ಇದಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಚುನಾವಣಾ ಆಯೋಗವು ತಾನೇ ಹಾಕಿಕೊಂಡ ಗಂಟುಗಳನ್ನು ಬಿಡಿಸಿಕೊಳ್ಳಬಲ್ಲದೇ? ಇದೇ...

SIR ನಡೆಸುವ ನಿರ್ಧಾರ ಸರ್ವಾನುಮತದಿಂದ ಕೂಡಿತ್ತು ಎಂದು ಜನ ನಂಬಬೇಕಾದರೆ, ಆಯೋಗವು ಸಂಬಂಧಿಸಿದ ಸಭೆಯ ಅಧಿಕೃತ ನಡಾವಳಿಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು. ಆ ಮೂಲಕ ಚುನಾವಣಾ ಆಯೋಗವು ತಾನೇ ಸೃಷ್ಟಿಸಿಕೊಂಡಿರುವ ಗೋಜಲುಗಳಿಂದ ಬಿಡಿಸಿಕೊಳ್ಳಬೇಕು. ಭಾರತೀಯ...

ನೊಬೆಲ್‌ ಪ್ರಶಸ್ತಿ ಸರಣಿ | ಕಣ ಭೌತವಿಜ್ಞಾನ-ಖಗೋಳವಿಜ್ಞಾನಗಳೆರಡರ ಸಮ್ಮಿಳನದ...

ಫ್ರಾನ್ಸಿಸ್ ಹಾಲ್ಜೆನ್ ಅವರ ಮೂಲ ಆಲೋಚನೆ ಕೇವಲ ಹಿಮದೊಳಗೆ ಸಂವೇದಕಗಳನ್ನು ಇಡುವ ಯೋಜನೆಯಾಗಿರಲಿಲ್ಲ. ಅದು ವಿಶ್ವವನ್ನು ನೋಡುವ ಹೊಸ ವಿಧಾನಕ್ಕೆ ಬಾಗಿಲು ತೆರೆಯುವ ಆಲೋಚನೆಯಾಗಿತ್ತು. ಅಗೋಚರವಾಗಿರುವ ಕಣಗಳನ್ನು ಹಿಡಿಯುವ ಮೂಲಕ, ವಿಶ್ವದ ಅತ್ಯಂತ...

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಅಮಾಯಕ ಯುವಕರು ಪರಸ್ಪರ ಕಾದಾಡಿಕೊಳ್ಳಲೇ ಬೇಕು ಅನ್ನುವ ವಾತಾವರಣ ಸೃಷ್ಟಿಸಲು ಇಂತಹ ಹೇಳಿಕೆ ಬರುತ್ತಿದೆ. ಕಳೆದ 4 ವರ್ಷಗಳ ಕಾಲ ಮೌನವಾಗಿದ್ದ ಅನಂತಕುಮಾರ ಹೆಗಡೆ ಇದೀಗ ಕೋಮು ಹೇಳಿಕೆ ಶುರು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಶೋಭಾ, ಸಿ ಟಿ ರವಿ, ಇತರರು ಹಾಗೂ ಪರಿವಾರದ ನಾಯಕ ಕೋಮು ಹೇಳಿಕೆ ನಿರಂತರವಾಗಿ ಬರುತ್ತದೆ.

ಹೀಗೆ ಉಂಟಾಗುವ ಕ್ರಿಯೆ ಮತ್ತು ಪ್ರತಿಕ್ರಿಯೆಯಿಂದ ಕೋಮು ಸೌಹಾರ್ದತೆ ಹಾಳಾಗಿ ಅಶಾಂತಿ ಮೂಡುವುದನ್ನೇ ಚುನಾವಣೆಗೆ ಬಂಡವಾಳ ಮಾಡುವುದು ಈ ಪರಿವಾರದ ಉದ್ದೇಶವಾಗಿದೆ. ಬಿಜೆಪಿ ರಾಜ್ಯ ಸರ್ಕಾರ ಇದ್ದಾಗ ಬಾಯಿಗೆ ಬೀಗ ಹಾಕಿದ್ದ ನಾಯಕರು ಈಗ ಬಾಯಿಗೆ ಬಂದಂತೆ ಹೇಳಿಕೆ ಕೊಡುವಂತೆ ಪರಿವಾರದ ನಾಯಕರ ಸೂಚನೆ ಬಂದಂತಿದೆ.

ಇದರಿಂದಾಗಿ ಕರ್ನಾಟಕದ ಕಾಂಗ್ರೆಸ್ ಸರ್ಕಾರವನ್ನೂ ಇಕ್ಕಟ್ಟಿಗೆ ಸಿಲುಕಿಸುವುದು ಪರಿವಾರದ ಟೂಲ್‌ಕಿಟ್‌ನ ತಂತ್ರವಾಗಿದೆ. ಈ ರೀತಿ ಪುಂಖಾನು ಪುಂಖವಾಗಿ ಹೇಳಿಕೆ ಕೊಡುವ ನಾಯಕರನ್ನು ಸರ್ಕಾರ ಬಂಧನ ಮಾಡಲು ಪ್ರಾರಂಭಿಸಿದರೆ ರಾಜ್ಯವ್ಯಾಪಿ ಪ್ರತಿಭಟನೆ ಮತ್ತು ಸೌಹಾರ್ದತೆಗೆ ಬೆಂಕಿ ಹಚ್ಚುವ ಕೆಲಸಕ್ಕೆ ಮುಗ್ಧ ಯುವಕರನ್ನು ಬಳಸುವುದು ಮತ್ತು ಸಹಜವಾಗಿ ಅದಕ್ಕೆ ಅನ್ಯಮತದವರು ನೀಡುವ ಪ್ರತಿಕ್ರಿಯೆಯಿಂದ ರಾಜ್ಯ ರಣರಂಗವಾಗುತ್ತದೆ. ಇದು ಬಿಜೆಪಿ ಟೂಲ್ ಕಿಟ್ ನ ಸಮಗ್ರ ಸಂಗತಿಯಾಗಿದೆ. ನನ್ನ ಈ ಮಾತು ಸುಳ್ಳು ಎಂದಾದರೆ ಪ್ರಭಾಕರ ಭಟ್ಟರ ಮಾತನ್ನು ಬಿಜೆಪಿ ಮತ್ತು ಸಂಘ ಪರಿವಾರ ಖಂಡಿಸಬೇಕು.

ಸದಾ ಸಂಸ್ಕೃತಿಯ ಬಗ್ಗೆ ಉಪದೇಶಮಾಡುವ ಸಂಘದ ಸಂಸ್ಕಾರ ಯಾವುದು? ತಮ್ಮ ರಾಜಕೀಯ ಸಾಧನೆಗಾಗಿ ಮುಗ್ಧ ತಾಯಂದಿರನ್ನೇ ವೇಶ್ಯೆಯರಿಗೆ ಹೋಲಿಸುವುದನ್ನ ಸಂಘ ಪ್ರಭಾಕರ ಭಟ್ಟರಿಗೆ ಕಲಿಸಿದೆಯಾ? ಇದು ಖಂಡಿತ ಈ ನೆಲದ ಅಥವಾ ಸನಾತನ ಸಂಸ್ಕೃತಿ ಅಲ್ಲವೇ ಅಲ್ಲ. ಇಂದು ನವ ಹಿಂದುತ್ವದ ಪರಿವಾರದ ಹೀನ ವಿಕೃತ ಮನಸ್ಸಿನ ಪ್ರತಿಫಲನವಾಗಿದೆ. ಅಮಾಯಕ ತಾಯಂದಿರ ಶಾಪ ಇವರಿಗೆ ತಾಗದೇ ಇರದು.

ಇದು ಬಿಜೆಪಿ ಪರಿವಾರದ ಟೂಲ್ ಕಿಟ್ ಅಲ್ಲಾ ಅಂತಾದರೆ, ಅವರ ಮೇಲೆ ಕ್ರಮಕ್ಕೆ ಒಪ್ಪಬೇಕು. ಇಲ್ಲವೆಂದಾದರೆ ಇದು ಚುನಾವಣೆಯ ಟೂಲ್‌ಕಿಟ್ ಎಂದೇ ಸಿದ್ಧವಾಗುತ್ತದೆ

ಇಂತಹ ಸೂಕ್ಷ್ಮ ಪರಿಸ್ಥಿತಿಯನ್ನು ಜನಸಾಮಾನ್ಯರು ಅರ್ಥ ಮಾಡಿಕೊಂಡು ಜಾಣ ನಡೆ ಇಡಬೇಕಿದೆ. ಅವರ ಕುತಂತ್ರಕ್ಕೆ ರಾಜ್ಯದ ಜನರ ಜೀವ ಬಲಿಯಾಗದಂತೆ ನೋಡಿಕೊಳ್ಳುವುದು ಜಾತ್ಯತೀತ ಹಿಂದು ಮುಸ್ಲಿಂ ಕ್ರೈಸ್ತರ ಸಂಕಲ್ಪವಾಗಬೇಕು.

ಸರ್ಕಾರ ನ್ಯಾಯಾಲಯದ ಮೂಲಕವೇ ಕಠಿಣ ಕಾನೂನು ಕ್ರಮ ಕೈ ತೆಗೆದುಕೊಳ್ಳಬೇಕು. ಚುನಾವಣೆ ಗೆಲ್ಲಲು ಯಾವ ಹೀನ ಮಟ್ಟಕ್ಕೂ ಇಳಿಯುವ ಬಿಜೆಪಿ ಪರಿವಾರವನ್ನು ಶಾಂತಿ ಸಮಾಧಾನದ ರಾಜಕೀಯ ನಡೆಯ ಮೂಲಕವೇ ಸೋಲಿಸಬೇಕು. ಹಿಂದೂ ಮುಸ್ಲಿಂ ಅಮಾಯಕ ಯುವಕರ ಪ್ರತಿ ಕ್ಷಣವು ಜಾಗೃತವಾಗಿರಬೇಕಾದ ಪರಸ್ಥಿತಿಯಿದೆ. ತಂದೆ ತಾಯಂದಿರೂ ನಿಮ್ಮ ಮಕ್ಕಳು ಇಂತಹ ಹುನ್ನಾರಕ್ಕೆ ಬಲಿಯಾಗದಂತೆ ನೋಡಿಕೊಳ್ಳಬೇಕು. ಮಹಾತ್ಮ ಗಾಂಧೀಜಿಯವರ ಶಾಂತಿ ಮತ್ತು ಅಹಿಂಸಾ ಮಾರ್ಗದಿಂದ ಮಾತ್ರ ಇಂತಹ ಟೂಲ್‌ಕಿಟ್ ಗಳನ್ನು ಧ್ವಂಸ ಮಾಡಬಹುದು

WhatsApp Image 2025 11 17 at 3.25.04 PM
ಎಂ ಜಿ ಹೆಗಡೆ, ಮಂಗಳೂರು
+ posts

ಲೇಖಕ, ಜನಪರ ಹೋರಾಟಗಾರ

ಪೋಸ್ಟ್ ಹಂಚಿಕೊಳ್ಳಿ:

ಎಂ ಜಿ ಹೆಗಡೆ, ಮಂಗಳೂರು
ಎಂ ಜಿ ಹೆಗಡೆ, ಮಂಗಳೂರು
ಲೇಖಕ, ಜನಪರ ಹೋರಾಟಗಾರ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಚನ ಕಲ್ಯಾಣ | ಭಕ್ತಿಯೆಂಬ ಪೃಥ್ವಿಯಲ್ಲಿ ಗುರೂಪದೇಶವೆಂಬ ನೇಗಿಲಂ ಪಿಡಿದು

ಭಕ್ತಿಯೆಂಬ ಪೃಥ್ವಿಯಲ್ಲಿ ಗುರೂಪದೇಶವೆಂಬ ನೇಗಿಲಂ ಪಿಡಿದು,ಅಂತಃಕರಣ ಚತುಷ್ಟಯವೆಂಬ ಪಶುವಂ ಕಟ್ಟಿಓಂಕಾರನಾದವೆಂಬ ಸೆಳೆಕೋಲಂ...

ವಚನ ಕಲ್ಯಾಣ | ಕೊಲ್ಲದಿರ್ಪುದೆ ಧರ್ಮ

ಲಿಂಗದೇವನೆ ಕರ್ತ, ಶಿವಭಕ್ತನೆ ಶ್ರೇಷ್ಠ.ಕೊಲ್ಲದಿರ್ಪುದೆ ಧರ್ಮ. ಅಧರ್ಮದಿಂದ ಬಂದುದನೊಲ್ಲದಿರ್ಪುದೆ ನೇಮ.ಅಳುಪಿಲ್ಲದಿರ್ಪುದೆ ವ್ರತ....

ವಚನ ಕಲ್ಯಾಣ | ಸತ್ಯಶುದ್ಧವಿಲ್ಲದುದು ಕಾಯಕವಲ್ಲ

ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ;ಸತ್ಯಶುದ್ಧವಿಲ್ಲದುದು ಕಾಯಕವಲ್ಲ;ಆಸೆಯೆಂಬುದು ಭವದ ಬೀಜ;ನಿರಾಸೆಯೆಂಬುದು ನಿತ್ಯಮುಕ್ತಿ.ಉರಿಲಿಂಗಪೆದ್ದಿಗಳರಸನಲ್ಲಿ ಸದರವಲ್ಲ ಕಾಣವ್ವಾ ವಚನ...

ವಚನ ಕಲ್ಯಾಣ | ಸುಮ್ಮನೇಕೆ ದಿನಕಳೆವಿರಿ, ಸುಮ್ಮನೇಕೆ ಹೊತ್ತುಗಳೆವಿರಿ?

ಸುಮ್ಮನೇಕೆ ದಿನಕಳೆವಿರಿ, ಸುಮ್ಮನೇಕೆ ಹೊತ್ತುಗಳೆವಿರಿ? ಸುಮ್ಮನೇಕೆ ಹೊತ್ತಗಳೆವಿರಿ ಸ್ವಾಮಿಗಳಿರಾ? ಮಾಡ ಬನ್ನಿ...