90% ಅನಾಮಧೇಯ ಚುನಾವಣಾ ಬಾಂಡ್ ಆದಾಯ ಹೊಂದಿರುವ ಪ್ರಾದೇಶಿಕ ಪಕ್ಷಗಳು

Date:

ಎಡಿಆರ್ ಪ್ರಕಾರ ಅನಾಮಧೇಯ ಚುನಾವಣಾ ಬಾಂಡ್ ಮೂಲಗಳಿಂದಲೇ ಪ್ರಾದೇಶಿಕ ಪಕ್ಷಗಳು ತಮ್ಮ ಶೇ 93.26ರಷ್ಟು ಆದಾಯ ಸಂಗ್ರಹಿಸುತ್ತವೆ!

ಚುನಾವಣೆಗಳಲ್ಲಿ ರಾಷ್ಟ್ರೀಯ ಪಕ್ಷಗಳು ಅಥವಾ ಗೆಲ್ಲುವ ಸಾಧ್ಯತೆಯಿರುವ ಅಭ್ಯರ್ಥಿಗಳಿಗೆ ಸೋಲುಣಿಸುವ, ಆದರೆ ಗೆಲುವು ಸಾಧಿಸದ ಪ್ರಾದೇಶಿಕ ಪಕ್ಷಗಳು ರಾಷ್ಟ್ರದಲ್ಲಿ ಬಹಳಷ್ಟಿವೆ. ಈ ಪ್ರಾದೇಶಿಕ ಪಕ್ಷಗಳು ಮುಖ್ಯವಾಗಿ ಬಹುತೇಕ ಅಭ್ಯರ್ಥಿಗಳಿಂದ ಗೆಲುವನ್ನು ಕಸಿದುಕೊಳ್ಳುವಷ್ಟು ಮತಗಳನ್ನು ಬಾಚುತ್ತವೆ. ಆದರೆ, ವ್ಯಾಪಕ ಪ್ರಮಾಣದಲ್ಲಿ ಚುನಾವಣೆಗೆ ಸ್ಪರ್ಧಿಸಲು ಮತ್ತು ಅಭ್ಯರ್ಥಿಗಳನ್ನು ನಿಲ್ಲಿಸಲು ಇವುಗಳಿಗೆ ಹಣ ಚೆಲ್ಲುವವರು ಯಾರು? ಅನಾಮಧೇಯ ಚುನಾವಣಾ ಬಾಂಡ್ ಮೂಲಗಳು!

ಪ್ರಾದೇಶಿಕ ಪಕ್ಷಗಳ ಅನುದಾನ ಮೂಲ ಹುಡುಕಿದ ಚುನಾವಣಾ ಕಾವಲುಗಾರ ಸಂಸ್ಥೆಯಾದ ಪ್ರಜಾಪ್ರಭುತ್ವ ಸುಧಾರಣಾ ಒಕ್ಕೂಟ (ಎಡಿಆರ್‌) ಕುತೂಹಲಕರ ಅಂಶ ಮುಂದಿಟ್ಟಿದೆ. ಎಡಿಆರ್ ಪ್ರಕಾರ, ಅನಾಮಧೇಯ ಚುನಾವಣಾ ಬಾಂಡ್‌ ಮೂಲಗಳಿಂದಲೇ ಈ ಪಕ್ಷಗಳು ತಮ್ಮ ಶೇ 93.26ರಷ್ಟು ಆದಾಯ ಸಂಗ್ರಹಿಸುತ್ತವೆ! ಇತ್ತೀಚೆಗಿನ ವರ್ಷಗಳಲ್ಲಿ, ಮತ ವಿಭಜನೆಗೆ ಬಳಕೆಯಾಗುತ್ತಿರುವ ಇಂತಹ ಪ್ರಾದೇಶಿಕ ಪಕ್ಷ ಕಟ್ಟಿ ಚುನಾವಣೆಗೆ ಸ್ಪರ್ಧಿಸುವುದೂ ಬಹಳ ಲಾಭಕರವೆನಿಸಿದೆ.

ಎಡಿಆರ್‌ ಮಂಗಳವಾರ ಪ್ರಕಟಿಸಿರುವ ವಿವರಗಳ ಪ್ರಕಾರ, 2021-22ರಲ್ಲಿ 27 ಪ್ರಾದೇಶಿಕ ಪಕ್ಷಗಳು ಘೋಷಿಸಿರುವ ಶೇ 76ರಷ್ಟು ಆದಾಯ ಅಪರಿಚಿತ ಮೂಲಗಳಿಂದ ಬಂದಿವೆ. ಈ ಪಕ್ಷಗಳ ಶೇ 93.26ರಷ್ಟು ಹಣ ಅನಾಮಧೇಯ ಚುನಾವಣಾ ಬಾಂಡ್‌ಗಳಿಂದ ಬಂದಿವೆ.

ಎಡಿಆರ್ ಆರಂಭದಲ್ಲಿ 54 ಪ್ರಾದೇಶಿಕ ಪಕ್ಷಗಳ ಆದಾಯ ಮೂಲ ಪರಿಶೀಲನೆಗೆ ಯತ್ನಿಸಿತ್ತು. ಆದರೆ 24 ಪ್ರಾದೇಶಿಕ ಪಕ್ಷಗಳಷ್ಟೇ ತಮ್ಮ ವಾರ್ಷಿಕ ಆಡಿಟ್ ವರದಿ ಮತ್ತು ಸಂಪೂರ್ಣ ಅನುದಾನದ ವಿವರಗಳನ್ನು ಸಲ್ಲಿಸಿದೆ ಎನ್ನುವುದನ್ನು ಕಂಡುಕೊಂಡಿದೆ. ಅನುದಾನದ ವಿವರಗಳೆಂದರೆ ಚುನಾವಣಾ ಆಯೋಗ ಕಡ್ಡಾಯ ಮಾಡಿರುವಂತೆ, ಚುನಾವಣಾ ಬಾಂಡ್‌ಗಳೂ ಸೇರಿ ₹20,000 ಮೇಲಿನ ಎಲ್ಲಾ ಅನುದಾನಗಳನ್ನು ಘೋಷಿಸುವುದು.

ಇತ್ತೀಚೆಗೆ ರಾಷ್ಟ್ರೀಯ ಪಕ್ಷವೆಂದು ಮನ್ನಣೆ ಪಡೆದಿರುವ ಆಮ್ ಆದ್ಮಿ ಪಕ್ಷ ಸಲ್ಲಿಸಿದ ಎರಡೂ ವರದಿಗಳಲ್ಲಿ ವ್ಯತ್ಯಾಸವಿರುವುದರಿಂದ ವಿಶ್ಲೇಷಣೆಯಲ್ಲಿ ಸ್ಥಾನ ಪಡೆದಿಲ್ಲ. ಒಟ್ಟಿನಲ್ಲಿ, ವಿಶ್ಲೇಷಣೆಗೆ ಒಳಪಟ್ಟಿರುವ 27 ಪಕ್ಷಗಳು 2021-22ರಲ್ಲಿ ₹1,167.57 ಕೋಟಿ ಆದಾಯ ಘೋಷಿಸಿವೆ. ಅವುಗಳಲ್ಲಿ ₹145.42 ಕೋಟಿಯಷ್ಟೇ ಪರಿಚಿತ ದಾನಿಗಳಿಂದ ಬಂದಿವೆ. ಅಂದರೆ, ಈ ಅನುದಾನಕ್ಕೆ ದಾನಿಗಳ ವಿವರ ಲಭ್ಯವಿದೆ. ಉಳಿದ ಮೊತ್ತ ಅನಾಮಧೇಯ ಮೂಲಗಳಿಂದ ಬಂದಿವೆ ಎಂದು ಪಕ್ಷಗಳು ಸಲ್ಲಿಸಿದ ವರದಿಗಳಲ್ಲಿ ದಾಖಲಾಗಿವೆ. ಸದಸ್ಯತ್ವ ಶುಲ್ಕಗಳು, ಬ್ಯಾಂಕ್ ಬಡ್ಡಿ, ಪ್ರಕಟಣೆಗಳ ಮಾರಾಟ ಇತ್ಯಾದಿಗಳಿಂದ ₹132.60 ಕೋಟಿ ಹಣ ಸಂಗ್ರಹವಾಗಿದೆ.

ಅಪರಿಚಿತ ಮೂಲಗಳೆಂದರೆ ಚುನಾವಣಾ ಬಾಂಡ್‌ಗಳು, ಕೂಪನ್‌ಗಳ ಮಾರಾಟ, ಪರಿಹಾರ ನಿಧಿ ಮತ್ತು ಇತರೆ ಆದಾಯ ಸೇರಿದ್ದು, ಈ ಮೊತ್ತ ₹887.55 ಕೋಟಿಗಳಷ್ಟಿವೆ. ಅಂದರೆ ಪಕ್ಷಗಳ ಒಟ್ಟು ಆದಾಯದ ಶೇ 76.14! ಅಪರಿಚಿತ ಮೂಲಗಳಲ್ಲಿ ಚುನಾವಣಾ ಬಾಂಡ್‌ಗಳಿಂದಲೇ ₹827.76 ಕೋಟಿ ದೊರೆತಿದೆ. ಅಂದರೆ ಪಕ್ಷಗಳ ಒಟ್ಟು ಆದಾಯದ ಶೇ 93.26!

ಈ ಸುದ್ದಿ ಓದಿದ್ದೀರಾ?: ಈ ದಿನ ಸಂಪಾದಕೀಯ | ಬಿಜೆಪಿಗೆ ಮತದಾರರು ಕಲಿಸಿದ ಪಾಠವನ್ನು ಕಾಂಗ್ರೆಸ್ ಮರೆಯದಿರಲಿ

ಪ್ರಾದೇಶಿಕ ಪಕ್ಷಗಳ ಆದಾಯ 2020-21ರಲ್ಲಿ ಎಲ್ಲಾ 27 ಪಕ್ಷಗಳ ಆದಾಯದಲ್ಲಿ ಅಪರಿಚಿತ ಮೂಲಗಳು  ಶೇ 49.73ರಷ್ಟಿತ್ತು ಎನ್ನುವುದನ್ನೂ ಎಡಿಆರ್ ಹೇಳಿದೆ.

ಪ್ರಾದೇಶಿಕ ಪಕ್ಷಗಳ ನಡುವೆ ಡಿಎಂಕೆ ಅತ್ಯಧಿಕ ಮೊತ್ತವನ್ನು (₹306.02 ಕೋಟಿ) ಅಪರಿಚಿತ ಮೂಲಗಳಿಂದ ಪಡೆದಿದೆ. ಅಪರಿಚಿತ ಮೂಲಗಳಿಂದ ಆದಾಯ ಸಂಗ್ರಹಿಸಿದ ಪಕ್ಷಗಳಲ್ಲಿ ನಂತರದ ಸ್ಥಾನದಲ್ಲಿ ಬಿಜು ಜನತಾ ದಳ (₹291.09 ಕೋಟಿ), ತೆಲಂಗಾಣ ರಾಷ್ಟ್ರ ಸಮಿತಿ (₹153.03 ಕೋಟಿ), ವೈಎಸ್‌ಆರ್ ಕಾಂಗ್ರೆಸ್ (₹60.01 ಕೋಟಿ) ಹಾಗೂ ಜನತಾ ದಳ ಯುನೈಟೆಡ್ (₹48.36 ಕೋಟಿ) ಇವೆ.

ಅನಾಮಧೇಯವಾಗಿರುವ ಪಕ್ಷಗಳ ಅತ್ಯಧಿಕ ಆದಾಯದ ಮೂಲಗಳನ್ನು ಪತ್ತೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಎಲ್ಲಾ ದಾನಿಗಳ ಸಂಪೂರ್ಣ ಪಟ್ಟಿಯನ್ನೂ ಮಾಹಿತಿ ಹಕ್ಕು ಅಡಿಯಲ್ಲಿ ಲಭ್ಯವಿರುವಂತೆ ಮಾಡಬೇಕು ಎಂದು ತನ್ನ ವರದಿಯಲ್ಲಿ ಎಡಿಆರ್ ಶಿಫಾರಸು ಮಾಡಿದೆ.

ವಿದೇಶಿ ಮೂಲಗಳಿಂದ ಅನುದಾನ ಪಡೆಯುವ ಯಾವುದೇ ಸಂಸ್ಥೆಗಳಿಗೆ ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗೆ ಬೆಂಬಲಿಸಲು ಅವಕಾಶ ಕೊಡಬಾರದು ಎಂದೂ ಎಡಿಆರ್ ಅಭಿಪ್ರಾಯಪಟ್ಟಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕರ್ನಾಟಕಕ್ಕೆ ನೀಡಲು ‘ಇಲ್ಲ’ ಎಂದಿದ್ದ ‘ಅಕ್ಕಿ’ ಸಿಂಗಾಪುರಕ್ಕೆ ರಫ್ತು ಮಾಡಲು ಹೊರಟ ಕೇಂದ್ರ ಸರ್ಕಾರ!

ಕರ್ನಾಟಕ ಸರ್ಕಾರವು ಅನ್ನಭಾಗ್ಯ ಯೋಜನೆಗೆ ಹೆಚ್ಚುವರಿ ಅಕ್ಕಿ ನೀಡುವಂತೆ ಕೇಳಿದಾಗ 'ನಿಮಗೆ...

ಬೆಳಗಾವಿ | ಆಪರೇಷನ್ ಹಸ್ತದ ಬಗ್ಗೆ ಲಕ್ಷ್ಮಣ್ ಸವದಿ ಮಾರ್ಮಿಕ ಹೇಳಿಕೆ

ಬಹಳಷ್ಟು ಮಂದಿ ಜೆಡಿಎಸ್‌-ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಬರುಲು ಸಿದ್ದರಾಗಿದ್ದಾರೆ. ಎಲ್ಲದಕ್ಕೂ ಕಾಲ...

ಕಟುಕ, ಕಟಿಕ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಲು ಸಿಎಂಗೆ ಮನವಿ

ರಾಜ್ಯ ಕಟಿಕ ಸಮಾಜದ ನಿಯೋಗವು ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ...

ಅರಣ್ಯ ಇಲಾಖೆಯ 50 ಅಧಿಕಾರಿ ಮತ್ತಿ ಸಿಬ್ಬಂದಿಗೆ ಮುಖ್ಯಮಂತ್ರಿ ಪದಕ ವಿತರಣೆ

ಕರ್ನಾಟಕ ಅರಣ್ಯ ಇಲಾಖೆ ವತಿಯಿಂದ ನಡೆಯುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ನೀಡುವ...