ಪ್ರಧಾನಿ ಮೋದಿಯವರಿಗೆ ಆರ್ಥಿಕತೆಯ ಪಾಠ ಹೇಳಿದ ಯುವಕ: ವಿಡಿಯೋ ವೈರಲ್

Date:

ಮುಂಬರುವ ಕೇಂದ್ರ ಸರ್ಕಾರದ ಬಜೆಟ್ ಹಿನ್ನೆಲೆಯಲ್ಲಿ ಪತ್ರಕರ್ತರೋರ್ವರು ಕೇಳಿದ ಪ್ರಶ್ನೆಗೆ ಯುವಕನೋರ್ವ ನೀಡಿದ ಉತ್ತರವು ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ.

ಎಎನ್‌ಐ ಸುದ್ದಿಸಂಸ್ಥೆಯ ಪ್ರತಿನಿಧಿಯೊಂದಿಗೆ ಮಾತನಾಡಿದ್ದ ವಿಡಿಯೋವೊಂದು ವೈರಲಾಗಿದ್ದರೂ, ಸುದ್ದಿ ಸಂಸ್ಥೆ ಇದನ್ನು ಪ್ರಕಟಿಸಿರಲಿಲ್ಲ. ಆದರೆ, ಸಂಸ್ಥೆಯ ಚಂಡೀಗಢದ ಪ್ರತಿನಿಧಿಯು ಈ ವಿಡಿಯೋವನ್ನು ಸ್ಥಳೀಯ ಪತ್ರಕರ್ತರೋರ್ವರಿಗೆ ಕಳುಹಿಸಿದ್ದರು. ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ ಬಳಿಕ ಯುವಕನ ಮಾತುಗಳು ವೈರಲಾಗಿದೆ ಎಂದು ತಿಳಿದುಬಂದಿದೆ.

ಮಾತನಾಡಿರುವ ಯುವಕನ ವಿವರಗಳು ಲಭ್ಯವಾಗಿಲ್ಲವಾದರೂ, ಈ ವಿಡಿಯೋವನ್ನು ಕಾಂಗ್ರೆಸ್ ಐಟಿ ಸೆಲ್ ಕೂಡ ಟ್ವೀಟ್ ಮಾಡಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ವಿಡಿಯೋದಲ್ಲಿ ಮಾತನಾಡುತ್ತಿರುವ ಯುವಕ, ” ಬಜೆಟ್ ನೋಡ್ತಾ ನೋಡ್ತಾ 10 ವರ್ಷವೇ ಆಯ್ತು. ಇನ್ನೂ ನೋಡ್ತಾನೇ ಇದ್ದೇವೆ. ಕೇಂದ್ರ ಸರ್ಕಾರದ ಬಜೆಟ್ ಅನ್ನು ನೋಡುವಾಗ ನಾವು ಒಂದು ಶೇಕಡಾ ಕೂಡ ಭರವಸೆ ಇಟ್ಟುಕೊಳ್ಳಲ್ಲ. ಅದು ಯಾಕೆ ಎಂಬುದಕ್ಕೆ ನಾನು ಕಾರಣ ಹೇಳುತ್ತೇನೆ” ಎಂದು ಯುವಕ ತನ್ನ ಕಾರಣಗಳನ್ನು ವಿವರಿಸಿದ್ದಾನೆ.

“ಈಗಿನ ಸರ್ಕಾರವನ್ನು ನಾವು ನೋಡುತ್ತಿರುವುದು ಒಂದಲ್ಲ, ಎರಡಲ್ಲ, ಮೂರಲ್ಲ, ನಾಲ್ಕಲ್ಲ, ಐದಲ್ಲ. ಹತ್ತು ವರ್ಷವೇ ಕಳೆದು ಹೋಯ್ತು. ಇನ್ನೂ ನೋಡುತ್ತಾ ಇದ್ದೇವೆ. ದೇಶದಲ್ಲಿ ಹಣ ಇಲ್ಲ ಎಂಬುದು ವಿಷಯವೇ ಅಲ್ಲ. ದೇಶದಲ್ಲಿ ಹಣವಿದೆ. ಪ್ರಶ್ನೆ ಏನಂದರೆ, ದೇಶದ ಹಣ ಯಾರ ಬಳಿಯಲ್ಲಿದೆ ಎಂಬುದನ್ನು ನಾವು ನೋಡಬೇಕಿದೆ. ಸಾಮಾನ್ಯ ಜನರ ಕೈಯ್ಯಲ್ಲಿ ಎಷ್ಟು ನಗದು ಹಣವಿದೆ ಎಂಬುದು ಕೂಡ ಮುಖ್ಯ. ಶೇ.99.9ರಷ್ಟು ಈ ದೇಶದ ಹಣ ಕೈಗಾರಿಕೋದ್ಯಮಿಗಳ ಬಳಿಯಲ್ಲಿದೆ. ಅವರೇ ಇಂದು ಈ ದೇಶವನ್ನು ನಡೆಸುತ್ತಿದ್ದಾರೆ” ಎಂದು ಯುವಕ ವಿವರಿಸಿದ್ದಾನೆ.

“11.68 ಲಕ್ಷ ಕೋಟಿ ರೂಪಾಯಿಯಷ್ಟು ಕೈಗಾರಿಕೋದ್ಯಮಿಗಳ ಸಾಲ ಮನ್ನಾ ಮಾಡಲು ನಮ್ಮ ದೇಶಕ್ಕೆ ಸಾಧ್ಯವಾಗುವುದಾದರೆ, ಎರಡು ಲಕ್ಷ ಕೋಟಿಗಳ ರೈತರ ಸಾಲಮನ್ನಾ ಯಾಕೆ ಮಾಡಲಾಗುತ್ತಿಲ್ಲ? ಇದು ನನ್ನ ಪ್ರಶ್ನೆ” ಎಂದು ಯುವಕ ನೇರವಾಗಿ ಕೇಳಿದ್ದಾನೆ.

“ಕೇಂದ್ರ ಸರ್ಕಾರವು ಮಾತೆತ್ತಿದರೆ ದೇಶದ ರೈತರ ಆದಾಯ ದುಪ್ಪಟ್ಟುಗೊಳಿಸಲಾಗುವುದು ಎಂದು ಹೇಳುತ್ತಾರೆ. 2022ರ ಒಳಗೆ ಮಾಡಿಯೇ ತೀರುತ್ತೇವೆ ಎಂದು ಹೇಳಿದ್ದರಲ್ವಾ? ಅದೇನಾಯ್ತು…ದ್ವಿಗುಣ ಆಯ್ತಾ? ಆಗಿಲ್ಲವಲ್ಲ” ಎಂದು ಚಂಡೀಗಢದ ಯುವಕ ತಿಳಿಸಿದ್ದಾನೆ.

“ನನಗೆ ಗೊತ್ತಿಲ್ಲ, ಟಿ ವಿಯವರು ಇದನ್ನು ತೋರಿಸುತ್ತಾರೋ ಇಲ್ಲವೋ ಎಂದು. ವಾಸ್ತವ ಏನು ಅಂದರೆ, ದೇಶದ ಆರ್ಥಿಕತೆಯು ಮನ್‌ಮೋಹನ್‌ ಸಿಂಗ್ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಶೇ.8.1ರ ಅಂದಾಜಿನಲ್ಲಿ ಮುನ್ನಡೆಯುತ್ತಿತ್ತು. ಈಗ ಎಷ್ಟಿದೆ? ಕೇವಲ ಶೇ. 5.4ರಷ್ಟು. ಹೋಗಲಿ ಬಿಡಿ. 2022ರೊಳಗೆ ಮಾಡುವುದಾಗಿ ಘೋಷಿಸಿದ್ದನ್ನು ಮರೆತುಬಿಡೋಣ. ಅದನ್ನು ಬಿಜೆಪಿಯವರೇ ಜುಮ್ಲಾ ಎಂದು ಹೇಳಿಕೊಂಡಿದ್ದರು. ಈಗ ಏನು ತೋರಿಸ್ತಾ ಇದ್ದಾರೆ. 2030ರ ವೇಳೆಗೆ ದೇಶದ ಆರ್ಥಿಕತೆ 10 ಟ್ರಿಲಿಯನ್ ಸಾಧಿಸುತ್ತದೆ ಎಂದು ಭರವಸೆ ನೀಡುತ್ತಿದ್ದಾರೆ. ಈಗ ಇರುವುದು 5.4ರಷ್ಟು ನಮ್ಮ ದೇಶದ ಆರ್ಥಿಕತೆ. ಅದರಿಂದ ಸ್ವಲ್ಪ ಮೇಲೆ ಬರುತ್ತಿದ್ದೇವೆ ಅಷ್ಟೇ. ಒಂದು ವೇಳೆ ಭಾರತದ ಆರ್ಥಿಕತೆ 10 ಟ್ರಿಲಿಯನ್ ಸಾಧಿಸಬೇಕು ಅಂತಾದರೆ ಅದಕ್ಕೆ ಶೇ.15ರಷ್ಟು ಅಭಿವೃದ್ಧಿಯಾಗಬೇಕು. 15ರಷ್ಟು ಬೇಕು. ಯಾರು, ಮೋದಿಜೀಯವರು ತರುತ್ತಾರಾ?” ಎಂದು ಯುವಕ ಕೇಳಿದ್ದಾನೆ.

ಪತ್ರಕರ್ತ ಬಜೆಟ್‌ನಿಂದ ನಿಮಗೆ ಏನು ಭರವಸೆ ಇದೆ? ಎಂದು ಮತ್ತೊಮ್ಮೆ ಪ್ರಶ್ನಿಸಿದಾಗ, “ಬಜೆಟ್‌ನಿಂದ ಯಾವ ಭರವಸೆಯನ್ನೂ ಇಟ್ಟುಕೊಳ್ಳುವುದಿಲ್ಲ. ಎಲ್ಲವನ್ನೂ ಖಾಸಗೀಕರಣ ಮಾಡುತ್ತಿದ್ದಾರೆ. ಖಾಸಗೀಕರಣ ಒಳ್ಳೆಯದೇ. 1991ರಲ್ಲಿ ಎಲ್‌ಪಿಜಿ ನೀತಿ(ಉದಾರೀಕರಣ, ಖಾಸಗೀಕರಣ, ಉದಾರೀಕರಣ) ಬಂತು. ಆದರೆ ಈಗ ಎಲ್ಲವನ್ನೂ ಖಾಸಗೀಕರಣ ಮಾಡುವ ಭರಾಟೆ ನಡೆಯುತ್ತಿದೆ. ಖಾಸಗೀಕರಣ ಯಾವಾಗ ಒಳ್ಳೆಯದು ಅಂದರೆ ಖಾಸಗಿ ಕ್ಷೇತ್ರದಲ್ಲಿ ಉತ್ತಮ ಸ್ಪರ್ಧೆ ಇದ್ದಾಗ ಮಾತ್ರ. ಒಂದು ವೇಳೆ ನೀವು ಖಾಸಗಿಯವರ ನಡುವೆ ಸ್ಪರ್ಧೆಯನ್ನೇ ಇಲ್ಲವಾಗಿಸಿದಲ್ಲಿ ಅದು ಅತಿರೇಕದ ಬಂಡವಾಳಶಾಹಿ ವ್ಯವಸ್ಥೆಯಾಗುತ್ತದೆ. ಅತಿರೇಕದ ಬಂಡವಾಳಶಾಹಿ ವ್ಯವಸ್ಥೆ ಯಾವತ್ತಿಗೂ ದೇಶಕ್ಕೆ ಬಹಳ ಅಪಾಯಕಾರಿಯಾದುದು” ಎಂದು ಚಂಡೀಗಢದ ಯುವಕ ವಿವರಿಸಿರುವುದು ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗುತ್ತಿದೆ.

ಈ ವಿಡಿಯೋವನ್ನು ಬಳಸಿಕೊಂಡು ಟ್ವೀಟ್ ಮಾಡಿರುವ ಕಾಂಗ್ರೆಸ್ ಐಟಿ ಸೆಲ್, “ದೇಶದ ಯುವಕರು ಇಂದು ಎಷ್ಟು ಹತಾಶರಾಗಿದ್ದಾರೆ ಮತ್ತು ನಿರಾಶೆಗೊಂಡಿದ್ದಾರೆ ಎಂದರೆ ಅವರು ಬಜೆಟ್‌ನಿಂದ 1% ಸಹ ನಿರೀಕ್ಷಿಸುವುದಿಲ್ಲ. 10 ವರ್ಷಗಳ ಅನ್ಯಾಯ ಕಾಲದಲ್ಲಿ ದೇಶದ ಯುವಕರ ಮಾತನ್ನು ಎಲ್ಲರೂ ಆಲಿಸಲೇಬೇಕು” ಎಂದು ಹೇಳಿದೆ.

ಎಎನ್‌ಐ ವಿಡಿಯೋ ಪ್ರಕಟಿಸದ ಬಗ್ಗೆಯೂ ಪ್ರಶ್ನೆ

ಈ ವಿಡಿಯೋವನ್ನು ಎಎನ್‌ಐ ಸುದ್ದಿ ಸಂಸ್ಥೆ ಅಧಿಕೃತವಾಗಿ ಪ್ರಕಟಿಸಿರಲಿಲ್ಲ. ಆದರೂ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ. ಈ ಬಗ್ಗೆ ಪ್ರಶ್ನೆ ಎತ್ತಿರುವ ದೇಶದ ಖ್ಯಾತ ಫ್ಯಾಕ್ಟ್‌ ಚೆಕ್ ವೆಬ್‌ಸೈಟ್‌ ಆಲ್ಟ್‌ನ್ಯೂಸ್‌ನ ಪತ್ರಕರ್ತ ಮೊಹಮ್ಮದ್ ಝುಬೇರ್, ಎಎನ್‌ಐ ಸುದ್ದಿ ಸಂಸ್ಥೆಯ ಸಂಪಾದಕಿ ಸ್ಮಿತಾ ಪ್ರಕಾಶ್ ಅವರನ್ನು ಟ್ಯಾಗ್ ಮಾಡಿದ್ದಾರೆ.

“ಈ ಸಂದರ್ಶನವನ್ನು ಎರಡು ದಿನಗಳ ಹಿಂದೆ ತೆಗೆದುಕೊಳ್ಳಲಾಗಿತ್ತು. ಆದರೆ ಸ್ಮಿತಾ ಪ್ರಕಾಶ್ ಹಾಗೂ ಎಎನ್‌ಐ ಇದನ್ನು ಇನ್ನೂ ಪ್ರಕಟಿಸಿಲ್ಲ. ಯಾಕೆ? ವಿಡಿಯೋದಲ್ಲಿರುವ ವ್ಯಕ್ತಿ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದ ಕಾರಣಕ್ಕೋ? ಈ ಸಂದರ್ಶನ ಬಿಜೆಪಿ ಸರ್ಕಾರಕ್ಕೆ ನೋವು ತಂದಿದೆ ಎಂದೋ? ಅಥವಾ ಇದನ್ನು ಪ್ರಕಟಿಸದಂತೆ ಮೇಲಿನಿಂದ ಸೂಚನೆಗಳು ಏನಾದರೂ ಬಂದಿದೆಯೇ? ಎಂದು ಮೊಹಮ್ಮದ್ ಝುಬೇರ್ ಪ್ರಶ್ನಿಸಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಖಾಸಗಿ ಸಂಪತ್ತಿನ ಬಗ್ಗೆ ರಾಹುಲ್ ಮಾತನಾಡಿಲ್ಲ; ಬಿಜೆಪಿ ಗೊಂದಲ ಸೃಷ್ಟಿಸುತ್ತಿದೆ: ಸಿಎಂ ರೇವಂತ್ ರೆಡ್ಡಿ

ತೆಲಂಗಾಣದಲ್ಲಿ ಕಾಂಗ್ರೆಸ್‌ ಭರ್ಜರಿ ಗೆಲುವು ಸಾಧಿಸಿ, ಅಧಿಕಾರ ಹಿಡಿದ ಕೆಲ ತಿಂಗಳುಗಳಲ್ಲೇ...

ಪ್ರಜ್ವಲ್‌ ಪೆನ್‌ಡ್ರೈವ್‌ ಪ್ರಕರಣ | ಕೆಲವೇ ಹೊತ್ತಲ್ಲಿ ಎಸ್‌ಐಟಿ ರಚನೆ: ಡಾ. ಜಿ ಪರಮೇಶ್ವರ್‌

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ...

ಕರ್ನಾಟಕಕ್ಕೆ ಇಂದು ಮೋದಿ; ಹಾಸನ ಪೆನ್‌ಡ್ರೈವ್ ಪ್ರಕರಣದ ಬಗ್ಗೆ ಮಾತಾಡ್ತಾರಾ ಪ್ರಧಾನಿ?

ಮಹಿಳೆಯರ ರಕ್ಷಣೆಗಾಗಿ 'ಬೇಟಿ ಬಚೋವೋ - ಬೇಟಿ ಪಡಾವೋ' ಎಂಬ ಘೋಷಣೆಯನ್ನು...

ಉದ್ಧವ್‌, ಶರದ್ ಪರವಾಗಿ ಅನುಕಂಪದ ಅಲೆಯಿದೆ ಎಂದ ಅಜಿತ್ ಪವಾರ್ ಬಣದ ನಾಯಕ!

"ರಾಜ್ಯದಲ್ಲಿ (ಮಹಾರಾಷ್ಟ್ರ) ಉದ್ಧವ್ ಠಾಕ್ರೆ ಮತ್ತು ಶರದ್ ಪವಾರ್ ಪರವಾಗಿ ಅನುಕಂಪದ...