ನಾಳೆ ರಾಜ್ಯಕ್ಕೆ ಅಮಿತ್ ಶಾ; ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ಖಾಸಗಿ ಸಭೆ

Date:

  • ಚುನಾವಣೆ ಹಿನ್ನೆಲೆಯಲ್ಲಿ ಅಮಿತ್ ಶಾರಿಂದ ಮತ್ತೊಂದು ಮಹತ್ವದ ಸಭೆ
  • ವಿಧಾನಸೌಧದ ಎದುರು ಬಸವೇಶ್ವರ, ಕೇಂಪೇಗೌಡರ ಪ್ರತಿಮೆ ಅನಾವರಣ

ಸರ್ಕಾರದ ವಿವಿಧ ಕಾರ್ಯಕ್ರಮಗಳ ಉದ್ಘಾಟನೆ ಸಲುವಾಗಿ ಕೇಂದ್ರ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ.

ಪೂರ್ವ ನಿಯೋಜನೆಯಂತೆ ಕಾರ್ಯಕ್ರಮಗಳು ಮಾರ್ಚ್ 25ರಂದು ನಡೆಯಲಿವೆ. ಆದರೆ ಅದಕ್ಕೂ ಮೊದಲೇ ಒಂದು ದಿನ ಮುಂಚಿತವಾಗಿ ಅಮಿತ್‌ ಶಾ ರಾಜ್ಯಕ್ಕೆ ಬರಲಿದ್ದಾರೆ.

ಶುಕ್ರವಾರ ಬೆಂಗಳೂರಿಗೆ ಆಗಮಿಸಲಿರುವ ಕೇಂದ್ರ ಗೃಹ ಸಚಿವರು ಮುಂಜಾನೆ ಬಿಜೆಪಿ ಮುಖಂಡ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಸರ್ಕಾರಿ ನಿವಾಸ ಕಾವೇರಿಯಲ್ಲಿನ ಉಪಹಾರ ಕೂಟದಲ್ಲಿ ಭಾಗಿಯಾಗಲಿದ್ದಾರೆ.

ರಾಜ್ಯ ಹಾಗೂ ದೆಹಲಿ ನಾಯಕರಿಬ್ಬರ ಈ ಉಪಹಾರ ಮಾತುಕತೆ ಹಲವು ಕುತೂಹಲಗಳನ್ನು ಹುಟ್ಟುಹಾಕಿದೆ. ಆಪರೇಷನ್ ಕಮಲದ ಹುಮ್ಮಸ್ಸಿನಲ್ಲಿದ್ದ ಬಿಜೆಪಿಗೆ ಈಗ ರಿವರ್ಸ್ ಆಪರೇಷನ್ ಭಯ ಎದುರಾಗಿದೆ.

ಪಕ್ಷ ಸೇರಿದ ಪ್ರಮುಖ ಸಮುದಾಯದ ನಾಯಕರುಗಳು ಕಾಂಗ್ರೆಸ್‌ನತ್ತ ಮುಖ ಮಾಡುತ್ತಿರುವುದು ಹಾಗೂ ಸಚಿವ ಸೋಮಣ್ಣ ಅವರ ಕಾಂಗ್ರೆಸ್ ವಲಸೆ ವಿಚಾರವೂ ಸೇರಿದಂತೆ ಇನ್ನು ಕೆಲ ವಿಷಯಗಳ ಬಗ್ಗೆ ನಾಯಕರು ಚರ್ಚೆ ಮಾಡಲಿದ್ದಾರೆ ಎನ್ನಲಾಗಿದೆ.

ಉಳಿದಂತೆ ಪಕ್ಷದೊಳಗಿನ ದ್ವಂದ್ವ ನೀತಿ, ಟಿಕೆಟ್ ಹಂಚಿಕೆ, ಸಮುದಾಯಗಳ ಓಲೈಕೆ, ಅನ್ಯಪಕ್ಷಗಳ ನಾಯಕರನ್ನು ಪಕ್ಷಕ್ಕೆ ಸೆಳೆಯುವ ವಿಚಾರಗಳ ಬಗೆಗೂ ನಾಯಕರು ಮಾತುಕತೆ ನಡೆಸಲಿದ್ದಾರೆ. ನಾಳಿನ ಈ ಸಭೆ ಬಿಜೆಪಿ ಪಾಲಿಗೆ ಮಹತ್ವದ್ದಾಗಿದೆ.

ಮಾರ್ಚ್ 25 ರಂದು ಬೀದರ್ ವಾಯುನೆಲೆ ಗೆಸ್ಟ್ ಹೌಸ್‌ನಲ್ಲಿ ವಾಸ್ತವ್ಯ ಹೂಡಲಿರುವ ಅಮಿತ್ ಶಾ, ಮಾರ್ಚ್ 26ರ ಬೆಳಿಗ್ಗೆ ಗೊರಟಾ ಗ್ರಾಮದಲ್ಲಿ ಧ್ವಜಾರೋಹಣ ನೆರವೇರಿಸಿ ಗೊರಟಾ ಹುತಾತ್ಮ ಸ್ಮಾರಕ, ಪಟೇಲ್ ಸ್ಮಾರಕ ಉದ್ಘಾಟಿಸಲಿದ್ದಾರೆ.

ನಂತರ ರಾಯಚೂರಿನ ಗಬ್ಬೂರಿನಲ್ಲಿ ನಡೆಯುವ ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಮಾರ್ಚ್ 26 ರಂದು ಬೆಂಗಳೂರಿಗೆ ಆಗಮಿಸಲಿರುವ ಅವರು ಖಾಸಗಿ ಹೋಟೆಲ್ನಲ್ಲಿ ಆಯೋಜಿಸಿರುವ ಗುಜರಾತ್ ಸಮಾಜದ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

ಅಂದು ಸಂಜೆ 6.30ಕ್ಕೆ ವಿಧಾನಸೌಧದ ಮುಂಭಾಗದ ಬಸವೇಶ್ವರ, ಕೆಂಪೇಗೌಡರ ಪ್ರತಿಮೆ ಉದ್ಘಾಟನೆ ಮಾಡಿ,ಬಳಿಕ ಬೆಂಗಳೂರು ಹಬ್ಬಕ್ಕೆ ಚಾಲನೆ ನೀಡಲಿದ್ದಾರೆ.

ರಾತ್ರಿ 8.30ಕ್ಕೆ ಹೋಟೆಲ್‌ನಲ್ಲಿ ಬಿಜೆಪಿ ನಾಯಕರ ಜೊತೆ ಸಭೆ ನಡೆಸಲಿರುವ ಅಮಿತ್‌ ಶಾ, ನಂತರ ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಮಾ.27 ರ ಬೆಳಿಗ್ಗೆ ಅವರು ದೆಹಲಿಗೆ ಪ್ರಯಾಣಿಸಲಿದ್ದಾರೆ.

Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೇಶದಲ್ಲಿ ‘ಬ್ರ್ಯಾಂಡ್‌ ಬೆಂಗಳೂರು’ ನಂಬರ್ ಒನ್ ಆಗಿಸಬೇಕಿದೆ: ಸಿದ್ದರಾಮಯ್ಯ

'ದೇಶ ಸುಸ್ಥಿರವಾಗಿ ಬೆಳೆಯಬೇಕಾದರೆ ನಗರ-ಗ್ರಾಮೀಣ ಸುಸ್ಥಿರ ಬೆಳವಣಿಗೆ ಕಾಣಬೇಕು' 'ರಾಜ್ಯದ...

‘ಫ್ರೀಡಂ ಪಾರ್ಕ್’ನಿಂದ ನಮಗೆ ‘ಫ್ರೀಡಂ’ ಕೊಡಿ: ಸಿಎಂ ಸಿದ್ದರಾಮಯ್ಯಗೆ ‘ಮಹಾಧರಣಿ’ ಆಗ್ರಹ

ರಾಜಧಾನಿ ಬೆಂಗಳೂರಿನಲ್ಲಿ ನಡೆಯುವ ಪ್ರತಿಯೊಂದು ಪ್ರತಿಭಟನೆಗಳು ಕೇವಲ 'ಫ್ರೀಡಂ ಪಾರ್ಕ್‌'ಗೆ ಸೀಮಿತವಾಗಿದ್ದು,...

ಬೆಂಗಳೂರು | 20 ದಿನದ ಹಸುಗೂಸು ಮಾರಾಟ; ಸಿಸಿಬಿ ಪೊಲೀಸರ ಕಾರ್ಯಾಚರಣೆ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಹಸುಗೂಸು ಮಾರಾಟ ದಂಧೆ ಮತ್ತೆ ಬೆಳಕಿಗೆ...

ತೆಲಂಗಾಣ ಪತ್ರಿಕೆಗಳಲ್ಲಿ ಜಾಹೀರಾತು; ರಾಜ್ಯದ ಬೊಕ್ಕಸ ದುರ್ಬಳಕೆ: ಆರ್‌ ಅಶೋಕ ಕಿಡಿ

'ರಾಜ್ಯದ ಬೊಕ್ಕಸ ಬರಿದು ಮಾಡಿ, ಹೆಮ್ಮಾರಿಯಾದ ಕಾಂಗ್ರೆಸ್ ಸರ್ಕಾರ' 'ಅಭಿವೃದ್ಧಿಗೆ...