ಬಿಲಾವಲ್‌ ಭುಟ್ಟೋ ಜರ್ದಾರಿ ಎಸ್‌ಸಿಒ ಶೃಂಗಸಭೆಗಾಗಿ ಭಾರತಕ್ಕೆ ಭೇಟಿ; ನಿರೀಕ್ಷೆಗಳೇನು?

Date:

  • ಪಾಕ್ ವಿದೇಶಾಂಗ ಸಚಿವ ಬಿಲಾವಲ್‌ ಭುಟ್ಟೋ ಮೊದಲ ಭಾರತ ಭೇಟಿ
  • 2011ರಲ್ಲಿ ಹಿನಾ ರಬ್ಬಾನಿ ಪಾಕಿಸ್ತಾನದ ವಿದೇಶಾಂಗ ಸಚಿವರಾಗಿ ಭಾರತಕ್ಕೆ ಭೇಟಿ

ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್‌ ಭುಟ್ಟೋ ಜರ್ದಾರಿ ಭಾರತಕ್ಕೆ ಭೇಟಿ ನೀಡುತ್ತಿರುವುದು ದೃಢಪಟ್ಟಿದೆ. ಆದರೆ ಭಾರತ ಹಾಗೂ ಪಾಕಿಸ್ತಾನಗಳ ನಡುವಿನ ಬಾಂಧವ್ಯ ವೃದ್ಧಿಗಾಗಿ ಅವರು ಭೇಟಿ ನೀಡುತ್ತಿಲ್ಲ, ಬದಲಾಗಿ ಭಾರತದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಶೃಂಗಸಭೆಯಲ್ಲಿ ಭಾಗವಹಿಸಲು ಇಲ್ಲಿಗೆ ಆಗಮಿಸುತ್ತಿದ್ದಾರೆ.

ಮುಂದಿನ ವಾರ ಗೋವಾದಲ್ಲಿ ಎಸ್‌ಸಿಒ ಶೃಂಗಸಭೆ ನಡೆಯಲಿದ್ದು ಶೃಂಗಸಭೆಯ ಭಾಗವಾದ ವಿದೇಶಾಂಗ ಸಚಿವರ ಸಮ್ಮೇಳನಕ್ಕೆ ಭೇಟಿ ನೀಡುವುದನ್ನು ಬಿಲಾವಲ್‌ ಭುಟ್ಟೋ ಖಚಿತಪಡಿಸಿದ್ದು ಈ ಸಂಬಂಧ ಸಿದ್ಧತೆಗಳು ನಡೆಯುತ್ತಿವೆ. ಬಿಲಾವಲ್‌ ಭುಟ್ಟೋ ಅವರು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಆಹ್ವಾನದ ಮೇರೆಗೆ ಎಸ್‌ಸಿಒ ವಿದೇಶಾಂಗ ಸಚಿವರ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿಯ ವಕ್ತಾರ ಮುಮ್ತಾಜ್ ಜಹ್ರಾ ಏಪ್ರಿಲ್ 20ರಂದು ಘೋಷಣೆ ಮಾಡಿದ್ದರು.

ಉಭಯ ದೇಶಗಳು ಯಾವುದೇ ನಿರೀಕ್ಷೆಗಳನ್ನು ಇಟ್ಟುಕೊಳ್ಳದೆ ಸಭೆಗೆ ಸಿದ್ಧವಾಗುತ್ತಿವೆ. ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್‌ ಭುಟ್ಟೋ ಅವರ ಮೊದಲ ಭಾರತ ಭೇಟಿ ಇದಾಗಿದೆ. 2011ರಲ್ಲಿ ಹಿನಾ ರಬ್ಬಾನಿ ಖೇರ್ ಅವರು ಪಾಕಿಸ್ತಾನದ ವಿದೇಶಾಂಗ ಸಚಿವರಾಗಿ ಭಾರತಕ್ಕೆ ಭೇಟಿ ನೀಡಿದ್ದರು. ಬಳಿಕ 12 ವರ್ಷಗಳ ನಂತರ ಪಾಕ್ ವಿದೇಶಾಂಗ ಸಚಿವರೊಬ್ಬರು ದೇಶಕ್ಕೆ ಆಗಮಿಸುತ್ತಿದ್ದಾರೆ.

ಬಿಲಾವಲ್‌ ಭುಟ್ಟೋ ಅವರ ಭೇಟಿಯ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಎಸ್‌ ಜೈಶಂಕರ್‌, ಭಾರತ ಬಹುಪಕ್ಷೀಯ ಶೃಂಗಸಭೆಯನ್ನು ಆಯೋಜಿಸುತ್ತಿದೆ ಎಂದು ಹೇಳಿದ್ದರು.

“ನಾವಿಬ್ಬರೂ (ಭಾರತ ಮತ್ತು ಪಾಕಿಸ್ತಾನ) ಶಾಂಘೈ ಸಹಕಾರ ಸಂಘಟನೆ ಸದಸ್ಯರಾಗಿದ್ದೇವೆ. ಆದ್ದರಿಂದ ಸಭೆಗೆ ಹಾಜರಾಗಬೇಕಿದೆ. ಈ ವರ್ಷ ಭಾರತ ಅಧ್ಯಕ್ಷರಾಗಿರುವುದರಿಂದ ಇಲ್ಲಿ ಶೃಂಗಸಭೆ ನಡೆಯುತ್ತಿದೆ” ಎಂದು ಜೈಶಂಕರ್‌ ಪನಾಮಾ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.

“ನಮ್ಮ ವಿರುದ್ಧ ಗಡಿಯಾಚೆಗೆ ಭಯೋತ್ಪಾದನೆ ನಡೆಸುವವರೊಂದಿಗೆ ಸ್ನೇಹದಿಂದ ಇರುವುದು ನಮಗೆ ತುಂಬಾ ಕಷ್ಟ. ಗಡಿಯಾಚೆಗಿನ ಭಯೋತ್ಪಾದನೆ ಪ್ರೋತ್ಸಾಹಿಸುವುದು, ಪ್ರಾಯೋಜಿಸುವುದು ಮತ್ತು ನಡೆಸುವುದು ತ್ಯಜಿಸುವ ಬದ್ಧತೆಯನ್ನು ಅವರು ಪೂರೈಸಬೇಕು ಎಂದು ನಾವು ಆಶಿಸುತ್ತೇವೆ. ಮುಂದೊಂದು ದಿನ ಇದು ಸಾಧ್ಯವಾಗಲಿದೆ ಎಂದು ನಾವು ಭಾವಿಸುತ್ತೇವೆ” ಎಂದು ವಿವರಿಸಿದ್ದರು.

ಬಿಲಾವಲ್‌ ಭುಟ್ಟೋ ಅವರು ಈ ಕುರಿತು ಹೇಳಿಕೆ ನೀಡಿದ್ದಾರೆ. ಎಸ್‌ಸಿಒ ಶೃಂಗಸಭೆ ಯಾವುದೇ ದ್ವಿಪಕ್ಷೀಯ ಒಪ್ಪಂದವನ್ನು ಬಯಸುವುದಿಲ್ಲ ಎಂದು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಸಮೀಪದ ಸ್ಪರ್ಧೆ ಕಾಣಲಿರುವ ಕರ್ನಾಟಕದ 70 ಸೀಟುಗಳಲ್ಲಿ ಗೆಲುವಿಗೆ ಕಾಂಗ್ರೆಸ್ ಒತ್ತು

“ಪಾಕಿಸ್ತಾನದ ಪ್ರತಿನಿಧಿಯಾಗಿ ನಾನು ಶೃಂಗಸಭೆಯಲ್ಲಿ ಭಾಗವಹಿಸುತ್ತೇನೆ” ಎಂದು ಇಸ್ಲಾಮಾಬಾದ್‌ನಲ್ಲಿ ಬಿಲಾವಲ್‌ ಭುಟ್ಟೋ ಸುದ್ದಿಗಾರರಿಗೆ ತಿಳಿಸಿದರು.

ಬಿಲಾವಲ್‌ ಭುಟ್ಟೋ ಅವರ ಭಾರತ ಭೇಟಿ ಹೆಚ್ಚೇನೂ ನಿರೀಕ್ಷೆಗಳನ್ನು ಉಂಟು ಮಾಡಿಲ್ಲ. ಜಾಗತಿಕ ಮಟ್ಟದಲ್ಲಿಯೂ ಪಾಕಿಸ್ತಾನ ಭಾರತದ ವಿರುದ್ಧ ಕತ್ತಿ ಮಸೆಯುತ್ತಿದೆ. ಈ ಹಿನ್ನೆಲೆ ಬಿಲಾವಲ್‌ ಭುಟ್ಟೋ ಅವರ ಭೇಟಿ ಮಹತ್ವದ ವಿಷಯವಾಗಿ ಪರಿಣಮಿಸಿಲ್ಲ ಎಂದು ಹೇಳಲಾಗಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಆತ ನನ್ನ ಮಗನೇ ಇರಬಹುದು, ಆತನನ್ನು ಗಲ್ಲಿಗೇರಿಸಿ’: ಅತ್ಯಾಚಾರ ಆರೋಪಿಯ ತಂದೆ

ಆತ ನನ್ನ ಮಗನಾಗಿರಬಹುದು. ಆದರೆ, ಆತ ಅಪರಾಧಿ. ಆತನನ್ನು ಗಲ್ಲಿಗೇರಿಸಿ ಎಂದು...

ಕಾವೇರಿ ನೀರು ನಿರ್ವಹಣಾ ಮಂಡಳಿಗೆ ಮರುಪರಿಶೀಲನಾ ಅರ್ಜಿ ಸಲ್ಲಿಕೆ: ಸಿದ್ದರಾಮಯ್ಯ

ಕಾವೇರಿ ನೀರು ಬಿಡುವ ಆದೇಶಕ್ಕೆ ಸಂಬಂಧಿಸಿದಂತೆ ಕಾವೇರಿ ನೀರು ನಿರ್ವಹಣಾ ಮಂಡಳಿ...

‘ಒದೆ ತಿಂದ ಕಳ್ಳನಿಗೆ ಕೊನೆಗೆ ಬುದ್ಧಿ ಬಂತಂತೆ’ ಇದು ರಾಜ್ಯ ಸರ್ಕಾರದ ಪರಿಸ್ಥಿತಿ: ಈಶ್ವರಪ್ಪ ಲೇವಡಿ

ಡಿಕೆ ಶಿವಕುಮಾರ್‌ ಅವರ ಕುತಂತ್ರದಿಂದ ರಾಜ್ಯದ ಜನರಿಗೆ ಸಮಸ್ಯೆ ನೀರು ಬಿಡುವುದಕ್ಕಿಂತ ಮೊದಲೇ...

ವಿಶೇಷಚೇತನ ಯೋಧರ ಹೊಸ ಪಿಂಚಣಿ ಯೋಜನೆ; ಮೋದಿ ಸರ್ಕಾರದ ನಕಲಿ ರಾಷ್ಟ್ರೀಯತೆ ಮತ್ತೊಮ್ಮೆ ಬಯಲು: ಖರ್ಗೆ

ಸಶಸ್ತ್ರ ಪಡೆ ಸಿಬ್ಬಂದಿಗೆ ಹೊಸ ವಿಶೇಷಚೇತನ ಪಿಂಚಣಿ ನಿಯಮಗಳ ಕುರಿತು ಶನಿವಾರ...