ಜೈಲಿಗೆ ತಳ್ಳಿದರೂ ಜನರ ಪರವಾಗಿ ಹೋರಾಟ; ವಯನಾಡಿನಲ್ಲಿ ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ಆಕ್ರೋಶ

Date:

Advertisements
  • ಸಂಸದ ಸ್ಥಾನದ ರದ್ದಾದ ನಂತರ ವಯನಾಡಿನಲ್ಲಿ ಸಭೆ ನಡೆಸಿದ ರಾಹುಲ್ ಗಾಂಧಿ
  • ಸಹೋದರನ ಜೊತೆಗೆ ಬಹಿರಂಗ ಸಭೆಯಲ್ಲಿ ಭಾಗವಹಿಸಿದ ಪ್ರಿಯಾಂಕಾ ಗಾಂಧಿ ವಾದ್ರಾ

ಬಿಜೆಪಿ ನನ್ನ ಮನೆ ಕಿತ್ತಕೊಂಡು ಜೈಲಿಗೆ ತಳ್ಳಲಿ, ಆದರೆ ವಯನಾಡು ಜನರನ್ನು ಪ್ರತಿನಿಧಿಸುವುದನ್ನು ಹಾಗೂ ಅವರ ಪರವಾಗಿ ಹೋರಾಟ ನಡೆಸುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದರು.

ಸಂಸದ ಸ್ಥಾನದಿಂದ ಅನರ್ಹಗೊಂಡ ನಂತರ ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಮೊದಲ ಬಾರಿಗೆ ಕೇರಳದ ವಯನಾಡಿಗೆ ಭೇಟಿ ನೀಡಿದ ರಾಹುಲ್ ಗಾಂಧಿ ಅವರು ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದರು.

“ಬಿಜೆಪಿಯವರು ನನ್ನ ಸಂಸದನ ಸ್ಥಾನ, ವಾಸ್ತವ್ಯ ಮತ್ತು ಸ್ಥಾನಮಾನ ಕಿತ್ತುಕೊಂಡಿರಬಹುದು, ಜೈಲಿಗೆ ಕೂಡ ಹಾಕಬಹುದು. ಆದರೆ ನನ್ನನ್ನು ವಯನಾಡಿನ ಜನತೆಯಿಂದ ದೂರಮಾಡಲು ಸಾಧ್ಯವಾಗದು” ಎಂದು ಹೇಳಿದರು.

Advertisements

“ನಾಲ್ಕು ವರ್ಷಗಳ ಹಿಂದೆ ನಾನು ಇಲ್ಲಿಗೆ ಬಂದು ಸಂಸದನಾಗಿದ್ದೇನೆ. ಕೇರಳವು ನನ್ನನ್ನು ಕುಟುಂಬದ ಭಾಗವಾಗಿ ಮತ್ತು ಅವರ ಮಗ ಎಂದು ಭಾವಿಸಿದೆ. ಸಂಸದ ಎಂದರೆ ಕೇವಲ ಜನರ ಪ್ರತಿನಿಧಿಯಲ್ಲ. ಸಾರ್ವಜನಿಕರ ಭಾವನೆಗಳು, ಕಷ್ಟಗಳು ಹಾಗೂ ಅವರ ಅಗತ್ಯಗಳನ್ನು ಅರ್ಥ ಮಾಡಿಕೊಳ್ಳಬೇಕು” ಎಂದು ರಾಹುಲ್ ಗಾಂಧಿ ತಿಳಿಸಿದರು.

ತಾನು ಕೆಲವು ವರ್ಷಗಳಿಂದ ಬಿಜೆಪಿ ವಿರುದ್ಧ ಹೋರಾಡುತ್ತಿದ್ದೇನೆ ಎಂದು ಒತ್ತಿ ಹೇಳಿದ ರಾಹುಲ್‌ ಗಾಂಧಿ, “ಎದುರಾಳಿಯು ಸತ್ಯ ಹಾಗೂ ಜನರಿಗೆ ಹೊರತುಪಡಿಸಿ ಪೊಲೀಸರಿಗಾಗಲಿ ಅಥವಾ ಮತ್ಯಾರಿಗಾಗಲಿ ಹೆದರುವುದಿಲ್ಲ ಎಂದು ಆಡಳಿತ ನಡೆಸುವವರು ತಿಳಿದುಕೊಳ್ಳಬೇಕು. ಅವರು ಸತ್ಯದ ಪರ ಮಾತನಾಡಿದ್ದಕ್ಕಾಗಿ ನನ್ನ ಮೇಲೆ ಹೆಚ್ಚು ಆಕ್ರಮಣ ಮಾಡುತ್ತಾರೆ. ಆದರೂ ಕೊನೆಯವರೆಗೂ ಸತ್ಯ ಮಾತನಾಡುವುದನ್ನು ನಿಲ್ಲಿಸುವುದಿಲ್ಲ” ಎಂದು ಹೇಳಿದರು.

“ವಯನಾಡಿನಲ್ಲಿ ಎಷ್ಟು ಜನರು ಪ್ರವಾಹದಲ್ಲಿ ಮನೆ ಕಳೆದುಕೊಂಡರು ಮತ್ತು ಅವರು ಹೇಗೆ ಸಂಕಷ್ಟಕ್ಕೆ ಒಳಗಾದರು ಎಂಬುದನ್ನು ನಾನು ನೋಡಿದ್ದೇನೆ. ಜನರ ಕಷ್ಟಕ್ಕಿಂತ ನಾನು ಖಾಲಿ ಮಾಡಿರುವ ಮನೆ ಮುಖ್ಯವಲ್ಲ. ಜನರ ಏಳಿಗೆ, ದೇಶದ ಹಿತಾಸಕ್ತಿಯೇ ನನಗೆ ಮುಖ್ಯ” ಎಂದು ತಿಳಿಸಿದರು

ಈ ಸುದ್ದಿ ಓದಿದ್ದೀರಾ?: ‘ಭಾರತೀಯ ಮುಸ್ಲಿಮರು ಸ್ಥಿತಿವಂತರು’; ನಿರ್ಮಲಾ ಹೇಳಿಕೆಗೆ ವಾಸ್ತವ ಚಿತ್ರಣ ತೆರೆದಿಟ್ಟ ಪತ್ರಕರ್ತರು

ಗೌತಮ್‌ ಅದಾನಿ ರಕ್ಷಣೆಗೆ ನಿಂತ ಸರ್ಕಾರ

ಸಮಾವೇಶದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, “ಬಿಜೆಪಿಯವರಿಗೆ ಉತ್ತರಿಸಲು ಸಾಧ್ಯವಾಗದ ಪ್ರಶ್ನೆಯನ್ನು ಕೇಳಿದ್ದಕ್ಕಾಗಿ ರಾಹುಲ್ ಗಾಂಧಿಯವರನ್ನು ಅನರ್ಹಗೊಳಿಸಲಾಯಿತು. ಗೌತಮ್ ಅದಾನಿಯನ್ನು ರಕ್ಷಿಸಲು ಇಡೀ ಸರ್ಕಾರ ಪ್ರಯತ್ನಿಸುತ್ತಿದೆ. ಪ್ರಧಾನಿಯವರು ಅದಾನಿಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಬಿಜೆಪಿ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳುಗೆಡವುತ್ತಿದೆ. ಪ್ರಧಾನಿಯವರು ಪ್ರತಿದಿನ ತಮ್ಮ ಡ್ರೆಸ್ಸಿಂಗ್ ಶೈಲಿಯನ್ನು ಬದಲಾಯಿಸುತ್ತಿದ್ದಾರೆ ವಿನಾ ಸಾಮಾನ್ಯ ಜನರ ಜೀವನಶೈಲಿಯಲ್ಲಿ ಯಾವುದೇ ಬದಲಾವಣೆ ತರಲು ಪ್ರಯತ್ನಿಸುತ್ತಿಲ್ಲ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ” ಎಂದು ಕಿಡಿಕಾರಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

Download Eedina App Android / iOS

X