ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಕಾಂಗ್ರೆಸ್ ತನ್ನ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. 40 ಮಂದಿಯನ್ನು ಸ್ಟಾರ್ ಪ್ರಚಾರಕರೆಂದು ಕಾಂಗ್ರೆಸ್ ಪಟ್ಟಿಮಾಡಿದೆ. ಅದರಲ್ಲಿ, ಪರಿಶಿಷ್ಟ ಜಾತಿಯೊಳಗೆ ಒಳಮೀಸಲಾತಿ ಜಾರಿಗೊಳಿಸಬೇಕೆಂದು ನಡೆದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಅಂಬಣ್ಣ ಅರೋಲಿಕರ್ ಅವರನ್ನೂ ಸ್ಟಾರ್ ಪ್ರಚಾರಕರನ್ನಾಗಿ ಕಾಂಗ್ರೆಸ್ ನೇಮಿಸಿದೆ.
ಕಳೆದ ವರ್ಷ ಒಳಮೀಸಲಾತಿಗಾಗಿ ನಡೆದ ಬೃಹತ್ ಹೋರಾಟಗಳನ್ನು ಮುನ್ನಡೆಸಿದವರಲ್ಲಿ ಅಂಬಣ್ಣ ಅರೋಲಿಕರ್ ಅವರು ಕೂಡ ಒಬ್ಬರಾಗಿದ್ದರು. ಅವರು ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು. ಅಲ್ಲದೆ, “ಒಳಮೀಸಲಾತಿ ಹೋರಾಟದ ಭಾಗವಾಗಿಯೇ ನಾವು ಪಕ್ಷ ಸೇರಿದ್ದೇವೆ. ಕಾಂಗ್ರೆಸ್ ಪ್ರತಿನಿಧಿಯಾಗಿ ಅಥವಾ ಜನಪ್ರತಿನಿಧಿಯಾಗಿ ಹೋರಾಟವನ್ನು ಮುಂದುವರೆಸುತ್ತೇವೆ” ಎಂದು ಅವರು ಹೇಳಿದ್ದರು.
ಅಲ್ಲದೆ, ಕಾಂಗ್ರೆಸ್ ಇತ್ತೀಚೆಗೆ ಚಿತ್ರದುರ್ಗದಲ್ಲಿ ಆಯೋಜಿಸಿದ್ದ ‘ಐಕ್ಯತಾ ಸಮಾವೇಶ’ದಲ್ಲಿಯೂ ಮುಂಚೂಣಿಯಲ್ಲಿದ್ದರು. ಸಮಾವೇಶದಲ್ಲಿ ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಲು ಕಾಂಗ್ರೆಸ್ ನಿರ್ಧಾರ ತೆಗೆದುಕೊಳ್ಳುವಂತೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಕರ್ನಾಟಕ ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿ
1. ಮಲ್ಲಿಕಾರ್ಜುನ ಖರ್ಗೆ
2. ಸೋನಿಯಾ ಗಾಂಧಿ
3. ರಾಹುಲ್ ಗಾಂಧಿ
4. ಕೆ.ಸಿ ವೇಣುಗೋಪಾಲ್
5. ಡಿ.ಕೆ ಶಿವಕುಮಾರ್
6. ಸಿದ್ದರಾಮಯ್ಯ
7. ಪ್ರಿಯಾಂಕಾ ಗಾಂಧಿ
8. ರಣದೀಪ್ ಸಿಂಗ್ ಸುರ್ಜೇವಾಲಾ
9. ಜೈರಾಮ್ ರಮೇಶ್
10. ಡಾ. ಎ.ಎಸ್.ಎಂ ವೀರಪ್ಪ ಮೊಯ್ಲಿ
11. ಲಕ್ಷ್ಮಣ ಸವದಿ
12. ಬಿ.ವಿ. ಶ್ರೀನಿವಾಸ್
13. ಕೆ.ಜೆ ಜಾರ್ಜ್
14. ವಿನಯ್ ಕುಮಾರ್ ಸೊರಕೆ
15. ಬಿ.ಕೆ ಹರಿಪ್ರಸಾದ್
16. ಆರ್.ವಿ ದೇಶಪಾಂಡೆ
17. ಡಾ. ಜಿ ಪರಮೇಶ್ವರ್
18. ಎಚ್.ಕೆ ಪಾಟೀಲ್
19. ಎಂ.ಬಿ ಪಾಟೀಲ್
20. ದಿನೇಶ್ ಗುಂಡೂರಾವ್
21. ಕೃಷ್ಣಬೈರೇಗೌಡ
22. ಎಚ್.ಎಂ. ರೇವಣ್ಣ
23. ಪಿ.ಜಿ.ಆರ್ ಸಿಂಧ್ಯಾ
24.ಬಿ ಸೋಮಶೇಖರ್
25. ಡಾ. ಎಲ್ ಹನುಮಂತಯ್ಯ
26. ಜಿ.ಸಿ. ಚಂದ್ರಶೇಖರ್
27. ಡಾ. ಎ.ಎಸ್. ಸೈಯದ್ ನಸೀರ್ ಹುಸೇನ್
28. ಅಭಿಷೇಕ್ ದತ್
29. ರೋಜಿ ಜಾನ್
30. ಮೇಜರ್ ಜಯಕುಮಾರ್
31. ಬಿ.ಝಡ್. ಜಮೀರ್ ಅಹಮದ್ ಖಾನ್
32. ಎಸ್.ಮಧು ಬಂಗಾರಪ್ಪ
33. ವಿ.ಎಸ್ ಉಗ್ರಪ್ಪ
34. ಪಿಟಿ ಪರಮೇಶ್ವರ್ ನಾಯ್ಕ್
35. ಈಶ್ವರ ಖಂಡ್ರೆ
36. ಸತೀಶ್ ಜಾರಕಿಹೊಳಿ
37. ಎ ತನ್ವೀರ್ ಸೇಠ್
38. ಡಾ. ಬಿ ಪುಷ್ಪಾ ಅಮರನಾಥ್
39. ಉಮಾಶ್ರೀ
40. ಅಂಬಣ್ಣ ಅರೋಲಿಕರ್