ಕಾಂಗ್ರೆಸ್‌ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ; ಒಳಮೀಸಲಾತಿ ಮುಂಚೂಣಿ ಹೋರಾಟಗಾರ ಅಂಬಣ್ಣಗೆ ಸ್ಥಾನ

Date:

ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಕಾಂಗ್ರೆಸ್‌ ತನ್ನ ಸ್ಟಾರ್‌ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. 40 ಮಂದಿಯನ್ನು ಸ್ಟಾರ್ ಪ್ರಚಾರಕರೆಂದು ಕಾಂಗ್ರೆಸ್‌ ಪಟ್ಟಿಮಾಡಿದೆ. ಅದರಲ್ಲಿ, ಪರಿಶಿಷ್ಟ ಜಾತಿಯೊಳಗೆ ಒಳಮೀಸಲಾತಿ ಜಾರಿಗೊಳಿಸಬೇಕೆಂದು ನಡೆದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಅಂಬಣ್ಣ ಅರೋಲಿಕರ್‌ ಅವರನ್ನೂ ಸ್ಟಾರ್ ಪ್ರಚಾರಕರನ್ನಾಗಿ ಕಾಂಗ್ರೆಸ್‌ ನೇಮಿಸಿದೆ.

- Advertisement -

ಕಳೆದ ವರ್ಷ ಒಳಮೀಸಲಾತಿಗಾಗಿ ನಡೆದ ಬೃಹತ್ ಹೋರಾಟಗಳನ್ನು ಮುನ್ನಡೆಸಿದವರಲ್ಲಿ ಅಂಬಣ್ಣ ಅರೋಲಿಕರ್ ಅವರು ಕೂಡ ಒಬ್ಬರಾಗಿದ್ದರು. ಅವರು ಕಳೆದ ವರ್ಷ ಮಾರ್ಚ್‌ ತಿಂಗಳಿನಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು. ಅಲ್ಲದೆ, “ಒಳಮೀಸಲಾತಿ ಹೋರಾಟದ ಭಾಗವಾಗಿಯೇ ನಾವು ಪಕ್ಷ ಸೇರಿದ್ದೇವೆ. ಕಾಂಗ್ರೆಸ್‌ ಪ್ರತಿನಿಧಿಯಾಗಿ ಅಥವಾ ಜನಪ್ರತಿನಿಧಿಯಾಗಿ ಹೋರಾಟವನ್ನು ಮುಂದುವರೆಸುತ್ತೇವೆ” ಎಂದು ಅವರು ಹೇಳಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಇದು ಕೇವಲ ಒಂದು ಪಕ್ಷದ ಹೋರಾಟವಲ್ಲ, ವ್ಯವಸ್ಥೆಯ ಮೇಲಿನ...

ಜೆಪಿಯ ಟೀಕೆಗಳು ತೀಕ್ಷ್ಣವಾಗಿದ್ದರೂ, ಅದು ಅಹಿಂಸಾತ್ಮಕವಾಗಿದೆ. ಹೆದ್ದಾರಿ ತಡೆಗಳಿಲ್ಲ, ಬಲವಂತದ ಬಂದ್‌ಗಳಿಲ್ಲ. ವಾಸ್ತವವಾಗಿ, ಶಾಂತಿಯುತ ಸಭೆಗೆ ಜಾಗ ನೀಡದೆ ಸರ್ಕಾರವೇ ಅಡೆತಡೆಗಳನ್ನು ಸೃಷ್ಟಿಸುತ್ತಿದೆ. ಈ ಉದ್ದೇಶವನ್ನು ಬೆಂಬಲಿಸುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗೆ...

ನೊಬೆಲ್‌ ಪ್ರಶಸ್ತಿ ಸರಣಿ | ಭಾರತೀಯ ಮೂಲದ ದಕ್ಷಿಣ...

ಈ ಬಾರಿಯ ಶಾಂತಿ ನೊಬೆಲ್‌ ಪ್ರಶಸ್ತಿಯನ್ನು ಶಾಂತಿ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನಗಳಿಗಾಗಿ, ಮಾನವ ಹಕ್ಕುಗಳ ರಕ್ಷಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಡಾ. ನವನೀತಮ್‌...

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಅಲ್ಲದೆ, ಕಾಂಗ್ರೆಸ್‌ ಇತ್ತೀಚೆಗೆ ಚಿತ್ರದುರ್ಗದಲ್ಲಿ ಆಯೋಜಿಸಿದ್ದ ‘ಐಕ್ಯತಾ ಸಮಾವೇಶ’ದಲ್ಲಿಯೂ ಮುಂಚೂಣಿಯಲ್ಲಿದ್ದರು. ಸಮಾವೇಶದಲ್ಲಿ ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಲು ಕಾಂಗ್ರೆಸ್‌ ನಿರ್ಧಾರ ತೆಗೆದುಕೊಳ್ಳುವಂತೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಕರ್ನಾಟಕ ಕಾಂಗ್ರೆಸ್‌ ಸ್ಟಾರ್ ಪ್ರಚಾರಕರ ಪಟ್ಟಿ
1. ಮಲ್ಲಿಕಾರ್ಜುನ ಖರ್ಗೆ
2. ಸೋನಿಯಾ ಗಾಂಧಿ
3. ರಾಹುಲ್ ಗಾಂಧಿ
4. ಕೆ.ಸಿ ವೇಣುಗೋಪಾಲ್
5. ಡಿ.ಕೆ ಶಿವಕುಮಾರ್
6. ಸಿದ್ದರಾಮಯ್ಯ
7. ಪ್ರಿಯಾಂಕಾ ಗಾಂಧಿ
8. ರಣದೀಪ್ ಸಿಂಗ್ ಸುರ್ಜೇವಾಲಾ
9. ಜೈರಾಮ್ ರಮೇಶ್
10. ಡಾ. ಎ.ಎಸ್.ಎಂ ವೀರಪ್ಪ ಮೊಯ್ಲಿ
11. ಲಕ್ಷ್ಮಣ ಸವದಿ
12. ಬಿ.ವಿ. ಶ್ರೀನಿವಾಸ್
13. ಕೆ.ಜೆ ಜಾರ್ಜ್
14. ವಿನಯ್ ಕುಮಾರ್ ಸೊರಕೆ
15. ಬಿ.ಕೆ ಹರಿಪ್ರಸಾದ್
16. ಆರ್.ವಿ ದೇಶಪಾಂಡೆ
17. ಡಾ. ಜಿ ಪರಮೇಶ್ವರ್
18. ಎಚ್.ಕೆ ಪಾಟೀಲ್
19. ಎಂ.ಬಿ ಪಾಟೀಲ್
20. ದಿನೇಶ್ ಗುಂಡೂರಾವ್
21. ಕೃಷ್ಣಬೈರೇಗೌಡ
22. ಎಚ್.ಎಂ. ರೇವಣ್ಣ
23. ಪಿ.ಜಿ.ಆರ್ ಸಿಂಧ್ಯಾ
24.ಬಿ ಸೋಮಶೇಖರ್
25. ಡಾ. ಎಲ್ ಹನುಮಂತಯ್ಯ
26. ಜಿ.ಸಿ. ಚಂದ್ರಶೇಖರ್
27. ಡಾ. ಎ.ಎಸ್. ಸೈಯದ್ ನಸೀರ್ ಹುಸೇನ್
28. ಅಭಿಷೇಕ್ ದತ್
29. ರೋಜಿ ಜಾನ್
30. ಮೇಜರ್ ಜಯಕುಮಾರ್
31. ಬಿ.ಝಡ್. ಜಮೀರ್ ಅಹಮದ್ ಖಾನ್
32. ಎಸ್.ಮಧು ಬಂಗಾರಪ್ಪ
33. ವಿ.ಎಸ್ ಉಗ್ರಪ್ಪ
34. ಪಿಟಿ ಪರಮೇಶ್ವರ್ ನಾಯ್ಕ್
35. ಈಶ್ವರ ಖಂಡ್ರೆ
36. ಸತೀಶ್ ಜಾರಕಿಹೊಳಿ
37. ಎ ತನ್ವೀರ್ ಸೇಠ್
38. ಡಾ. ಬಿ ಪುಷ್ಪಾ ಅಮರನಾಥ್
39. ಉಮಾಶ್ರೀ
40. ಅಂಬಣ್ಣ ಅರೋಲಿಕರ್

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೆಹಲಿ ಮೆಟ್ರೋಗೆ ಪೊಲೀಸ್ ಇಲಾಖೆ ಪತ್ರ: 57 ಸ್ಟೇಷನ್‌ಗಳ ಪ್ರವೇಶ-ನಿರ್ಗಮನ ದ್ವಾರ ಮುಚ್ಚಲು ಮನವಿ

ದೆಹಲಿಯ ಜಂತರ್ ಮಂತರ್‌ನಲ್ಲಿ ಅಕ್ಟೋಬರ್ 10ರಂದು ನಡೆಯಲಿರುವ ಬೃಹತ್ ಪ್ರತಿಭಟನೆಯಲ್ಲಿ ಹೆಚ್ಚಿನ...

Form 7 ಅರ್ಜಿ ವಿವಾದ; ತನಿಖೆಗೆ SIT ರಚನೆಗೆ ಸರ್ಕಾರ ಚಿಂತನೆ

ರಾಜ್ಯದಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸುವ ಉದ್ದೇಶದಿಂದ ಬೃಹತ್‌ ಪ್ರಮಾಣದಲ್ಲಿ Form...

ಪುದುಚೇರಿ | ತಟ್ಟಂಚಾವಡಿ ಉಪಚುನಾವಣೆ: AINRC ಅಭ್ಯರ್ಥಿ ಅಶೋಕ್ ಆನಂದ್‌ಗೆ ಗೆಲುವು

ಪುದುಚೇರಿಯ ತಟ್ಟಂಚಾವಡಿ ವಿಧಾನಸಭೆ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಆಲ್ ಇಂಡಿಯಾ ಎನ್‌ಆರ್‌...