ವ್ಯಕ್ತಿಯೊಬ್ಬರಿಗೆ ಕೃತಕ ಹೃದಯ ಅಳವಡಿಕೆ; ಎಲ್ಲರ ಹೃದಯ ಲಬ್-ಡಬ್ ಎಂದರೆ, ಕೃತಕ ಹೃದಯ ‘ಮಶಿನ್ ಶಬ್ದ’ ಮಾಡುತ್ತೆ

Date:

ಬೆಂಗಳೂರಿನಲ್ಲಿ ಮೊದಲ ಬಾರಿಗೆ ವ್ಯಕ್ತಿಯೊಬ್ಬರಿಗೆ ಕೃತಕ ಹೃದಯವನ್ನು (‌ಥರ್ಡ್ ಜನರೇಶನ್​​ ಎಲ್​ಬಿ) (Artificial Heart Third Generation LB) ಯಶಸ್ವಿಯಾಗಿ ಅಳವಡಿಸಲಾಗಿದೆ.

ಬಾಗಲಕೋಟೆ ಜಿಲ್ಲೆಯ ಹುನಗುಂದ ಮೂಲದ ಗುರುಣ್ಣಾ ಎಂಬುವರ ಹೃದಯ ದುರ್ಬಲವಾಗಿತ್ತು. ಹಾಗಾಗಿ, ಇವರಿಗೆ 3rd ಜನರೇಶನ್ ಎಲ್​ಬಿ ಕೃತಕ ಹೃದಯವನ್ನು ಅಳವಡಿಸಲಾಗಿದೆ.

ಖ್ಯಾತ ಹೃದಯ ಶಸ್ತ್ರ ಚಿಕಿತ್ಸಾ ತಜ್ಞೆ ಡಾ.ಅಶ್ವಿನಿ ಪಸರದ್ ಮತ್ತು ಅವರ ತಂಡ ಕೃತಕ ಹೃದಯ ಅಳವಡಿಸಿದೆ. ಜನರು ಅಂಗಾಗ ದಾನ ಮಾಡಲು ಮುಂದಾಗುತ್ತಿಲ್ಲ. ಹೃದಯ ಕಸಿ ಮಾಡಲು ಎರಡು ತಿಂಗಳು ಸಮಯಾವಕಾಶ ಇದೆ. ಇದಕ್ಕಾಗಿ 3rd ಜನರೇಶನ್ ಹೃದಯ ಪರಿಚಯಿಸಲಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಕೃತಕ ಹೃದಯ ಅಳವಡಿಕೆಯನ್ನು ಈ ಹಿಂದೆ ದೇಶದಲ್ಲಿ ಹಾಗೂ ರಾಜ್ಯದಲ್ಲಿಯೂ ಕೆಲವರಿಗೆ ಮಾಡಲಾಗಿದೆ. ಆದರೆ, ಈ ಚಿಕಿತ್ಸೆ ಯಶಸ್ವಿಯಾಗಿರಲಿಲ್ಲ. ಅದೆಲ್ಲವೂ ಸೆಕೆಂಡ್ ಜನರೇಶನ್ ಕೃತಕ ಹೃದಯ ಆಗಿರುವ ಕಾರಣ ಹೆಚ್ಚು ದಿನ ಬಾಳಿಕೆ ಬರುತ್ತಿರಲಿಲ್ಲ. ಆದರೆ, ಈಗ ಅಳವಡಿಕೆ ಮಾಡಿರುವ 3rd ಜನರೇಶನ್ ಹೃದಯ ಮಾತ್ರ ಲೈಫ್ ಟೈಮ್​ ಇದೆ. ಈ ಕೃತಕ ಹೃದಯದ ಜೀವಿತಾ ಅವಧಿ ಹೆಚ್ಚಾಗಿದೆ” ಎಂದೆನ್ನುತ್ತಾರೆ ವೈದ್ಯರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಒಂದೇ ವಾರದಲ್ಲಿ ಸರ್ಕಾರದ ಹೆಸರಿನಲ್ಲಿ‌ ಎರಡು ನಕಲಿ ಆದೇಶ; ₹4 ಕೋಟಿ ಗುತ್ತಿಗೆ ವಂಚನೆ

ಎಲ್ಲರ ಹೃದಯ ಲಬ್-ಡಬ್ ಎಂದು ಸದ್ದು ಮಾಡಿದರೇ, ಈ ಕೃತಕ ಹೃದಯ ಮೆಶಿನ್ ಶಬ್ದ ಮಾಡುತ್ತದೆ. ಈ ಕೃತಕ ಹೃದಯಕ್ಕೆ ಪ್ರತಿದಿನ ಚಾರ್ಜ್‌ ಮಾಡಬೇಕಾಗುತ್ತದೆ. ಈ ಕೃತಕ ಹೃದಯ ಸರ್ಜರಿಗೆ ಬರೋಬ್ಬರಿ ₹1 ಕೋಟಿ 10 ಲಕ್ಷ ಖರ್ಚಾಗಿದೆ.

ಈ ಥರ್ಢ್​ ಎಲ್​ಬಿ ಕೃತಕ ಮೆಷಿನ್ ಮೂಲಕ ಹೃದಯಕ್ಕೆ ಬ್ಲಡ್ ಪಂಪ್ ಮಾಡುತ್ತದೆ. ಬ್ಯಾಗ್​ನಲ್ಲಿರುವ ಬ್ಯಾಟರಿಗಳು, ಎಲೆಕ್ಟ್ರಿಕ್ ಮೋಟರ್ ಮತ್ತು ಟ್ಯೂಬ್​ಗಳು ಗಾಳಿಯನ್ನು ಪಂಪ್ ಮಾಡುತ್ತದೆ. ಇದು ಕೃತಕ ಹೃದಯ ಕೋಣೆಗಳಿಗೆ ಶಕ್ತಿ ನೀಡುತ್ತದೆ.‌ ಇದರಿಂದ ರೋಗಿ ಜೀವನ ಪೂರ್ತಿ ಬದುಕು ಸಾಗಿಸಲು ಸಾಧ್ಯವಾಗುತ್ತದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇಲ್ಲಾ ಗೌಡ್ರೇ, ಇದು ನ್ಯಾಯ ಅಲ್ಲ, ಇನ್ನು ನಿಲ್ಲಿಸ್ಬಿಡಿ ಸಾಕು: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮನವಿ

ಪ್ರಜ್ವಲ್‌ ರೇವಣ್ಣನ ವಿಡಿಯೋಗಳನ್ನ ನೋಡಿ ಹಾಸನದ ಜನ ಬೆಚ್ಚಿ ಬಿದ್ದಿದ್ದಾರೆ. ಮೊದಮೊದಲು...

ದಾವಣಗೆರೆ | ಕಾಂಗ್ರೆಸ್‌ಗೆ ಮಡಿವಾಳ ಸಮಾಜ ಬೆಂಬಲ; ಬೇಡಿಕೆಗಳ ಈಡೇರಿಕೆಗೆ ಆಗ್ರಹ

ರಾಜ್ಯದಲ್ಲಿನ ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸುವುದು, ರಾಜ್ಯದ ಎಲ್ಲ ತಾಲೂಕಿನಲ್ಲಿ...

ಚಿಕ್ಕಮಗಳೂರು | ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮಲೆನಾಡಿನ ಸಂರಕ್ಷಣ ವೇದಿಕೆ ಕರೆ

ಬಿಜೆಪಿ ಪಕ್ಷ ಬಿಟ್ಟು ಕಾಂಗ್ರೇಸ್ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮಲೆನಾಡಿನ ಸಂರಕ್ಷಣ ವೇದಿಕೆ...