ಚುನಾವಣೆ 2023 | ಮೈಸೂರಿಗೆ ಬಂದಿಳಿಯಲಿದೆ ಪ್ಯಾರಾ ಮಿಲಿಟರಿ ಪಡೆ: ಎಸ್ಪಿ ಸೀಮಾ ಲಾಟ್ಕರ್

Date:

  • ಮೈಸೂರಿನ ಹಲವೆಡೆ ಪಥಸಂಚಲನ ನಡೆಸಲಿರುವ ಪ್ಯಾರಾ ಮಿಲಿಟರಿ ಪಡೆ
  • ಪಾರದರ್ಶಕ ಚುನಾವಣೆ ನಡೆಸಲು ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ

ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ರಾಜ್ಯದಲ್ಲಿ ಇನಷ್ಟು ಭದ್ರತೆ ಹೆಚ್ಚಿಸಿ, ಸಾರ್ವಜನಿಕರಿಗೆ ಅಭಯ ನೀಡಲು ಏಪ್ರಿಲ್ ಮೊದಲ ವಾರದಲ್ಲಿ ಪ್ಯಾರಾ ಮಿಲಿಟರಿ ಪಡೆಯ ಮೊದಲ ತಂಡವು ಮೈಸೂರು ನಗರಕ್ಕೆ ಆಗಮಿಸಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಮಾಹಿತಿ ನೀಡಿದ್ದಾರೆ.

ಮೈಸೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, “ರಾಜ್ಯದಲ್ಲಿ ಈಗಾಗಲೇ ಚುನಾವಣೆ ಪ್ರಕ್ರೀಯೆ ಆರಂಭವಾಗಿದೆ. ಕೆಲವು ಸ್ಥಳಗಳನ್ನು ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಇಂತಹ ಪ್ರದೇಶದ ಮೇಲೆ ಪೊಲೀಸ್‌ ಇಲಾಖೆಯು ಕಟ್ಟುನಿಟ್ಟಿನ ಎಚ್ಚರ ವಹಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಹಾಗೂ ಸಾರ್ವಜನಿಕರಿಗೆ ಅಭಯ ನೀಡಲು, ಪ್ಯಾರಾ ಮಿಲಿಟರಿ ಪಡೆಯನ್ನು ಕರೆಸಿಕೊಳ್ಳಲಾಗುತ್ತಿದೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? : ಉತ್ತರ ಕನ್ನಡ | ಅಗಡಿ ಚೆಕ್‌ ಪೋಸ್ಟ್; ದಾಖಲೆ ಇಲ್ಲದ 3.39 ಲಕ್ಷ ರೂ. ವಶ‌

ಮೈಸೂರು ಭಾಗದ ಹಲವು ಪ್ರದೇಶಗಳಲ್ಲಿ ಪ್ಯಾರಾ ಮಿಲಿಟರಿ ಪಡೆಯು ಪಥಸಂಚಲನ ನಡೆಸಲಿದ್ದು, ಯಾವ ಯಾವ ಭಾಗಗಳೆಂದು ಈಗಾಗಲೇ ತೀರ್ಮಾನ ಮಾಡಲಾಗಿದೆ. ರಾಜ್ಯದಲ್ಲಿ ಪಾರದರ್ಶಕ ಚುನಾವಣೆ ನಡೆಸಲು ಪೊಲೀಸ್ ಇಲಾಖೆಯು ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲಿದೆ” ಎಂದು ತಿಳಿಸಿದರು.

ಮೈಸೂರು ಜಿಲ್ಲೆಯಾದ್ಯಂತ 8 ಚೆಕ್‌ಪೋಸ್ಟ್‌ಗಳನ್ನು ರಚಿಸಲಾಗಿದ್ದು, ಬಾವಲಿ ಚೆಕ್‌ಪೋಸ್ಟ್‌ ಹಾಗೂ ಕೇರಳ ಗಡಿಯಲ್ಲಿ ಹೆಚ್ಚಿನ ಜನರು ಆಗಮಿಸುವ ಹಿನ್ನೆಲೆ 8 ಬೂತ್‌ಗಳನ್ನು ನಿರ್ಮಿಸಲಾಗಿದ್ದು, ಹೆಚ್ಚಿನ ನಿಗಾ ಇರಿಸಲಾಗಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರಿನಲ್ಲಿ ಅನ್ನಭಾಗ್ಯ ಯೋಜನೆಗೆ ಚಾಲನೆ: ಸಿಎಂ ಸಿದ್ದರಾಮಯ್ಯ

ಗ್ಯಾರಂಟಿ ಯೋಜನೆಗಳ ಉದ್ಘಾಟನೆಗೆ ಸ್ಥಳ ನಿಗದಿ ನಾಳೆ ಬೆಂಗಳೂರಿನಲ್ಲಿ ಮೊದಲ ಯೋಜನೆಗೆ ಚಾಲನೆ ಕಾಂಗ್ರೆಸ್...

ಕಾಂಗ್ರೆಸ್ ಸರಕಾರದ ದ್ವೇಷದ ರಾಜಕಾರಣ: ಕಾರ್ಯಕರ್ತರ ನೆರವಿಗಾಗಿ ಸಹಾಯವಾಣಿ ಆರಂಭಿಸಿದ ಬಿಜೆಪಿ

24 ಗಂಟೆ ಕಾರ್ಯಾಚರಣೆ ನಡೆಸಲಿರುವ ಬಿಜೆಪಿ ಸಹಾಯವಾಣಿ ಸಹಾಯವಾಣಿ ಕಾರ್ಯಾಚರಣೆಗೆ 100 ಜನ...

ಧಾರವಾಡ | ವಿದ್ಯುತ್ ದರ ಹೆಚ್ಚಳ; ಕೈಗಾರಿಕಾ ಉದ್ಯಮಿಗಳ ಸಂಘ ಖಂಡನೆ

ವಿದ್ಯುತ್ ಶುಲ್ಕ ಗಣನೀಯ ಹೆಚ್ಚಳವನ್ನು ವಿರೋಧಿಸಿ ಧಾರವಾಡ ಬೆಳವಣಿಗೆ ಕೇಂದ್ರ ಮತ್ತು...

ಧಾರವಾಡ | ಚಿಗರಿ ಬಸ್‌ಗಳಲ್ಲಿ ಮಹಿಳೆಯರಿಗಿಲ್ಲ ಉಚಿತ ಪ್ರಯಾಣ

ಅವಳಿ ನಗರಗಳಾದ ಹುಬ್ಬಳ್ಳಿ-ಧಾರವಾಡಕ್ಕೆ ಶೀಘ್ರ ಸಂಪರ್ಕಕ್ಕಾಗಿ ಬಿಆರ್‌ಟಿಎಸ್‌ ನಿಂದ 'ಚಿಗರಿ' ಹೆಸರಿನ...