ಚುನಾವಣಾ ಬಾಂಡ್‌ಗೆ ಕುರಿತಾದ ಎಲ್ಲ ಮಾಹಿತಿಯನ್ನು ಸಂಪೂರ್ಣವಾಗಿ ಬಹಿರಂಗಗೊಳಿಸುವಂತೆ ಎಸ್‌ಬಿಐಗೆ ಸುಪ್ರೀಂ ಕೋರ್ಟ್ ಸೋಮವಾರ ತಾಕೀತು ಮಾಡಿದೆ. ಅಲ್ಲದೆ, ಯೋಜನೆಯನ್ನು ರದ್ದುಗೊಳಿಸಲಾದ ತೀರ್ಪನ್ನು ವಿವಿಧ ವ್ಯಕ್ತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬ ಬಗ್ಗೆ ಕೇಂದ್ರ ಸರ್ಕಾರ ವ್ಯಕ್ತಪಡಿಸಿದ್ದ ಕಳವಳವನ್ನು ಸಹ ಸುಪ್ರೀಂ ಕೋರ್ಟ್ ಇದೇ ವೇಳೆ ತಳ್ಳಿಹಾಕಿದೆ.
ಚುನಾವಣಾ ಬಾಂಡ್ ಮೂಲಕ ಬಹಿರಂಗಪಡಿಸಲಾದ ಎಲ್ಲಾ ವಿವರಗಳನ್ನು ತಮ್ಮ ಕಾರ್ಯಸೂಚಿಗೆ ತಕ್ಕಂತೆ ತಿರುಚಲಾಗುತ್ತಿದ್ದು, ಇದರಿಂದಾಗಿ ನ್ಯಾಯಾಲಯ ಮುಜುಗರಕ್ಕೊಳಗಾಗುತ್ತಿದೆ ಎಂದು ಕೇಂದ್ರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ವಾದಿಸಿದರು.
ಈ ವಾದವನ್ನು ತಳ್ಳಿಹಾಕಿದ ಸುಪ್ರೀಂ ಕೋರ್ಟ್ ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ ಆರ್ ಗವಾಯಿ, ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಐವರು ಸದಸ್ಯರ ಪೀಠ, ತನ್ನ ತೀರ್ಪುಗಳನ್ನು ಮೂರನೆಯವರು ಹೇಗೆ ವ್ಯಾಖ್ಯಾನಿಸುತ್ತಾರೆ ಎಂಬುದರ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿತು.
WATCH: “Witch-hunting has started on some other level now… Petitioners have starting giving press interviews deliberately to embarrass the court. It is a non-level playing field. We can’t rebut them. There is a barrage of social media posts now that are intended to cause… pic.twitter.com/bsu7Zi9CY6
— Law Today (@LawTodayLive) March 18, 2024
“ಕಪ್ಪು ಹಣ ನಿಗ್ರಹಿಸುವುದು ಅಂತಿಮ ಗುರಿಯಾಗಿದ್ದು, ತೀರ್ಪನ್ನು ನ್ಯಾಯಾಲಯದ ಹೊರಗೆ ಹೇಗೆ ಬಳಸಿಕೊಳ್ಳಲಾಗುತ್ತದೆ ಎಂಬದರ ಬಗ್ಗೆ ಈ ನ್ಯಾಯಾಲಯಕ್ಕೆ ತಿಳಿದಿರಬೇಕಿತ್ತು. ಕಿರುಕುಳ ಎಂಬುದು ಕೇಂದ್ರ ಸರ್ಕಾರದ ಮಟ್ಟದಲ್ಲಿ ಅಲ್ಲ ಬದಲಿಗೆ ಬೇರೊಂದು ನೆಲೆಯಲ್ಲಿ ಆರಂಭವಾಗಿದೆ. ನ್ಯಾಯಾಲಯದ ಮುಂದೆ ಇದ್ದವರು ಪತ್ರಿಕಾ ಸಂದರ್ಶನಗಳನ್ನು ನೀಡಲು ಪ್ರಾರಂಭಿಸಿ, ಉದ್ದೇಶಪೂರ್ವಕವಾಗಿ ನ್ಯಾಯಾಲಯವನ್ನು ಮುಜುಗರಕ್ಕೀಡು ಮಾಡಿದರು. ಇದು ನ್ಯಾಯಸಮ್ಮತವಲ್ಲ” ಎಂದು ಕೇಂದ್ರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ವಾದಿಸಿದರು.
“ಮುಜುಗರ ಉಂಟುಮಾಡುವ ಉದ್ದೇಶದಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೆಗಳ ಸುರಿಮಳೆ ನೀಡಲಾಗುತ್ತಿದೆ. ಮಾಹಿತಿ ತೆರೆದ ಬಯಲಾಗಿದ್ದು, ಜನ ತಮಗೆ ಬೇಕಾದಂತೆ ಅಂಕಿ ಅಂಶ ತಿರುಚಬಹುದು. ಅಂಕಿ-ಅಂಶಗಳ ಆಧಾರದ ಮೇಲೆ ಬೇಕಾದಂತೆ ಹೇಳಿಕೆ ನೀಡಲಾಗುತ್ತಿದೆ” ಎಂದು ತುಷಾರ್ ಮೆಹ್ತಾ ತಿಳಿಸಿದರು.
WATCH: “Witch-hunting has started on some other level now… Petitioners have starting giving press interviews deliberately to embarrass the court. It is a non-level playing field. We can’t rebut them. There is a barrage of social media posts now that are intended to cause… pic.twitter.com/bsu7Zi9CY6
— Law Today (@LawTodayLive) March 18, 2024
“ನ್ಯಾಯಮೂರ್ತಿಗಳಾಗಿ ನಾವು ಕಾನೂನು ಪರಿಪಾಲನೆಯನ್ನು ಮಾತ್ರವೇ ಪರಿಗಣಿಸುತ್ತೇವೆ, ಸಂವಿಧಾನದ ಪ್ರಕಾರ ಕೆಲಸ ಮಾಡುತ್ತೇವೆ. ರಾಜ್ಯಾಡಳಿತ ವ್ಯವಸ್ಥೆಯಲ್ಲಿ ಕಾನೂನು ಪರಿಪಾಲನೆಗಾಗಿ ಮಾತ್ರವೇ ನಮ್ಮ ನ್ಯಾಯಾಲಯವು ಕೆಲಸ ಮಾಡುತ್ತದೆ. ನ್ಯಾಯಮೂರ್ತಿಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮಾತನಾಡಲಾಗುತ್ತದೆ. ಆದರೆ ಆ ಮಾತುಗಳನ್ನು ಸಹಿಸುವಷ್ಟು ನ್ಯಾಯಾಂಗದ ಭುಜಗಳು ವಿಶಾಲವಾಗಿವೆ. ತೀರ್ಪಿನ ಪ್ಯಾರಾ ಬಿ ಮತ್ತು ಸಿಯಲ್ಲಿ ನೀಡಲಾದ ನಿರ್ದೇಶನಗಳನ್ನು ಜಾರಿಗೊಳಿಸಲಾಗಿದೆಯೇ ಎಂಬುದನ್ನಷ್ಟೇ ತಾನು ಗಮನಿಸುತ್ತೇನೆ” ಎಂದು ನ್ಯಾಯಾಲಯ ತಿಳಿಸಿತು. ಆ ಮೂಲಕ ಕೇಂದ್ರ ಸರ್ಕಾರ ವ್ಯಕ್ತಪಡಿಸಿದ್ದ ಕಳವಳವನ್ನು ಸಹ ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.
WATCH: Solicitor General Tushar Mehta and Advocate Prashant Bhushan lock horns during the Electoral Bonds hearing.
“He is not addressing this Court… he is addressing someone else, only so that his name comes in the paper tomorrow. This is not public interest, this is publicity… pic.twitter.com/mapRvjWR72
— Law Today (@LawTodayLive) March 18, 2024
ಬಾಂಡ್‌ಗಳಿಗೆ ಎಸ್‌ಬಿಐ ನೀಡಿದ್ದ ಆಲ್ಫಾ ನ್ಯೂಮರಿಕ್ ಸಂಖ್ಯೆಗಳ ವಿವರ ಸೇರಿದಂತೆ ಅವುಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಬಹಿರಂಗಪಡಿಸುವಂತೆ ಇದೇ ವೇಳೆ ನ್ಯಾಯಾಲಯ ಎಸ್‌ಬಿಐಗೆ ತಾಕೀತು ಮಾಡಿತು.
ಬಾಂಡ್‌ಗಳನ್ನು ನಗದೀಕರಿಸಿಕೊಂಡ ಮತ್ತು ಅವುಗಳನ್ನು ಪಡೆದವರನ್ನು ಗುರುತಿಸಲು ಸಹಾಯವಾಗುವಂತೆ ಚುನಾವಣಾ ಬಾಂಡ್ ಸಂಖ್ಯೆಗಳನ್ನು ಬಹಿರಂಗಪಡಿಸದೆ ಇರುವ ಬಗ್ಗೆ ಮಾ. 15ರಂದು ನ್ಯಾಯಾಲಯ ಎಸ್‌ಬಿಐ ಪ್ರತಿಕ್ರಿಯೆ ಕೇಳಿತ್ತು.