ಉಡುಪಿ-ಚಿಕ್ಕಮಗಳೂರು | ಬಿಜೆಪಿ ಅಲೆ ಇರುವ ಕ್ಷೇತ್ರದಲ್ಲಿ ಯಾರ ʼಕೈʼ ಮೇಲಾಗಲಿದೆ?

Date:

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವು ಕರ್ನಾಟಕ ರಾಜ್ಯದ 28 ಲೋಕಸಭಾ (ಸಂಸತ್ತಿನ ಕೆಳಮನೆ) ಕ್ಷೇತ್ರಗಳಲ್ಲಿ ಒಂದು. 2002ರಲ್ಲಿ ʼಡೆಲಿಮಿಟೇಷನ್ ಕಮಿಷನ್ ಆಫ್ ಇಂಡಿಯಾʼ ಶಿಫಾರಸ್ಸಿನ ಆಧಾರವಾಗಿ, 2008ರಲ್ಲಿ ಸಂಸದೀಯ ಕ್ಷೇತ್ರದ ವಿಂಗಡಣೆಯ ಅನುಷ್ಠಾನದ ಭಾಗವಾಗಿ, ಈ ಕ್ಷೇತ್ರವನ್ನು ರಚಿಸಲಾಯಿತು. 2009ರ ಮೊದಲ ಚುನಾವಣೆಯಲ್ಲಿ ಭಾಜಪ ಪಕ್ಷದಿಂದ ಡಿ.ವಿ.ಸದಾನಂದ ಗೌಡರು ಸಂಸದರಾದರು.

ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾರಣದಿಂದ, 2011, ಆಗಸ್ಟ್ 4ರಂದು ಸದಾನಂದ ಗೌಡರು ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಆದ ಕಾರಣ ಡಿ.ವಿ.ಸದಾನಂದ ಗೌಡರು, ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಯಿತು ಹಾಗೂ 2012ರಲ್ಲಿ ಈ ಕ್ಷೇತ್ರಕ್ಕೆ ಉಪಚುನಾವಣೆಯನ್ನು ನಡೆಸಲಾಯಿತು. ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕೆ.ಜಯಪ್ರಕಾಶ್ ಹೆಗ್ಡೆ ಜಯಗಳಿಸಿದ್ದರು.

2014ರ ಚುನಾವಣೆಯಲ್ಲಿ, ಬಿಜೆಪಿಯ ಶೋಭಾ ಕರಂದ್ಲಾಜೆಯವರು ಗೆದ್ದು, ಈ ಕ್ಷೇತ್ರವನ್ನು ಪ್ರತಿನಿಧಿಸಿದರು. 2019ರಲ್ಲಿಯೂ ಪುನಃ ಶೋಭಾ ಕರಂದ್ಲಾಜೆ ವಿಜಯ ಸಾಧಿಸಿ ಪ್ರಸ್ತುತ ಸಂಸದರಾಗಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ವಿಧಾನಸಭಾ ಕ್ಷೇತ್ರಗಳು

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವು ಎಂಟು ವಿಧಾನ ಸಭಾ ಕ್ಷೇತ್ರಗಳನ್ನು ಹೊಂದಿದೆ. ಚಿಕ್ಕಮಗಳೂರು, ಕಾಪು, ಕಾರ್ಕಳ, ಕುಂದಾಪುರ, ಮೂಡಿಗೆರೆ (ಪ.ಜಾ), ಶೃಂಗೇರಿ, ತರಿಕೆರೆ, ಉಡುಪಿ.

ನಾಲ್ಕು ವಿಧಾನಾಸಭಾ ಕ್ಷೇತ್ರಗಳು

ಶೃಂಗೇರಿ, ಮೂಡಿಗೆರೆ, ಚಿಕ್ಕಮಗಳೂರು ಹಾಗೂ ತರೀಕೆರೆ ಚಿಕ್ಕಮಗಳೂರು ಜಿಲ್ಲೆಯಲ್ಲಿದೆ. ಇನ್ನುಳಿದ ನಾಲ್ಕು, ಕುಂದಾಪುರ ,ಉಡುಪಿ, ಕಾಪು ಮತ್ತು ಕಾರ್ಕಳ ಉಡುಪಿ ಜಿಲ್ಲೆಯಲ್ಲಿದೆ.

2008ರಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ರಚನೆಯಾಯಿತು.

2009: ಡಿ.ವಿ.ಸದಾನಂದ ಗೌಡ, ಭಾರತೀಯ ಜನತಾ ಪಕ್ಷ

2012 (ಉಪ ಚುನಾವಣೆ): ಕೆ. ಜಯಪ್ರಕಾಶ್ ಹೆಗ್ಡೆ, ಕಾಂಗ್ರೆಸ್

2014: ಶೋಭಾ ಕರಂದ್ಲಾಜೆ, ಭಾರತೀಯ ಜನತಾ ಪಕ್ಷ

2019: ಶೋಭಾ ಕರಂದ್ಲಾಜೆ, ಭಾರತೀಯ ಜನತಾ ಪಕ್ಷ

2009ರಲ್ಲಿ ಸಾರ್ವತ್ರಿಕ ಚುನಾವಣೆ

ಬಿಜೆಪಿ ಡಿ.ವಿ.ಸದಾನಂದ ಗೌಡ ಗಳಿಸಿದ ಮತಗಳು – 4,01,441

ಕಾಂಗ್ರೆಸ್ ಕೆ. ಜಯಪ್ರಕಾಶ್ ಹೆಗ್ಡೆ ಗಳಿಸಿದ ಮತಗಳು – 3,74,423

ಸಿಪಿಐ ಎಂ ರಾಧ ಸುಂಧರೇಶ್ ಗಳಿಸಿದ ಮತಗಳು – 24,991

ಪಕ್ಷೇತರ ಶ್ರೀನಿವಾಸ ಪೂಜಾರಿ ಗಳಿಸಿದ ಮತಗಳು – 11,263, ಗೆಲುವಿನ ಅಂತರ 27,018

2012 ಉಪ ಚುನಾವಣೆ

ಕಾಂಗ್ರೆಸ್ ಕೆ. ಜಯಪ್ರಕಾಶ್ ಹೆಗ್ಡೆ ಗಳಿಸಿದ ಮತಗಳು – 3,98,723

ಬಿಜೆಪಿ ವಿ.ಸುನಿಲ್ ಕುಮಾರ್ ಗಳಿಸಿದ ಮತಗಳು – 3,52,999

ಭೋಜೆ ಗೌಡ ಗಳಿಸಿದ ಮತಗಳು – 72,080, ಗೆಲುವಿನ ಅಂತರ – 45,724

2014 ಸಾರ್ವತ್ರಿಕ ಚುನಾವಣೆ

ಬಿಜೆಪಿ ಶೋಭಾ ಕರಂದ್ಲಾಜೆ- 581,168

ಕಾಂಗ್ರೆಸ್ ಕೆ. ಜಯಪ್ರಕಾಶ್ ಹೆಗ್ಡೆ- 399,525

ಜೆಡಿಎಸ್ ವಿ.ಧನಂಜಯ ಕುಮಾರ್ – 14,895

ಗೆಲುವಿನ ಅಂತರ- 1,81,643

2019 ಸಾರ್ವತ್ರಿಕ ಚುನಾವಣೆ

ಬಿಜೆಪಿ ಶೋಭಾ ಕರಂದ್ಲಾಜೆ- 7,18,916

ಜೆಡಿ(ಎಸ್) ಪ್ರಮೋದ್ ಮಧ್ವರಾಜ್- 3,69,317

ಬಿಎಸ್ಪಿ ಪಿ.ಪರಮೇಶ್ವರ್- 15,947, ಗೆಲುವಿನ ಅಂತರ 3,49,599

ಕ್ಷೇತ್ರದ ಮತದಾರರ ಸಂಖ್ಯೆ 15.72 ಲಕ್ಷ

ಇತ್ತೀಚೆಗೆ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ನೀಡಿದ ಮಾಹಿತಿಯ ಪ್ರಕಾರ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಇರುವ ಒಟ್ಟು ಮತದಾರರ ಸಂಖ್ಯೆ 15,72,958. ಇವರಲ್ಲಿ ಪುರುಷ ಮತದಾರರ ಸಂಖ್ಯೆ 7,62,558. ಮಹಿಳಾ ಮತದಾರರ ಸಂಖ್ಯೆ 8,10,362 ಹಾಗೂ 38 ಮಂದಿ ತೃತೀಯ ಲಿಂಗ ಮತದಾರರು ಇದರಲ್ಲಿ ಸೇರಿದ್ದಾರೆ.

ಕ್ಷೇತ್ರದಲ್ಲಿ ಒಟ್ಟು 565 ಮಂದಿ ಸೇವಾ ಮತದಾರರಿದ್ದಾರೆ. ಕುಂದಾಪುರ 51, ಉಡುಪಿ 51, ಕಾಪು 53, ಕಾರ್ಕಳ 34, ಶೃಂಗೇರಿ 58, ಮೂಡಿಗೆರೆ 83, ಚಿಕ್ಕಮಗಳೂರು 140, ತರೀಕೆರೆ 95 ಮಂದಿ ಸೇವಾ ಮತದಾರರಿದ್ದಾರೆ.

1842 ಮತಗಟ್ಟೆಗಳು: ಬಾರಿ ಕ್ಷೇತ್ರದಲ್ಲಿ ಒಟ್ಟು 1842

ವಿಧಾನಸಭಾ ಕ್ಷೇತ್ರವಾರು ಮತಗಟ್ಟೆಗಳ ಸಂಖ್ಯೆ ಹೀಗಿದೆ. ಕುಂದಾಪುರ-222, ಉಡುಪಿ-226, ಕಾಪು-209, ಕಾರ್ಕಳ- 209, ಶೃಂಗೇರಿ-256, ಮೂಡಿಗೆರೆ-231, ಚಿಕ್ಕಮಗಳೂರು-261 ಹಾಗೂ ತರೀಕೆರೆಯಲ್ಲಿ 228 ಮತಗಟ್ಟೆಗಳಿರುತ್ತವೆ.

29,909 ಯುವ ಮತದಾರರು

ಕ್ಷೇತ್ರದಲ್ಲಿ ಈ ಬಾರಿ 29,909 ಮಂದಿ ಮೊದಲ ಬಾರಿ ಮತ ಚಲಾಯಿಸುವ ಹಕ್ಕನ್ನು ಪಡೆದ ಯುವ ಮತದಾರರಿದ್ದಾರೆ. ಕುಂದಾಪುರ- 3916, ಕಾರ್ಕಳ- 4528, ಉಡುಪಿ- 4477, ಕಾಪು- 4235, ಶೃಂಗೇರಿ- 3346, ಮೂಡಿಗೆರೆ- 2692, ಚಿಕ್ಕಮಗಳೂರು- 3796, ತರೀಕೆರೆ- 2919 ಈ ಮತದಾರರಿದ್ದಾರೆ. ಅಲ್ಲದೇ ಒಟ್ಟು 17,959 ಮಂದಿ ವಿಕಲಚೇತನ ಮತದಾರರು ಸಹ ಉಡುಪಿ, ಚಿಕ್ಕಮಗಳೂರು ಜಿಲ್ಲೆಯಲ್ಲಿದ್ದಾರೆ.

85+ ವಯೋಮಾನದವರು 21,521

85ವರ್ಷಕ್ಕಿಂತ ಅಧಿಕ ವಯೋಮಾನದ ಒಟ್ಟು 21,521 ಮಂದಿ ಹಿರಿಯ ಮತದಾರರು ಕ್ಷೇತ್ರದಲ್ಲಿದ್ದಾರೆ. ಕುಂದಾಪುರದಲ್ಲಿ- 2920, ಉಡುಪಿ- 3624, ಕಾಪು- 2758, ಕಾರ್ಕಳ- 2692, ಶೃಂಗೇರಿ- 1881, ಮೂಡಿಗೆರೆ- 1747, ಚಿಕ್ಕಮಗಳೂರು- 2878, ತರೀಕೆರೆ- 3021 ಮಂದಿ ಹಿರಿಯ ಮತದಾರರಿದ್ದಾರೆ.

536 ಮಂದಿ ಶತಾಯುಷಿ ಮತದಾರರು

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ 100 ವರ್ಷ ಪ್ರಾಯ ಮೀರಿದ 536ಮಂದಿ ಶತಾಯುಷಿ ಮತದಾರರಿದ್ದಾರೆ. ಇವರಲ್ಲಿ 205 ಮಂದಿ ಪುರುಷರಾದರೆ, 331 ಮಂದಿ ಮಹಿಳೆಯರು. ಕುಂದಾಪುರದಲ್ಲಿ 21, ಉಡುಪಿಯಲ್ಲಿ 71, ಕಾಪು 50, ಕಾರ್ಕಳ 36, ಚಿಕ್ಕಮಗಳೂರು 148, ಶೃಂಗೇರಿ 34, ಮೂಡಿಗೆರೆ 55, ತರೀಕೆರೆ 121ಮಂದಿ ಶತಾಯುಷಿ ಮತದಾರರಿದ್ದಾರೆ.

ಲೋಕಸಭಾ ಚುನಾವಣೆಗೆ ಈಗಾಗಲೇ ದಿನಾಂಕ ಘೋಷಣೆಯಾಗಿದ್ದು, ಏಳು ಸುತ್ತಿನ ಮತದಾನದಲ್ಲಿ ಕರ್ನಾಟಕ ರಾಜ್ಯದಲ್ಲಿ ಎರಡು ಸುತ್ತಿನ ಮತದಾನ ನಡೆಯಲಿದೆ. ಎಲ್ಲಾ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರದಲ್ಲಿ ತಾ ಮುಂದು ತಾ ಮುಂದು ಎಂಬಂತೆ ಬಿರುಸಿನ ಪ್ರಚಾರ ಮಾಡಲು ಈಗಾಗಲೇ ಪ್ರಾರಂಭಿಸಿದ್ದಾರೆ.

ಪ್ರಧಾನಿ ಮೋದಿಯವರು ಸಹ ಕರ್ನಾಟಕಕ್ಕೆ ಪ್ರಚಾರದ ಸಲುವಾಗಿ ಕಾಲಿಟ್ಟಿದ್ದು, ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಮನಸ್ತಾಪಗಳಾಗಿದ್ದು, ಬಂಡಾಯದ ಬಿಸಿ ಕೂಡ ತಟ್ಟಿದೆ. ಕಾಂಗ್ರೆಸ್‌ನಲ್ಲಿ ಇನ್ನು ಹಲವರಿಗೆ ಟಿಕೆಟ್‌ ಫೈನಲ್‌ ಅಗದಿರುವುದನ್ನುನೋಡಿದರೆ, ರಾಜಕೀಯ ಮುಖಂಡರು ಒಬ್ಬರು ಇನ್ನೊಬ್ಬರ ಕಾಲೆಳೆಯುತ್ತಿರುವ ಬಗ್ಗೆ ರಾಜಕೀಯ ವಲಯದಲ್ಲಿ ಗುಸು ಗುಸು ಚರ್ಚೆಗಳಾಗುತ್ತಿವೆ.

ಅದರಲ್ಲೂ ರಾಜ್ಯದ ಜನರ ಕುತೂಹಲದ ಕಣ್ಣಿರುವುದು ಕರಾವಳಿಯ ಕಡೆಗೆ. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿ ಇದ್ದರೂ, ಕರಾವಳಿಯಲ್ಲಿ ಅದರಲ್ಲೂ ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಪ್ರಭಾವ ಹೆಚ್ಚಾಗಿದೆ. ಇನ್ನು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ವಿಷಯದ ಬಗ್ಗೆ ತಿಳಿಯುವುದಾದರೆ, ಭಾರತೀಯ ಜನತಾ ಪಕ್ಷದಿಂದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಟಿಕೆಟ್‌ ಫೈನಲ್‌ ಅಗಿದೆ. ಕಾಂಗ್ರೆಸ್‌ನಲ್ಲಿ ಜಯಪ್ರಕಾಶ್‌ ಹೆಗ್ಡೆ ಹೆಸರು ಕೇಳಿ ಬರುತ್ತಲಿದೆ. ಒಕ್ಕಲಿಗ, ಬಂಟ ಹಾಗೂ ಬಿಲ್ಲವರ ಮತಗಳು ಹೆಚ್ಚಾಗಿರುವ ಈ ಕ್ಷೇತ್ರದಲ್ಲಿ ಜಾತಿ ರಾಜಕಾರಣದ ರಾಜಕೀಯ ಲೆಕ್ಕಾಚಾರ ಕೂಡ ಜೋರಾಗಿದೆ.

ಒಟ್ಟಿನಲ್ಲಿ ಈ ಬಾರಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಗದ್ದುಗೆ ಯಾರ ಪಾಲಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಶಾರೂಕ್ ತೀರ್ಥಹಳ್ಳಿ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸನ್ಮಾನ್ಯ ಮುಖ್ಯಮಂತ್ರಿಗಳೇ… ಹಿರಿಯಕ್ಕನ ಚಾಳಿ ರಾಜ್ಯಕ್ಕೂ ಬೇಡ

'ಗ್ಯಾರಂಟಿ'ಗಳು ರಾಜ್ಯ ಸರ್ಕಾರಕ್ಕೆ ಸಂಕಟ ತಂದಿವೆ ಎಂಬ ವಾದವೇ ಒಪ್ಪತಕ್ಕದ್ದಲ್ಲ. ಏಕೆಂದರೆ,...

ಸ್ಪೀಕರ್ ಸ್ಥಾನಕ್ಕೆ ಹಗ್ಗಜಗ್ಗಾಟ; ಬಿಜೆಪಿ ಸಭಾಧ್ಯಕ್ಷ – ಟಿಡಿಪಿಗೆ ಉಪಸಭಾಧ್ಯಕ್ಷ ಸ್ಥಾನ ಸಿಗುವ ಸಾಧ್ಯತೆ

3ನೇ ಅವಧಿಯ ಎನ್‌ಡಿಎ ಸರ್ಕಾರದಲ್ಲಿ ಬಿಜೆಪಿ ಲೋಕಸಭಾ ಸ್ಪೀಕರ್ ಹುದ್ದೆಯನ್ನು ಉಳಿಸಿಕೊಳ್ಳುವ...

ದಿಟ್ಟ ಪ್ರಶ್ನೆ ಎದುರಾದಾಗ ಅಹಂಕಾರ ತೋರುವುದು ಸಿಎಂ ಸಿದ್ದರಾಮಯ್ಯ ಗುಣ: ಆರ್‌ ಅಶೋಕ್

ಅಸಮರ್ಥ ಸಿಎಂ ಸಿದ್ದರಾಮಯ್ಯ ನವರೇ, ಕಳೆದ ವರ್ಷ ಆಗಸ್ಟ್ ನಿಂದ ಮಾರ್ಚ್...

ಇಸಿ ‘ಸಂಪೂರ್ಣ ರಾಜಿ’ ಆಯೋಗ: ಕೋರ್ಟ್‌ ಮೊರೆ ಹೋಗಲಿರುವ ಆದಿತ್ಯ ಠಾಕ್ರೆ

ಮುಂಬೈ ವಾಯುವ್ಯ ಲೋಕಸಭಾ ಕ್ಷೇತ್ರದ ಫಲಿತಾಂಶವನ್ನು ನಮ್ಮ ಪಕ್ಷವು ನ್ಯಾಯಾಲಯದಲ್ಲಿ ಪ್ರಶ್ನಿಸಲಿದೆ...