ಫ್ಯಾಕ್ಟ್‌ಚೆಕ್ | 20 ವರ್ಷಗಳ ಕಾಲ ದೇಶದಲ್ಲಿ ಇವಿಎಂ ನಿಷೇಧ?

Date:

ಭಾರತದಲ್ಲಿ ವಿದ್ಯುನ್ಮಾನ ಮತಯಂತ್ರ (ಇವಿಎಂ)ಅನ್ನು 20 ವರ್ಷಗಳ ಕಾಲ ನಿಷೇಧಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ ಎಂಬ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. 2014ರ ನಂತರ ಇವಿಎಂ ವಿಶ್ವಾಸಾರ್ಹತೆ ಬಗ್ಗೆ ಹಲವು ರಾಜಕೀಯ ಪಕ್ಷಗಳೂ ಸೇರಿದಂತೆ ಜನಸಾಮಾನ್ಯರೂ ಕೂಡ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಪರ-ವಿರೋಧ ಚರ್ಚೆಗಳೂ ನಡೆಯುತ್ತಿವೆ. ಇದೀಗ, ಕರ್ನಾಟಕದಲ್ಲಿ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆ ಈ ಪೋಸ್ಟ್‌ ಸತ್ಯವೋ-ನಕಲಿಯೋ ಎಂಬ ಬಗ್ಗೆ ಮತ್ತಷ್ಟು ಚರ್ಚೆಗಳಾಗುತ್ತಿವೆ. ವೈರಲ್‌ ಆಗಿರುವ ಪೋಸ್ಟ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಮೂರು ತಿಂಗಳ ಹಿಂದೆ, ‘ಇಂಡಿಯಾ ಅಪ್‌ಡೇಟ್’ ಹೆಸರಿನ ಯೂಟ್ಯೂಬ್ ಚಾನೆಲ್‌ನಲ್ಲಿ ಇದೇ ಪ್ರತಿಪಾದನೆಯೊಂದಿಗೆ ವಿಡಿಯೋ ವರದಿ ಪ್ರಸಾರವಾಗಿತ್ತು. ‘ಅಂತಿಮವಾಗಿ, ‘ಇವಿಎಂಗಳನ್ನು 20 ವರ್ಷಗಳವರೆಗೆ ನಿಷೇಧಿಸಲಾಗಿದೆ. ದೇಶದಲ್ಲಿ ಇನ್ನು ಮುಂದೆ ನಡೆಯುವ ಎಲ್ಲ ಚುನಾವಣೆಗಳಲ್ಲಿ ಇವಿಎಂ ಬಳಕೆ ಇರುವುದಿಲ್ಲ’ ಎಂದು ವರದಿಯಲ್ಲಿ ವಿವರಿಸಲಾಗಿತ್ತು. ಅದನ್ನು ಆಧಾರವಾಗಿಟ್ಟುಕೊಂಡು ಹಲವರು ಕೆಲವು ಪೋಸ್ಟ್‌ಗಳನ್ನು ಸೃಷ್ಠಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಅವುಗಳನ್ನು ನೆಟ್ಟಿಗರು ತಮ್ಮ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.

ಸತ್ಯಾಂಶ:

ಚುನಾವಣೆ ಹತ್ತಿರ ಬಂದಂತೆಲ್ಲ ವಿಪಕ್ಷಗಳು, ಸಾಮಾಜಿಕ ಕಾರ್ಯಕರ್ತರು, ತಜ್ಞರು ಇವಿಎಂಗಳ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಲೇ ಇದ್ದಾರೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ಹಿತಾಸಕ್ತಿಯಲ್ಲಿ ಇವಿಎಂಗಳು ನಿಖರವಾಗಿರಬೇಕು ಮತ್ತು ಅವುಗಳ ಪರಿಣಾಮಕಾರಿತ್ವದ ಬಗ್ಗೆ ಇರುವ ಸಂದೇಹಗಳನ್ನು ಮುಖ್ಯ ಚುನಾವಣಾ ಆಯುಕ್ತರು ಪರಿಹರಿಸಬೇಕು ಎಂಬ ಕೂಗು ಕೇಳಿಬರುತ್ತಿದೆ. ಈ ಮಧ್ಯೆ, ಇವಿಎಂ ನಿಷೇಧವೇ ಆಗಿಬಿಟ್ಟಿದೆ ಎಂಬ ಸುದ್ದಿಯನ್ನೂ ಕೆಲವರು ಹರಿಬಿಟ್ಟಿದ್ದಾರೆ. ಇದು ನಕಲಿ ಸುದ್ದಿ ಎಂದು ಕೇಂದ್ರ ಸರ್ಕಾರದ ಅಡಿಯಲ್ಲಿರುವ ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ (ಪಿಐಬಿ) ತಿಳಿಸಿದೆ.

‘ಇಂಡಿಯಾ ಅಪ್‌ಡೇಟ್’ ಎಂಬ ಯೂಟ್ಯೂಬ್ ಚಾನಲ್‌ನಲ್ಲಿ ಪ್ರಸಾರವಾಗಿರುವ ಸುದ್ದಿಗೆ ಯಾವುದೇ ಆಧಾರ ಇಲ್ಲ. ಇವಿಎಂ ಬಳಕೆಯನ್ನು ನಿರ್ಬಂಧಿಸುವ ಕುರಿತಂತೆ ಯಾವುದೇ ರೀತಿಯ ಪ್ರಕಟಣೆ ಹೊರಬಿದ್ದಿಲ್ಲ ಎಂದು ಪಿಐಬಿ ಸ್ಪಷ್ಟಪಡಿಸಿದೆ. ಇಂತಹ ಆಧಾರ ರಹಿತವಾದ ಪೋಸ್ಟ್‌ಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ಎಂದು ಜನರಲ್ಲಿ ಮನವಿ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ 20 ವರ್ಷಗಳವರೆಗೆ ಇವಿಎಂ ಬಳಕೆಗೆ ನಿಷೇಧ ಹೇರಲಾಗಿದೆ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾಗಿರುವ ಪೋಸ್ಟ್‌ ಸುಳ್ಳು ಎಂದು ಸ್ಪಷ್ಟವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗಿದೆ. ಹಲವಾರು ರಾಜಕೀಯ ಪಕ್ಷಗಳು ಹಾಗೂ ಪಕ್ಷಗಳ ಕಾರ್ಯಕರ್ತರು ತಮ್ಮ ನಾಯಕರನ್ನು ಅತ್ಯುತ್ತಮರೆಂದು ಬಿಂಬಿಸುವ ಉದ್ದೇಶದಿಂದ ಮತ್ತು ಇತರ ರಾಜಕಾರಣಿಗಳನ್ನು ಉತ್ತಮರಲ್ಲವೆಂದು ಪ್ರಚಾರ ಮಾಡಲು ಸುಳ್ಳು ಸುದ್ದಿಗಳು, ನಕಲಿ ಅಥವಾ ತಿರುಚಿದ ಚಿತ್ರಗಳನ್ನು ಹಂಚಿಕೊಳ್ಳುವುದು ಹೆಚ್ಚಾಗಿ ನಡೆಯುತ್ತದೆ. ಇಂತಹ ಸಮಯದಲ್ಲಿ ಸತ್ಯವನ್ನು ಅರಿಯುವುದು ಮುಖ್ಯ. ನಿಮಗೆ ಯಾವುದೇ ಸುಳ್ಳು ಸುದ್ದಿಗಳು ಕಂಡುಬಂದಲ್ಲಿ [email protected]ಗೆ ಮೇಲ್‌ ಮಾಡಿ. ಸತ್ಯಶೋಧನೆಗೆ ಸಹಕರಿಸಿದೆ.

ಕೃಪೆ: ಏನ್‌ಸುದ್ದಿ.ಕಾಮ್

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ಡಿಕೆಶಿ ಜೈಲಿಗೆ ಹೋಗೋದು ಖಚಿತ: ಈಶ್ವರಪ್ಪ

ಲೋಕಸಭಾ ಚುನಾವಣೆಗೂ ಮುನ್ನ ಅಥವಾ ನಂತರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಜೈಲಿಗೆ...

ಸಿಎಂ ಕಚೇರಿಯ ಗಮನ ಸೆಳೆದ ಉಳ್ಳಾಲ ನಗರಸಭೆಯ ಕಸದ ವಾಹನ: ವಿಡಿಯೋ ವೈರಲ್

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇತ್ತೀಚೆಗೆ(ನ.27) ನಡೆಸಿದ ಜನಸ್ಪಂದನಕ್ಕೆ ಅಭೂತಪೂರ್ವವಾದ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸತತ...

ಮೈತ್ರಿ ಕಗ್ಗಂಟು | ಪ್ರತಾಪ್ ಸಿಂಹಗೆ ಬಿಜೆಪಿ ಟಿಕೆಟ್ ಸಿಗುವುದೇ ಡೌಟು!

ಲೋಕಸಭಾ ಚುನಾವಣೆಗಾಗಿ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಮಾಡಿಕೊಂಡಿವೆ. ರಾಜ್ಯದಲ್ಲಿ...

ಹೆಚ್ಚುವರಿಯಾಗಿ 188 ಇಂದಿರಾ ಕ್ಯಾಂಟೀನ್ ಸ್ಥಾಪನೆ: ಸಿದ್ದರಾಮಯ್ಯ ಭರವಸೆ

ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಹೇಳಿಕೆ ಸ್ಥಳದ ಅಭಾವವಿರುವ...