ನಮ್ಮ ಬಗ್ಗೆಯೂ ತನಿಖೆ ಮಾಡಿ, ಆದರೆ ಮೊದಲು ತಾವು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಿ: ಬಿ ವೈ ವಿಜಯೇಂದ್ರ

Date:

ಮುಖ್ಯಮಂತ್ರಿಗಳೇ ನೀವು ಅಹಿಂದ ಹೆಸರು ಹೇಳಿ ಅಧಿಕಾರಕ್ಕೆ ಬಂದವರು. ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ ಆದುದನ್ನು ಒಪ್ಪಿಕೊಂಡಿದ್ದೀರಿ. ತಮ್ಮ ಸಂಪುಟದ ಸಚಿವರಾಗಿದ್ದವರು ಇವತ್ತು ಇ.ಡಿ. ಕಸ್ಟಡಿಯಲ್ಲಿದ್ದಾರೆ. ಹಣಕಾಸು ಇಲಾಖೆಯ ಅನುಮತಿ ಇಲ್ಲದೆ ಇಂತಹ ಹಗರಣ ನಡೆಯಲು ಅಸಾಧ್ಯ. ತಾವು ಗೌರವಯುತವಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಿ ಎಂದು ವಿನಂತಿ ಮಾಡುತ್ತಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.

- Advertisement -

ಬಳ್ಳಾರಿಯಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, “ವಾಲ್ಮೀಕಿ ನಿಗಮದ ಹಣ ದೋಚಿ ಆ ಹಣದಿಂದ ಹೆಂಡ ಖರೀದಿಸಿ, ಬಳ್ಳಾರಿ ಮತ್ತಿತರ ಕಡೆ ಚುನಾವಣೆ ವೇಳೆ ಬಳಸಿದ್ದಾರೆ. ಅಲ್ಲದೆ, ಹೊರರಾಜ್ಯಗಳಲ್ಲೂ ಬಳಸಿದ್ದಾರೆ ಎಂದು ಇ.ಡಿ. ಹೇಳಿದೆ. ಹಾಗಿದ್ದರೆ ಇದೆಲ್ಲದಕ್ಕೂ ಕೇವಲ ಅಧಿಕಾರಿಗಳು ಹೊಣೆಗಾರರೇ” ಎಂದು ಕೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ...

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ. ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

“ಅಸಮರ್ಥ ಸಿಎಂ ಇದ್ದರೆ ಅಥವಾ ಸಚಿವರ, ಸಿಎಂ ಮೌಖಿಕ ಒಪ್ಪಿಗೆ ಇದ್ದರೆ ಮಾತ್ರ ವಾಲ್ಮೀಕಿ ನಿಗಮದ ಹಣ ದುರುಪಯೋಗದಂತಹ ಭ್ರಷ್ಟಾಚಾರದ ಹಗರಣ ನಡೆಯಲು ಸಾಧ್ಯ” ಎಂದರು.

“ಅಸ್ತಿತ್ವವೇ ಇಲ್ಲದ ಕಂಪೆನಿ ಹೆಸರಿಗೆ ಹಣ ವರ್ಗಾವಣೆ ಮಾಡಿ, ಅದನ್ನು ವಿತ್‍ಡ್ರಾ ಮಾಡಿ ಹಗರಣ ಮಾಡಿದ್ದಾರೆ. ಬಿಜೆಪಿ ಸರಕಾರದ ಹಗರಣಗಳ ತನಿಖೆ ಮಾಡುವುದಾಗಿ ಸಿಎಂ ಹೇಳಿದ್ದಾರೆ. ಯಾರು ನಿಮ್ಮನ್ನು ತಡೆಯುತ್ತಿದ್ದಾರೆ? ಯಾವುದೇ ಹಗರಣ ಇದ್ದರೂ ತನಿಖೆ ಮಾಡಿ. ಆದರೆ, ನಮ್ಮ ಪ್ರಶ್ನೆಗೆ ಮೊದಲು ಸಿಎಂ ಉತ್ತರಿಸಬೇಕು. ತಾವೇ ಹಣಕಾಸಿನ ಸಚಿವರಾದ ಕಾರಣ ಈ ಹಗರಣಕ್ಕೆ ಸಂಬಂಧಿಸಿ ರಾಜೀನಾಮೆ ಕೊಡಬೇಕು” ಎಂದು ಆಗ್ರಹಿಸಿದರು.

ಹಗರಣದಲ್ಲಿ ದೊಡ್ಡ ದೊಡ್ಡ ಹೆಸರುಗಳು

“ಚಂದ್ರಶೇಖರ್ ಅವರು ಆತ್ಮಹತ್ಯೆ ಮಾಡಿಕೊಂಡ ಸುಮಾರು 2 ತಿಂಗಳ ಬಳಿಕ ನಿನ್ನೆ 25 ಲಕ್ಷ ಪರಿಹಾರ ಘೋಷಿಸಿದ್ದಾರೆ. ಬಿಜೆಪಿ ಈ ವಿಚಾರದಲ್ಲಿ ನಿರಂತರವಾಗಿ ಆಗ್ರಹಿಸುತ್ತ ಬಂದಿತ್ತು ಎಂದರು. ವಾಲ್ಮೀಕಿ ನಿಗಮದ ಹಗರಣದಲ್ಲಿ ದೊಡ್ಡ ದೊಡ್ಡ ಹೆಸರುಗಳು ಕೇಳಿಬರುತ್ತಿದೆ. ಕೇವಲ ನಾಗೇಂದ್ರ ರಾಜೀನಾಮೆ, ಅವರ ಕಸ್ಟಡಿಗೆ ಈ ಹಗರಣ ಮುಗಿಯುವುದಿಲ್ಲ” ಎಂದು ವಿಜಯೇಂದ್ರ ತಿಳಿಸಿದರು.

“ಲ್ಯಾಂಬೊರ್ಗಿನಿ, ಬೆಂಝ್ ಕಾರನ್ನು ವಾಪಸ್ ಕೊಟ್ಟು ಹಣ ತರುವುದಾಗಿ ಹೇಳಿದ್ದಾರೆ. ಅದನ್ನು ನಿಮ್ಮಲ್ಲಿರುವ ಯಾರಿಗೋ ಗಿಫ್ಟ್ ಕೊಡಲು ಖರೀದಿ ಮಾಡಿರಬಹುದಲ್ಲವೇ? ಕದ್ದ ಮಾಲು ವಾಪಸ್ ಬಂದಿದೆ ಎಂದ ಮಾತ್ರಕ್ಕೆ ಬಚಾವಾಗಲು ಸಾಧ್ಯವಿಲ್ಲ. ದುಡ್ಡನ್ನು ಚುನಾವಣೆಗೆ ಬಳಸಿದ್ದಾರೆ. ಸತ್ಯನಾರಾಯಣ ವರ್ಮ ಮನೆಯಲ್ಲಿ 12 ಕೋಟಿ ಸಿಕ್ಕಿದೆ. ಆ ಕುರಿತು ನನಗೇನೋ ಇವತ್ತಿಗೂ ಅನುಮಾನವಿದೆ” ಎಂದರು.

“ಇ.ಡಿ., ಸಿಬಿಐ ಮೂಲಕ ಸರಕಾರ ಅಭದ್ರಗೊಳಿಸುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ ಎಂದು ಸಿಎಂ ಹೇಳುತ್ತಾರೆ. ಹಿಂದುಳಿದ ವರ್ಗಗಳ ಮುಖ್ಯಮಂತ್ರಿಯ ಸ್ಥಾನ ಅಭದ್ರಗೊಳಿಸುವುದೆಂದು ಯಾಕೆ ಭಾವಿಸುತ್ತೀರಿ? ಭ್ರಷ್ಟಾಚಾರ ಎಂದರೆ ಅದು ಭ್ರಷ್ಟಾಚಾರ ತಾನೇ” ಎಂದು ಪ್ರಶ್ನಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜೀವರಕ್ಷಕ ಔಷಧಗಳ ಬೆಲೆ ನಿಯಂತ್ರಣ: ತ್ವರಿತ ಕ್ರಮ ಜಾರಿಗೊಳಿಸಲು ಕೇಂದ್ರಕ್ಕೆ ರಾಜ್ಯದ ಒತ್ತಾಯ

ಕ್ಯಾನ್ಸರ್ ಔಷಧಿಗಳು ಸೇರಿದಂತೆ ಅತ್ಯಗತ್ಯ ಔಷಧಗಳ ಮೇಲೆ ವಿಧಿಸಲಾಗುತ್ತಿರುವ ಹೆಚ್ಚಿನ ದರದ...

ಸಿಜೆಪಿ ಪ್ರತಿಭಟನೆ ವೇಳೆ ವಕೀಲರ ಬಂಧನ: ಮಧ್ಯಪ್ರವೇಶಿಸಿ ಬಿಡುಗಡೆಗೆ ಸೂಚಿಸಿದ ಸುಪ್ರೀಂ ಕೋರ್ಟ್

ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ನ್ಯಾಯಮೂರ್ತಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ...

ದೆಹಲಿ ಸಿಜೆಪಿ ಹೋರಾಟಕ್ಕೆ ಎಸ್‌ಐಆರ್ ವಿರೋಧಿ ಒಕ್ಕೂಟ ಬೆಂಬಲ: ರಾಜ್ಯಾದ್ಯಂತ ಪಂಜಿನ ಮೆರವಣಿಗೆಗೆ ಕರೆ

ಏಕಪಕ್ಷೀಯ ನಿರ್ಧಾರ ಕೈಗೊಂಡಿರುವ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆಗೆ...

ಪ್ರತಿಭಟನೆಗೆ ವಾಂಗ್‌ಚುಕ್ ಬೆಂಬಲ: ಲಡಾಖ್‌ನ ‘ನೀರಿನ ಜೈವಿಕ ಬಾಂಬ್‌ಗಳ’ ಕಡೆಗೆ ಗಮನ ಹರಿಸಲು ಮನವಿ

ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಜಂತರ್ ಮಂತರ್‌ನಲ್ಲಿ ಆಯೋಜಿಸಲಾಗಿರುವ ಬೃಹತ್...