ನೀತಿ ಸಂಹಿತೆ ಉಲ್ಲಂಘನೆ | ಮೋದಿ ವಿರುದ್ಧ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗ ಹೆದರುತ್ತದೆಯೇ; ಮಾಜಿ ಐಎಎಸ್ ಅಧಿಕಾರಿ ಪ್ರಶ್ನೆ

Date:

Advertisements

ಲೋಕಸಭೆ ಚುನಾವಣೆಗೆ ಇನ್ನು ಮೂರು ವಾರಗಳಷ್ಟೇ ಬಾಕಿ ಇರುವಾಗ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗ ಎದರುತ್ತಿದೆಯೇ ಎಂದು ಮಾಜಿ ಐಎಎಸ್ ಅಧಿಕಾರಿ ಇಎಎಸ್ ಶರ್ಮಾ ಪ್ರಶ್ನಿಸಿದ್ದಾರೆ.

ಮೋದಿ ಅವರು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವ ಬಗ್ಗೆ ಶರ್ಮಾ ಅವರು ಭಾರತೀಯ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಆದರೆ, ತಮ್ಮ ಪತ್ರಕ್ಕೆ ಆಯೋಗ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಅವರು ಆರೋಪಿಸಿದ್ದಾರೆ.

“ಪ್ರಧಾನಿ ಮೋದಿ ತಮ್ಮ ಇತ್ತೀಚಿನ ಭಾಷಣದಲ್ಲಿ ಚುನಾವಣಾ ಪ್ರಚಾರದ ನಿಯಮವನ್ನು ಉಲ್ಲಂಘಿಸಿದ್ದಾರೆ. ಚುನಾವಣಾ ಆಯೋಗ ಸ್ವತಂತ್ರವಾಗಿ ಕೆಲಸ ಮಾಡಲು ಹೆದರುತ್ತದೆಯೇ? ಮೋದಿ ವಿರುದ್ಧ ಕ್ರಮಕೈಗೊಳ್ಳಲು ಚುನಾವಣಾ ಆಯೋಗ ಹೆದರುತ್ತದೆಯೇ” ಎಂದು ಪ್ರಶ್ನಿಸಿದ್ದಾರೆ.

Advertisements

ಇದನ್ನು ಓದಿದ್ದೀರಾ?   ಪುರೋಹಿತ ಕೂಡಾ ಸಿಎಎ ಅರ್ಹತಾ ಪ್ರಮಾಣಪತ್ರ ನೀಡಬಹುದೆಂದ ಸರ್ಕಾರಿ ಸಹಾಯವಾಣಿ!

ಇತ್ತೀಚೆಗೆ ತಮಿಳುನಾಡಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮೋದಿ ಮಾಡಿದ ಭಾಷಣದ ಬಗ್ಗೆ ಶರ್ಮಾ ಶುಕ್ರವಾರ (ಮಾರ್ಚ್ 22) ಆಯೋಗಕ್ಕೆ ದೂರು ಸಲ್ಲಿಸಿದ್ದರು. ಬಿಜೆಪಿ ಜಾಥಾದಲ್ಲಿ ಭಾಷಣ ಮಾಡಿದ್ದ ನರೇಂದ್ರ ಮೋದಿ, “ಇಂಡಿಯಾ ಒಕ್ಕೂಟ ಹಿಂದು ಧರ್ಮ ನಂಬುವ ಶಕ್ತಿಯನ್ನು ನಾಶಮಾಡಲು ಬಯಸುತ್ತದೆ. ಹಿಂದೂ ಧರ್ಮದಲ್ಲಿ ಶಕ್ತಿ ಎಂದರೇನು ಎಂಬುದು ಸಮಸ್ತ ತಮಿಳುನಾಡಿಗರಿಗೂ ತಿಳಿದಿದೆ. ತಮಿಳುನಾಡಿನಲ್ಲಿ ದೇವರು ಮತ್ತು ದೇವತೆಗಳ ಹಲವಾರು ಮಂದಿರಗಳಿದೆ. ಆದರೆ, ತಮಿಳುನಾಡಿನಲ್ಲಿ ದೇವರು ಮತ್ತು ದೇವತೆಗಳ ವಿಚಾರದಲ್ಲಿ ಹಲವಾರು ಜನರು ಪದೇಪದೇ ಉದ್ದೇಶಪೂರ್ವಕವಾಗಿ ಹಿಂದು ಧರ್ಮವನ್ನು ಅವಮಾನಿಸುತ್ತಿದ್ದಾರೆ” ಎಂದು ಹೇಳಿದ್ದರು.

ಆದರೆ ಪ್ರಧಾನಿ ಮೋದಿಯ ಈ ಧರ್ಮಾಧಾರಿತ ಹೇಳಿಕೆ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತದೆ. ಚುನಾವಣೆ ಸಮಯದಲ್ಲಿ ರಾಜಕಾರಣಿಗಳು ಧಾರ್ಮಿಕ ಭಾವನೆಗಳನ್ನು ಪ್ರಚೋದಿಸುವುದು ಮಾದರಿ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ ಎಂದು ಶರ್ಮಾ ಹೇಳಿದ್ದಾರೆ. ಅವರ ಧರ್ಮಾಧಾರಿತ ಭಾಷಣ ನಿಜವಾಗಿದ್ದರೆ ಕ್ರಮ ಕೈಗೊಳ್ಳಬೇಕು ಎಂದು ಶರ್ಮಾ ಒತ್ತಾಯಿಸಿದ್ದಾರೆ.

ಇದನ್ನು ಓದಿದ್ದೀರಾ?  ಸಿಎಂ ವಿರುದ್ಧ ಸುಳ್ಳು ಸುದ್ದಿ ಪ್ರಸಾರ: ಅರ್ನಬ್ ಗೋಸ್ವಾಮಿ, ಆರ್.‌ಕನ್ನಡ ಸಂಪಾದಕರ ವಿರುದ್ಧ ಎಫ್‌ಐಆರ್

ಇನ್ನು ತನ್ನ ಪತ್ರಕ್ಕೆ ಪ್ರತಿಕ್ರಿಯಿಸದ ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡಿರುವ ಶರ್ಮಾ, ಹತ್ತು ಪ್ರಶ್ನೆಗಳನ್ನು ಆಯೋಗದ ಮುಂದಿರಿಸಿದ್ದಾರೆ.

1. ಮತದಾರರ ಧಾರ್ಮಿಕ ಭಾವನೆ ಕೆರಳಿಸಿ ತನ್ನ ಪಕ್ಷಕ್ಕೆ ಮತ ಚಲಾಯಿಸುವಂತೆ ರಾಜಕಾರಣಿಗಳು ಮನವಿ ಮಾಡಿದರೆ ಅದನ್ನು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಎಂದು ಚುನಾವಣಾ ಆಯೋಗ ಪರಿಗಣಿಸುತ್ತದೆಯೇ?
2. ನನ್ನಂತಹ ಸಾಮಾನ್ಯ ನಾಗರಿಕ, ಮತದಾರ ನೀಡಿದ ದೂರಿನ ಆಧಾರದಲ್ಲಿ ಕ್ರಮಕೈಗೊಳ್ಳುವ ಅಗತ್ಯವಿಲ್ಲ. ಸಾಮಾನ್ಯ ಮತದಾರರ ದೂರನ್ನು ಸುಲಭವಾಗಿ ನಿರ್ಲಕ್ಷಿಸಬಹುದು ಎಂದು ಆಯೋಗ ಭಾವಿಸುತ್ತದೆಯೇ?
3. ಪ್ರಧಾನಿ ನರೇಂದ್ರ ಮೋದಿ ಮಾದರಿ ನೀತಿ ಸಂಹಿತೆ ವ್ಯಾಪ್ತಿಯಲ್ಲಿಲ್ಲ. ಆದ್ದರಿಂದಾಗಿ ಆಯೋಗಕ್ಕೆ ಅಥವಾ ಸಾರ್ವಜನಿಕರಿಗೆ ಉತ್ತರಿಸಲ್ಲ ಎಂದು ಚುನಾವಣಾ ಆಯೋಗ ನಂಬಿದೆಯೇ?
4. ಪ್ರದಾನಿ ಮೋದಿಯವರಿಗೊಂದು ಮತ್ತು ಉಳಿದವರಿಗೆ ಬೇರೆ ಬೇರೆ ಚುನಾವಣಾ ಪ್ರಕ್ರಿಯೆ ನಿಯಮ ಇದೆಯೇ?
5. ನಾನು ನೀಡಿದ ದೂರಿನ ಆಧಾರದಲ್ಲಿ ಕ್ರಮಕೈಗೊಳ್ಳುವ ನಿರ್ಧಾರವನ್ನು ಆಯೋಗ ಮಾಡಿದೆಯೇ ಅಥವಾ ಸಂಪೂರ್ಣವಾಗಿ ನಿರ್ಲಕ್ಷಿಸಲು ನಿರ್ಧಾರ ಮಾಡಿದೆಯೇ?
6. ಆಯೋಗ ಸ್ವತಂತ್ರ ಮೂಲಗಳಿಂದ ನನ್ನ ದೂರಿಗೆ ಸಂಬಂಧಿಸಿದ ವಿಷಯವನ್ನು ಖಚಿತಪಡಿಸಿಕೊಂಡು ನನ್ನ ದೂರಿನ ಮೇಲೆ ತಕ್ಷಣದ ಆದೇಶ ನೀಡಿದೆಯೇ? ಹಾಗಿದ್ದಲ್ಲಿ ಆಯೋಗ ಅದನ್ನು ಬಹಿರಂಗಪಡಿಸಬಹುದೇ?
7. ಈ ದೂರಿನ ಬಗ್ಗೆ ಮೂವರು ಕಮಿಷನರ್‌ಗಳ ನಡುವೆ ಭಿನ್ನಾಭಿಪ್ರಾಯ ಇದೆಯೇ? ಹಾಗಿದ್ದರೆ ಭಿನ್ನಾಭಿಪ್ರಾಯದ ಅಭಿಪ್ರಾಯ ಸಾರ್ವಜನಿಕವಾಗಿ ಬಹಿರಂಗ ಯಾಕೆ ಮಾಡುವುದಿಲ್ಲ?
8. ಆಡಳಿತ ನಡೆಸುವವರಿಂದ ನೀವು ಆಯ್ಕೆಯಾಗಿ ಕಚೇರಿಯಲ್ಲಿರುವ ಕಾರಣ ನೀವು ನಿಮ್ಮ ಮುಖ್ಯಸ್ಥರಿಗೆ ಯಾವುದೇ ಮುಜುಗರ ಆಗದಂತೆ ನೋಡಿಕೊಳ್ಳುತ್ತಿದ್ದೀರಾ?
9. ಕೆಲವು ಕಾರಣದಿಂದಾಗಿ ನೀತಿ ಸಂಹಿತೆ ಜಾರಿ ಮಾಡಲು, ನನ್ನ ದೂರಿನ ಬಗ್ಗೆ ಸ್ವತಂತ್ರವಾಗಿ ತನಿಖೆ ನಡೆಸಲು ಹೆದರುತ್ತಿದ್ದೀರಾ?
10. ಆಯೋಗದ ಕಚೇರಿಗೆ ಆಗುವ ವೆಚ್ಚವನ್ನು ಸಾರ್ವಜನಿಕ ಖಜಾನೆಯಿಂದ ಭರಿಸಲಾಗುತ್ತದೆ. ಹಾಗಿರುವಾಗ ಆಯೋಗ ಸಾರ್ವಜನಿಕರಿಗೆ ಉತ್ತರ ನೀಡಲು ಜವಾಬ್ದಾರರಾಗಿರಬೇಕಲ್ಲವೇ?

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

Download Eedina App Android / iOS

X