ಇಸ್ರೇಲ್‌ | ನ್ಯಾಯಾಂಗದ ಪರೀಕ್ಷೆಯನ್ನು ನಿಲ್ಲಿಸುವಂತೆ ಅಧ್ಯಕ್ಷ ಐಸಾಕ್‌ ನೆತನ್ಯಾಹುಗೆ ಒತ್ತಾಯ

Date:

  • ರಕ್ಷಣಾ ಸಚಿವ ಗ್ಯಾಲಂಟ್‌ ವಜಾಗೊಳಿಸಿದ ನೆತನ್ಯಾಹು
  • ನೆತನ್ಯಾಹು ಯೋಜನೆ ವಿರೋಧಿಸಿ ಸಾವಿರಾರು ಮಂದಿ ಪ್ರತಿಭಟನೆ

ನ್ಯಾಯಾಂಗದ ವಿವಾದಾತ್ಮಕ ಕೂಲಂಕಷ ಪರೀಕ್ಷೆಯನ್ನು ತಕ್ಷಣವೇ ನಿಲ್ಲಿಸುವಂತೆ ಇಸ್ರೇಲ್‌ನ ಅಧ್ಯಕ್ಷ ಐಸಾಕ್‌ ಹೆರ್ಜೋಕ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹುಗೆ ಸೋಮವಾರ (ಮಾರ್ಚ್ 27) ಒತ್ತಾಯಿಸಿದ್ದಾರೆ.

“ಇಸ್ರೇಲ್ ಜನರ ಒಗ್ಗಟ್ಟಿನ ಸಲುವಾಗಿ, ಜವಾಬ್ದಾರಿಯ ಸಲುವಾಗಿ ನ್ಯಾಯಾಂಗದ ಪರೀಕ್ಷೆ ನಿಲ್ಲಿಸಿ” ಎಂದು ಅಧ್ಯಕ್ಷ ಐಸಾಕ್‌ ಹೇಳಿದ್ದಾರೆ.

ನ್ಯಾಯಾಂಗದ ಕೂಲಂಕಷ ಪರೀಕ್ಷೆ ಯೋಜನೆಯನ್ನು ಪ್ರಶ್ನಿಸಿದ ರಕ್ಷಣಾ ಸಚಿವರನ್ನು ನೆತನ್ಯಾಹು ಹಠಾತ್ತನೆ ವಜಾ ಮಾಡಿದ್ದರು. ನೆತನ್ಯಾಹು ಅವರ ನಿರ್ಧಾರದ ವಿರುದ್ಧ ಕ್ರೋಧಗೊಂಡು ಹತ್ತು ಸಾವಿರಕ್ಕೂ ಹೆಚ್ಚು ಜನರು ಸ್ವಯಂಪ್ರೇರಿತರಾಗಿ ಬೀದಿಗಿಳಿದು ಪ್ರತಿಭಟಿಸಿದ್ದಾರೆ. ಭಾನುವಾರ ರಾತ್ರಿ ಪ್ರತಿಭಟನಾಕಾರರು ಪ್ರಧಾನಿ ನಿವಾಸಕ್ಕೆ ಮುತ್ತಿಗೆ ಹಾಕಿದ ಹಿನ್ನೆಲೆಯಲ್ಲಿ ನೇತನ್ಯಾಹು ಮನೆಯಿಂದ ಹೊರಟು ರಹಸ್ಯ ಸುರಕ್ಷಿತ ಸ್ಥಳಕ್ಕೆ ಹೋಗಿ ನೆಲೆಸಿದ್ದಾರೆ.

ಶೀಘ್ರವೇ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿರುವ ನೆತನ್ಯಾಹು ತಮ್ಮ ಯೋಜನೆಯನ್ನು ಕೈಬಿಡುವ ಬಗ್ಗೆ ತಿಳಿಸುವ ಸಾಧ್ಯತೆಯಿದೆ ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ.

ಇಸ್ರೇಲ್‌ನಲ್ಲಿ ಆಂತರಿಕ ಬಿಕ್ಕಟ್ಟು

ನ್ಯಾಯಾಂಗದ ಕೂಲಂಕಷ ಪರೀಕ್ಷೆಯ ಯೋಜನೆ ಇಸ್ರೇಲ್‌ನಲ್ಲಿ ಗಂಭೀರ ಆಂತರಿಕ ಬಿಕ್ಕಟ್ಟು ಸೃಷ್ಟಿಸಿದೆ. ವ್ಯಾಪಾರಿ ಮುಖಂಡರು, ಕಾನೂನು ಅಧಿಕಾರಿಗಳು ಮತ್ತು ದೇಶದ ಮಿಲಿಟರಿ ನೆತನ್ಯಾಹು ಅವರ ನಿರ್ಧಾರವನ್ನು ವಿರೋಧಿಸಿದ್ದಾರೆ.

ಇಸ್ರೇಲ್ ರಾಜಧಾನಿ ಟೆಲ್ ಅವಿವ್‌ನಲ್ಲಿ ಪ್ರತಿಭಟನಾಕಾರರು ನೀಲಿ ಮತ್ತು ಬಿಳಿ ಇಸ್ರೇಲಿ ಧ್ವಜಗಳನ್ನು ಹಿಡಿದು ಭಾನುವಾರ (ಮಾರ್ಚ್‌ 26) ತಡರಾತ್ರಿ ಮುಖ್ಯ ಹೆದ್ದಾರಿ ತಡೆದು ಪ್ರತಿಭಟಿಸಿದರು. ಜೆರುಸಲೆಮ್‌ನಲ್ಲಿರುವ ನೆತನ್ಯಾಹು ಅವರ ನಿವಾಸದ ಎದುರು ಭಾರೀ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಸೇರಿದ್ದರು. ಇವರನ್ನು ತಡೆಯಲು ಪೊಲೀಸರು ಮುಂದಾದರು. ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

ಒಂದು ತಿಂಗಳ ಧೀರ್ಘ ಪ್ರತಿಭಟನೆ

ನ್ಯಾಯಾಂಗವನ್ನು ಕೂಲಂಕಷವಾಗಿ ಪರಿಶೀಲಿಸುವ ನೆತನ್ಯಾಹು ಅವರ ಯೋಜನೆಯ ವಿರುದ್ಧ ಒಂದು ತಿಂಗಳಿನಿಂದ ಪ್ರತಿಭಟನೆ ನಡೆಯುತ್ತಿದೆ. ದೇಶದಲ್ಲಿ ಹಲವೆಡೆ ಸಾಮೂಹಿಕ ಪ್ರತಿಭಟನೆಗಳು ಉಂಟಾಗಿವೆ. ಅಮೆರಿಕ ಹಾಗೂ ಇತರ ಮಿತ್ರ ರಾಷ್ಟ್ರಗಳು ನೆತನ್ಯಾಹು ಅವರ ನಿರ್ಧಾರದ ಬಗ್ಗೆ ಕಳವಳ ವ್ಯಕ್ತಪಡಿಸಿವೆ.

ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರು ನೆತನ್ಯಾಹು ಅವರ ನೂತನ ಯೋಜನೆಯನ್ನು ವಿರೋಧಿಸಿದ್ದರು. ಆಡಳಿತಾರೂಢ ಲಿಕುಡ್ ಪಕ್ಷದ ವಿರುದ್ಧ ಹಿರಿಯ ಸದಸ್ಯ ಗ್ಯಾಲಂಟ್ ಮಾತನಾಡಿದ್ದರು. ಯೋಜನೆಗಳು ಮಿಲಿಟರಿಯನ್ನು ದುರ್ಬಲಗೊಳಿಸಲು ಬೆದರಿಕೆ ಹಾಕುವಂತಿವೆ ಎಂದು ಯೋವ್‌ ಗ್ಯಾಲಂಟ್‌ ಹೇಳಿದ್ದರು.

ನ್ಯಾಯಾಂಗ ಕೂಲಂಕಷ ಪರಿಶೀಲನೆಯ ಯೋಜನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದರೆ ಪಕ್ಷವು ಅವರನ್ನು ಬೆಂಬಲಿಸುತ್ತದೆ ಎಂದು ಸಂಸ್ಕೃತಿ ಸಚಿವ ಮಿಕ್ಕಿ ಜೋಹರ್ ಹೇಳಿದ್ದಾರೆ.

ನೆತನ್ಯಾಹು ಅವರ ಒಕ್ಕೂಟದ ನಾಯಕರು ಸೋಮವಾರ ಬೆಳಿಗ್ಗೆ ಸಭೆ ಸೇರಲಿದ್ದಾರೆ ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ. ದಿನದ ನಂತರ ಜೆರುಸಲೆಮ್‌ನಲ್ಲಿರುವ ಸಂಸತ್ತಿನ ಹೊರಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಒಕ್ಕೂಟದ ನಾಯಕರು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರು ಶನಿವಾರ (ಮಾರ್ಚ್‌ 25) ನೆತನ್ಯಾಹು ಅವರ ಯೋಜನೆ ವಿರೋಧಿಸಿದ್ದರು. “ನಮ್ಮ ದೇಶದ ಸಲುವಾಗಿ ನಾನು ಯಾವುದೇ ಬೆಲೆ ಪಾವತಿಸಲು ಸಜ್ಜಾಗಿದ್ದೇನೆ” ಎಂದು ದೂರದರ್ಶನದ ಭಾಷಣದಲ್ಲಿ ಗ್ಯಾಲಂಟ್‌ ಹೇಳಿದ್ದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೆಣ್ಣು ಭ್ರೂಣ ಹತ್ಯೆ ಪ್ರಕರಣ | ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಚಲುವರಾಯಸ್ವಾಮಿ

ಒಂದು ಜಿಲ್ಲೆಗೆ ಸೀಮಿತವಾಗಿಲ್ಲ, ಎರಡು ಮೂರು ಜಿಲ್ಲೆಗೆ ಸೇರಿದೆ ಸಿ.ಐ.ಡಿಗೆ...

ಶಾಸಕರ ಮತ್ತು ಸಚಿವರ ಸಮಸ್ಯೆಗಳಿಗೆ ಕೊನೆ ಇಲ್ಲ: ಸತೀಶ ಜಾರಕಿಹೊಳಿ

ಸಮಸ್ಯೆಗಳು ಒಮ್ಮೆಗೆ ಬಗೆಹರಿಯಲೂ ಸಾಧ್ಯವಿಲ್ಲ ಬಿ ಆರ್ ಪಾಟೀಲ್‌ಗೆ ಏನೋ...

ಟೆಕ್‌ ಸಮ್ಮಿಟ್‌ | ಕೌಶಲ್ಯಾಧಾರಿತ ಪಠ್ಯಕ್ರಮ ಇಂದಿನ ಅಗತ್ಯ: ಸಚಿವ ಎಂ.ಸಿ. ಸುಧಾಕರ್

ಬೋಧನಾಧಾರಿತ ಕಲಿಕೆಗಿಂತ ಕೌಶಲ್ಯಾಧಾರಿತ ಪಠ್ಯಕ್ರಮ ಇಂದಿನ ಅಗತ್ಯ. ಹಾಗಾಗಿ, ಅದಕ್ಕೆ ಪೂರಕವಾದ...