ಕಲಾತಂಡದೊಂದಿಗೆ ಕಚೇರಿ ಪೂಜೆ ನೆರವೇರಿಸಿ ಗಮನ ಸೆಳೆದ ಸಚಿವ ಶಿವರಾಜ್ ತಂಗಡಗಿ

Date:

  • ಕೊಠಡಿ ಪೂಜೆಯಲ್ಲಿ ವಿಭಿನ್ನತೆ ಮೆರೆದ ಕನ್ನಡ ಸಂಸ್ಕೃತಿ ಇಲಾಖೆ ಸಚಿವ
  • ಹಾರ, ತುರಾಯಿ ಬದಲು ಪುಸ್ತಕ ಉಡುಗೊರೆ ಕೊಡುವಂತೆ ತಿಳಿಸಿದ ಸಚಿವ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಇಂದು ತಮ್ಮ ವಿಧಾನಸೌಧ ಕಚೇರಿ ಪೂಜೆಯನ್ನು ವಿಭಿನ್ನವಾಗಿ ಆಚರಿಸಿ ಗಮನ ಸೆಳೆದರು.

ಬುಧವಾರ ವಿಧಾನಸೌಧದ ತಮ್ಮ ಕೊಠಡಿ ಪೂಜೆ ಕಾರ್ಯಕ್ರಮ ಹಮ್ಮಿಕೊಂಡಿದ್ದ ಅವರು, ಸಾಂಸ್ಕೃತಿಕ ಕಲಾತಂಡದ ಜೊತೆ ಕೊಠಡಿ ಪ್ರವೇಶಿಸಿ, ಇಲಾಖೆ ವಿಚಾರದಲ್ಲಿನ ತಮ್ಮ ಬದ್ದತೆ ಹಾಗೂ ಕಾಳಜಿ ಮೆರೆದಿದ್ದಾರೆ.

ಬಳಿಕ ಇದೇ ತಂಡಗಳೊಡಗೂಡಿ ಸಾಂಪ್ರದಾಯಿಕ ಸಂಪ್ರದಾಯದಂತೆ ದೇವರ ಪೂಜೆ ನೆರವೇರಿಸಿ ಕಚೇರಿ ಕಾರ್ಯಾಚರಣೆಯನ್ನು ಅಧಿಕೃತಗೊಳಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ವಿಭಿನ್ನ ಪೂಜಾಕಾರ್ಯಕ್ರಮಕ್ಕೆ ಚಿತ್ರದುರ್ಗದ ಭೋವಿ ಪೀಠದ ಪೀಠಾಧ್ಯಕ್ಷರಾದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿ ಹಾಗೂ ಸಚಿವರ ಕುಟುಂಬವರ್ಗ ಮತ್ತು ಕೆಲಸಚಿವರು, ಅಧಿಕಾರಿಗಳು ಸಾಕ್ಷಿಯಾದರು.

ಈ ಸುದ್ದಿ ಓದಿದ್ದೀರಾ?:ಮಾಜಿ ಪ್ರಧಾನಿ ದೇವೇಗೌಡಗೆ ಕಸಾಪ ʻಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿʼ

ಇನ್ನು ತಮ್ಮ ಭೇಟಿಗೆ ಬಂದವರೆಲ್ಲರಿಗೂ ಸಚಿವ ತಂಗಡಗಿ, ಪುಷ್ಪಗುಚ್ಚ ಹಾರ ಸ್ಮರಣಿಕೆ ಇತ್ಯಾದಿಗಳ ಬದಲು ಕೇವಲ ಪುಸ್ತಕಗಳನ್ನೇ ಉಡುಗೊರೆಯಾಗಿ ನೀಡಬೇಕೆಂದು ಮನವಿ ಮಾಡಿದ್ದು ಎಲ್ಲರ ಗಮನ ಸೆಳೆದಿತ್ತು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಜ್ವಲ್‌ ರೇವಣ್ಣ ಪಾಸ್‌ಪೋರ್ಟ್ ರದ್ದುಗೊಳಿಸಲು ಪ್ರಕ್ರಿಯೆ ಆರಂಭ: ಸಚಿವ ಪರಮೇಶ್ವರ್‌

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಪಾಸ್‌ಪೋರ್ಟ್ ರದ್ದುಗೊಳಿಸುವ ಕುರಿತು ನಾವು...

ಬೆಂಗಳೂರು | ಪ್ರಭುದ್ಯಾ ಕೊಲೆ ಪ್ರಕರಣ; 2 ಸಾವಿರಕ್ಕಾಗಿ ಕೊಲೆಗೈದು ಆತ್ಮಹತ್ಯೆ ಎಂದು ಬಿಂಬಿಸಿದ ಅಪ್ರಾಪ್ತ

ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದ ಸಾವು ಪ್ರಕರಣದಲ್ಲಿ ಬೆಂಗಳೂರಿನ ಸುಬ್ರಹ್ಮಣ್ಯಪುರ...

ಯತೀಂದ್ರ ಅವರನ್ನು ಎಂಎಲ್​ಸಿ ಮಾಡುವುದಾಗಿ ಹೈಕಮಾಂಡ್​ ಹೇಳಿದೆ: ಸಿದ್ದರಾಮಯ್ಯ

ಯತೀಂದ್ರ ಸಿದ್ದರಾಮಯ್ಯ ಅವರನ್ನು ಹೈಕಮಾಂಡ್​​ನವರು ಎಂಎಲ್​ಸಿ ಮಾಡುವುದಾಗಿ ಹೇಳಿದ್ದರು. ಕಾದು ನೋಡಬೇಕು....