ಸರ್ಕಾರಕ್ಕೆ ಸಂಬಂಧಿಸಿದ ಆನ್‌ಲೈನ್ ಕಮೆಂಟ್‌ಗಳು, ಸುದ್ದಿ ವರದಿಗಳು ಅಥವಾ ಅಭಿಪ್ರಾಯಗಳನ್ನು ಪರಿಶೀಲಿಸುವ ಫ್ಯಾಕ್ಟ್‌ಚೆಕ್ ವಿಭಾಗ, ಸೆನ್ಸಾರ್‌ಶಿಪ್ ಮಾಡಲು ಸಂಬಂಧಿಸಿದ ವೇದಿಕೆಗಳಿಗೆ ಸೂಚಿಸುತ್ತದೆ.
ಕೇಂದ್ರ ಸರ್ಕಾರದ ಗಜೆಟ್ ನೋಟಿಫಿಕೇಶನ್‌ನಲ್ಲಿ ಏಪ್ರಿಲ್ 6ರಂದು ಡಿಜಿಟಲ್ ಮಾಧ್ಯಮಗಳ ಮೇಲೆ ಹೊಸ ಸೆನ್ಸಾರ್‌ಶಿಪ್ ಶಕ್ತಿ ಹುಟ್ಟಿಕೊಂಡಿತು. ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಒತ್ತಾಸೆಯಲ್ಲಿ ಮಾಹಿತಿ ತಂತ್ರಜ್ಞಾನ (ಮಧ್ಯಂತರ ಮಾರ್ಗದರ್ಶಿಗಳು ಮತ್ತು ಡಿಜಿಟಲ್ ಮಾಧ್ಯಮ ನೈತಿಕ ನೀತಿ ಸಂಹಿತೆ) ತಿದ್ದುಪಡಿ ನಿಯಮಗಳು 2023 (ಅಥವಾ ಐಟಿ ನಿಯಮಗಳು 2023) ಅಡಿಯಲ್ಲಿ ಫ್ಯಾಕ್ಟ್‌ಚೆಕ್ ವಿಭಾಗ ಸೃಷ್ಟಿಯಾಯಿತು.
ಈ ಫ್ಯಾಕ್ಟ್‌ಚೆಕ್ ವಿಭಾಗಕ್ಕೆ ಅತಿಯಾದ ಶಕ್ತಿಯನ್ನು ನೀಡಲಾಗಿದೆ. ಇದು ದುರುದ್ದೇಶಪೂರಿತವಾಗಿ ಬಳಕೆಯಾದಲ್ಲಿ ಸಂತ್ರಸ್ತರಿಗೆ ಕುಂದುಕೊರತೆ ಮುಂದಿಡುವ ಅವಕಾಶವೂ ಇಲ್ಲ. ಒಂದು ಸುದ್ದಿಯನ್ನು ತೆಗೆಯುವಂತೆ ತೀರ್ಮಾನಿಸಿ ಸೂಚಿಸುವ ಮೊದಲು ಸಂಬಂಧಿತರೊಂದಿಗೆ ಚರ್ಚಿಸುವ ಅಗತ್ಯವೂ ಇಲ್ಲದ ಏಕಪಕ್ಷೀಯ ನಿರ್ಧಾರ ಕೈಗೊಳ್ಳಲಿದೆ ಫ್ಯಾಕ್ಟ್‌ಚೆಕ್ ವಿಭಾಗ.
ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ಯಾವುದೇ ಸುದ್ದಿಯನ್ನು ಫ್ಯಾಕ್ಟ್‌ಚೆಕ್ ವಿಭಾಗ ‘ನಕಲಿ ಅಥವಾ ಸುಳ್ಳು ಅಥವಾ ದಾರಿ ತಪ್ಪಿಸುವ’ ಎಂದು ಪರಿಗಣಿಸಿ ಅಳಿಸುವಂತೆ ಆದೇಶಿಸುವ ಅಧಿಕಾರವನ್ನು ಐಟಿ ನಿಯಮಗಳು, 2023 ನೀಡಿದೆ.
ನಿಯಮಗಳನ್ನು ಹೇಗೆ ಹೇರಬಹುದು?
ಈ ಫ್ಯಾಕ್ಟ್‌ಚೆಕ್ ವಿಭಾಗ ಸರ್ಕಾರಿ ಅಧಿಕಾರಿಗಳು ಮತ್ತು ಸಚಿವರಿಗೆ ಸಂಬಂಧಿಸಿದ ಆನ್‌ಲೈನ್ ಕಮೆಂಟ್‌ಗಳು, ಸುದ್ದಿ ವರದಿಗಳು ಅಥವಾ ಅಭಿಪ್ರಾಯಗಳನ್ನು ಪರಿಶೀಲಿಸಲಿದೆ ಮತ್ತು ನಂತರ ಆನ್‌ಲೈನ್ ಸಂಸ್ಥೆಗಳಿಗೆ ಅಂತಹ ವಿಷಯದ ಸೆನ್ಸಾರ್‌ಶಿಪ್‌ಗೆ ಸೂಚಿಸುತ್ತದೆ. ಅಂತಹ ಸಂಸ್ಥೆಗಳಲ್ಲಿ ಕೇವಲ ಆನ್‌ಲೈನ್ ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಮಾತ್ರ ಇಲ್ಲ, ಬದಲಾಗಿ ಐಎಸ್‌ಪಿಗಳು (ಅಂತರ್ಜಾಲ ಸೇವೆ ಒದಗಿಸುವವರು) ಮತ್ತು ಫೈಲ್ ಹೋಸ್ಟಿಂಗ್ ಕಂಪನಿಗಳೂ (ಬಳಕೆದಾರರು ಫೈಲ್ ಸಂಗ್ರಹಿಸುವ ಕ್ಲೌಡ್ ಸೇವೆ ನೀಡುವವರು) ಸೇರಿವೆ ಎನ್ನುವುದು ಆಘಾತಕಾರಿ ವಿಚಾರ.
ಐಟಿ ನಿಯಮಗಳನ್ನು ರೂಪಿಸಿದ್ದು ಹೇಗೆ?
ಹೊಸ ಐಟಿ ನಿಯಮಗಳು, 2023 ರಚಿಸಲು ಮಾಹಿತಿ ತಂತ್ರಜ್ಞಾನ, ಕಾಯ್ದೆ 2000ದ ಸೆಕ್ಷನ್ 79 ಅಡಿಯಲ್ಲಿ ನಿಯಮ ರಚಿಸುವ ಅಧಿಕಾರ ಬಳಸಿಕೊಳ್ಳಲಾಗಿದೆ. ಈ ಅಧಿಕಾರವನ್ನು ಸುಪ್ರೀಂಕೋರ್ಟ್ ಆದೇಶ ಮತ್ತು ಶಾಸನಾತ್ಮಕ ಉದ್ದೇಶದಿಂದ ಐಟಿ ಕಾಯ್ದೆಗೆ ವಿವರ ನೀಡಲೆಂದು ಕೊಡಲಾಗಿತ್ತು.
ಸುಪ್ರೀಂಕೋರ್ಟ್‌ನಲ್ಲಿ ಶ್ರೇಯಾ ಸಿಂಘಾಲ್ ಪ್ರಕರಣದ ತೀರ್ಪಿನಲ್ಲಿ ವಿವರಿಸಿರುವಂತೆ- ಸಂವಿಧಾನದ 19(2)ನೇ ವಿಧಿಯಡಿ ನೀಡಲಾದ ಮಿತಿಗಳೆಂದರೆ, ಸೆಕ್ಷನ್ 79 ಮತ್ತು ಐಟಿ ನಿಯಮಗಳು ವಾಸ್ತವದಲ್ಲಿ, “ಸುಪ್ರೀಂಕೋರ್ಟ್‌ನ ಆದೇಶಗಳ ಬಗ್ಗೆ ಸೇವೆ ಒದಗಿಸುವವರಿಗೆ ತಿಳಿಸುವುದು ಮತ್ತು ಅಕ್ರಮ ಚಟುವಟಿಕೆಗಳಿಗೆ ಸಂಬಂಧಿಸಿ ಕೇಂದ್ರ ಸರ್ಕಾರದ ಶಾಸನಾತ್ಮಕ ನಿರ್ಧಾರಗಳ ಬಗ್ಗೆ ಸೇವೆ ಒದಗಿಸುವ ಸಂಸ್ಥೆಗಳಿಗೆ ಸೂಚನೆ ನೀಡಬಹುದಾಗಿದೆ”. ಆದರೆ 19(2)ನೇ ವಿಧಿಯಡಿ ’ನಕಲಿ ಅಥವಾ ಸುಳ್ಳು ಅಥವಾ ದಾರಿ ತಪ್ಪಿಸುವ’ ಎನ್ನುವ ವಿವರಗಳಿಲ್ಲ.
ಐಟಿ ನಿಯಮಗಳನ್ನು ಸಾರ್ವಜನಿಕ ವ್ಯವಸ್ಥೆ, ರಾಷ್ಟ್ರೀಯ ಭದ್ರತೆ ಮತ್ತು ನೈತಿಕತೆ ಎನ್ನುವ ವಿಸ್ತಾರ ರೂಪದಲ್ಲಿ ಬೇಕಾದರೂ ಓದಿಕೊಳ್ಳಬಹುದು. ಆದರೆ ಯಾವುದೇ ಸ್ಪಷ್ಟತೆಯಿಲ್ಲದ ಅಥವಾ ನಿಖರವಲ್ಲದ ಹೇಳಿಕೆ ಸ್ವಯಂಪ್ರೇರಿತವಾಗಿ ‘ನಕಲಿ ಅಥವಾ ಸುಳ್ಳು ಅಥವಾ ದಾರಿ ತಪ್ಪಿಸುವುದು’ ಎಂದಾಗುವುದಿಲ್ಲ. ಈಗಿನ ಐಟಿ ನಿಯಮಗಳು ಸರ್ಕಾರಿ ಸೆನ್ಸಾರ್‌ಶಿಪ್‌ಗೆ ಅಸಾಂವಿಧಾನಿಕ ಅಧಿಕಾರವನ್ನು ಸೃಷ್ಟಿಸಿದೆ.
ಈ ಸುದ್ದಿ ಓದಿದ್ದೀರಾ?: ಈ ದಿನ ಸಂಪಾದಕೀಯ | ಆರೆಸ್ಸೆಸ್ ಆಸೆ ಮತ್ತು ಬಿಜೆಪಿಯ ಭ್ರಮೆ
ನಕಲಿ ಸುದ್ದಿಗಳಿಗೆ ವ್ಯಾಖ್ಯಾನವಿಲ್ಲ
ಐಟಿ ನಿಯಮಗಳು, 2023 ‘ನಕಲಿ ಅಥವಾ ಸುಳ್ಳು ಅಥವಾ ದಾರಿ ತಪ್ಪಿಸುವ’ ವಿಷಯಗಳು ಯಾವುದು ಎನ್ನುವ ಬಗ್ಗೆ ಸ್ಪಷ್ಟವಾದ ವ್ಯಾಖ್ಯಾನವನ್ನೂ ನೀಡಿಲ್ಲ. ಫ್ಯಾಕ್ಟ್‌ಚೆಕ್ ವಿಭಾಗಕ್ಕೆ ಯಾವುದೇ ಅರ್ಹತೆಗಳು ಅಥವಾ ಕುಂದುಕೊರತೆ ಆಲಿಕೆ ಪ್ರಕ್ರಿಯೆಗಳ ಬಗ್ಗೆಯೂ ತಿಳಿಸಲಾಗಿಲ್ಲ. ಬದಲಾಗಿ, ನಿಯಮಗಳಲ್ಲಿ ಗೇಮಿಂಗ್ ವೇದಿಕೆಗಳ ಸ್ವಯಂನಿಯಂತ್ರಣಾ ಸಂಸ್ಥೆಗಳ ವಿವರವಾದ ಅರ್ಹತೆಗಳನ್ನು ನೀಡಲಾಗಿದೆ. ಅವುಗಳಿಗೂ ಕಾನೂನು ಕೊರತೆಗಳು ಇವೆ ಎನ್ನುವುದು ಸುಳ್ಳಲ್ಲ. ಆದರೆ, ಗೇಮಿಂಗ್ ವೇದಿಕೆಗಳಲ್ಲೂ ಅರ್ಹತೆ ಮತ್ತು ನಿರ್ಧಾರಕ್ಕೆ ಮೊದಲು ಕುಂದು ಕೊರತೆ ಆಲಿಕೆ ವ್ಯವಸ್ಥೆಯಿದೆ. ಆದರೆ ಫ್ಯಾಕ್ಟ್‌ಚೆಕ್ ವಿಭಾಗ ಅಂತಹ ಸೌಲಭ್ಯ ಹೊಂದಿಲ್ಲ.