ಐಪಿಎಲ್‌ 2023 | ಪೂರನ್, ಸ್ಟೊಯಿನಿಸ್‌ ಸ್ಫೋಟಕ ಆಟಕ್ಕೆ ಶರಣಾದ ಆರ್‌ಸಿಬಿ; ಲಖನೌಗೆ ಮೂರನೇ ಗೆಲುವು

Date:

ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಕ್ಷರಶಃ ಸಿಕ್ಸರ್‌, ಬೌಂಡರಿಗಳ ಸುರಿಮಳೆಯೇ ನಡೆಯಿತು. ಆದರೆ ಭರ್ಜರಿ ಆಟದಲ್ಲಿ ಆರ್‌ಸಿಬಿ ವಿರುದ್ಧ ಮೇಲುಗೈ ಸಾಧಿಸಿ ಗೆಲುವು ಸಾಧಿಸಿದ್ದು ಕೆ ಎಲ್‌ ರಾಹುಲ್‌ ನೇತೃತ್ವದ ಲಖನೌ ಸೂಪರ್‌ ಜೈಂಟ್ಸ್.

ಐಪಿಎಲ್‌ನ 16ನೇ ಆವೃತ್ತಿಯ ಪಂದ್ಯದಲ್ಲಿ ಲಖನೌ ತಂಡ ನಿಕೋಲಸ್ ಪೂರನ್ ಹಾಗೂ ಮಾರ್ಕಸ್ ಸ್ಟೊಯಿನಿಸ್ ಅವರ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ 1 ವಿಕೆಟ್‌ ರೋಚಕ ಜಯ ಸಾಧಿಸಿತು. 212 ರನ್‌ಗಳ ಬಾರಿ ಮೊತ್ತದ ಗುರಿಯನ್ನು ರೋಚಕ ಹಣಾಹಣಿಯಲ್ಲಿ 20 ಓವರ್‌ಗಳಲ್ಲಿ ತಲುಪಿತು.

ಆರಂಭದಲ್ಲಿಯೇ ನಾಲ್ಕು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದ ಲಖನೌಗೆ ನಿಕೋಲಸ್ ಪೂರನ್ ಹಾಗೂ ಮಾರ್ಕಸ್ ಸ್ಟೊಯಿನಿಸ್ ಆಪತ್ಬಾಂಧವರಂತೆ ಆಗಮಿಸಿ ಗೆಲುವಿನ ದಡ ಮುಟ್ಟಿಸಿದರು. ಕೇವಲ 19 ಚೆಂಡುಗಳಲ್ಲಿ ಭರ್ಜರಿ 7 ಸಿಕ್ಸರ್ ಹಾಗೂ 4 ಆಕರ್ಷಕ ಬೌಂಡರಿಗಳ ಮೂಲಕ 62 ರನ್‌ ಸಿಡಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮಾರ್ಕಸ್ ಸ್ಟೊಯಿನಿಸ್ ಕೂಡ ತಾವೇನು ಕಡಿಮೆಯಿಲ್ಲದಂತೆ 30 ಎಸೆತಗಳಲ್ಲಿ 5 ಸಿಕ್ಸರ್,6 ಬೌಂಡರಿಗಳೊಂದಿಗೆ 62 ರನ್‌ ಸ್ಫೋಟಿಸಿದರು. ಆರ್‌ಸಿಬಿ ಪರ ಮೊಹಮದ್‌ ಸಿರಾಜ್ 22/3 ಹಾಗೂ ವೇಯ್ನ್ ಪಾರ್ನೆಲ್ 41/3 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್‌ಗಳಾದರು.

ವ್ಯರ್ಥವಾದ ತ್ರಿಮೂರ್ತಿಗಳ ಆಟ

ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಆರ್​ಸಿಬಿ ತಂಡವು ನಿಗದಿತ 20 ಓವರ್​ನಲ್ಲಿ 2 ವಿಕೆಟ್​ ನಷ್ಟಕ್ಕೆ ಬರೋಬ್ಬರಿ 212 ರನ್ ಗಳಿಸಿತು. ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಮತ್ತು ನಾಯಕ ಫಾಫ್​ ಡುಪ್ಲೇಸಿಸ್​ ಭರ್ಜರಿಯಾಗಿ ಆಟವಾಡಿದರು. ಬಳಿಕ ಬಂದ ಗ್ಲೇನ್​ ಮ್ಯಾಕ್ಸ್​ವೆಲ್​ ಸಹ ಅಬ್ಬರದ ಬ್ಯಾಟಿಂಗ್​ ಮೂಲಕ ಅರ್ಧಶತಕ ಬಾರಿಸಿದರು.

ವಿರಾಟ್ ಕೊಹ್ಲಿ 44 ಎಸೆತದಲ್ಲಿ 4 ಸಿಕ್ಸ್ 4 ಬೌಂಡರಿ​ ಮೂಲಕ 61 ರನ್​ ಗಳಿಸಿದರೆ, ಫಾಫ್​ ಡುಪ್ಲೇಸಿಸ್​ 46 ಎಸೆತದಲ್ಲಿ 5 ಸಿಕ್ಸ್ ಮತ್ತು 5 ಬೌಂಡರಿ​ ಮೂಲಕ 79 ರನ್​ ಹಾಗೂ ಗ್ಲೇನ್ ಮ್ಯಾಕ್ಸ್​ವೆಲ್​ 29 ಎಸೆತದಲ್ಲಿ 6 ಸಿಕ್ಸ್ ಮತ್ತು 3 ಬೌಂಡರಿ​ ಮೂಲಕ 59 ರನ್ ಕೊನೆಯಲ್ಲಿ ದಿನೇಶ್​ ಕಾರ್ತಿಕ್​ 1 ರನ್​ ಗಳಿಸುವ ಮೂಲಕ ತಂಡದ ಮೊತ್ತ ಇನ್ನೂರು ರನ್​ ಗಡಿ ದಾಟಲು ಸಹಾಯಕರಾದರು.

 

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಪಿಎಲ್ | ಹೆಟ್ಮಾಯರ್ ಸ್ಫೋಟಕ ಬ್ಯಾಟಿಂಗ್: ರೋಚಕ ಹಣಾಹಣಿಯಲ್ಲಿ ಪಂಜಾಬ್‌ಗೆ ಸೋಲುಣಿಸಿದ ರಾಜಸ್ಥಾನ

ಚಂಡೀಗಢದ ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು...

ಐಪಿಎಲ್ 2024 | ತಲಾ 5 ಬಾರಿ ಕಪ್‌ ಗೆದ್ದಿರುವ ಮುಂಬೈ – ಚನ್ನೈ ನಡುವೆ ಹಣಾಹಣಿ; ಎಲ್ಲರ ಚಿತ್ತ ವಾಂಖೆಡೆಯತ್ತ!

ಐಪಿಎಲ್‌ನ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ (ಸಿಎಸ್‌ಕೆ) ಮತ್ತು ಮುಂಬೈ...

ಐಪಿಎಲ್ | ಕೆ ಎಲ್ ರಾಹುಲ್ ನೇತೃತ್ವದ ಲಕ್ನೋಗೆ ಸೋಲುಣಿಸಿದ ಡೆಲ್ಲಿ ಕ್ಯಾಪಿಟಲ್ಸ್‌

ಲಕ್ನೋ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಶುಕ್ರವಾರ ನಡೆದ ಐಪಿಎಲ್‌ನ 26ನೇ...

ಪ್ಯಾರಿಸ್ ಒಲಿಂಪಿಕ್ಸ್‌ನ ಭಾರತದ ಮುಖ್ಯಸ್ಥ ಸ್ಥಾನಕ್ಕೆ ಮೇರಿ ಕೋಮ್ ರಾಜೀನಾಮೆ

ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್‌ನ ಭಾರತದ ಮುಖ್ಯಸ್ಥ ಸ್ಥಾನಕ್ಕೆ ಒಲಿಂಪಿಕ್ ಪದಕ ವಿಜೇತೆ...