ಕೆಸರೆರಚಿದಷ್ಟೂ ಕಮಲ ಅರಳುತ್ತದೆ; ಕನ್ನಡಿಗರು ಬಿಜೆಪಿ ಆಶೀರ್ವದಿಸುತ್ತಾರೆ : ಪ್ರಧಾನಿ ಮೋದಿ

Date:

  • ಬೀದರ್ ನಲ್ಲಿ ಕಮಲ ಚಿನ್ಹೆ ಅಭ್ಯರ್ಥಿ ಪರ ಪ್ರಧಾನಿ ಪ್ರಚಾರ
  • ಕಾಂಗ್ರೆಸ್, ಜೆಡಿಎಸ್ ಮೇಲೆ ವಾಗ್ದಾಳಿ ನಡೆಸಿದ ನರೇಂದ್ರ ಮೋದಿ

ಯಾರು ಏನೇ ಹೇಳಲಿ, ಪಕ್ಷದ ಬಗ್ಗೆ ಎಷೇ ಮಾತನಾಡಲಿ, ನಾವು ಎದೆಗುಂದುವುದಿಲ್ಲ. ಏಕೆಂದರೆ ಕಮಲಕ್ಕೆ ಎಷ್ಟೇ ಕೆಸರೆರಚಿದರೂ ಅದು ಅರಳುತ್ತದೆ. ಹಾಗೆ ಕನ್ನಡಿಗರೂ ಬಿಜೆಪಿಯನ್ನು ಆಶೀರ್ವರ್ದಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಬೀದರ್‌ನ ಹುಮ್ನಾಬಾದ್ ಚಿನಕೇರಾ ಕ್ರಾಸ್ ನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಈ ರಾಜ್ಯ ಕಾಂಗ್ರೆಸ್ ಎಟಿಎಂ ಆಗಬಾರದು. ಈ ಬಾರಿ ಪೂರ್ಣ ಬಹುಮತದ ಬಿಜೆಪಿ ಸರ್ಕಾರ ಬರಬೇಕು. ರಾಜ್ಯದಲ್ಲಿ ಅಭಿವೃದ್ದಿಗೆ ಡಬಲ್ ಇಂಜಿನ್ ಸರ್ಕಾರ ಇರಬೇಕು ಎಂದರು.

ಕರ್ನಾಟಕದಲ್ಲಿ ಡಬಲ್ ಎಂಜಿನ್ ಸರ್ಕಾರ ಇರಬೇಕು ಇದರಿಂದ ಮೂಲಸೌಕರ್ಯ, ವಿದೇಶಿ ಹೂಡಿಕೆ ಉತ್ತಮವಾಗಲಿದೆ. ಜೊತೆಗೆ ಮತ್ತೊಮ್ಮೆ ಕರ್ನಾಟಕವನ್ನು ನಂಬರ್ 1 ಮಾಡಲು ಅವಕಾಶ ಕೊಟ್ಟಂತಾಗುತ್ತದೆ. ಹೀಗಾಗಿ ಜನ ಬಿಜೆಪಿಯನ್ನು ಆಶೀರ್ವದಿಸಿ ಎಂದು ಮನವಿ ಮಾಡಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ?:ಬಿ ಎಲ್ ಸಂತೋಷ್‌ ನನಗಷ್ಟೇ ಅಲ್ಲ, ತೇಜಸ್ವಿನಿ ಅನಂತಕುಮಾರ್…

ಬಳಿಕ ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ರಾಜ್ಯದ ಅಭಿವೃದ್ಧಿಗೆ ಕಾಂಗ್ರೆಸ್ ಅಡ್ಡಗಾಲು ಹಾಕುತ್ತಿದೆ. ಬಿಜೆಪಿ ಅಭಿವೃದ್ದಿ ಕಾರ್ಯವನ್ನು ಅವರು ಸಹಿಸುತ್ತಿಲ್ಲ ಎಂದರು.

ನಿಮ್ಮ ಆಶೀರ್ವಾದದಿಂದ ನನ್ನ ಮತ್ತು ಪಕ್ಷದ ಮೇಲೆ ಕೆಲವರು ಮಾಡಿರುವ ಆರೋಪ ಬೈಗುಳಗಳು ಮಣ್ಣಲ್ಲಿ ಮಣ್ಣಾಗುತ್ತೆ. ಅವರು ಎಷ್ಟು ಕೆಸರು ಎರಚುತ್ತಾರೋ ಅಷ್ಟು ಕಮಲ ಅರಳುತ್ತೆ. ಹೀಗಾಗಿ ಕನ್ನಡಿಗರು ಬಿಜೆಪಿ ಬೆಂಬಲಿಸಿ ಅಭಿವೃದ್ದಿಗೆ ಮನ್ನಣೆ ನೀಡಿ ಎಂದು ನರೇಂದ್ರ ಮೋದಿ ಕೇಳಿಕೊಂಡರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಛಲಬಿಡದೆ ಬರಪರಿಹಾರ ತಂದ ಕಾಂಗ್ರೆಸ್‌ಗೆ ಜನ ಮೆಚ್ಚುಗೆ; ಯಾರು ಏನಂದರು?

ಬಿಜೆಪಿ ನಾಯಕರು ಎಷ್ಟೇ ಸುಳ್ಳು ಹೇಳಿದರೂ ಕುಗ್ಗದೆ, ಸುಪ್ರೀಂ ಕೋರ್ಟ್ ಮೆಟ್ಟಿಲನ್ನೂ...

26/11 ದಾಳಿಯ ಉಗ್ರ ಕಸಬ್‌ನನ್ನು ಗಲ್ಲಿಗೇರಿಸಲು ವಾದ ಮಂಡಿಸಿದ್ದ ವಕೀಲ ಮುಂಬೈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ

ಮುಂಬೈನ 26/11ರ ಭಯೋತ್ಪಾದನಾ ದಾಳಿಯಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದ ವಕೀಲ ಉಜ್ವಲ್...

ಕುಮಾರಣ್ಣನ ಜೇಬಲ್ಲಿದ್ದ ‘ಪೆನ್‌ಡ್ರೈವ್‌’ನಲ್ಲಿ ಏನಿತ್ತು ಎಂಬುದು ಈಗ ಗೊತ್ತಾಯ್ತು: ಡಿ ಕೆ ಶಿವಕುಮಾರ್

ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಜೆಡಿಎಸ್ ಸಂಸದ ಹಾಗೂ ಹಾಸನ...