ಕೋಟಿ ಕೋಟಿ ಲೂಟಿ ಮಾಡಿದ ಸ್ಕ್ಯಾಮರ್‌ಗಳನ್ನು ಮೋದಿ ಸರ್ಕಾರ ಮಟ್ಟ ಹಾಕಿದ್ದು ಹೀಗೆ!

Date:

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಲೋಕಸಭೆಯಲ್ಲಿ ಮಾತನಾಡುತ್ತಾ, “ಕಾಂಗ್ರೆಸ್‌ ಮತ್ತು ವಿರೋಧ ಪಕ್ಷಗಳು ಈ ದೇಶದಲ್ಲಿ ಬರೋಬ್ಬರಿ 12 ಲಕ್ಷಕೋಟಿ ರೂಪಾಯಿಗಳನ್ನು ಲೂಟಿ ಮಾಡಿದ್ದಾರೆ” ಎಂದು ತಿಳಿಸಿ, ಒಂದೊಂದೇ ಸ್ಕ್ಯಾಮ್‌ಗಳನ್ನು ಓದುತ್ತಾ ಹೋಗಿದ್ದರು.

ನರೇಂದ್ರ ಮೋದಿಯವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಕಾಂಗ್ರೆಸ್‌ ಹಗರಣದ ಕುರಿತಾಗಿ ಮಾತನಾಡುತ್ತಾ, “ನಮ್ಮ ಭಾರತೀಯ ಜನತಾ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಎಲ್ಲಾ ದರೋಡೆಕೋರರಿಗೆ ಕಠಿಣ ಕ್ರಮ ಮಿಸ್ಸೇ ಇಲ್ಲ” ಎಂದು ಭರವಸೆ ನೀಡಿದ್ದರು.

ಈಗ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಅವರು ಲೂಟಿಕೋರರಿಗೆ ಮಾಡಿರುವ ಶಿಕ್ಷೆಯನ್ನು ಒಂದೊಂದಾಗಿ ನೋಡಬಹುದು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
  1. ಅಶೋಕ್‌ ಚೌಹಾಣ್

ಇವರು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶಂಕರರಾವ್ ಚೌಹಾಣ್‌ ಅವರ ಮಗ. ಮೂರು ಬಾರಿ ಎಂಎಲ್‌ಎ, ಮೂರು ಬಾರಿ ಎಂಪಿ ಆಗಿ, ಎರಡು ಬಾರಿ ಸಚಿವರಾಗಿ ಕೆಲಸ ನಿರ್ವಹಿಸಿದ ವ್ಯಕ್ತಿ. 2008ರಿಂದ 2010ರವರೆಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದವರು.

ಕಾರ್ಗಿಲ್ ಯುದ್ದದಲ್ಲಿ ಮಡಿದ ಸೈನಿಕರ ಕುಟಬಸ್ಥರಿಗೆ ಮತ್ತು ವಿಧವೆಯರಿಗೆ ನೀಡಬೇಕಿದ್ದ ಆದರ್ಶ್‌ ಹೌಸಿಂಗ್ ಅಪಾರ್ಟ್‌ಮೆಂಟ್‌ನಲ್ಲಿ ಹಲವಾರು ಮನೆಗಳನ್ನು ತನ್ನ ಹಿತಾಸಕ್ತಿಗೆ ಬಳಸಿಕೊಂಡಿದ್ದರು. ಕೊನೆಗೆ ಆರೋಪಗಳು ಮುಗಿಲೇಳುತ್ತಿದ್ದಂತೆ ಸಿಬಿಐ ತನಿಖೆಗೂ ಗುರಿಯಾಗಿದ್ದರು. ಕೊನೆಗೆ ಅವರು ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ಕೊಟ್ಟು 13 ಫೆಬ್ರವರಿ 2024 ರಂದು ಭಾರತೀಯ ಜನತಾ ಪಕ್ಷಕ್ಕೆ ಸೇರಿದರು.

2. ಹಿಮಂತ ಬಿಸ್ವಾ ಶರ್ಮಾ 

ಅಸ್ಸಾಂ ರಾಜ್ಯದ ಕಾಂಗ್ರೆಸ್‌ ಪಕ್ಷದ ಪ್ರಭಾವಿ ವ್ಯಕ್ತಿ. ಪಶ್ಚಿಮ ಬಂಗಾಳದಲ್ಲಿ ನಡೆದ ಶಾರದಾ ಚಿಟ್‌ ಫಂಡ್‌ ಹಗರಣದಲ್ಲಿ ಕೋಟ್ಯಂತರ ರೂಪಾಯಿ ಲೂಟಿ ಮಾಡಿದವರ ಆರೋಪಿಗಳ ಪಟ್ಟಿಯಲ್ಲಿ ಇವರ ಹೆಸರು ಇದೆ. ಶಾರದಾ ಚಿಟ್‌ ಫಂಡ್‌ ಮ್ಯಾನೇಜರ್‌ ಸುದಿಪ್ತ ಸೇನ್‌ ಅವರು ಪ್ರತೀ ತಿಂಗಳು 20 ಲಕ್ಷ ರೂಗಳನ್ನು ಹಿಮಂತ ಬಿಸ್ವಾ ಶರ್ಮ ಅವರಿಗೆ ಕೊಡುತ್ತಿದ್ದರು ಎಂದು ಸಿಬಿಐ ತನಿಖೆಯಿಂದ ಗೊತ್ತಾಗುತ್ತದೆ.

ಈ ವರದಿಯು ಬೆಳಕಿಗೆ ಬರುತ್ತಿದ್ದಂತೆ ಅಸ್ಸಾಂನ ಎಲ್ಲ ಬಿಜೆಪಿಗರು ಇವರ ವಿರುದ್ದ ಉಗ್ರ ಹೋರಾಟವನ್ನೂ ಮಾಡಿದ್ದರು. ದೇಶದಲ್ಲೇ ಅತ್ಯಂತ ಕೆಟ್ಟ ಮತ್ತು ಕಡು ಭ್ರಷ್ಟ ವ್ಯಕ್ತಿ ಎಂಬ ಬಿರುದ್ದನ್ನೂ ನೀಡಿದ್ದರು.

ಇವರು 21 ಜುಲೈ 2014 ರಂದು ಎಲ್ಲ ಸ್ಥಾನಗಳಿಗೆ ರಾಜೀನಾಮೆ ನೀಡಿ, ಆಗಸ್ಟ್‌‌ 23, 2015ರಂದು ದೆಹಲಿಯಲ್ಲಿನ ಅಮಿತ್‌ ಶಾ ಅವರ ನಿವಾಸದಲ್ಲಿ, ಸ್ವತಃ ಅಮಿತ್ ಶಾ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರಿಕೊಂಡರು.

3. ಅಮರಿಂದರ್‌ ಸಿಂಗ್ 

ಪಂಜಾಬ್‌ನ 15ನೇ ಮುಖ್ಯಮಂತ್ರಿಯಾಗಿ ಆಯ್ಕೆಯಾದ ವ್ಯಕ್ತಿ ಅಮರಿಂದರ್‌ ಸಿಂಗ್.‌ ಪಂಜಾಬ್‌ನ ಇತಿಹಾಸದಲ್ಲೇ ಅತಿ ಹೆಚ್ಚು ಲೂಟಿ ಮಾಡಿದ ಮುಖ್ಯಮಂತ್ರಿಗಳು ಎಂದು ಪಂಜಾಬ್‌ನ ಬಿಜೆಪಿ ಮುಖಂಡರು ದೂರಿದ್ದರು.

ಹಲವಾರು ದಾಖಲೆಗಳನ್ನು ಮುಂದಿಟ್ಟುಕೊಂಡು ನೇರಾ ನೇರಾ ಮಾಧ್ಯಮಗಳ ಮುಂದೆ ಅಮರಿಂದರ್‌ ಸಿಂಗ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಕೊರೊನಾ ಸಂದರ್ಭದಲ್ಲಿ ಕೋಟ್ಯಂತರ ರೂಗಳ ಪಿಪಿಇ ಕಿಟ್‌ ಹಗರಣ, ಮೈನಿಂಗ್‌ ಸ್ಕ್ಯಾಮ್‌, ರೈತರಿಗೆ ವಿತರಿಸಬೇಕಿದ್ದ ಬಿತ್ತನೆ ಬೀಜದಲ್ಲೂ ಹಗರಣ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು.

ಇವರು ಕೊನೆಗೆ ತಮ್ಮ ಪಂಜಾಬ್‌ ಲೋಕ್‌ ಕಾಂಗ್ರೆಸ್‌ ಅನ್ನು ಸೆಪ್ಟಂಬರ್‌ 2022ರಂದು ಬಿಜೆಪಿ ಜೊತೆಗೆ ವಿಲೀನ ಮಾಡಿಕೊಂಡರು.

4. ನಾರಾಯಣ್‌ ರಾಣೆ

ಕಾಂಗ್ರೆಸ್‌ ಪಕ್ಷದ ಹಿರಿಯ ವ್ಯಕ್ತಿ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿಯೂ ಹೌದು. ಮನಿ ಲಾಂಡ್ರಿಂಗ್‌ ಹಗರಣದ ಮೇಲೆ ಕೋಟ್ಯಂತರ ರೂಗಳ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಸಂಸತ್‌ ಬಿಜೆಪಿ ಸದಸ್ಯರು ದೂರ ದಾಖಲಿಸಿದ್ದರು.

ಭೂ ಕಬಳಿಕೆ, ಅಕ್ರಮ ಹಣ ಸಾಗಣೆ ಹಾಗೂ ಆದರ್ಶ್‌ ಹೌಸಿಂಗ್‌ ಹಗರಣದಲ್ಲೂ ಇವರ ಪಾಲಿದೆ ಎಂದು ಸ್ವತಃ ಕಾಂಗ್ರೆಸ್‌ ಪಕ್ಷವೇ ಇವರನ್ನು ರಾಜೀನಾಮೆಗೆ ಒತ್ತಾಯಿಸಿತ್ತು. ಕೊನೆಗೆ ರಾಜೀನಾಮೆ ಕೊಟ್ಟು ಅಕ್ಟೋಬರ್‌ 2017ರಂದು ಮಹಾರಾಷ್ಟ್ರ ಸ್ವಾಭಿಮಾನ್‌ ಪಕ್ಷವನ್ನು ಹುಟ್ಟುಹಾಕಿದರು.

ಕೊನೆಗೆ ಅಕ್ಟೋಬರ್ 15, 2019ರಂದು ಭಾರತೀಯ ಜನತಾ ಪಕ್ಷದೊಂದಿಗೆ ತಮ್ಮ ಮಹಾರಾಷ್ಟ್ರ ಸ್ವಾಭಿಮಾನ್‌ ಪಕ್ಷವನ್ನೂ ವಿಲೀನಗೊಳಿಸಿದರು. ಪ್ರಸ್ತುತ ನಾರಾಯಣ್‌ ರಾಣೆ ಅವರು ಬಿಜೆಪಿ ಪಕ್ಷದಿಂದ ಅಧಿಕೃತವಾಗಿ ಗೆದ್ದು, ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

5. ಅಜಿತ್ ಪವಾರ್‌

ಎನ್‌ಸಿಪಿ ಪಕ್ಷದ ಸುಪ್ರಸಿದ್ದ ವ್ಯಕ್ತಿ ಅಂತಲೇ ಗುರುತಿಸಿಕೊಂಡಿದ್ದ ವ್ಯಕ್ತಿ ಅಜಿತ್‌ ಪವಾರ್.‌  ಅತಿ ಹೆಚ್ಚು ಬಾರಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಆಯ್ಕೆಯಾದ ಅಜಿತ್‌ ಪವಾರ್,  2012ರಲ್ಲಿ  ಜಲಸಂಪನ್ಮೂಲ ಸಚಿವರಾಗಿದ್ದಾಗ 70,000 ಕೋಟಿ ರೂಪಾಯಿಗಳನ್ನು ಲೂಟಿ ಮಾಡಿದ ಕುಖ್ಯಾತ ಹೊಂದಿದವರು. ಪವಾರ್ ತಮ್ಮ  ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಭ್ರಷ್ಟಾಚಾರ ವಿರೋಧಿ ಹೋರಾಟಗಾರ್ತಿ ಅಂಜಲಿ ದಮಾನಿಯಾ ಒತ್ತಾಯಿಸಿದ್ದರು.

ಮಹಾರಾಷ್ಟ್ರದ ಇಂದಾಪುರದಲ್ಲಿ ಬರದ ಪರಿಸ್ಥಿತಿ ಎದುರಾದಾಗ ಅಲ್ಲಿನ ಜನರು ನೀರಿಗಾಗಿ ಬೇಡಿಕೆ ಇಟ್ಟಿದ್ದರು. ಕೊನೆಗೆ ನೀರನ್ನು ಕೊಡದೇ ಇದ್ದಾಗ ಹೋರಾಟ ಮಾಡುವ ಸಮಯದಲ್ಲಿ “ನಾನು ಬಂದು ನಿಮ್ಮ ಡ್ಯಾಂನಲ್ಲಿ ಮೂತ್ರ ಮಾಡಬೇಕಾ?” ಎಂದು ಹೇಳಿ ವಿವಾದಕ್ಕೂ ಸಿಕ್ಕಿಕೊಂಡಿದ್ದವರು.

ಇವರು 2019ರಲ್ಲಿ ಬಿಜೆಪಿ ಸೇರಿ ಮತ್ತೊಮ್ಮೆ ಮಹಾರಾಷ್ಟ್ರದ ಉಪಮುಖ್ಯಂತ್ರಿಯಾಗಿ ಆಯ್ಕೆಯಾಗಿದ್ದಾರೆ.

  1. ಮಿಥುನ್‌ ಚಕ್ರವರ್ತಿ

ಮಿಥುನ್‌ ಚಕ್ರವರ್ತಿ ಒಬ್ಬ ದೊಡ್ಡ ನಟ. ಇವರ ಸಿನಿಮಾಗಳಿಗೆ ಮೂರು ರಾಷ್ಟ್ರ ಪ್ರಶಸ್ತಿಗಳು ಸಂದಿವೆ. ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್‌ ಪಕ್ಷದಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆ ಆಗಿದ್ದವರು.  ಶಾರದಾ ಚಿಟ್‌ ಫಂಡ್‌ ಸ್ಕ್ಯಾಮ್‌ನಲ್ಲಿ ಸುಮಾರು 2 ಕೋಟಿ ರೂ. ಹಣ ಪಡೆದಿದ್ದಾರೆ ಎಂದು ಸಿಬಿಐ ತನಿಖೆಯಿಂದ ಗೊತ್ತಾಗುತ್ತದೆ.

ಕೊನೆಗೆ ಮಿಥುನ್‌ ಚಕ್ರವರ್ತಿಯವರು 2021ರಲ್ಲಿ ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆ ಇನ್ನು ಕೆಲವೇ ದಿನಗಳು ಇರುವಾಗ, ರಾಜ್ಯಸಭೆಗೆ ರಾಜೀನಾಮೆ ಕೊಟ್ಟು ಸ್ವತಃ ಮೋದಿ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದರು.

  1. ಹರ್ಷವರ್ಧನ್‌ ಪಾಟೀಲ್

ಮಹಾರಾಷ್ಟ್ರ ಸರ್ಕಾರದಲ್ಲಿ 1995 ರಿಂದ 2014 ರವರೆಗೆ ಸತತ ನಾಲ್ಕುಬಾರಿ ಸಚಿವರಾಗಿ ಆಯ್ಕೆಯಾದ ವ್ಯಕ್ತಿ ಇವರು. ಮನಿಲಾಂಡ್ರಿಂಗ್‌ ಆರೋಪಿತ ವ್ಯಕ್ತಿ. ತನ್ನ ಮೇಲೆ ಆರೋಪಗಳು ಬರುತ್ತಿರುವ ವೇಳೆಗೆ, ಅಜಿತ್‌ ಪವಾರ್‌ ಜೊತೆಗೆ ಬಿಜೆಪಿ ಸೇರಿ ಇಂದು ಸಹಕಾರಿ ಸಚಿವಾಲಯ ಮತ್ತು ಶಾಸಕಾಂಗ ವ್ಯವಹಾರಗಳ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.

ಇವರ ನೇರ ಹೇಳಿಕೆ ಕಂಡು ಬಿಜೆಪಿಯೇ ತಲೆ ತಗ್ಗಿಸಿತ್ತು. ಅದೇನೆಂದರೆ, “ನಾನು ಕಾಂಗ್ರೆಸ್‌ ಪಕ್ಷದಲ್ಲಿದ್ದಾಗ ನನ್ನ ಮೇಲೆ ಹಲವಾರು ಭ್ರಷ್ಟಾಚಾರದ ಆರೋಪಗಳ ಕೇಳಿಬರುತ್ತಿದ್ದವು. ಈಗ ನಾನು ಬಿಜೆಪಿ ಸೇರಿದ್ದೇನೆ, ನನ್ನ ಮೇಲೆ ಯಾವುದೇ ಆಪಾದನೆಗಳಿಲ್ಲ. ಈಗ ನೆಮ್ಮದಿಯಿಂದ ಇದ್ದೇನೆ” ಎಂದಿದ್ದರು.

  1. ಮುಕುಲ್‌ ರಾಯ್

ಪಶ್ಚಿಮ ಬಂಗಾಳದ ಟಿಎಂಸಿ ಪಕ್ಷದ ಜನಪ್ರಿಯ ವ್ಯಕ್ತಿ. ಇವರ ಭ್ರಷ್ಟಾಚಾರ ಏನೆಂದರೆ, ಮತ್ತದೇ ಶಾರದಾ ಚಿಟ್‌ ಸ್ಕ್ಯಾಮ್‌.

ಬಿಜೆಪಿ ಸದಸ್ಯರು ಮತ್ತು ಕಾರ್ಯಕರ್ತರು ಇವರಿಗೆ ಕೊಟ್ಟ ತೊಂದರೆಗಳು ಅಷ್ಟಿಷ್ಟಲ್ಲ. ಮುಕುಲ್ ಅಕ್ಷರಶಃ ಹೈರಾಣಾಗಿದ್ದರು. 2014 ರಲ್ಲಿ ನೇರವಾಗಿ ಒಂದು ಸ್ಟಿಂಗ್‌ ಆಪರೇಷನ್‌ನಲ್ಲಿ ಸಿಕ್ಕಿಕೊಂಡಿದ್ದರು. ನಾರದ ಸ್ಟಿಂಗ್‌ ಕೇಸ್‌ ಎಂದು ಪ್ರಚಾರ ಆಗಿದ್ದೇ ಇವರಿಂದ. ಆದರೆ ಇವರು ನವೆಂಬರ್‌ 3, 201 ರಲ್ಲಿ ಬಿಜೆಪಿ ಸೇರಿಕೊಂಡರು.

ಸುವೆಂದು ಅಧಿಕಾರಿ – ಶಾರದಾ ಹಗರಣ

ಹಸನ್‌ ಮುಶ್ರಿಫ್-‌ ಮನಿ ಲಾಂಡ್ರಿಂಗ್‌ ಹಗರಣ

ಛಗನ್‌ ಬುಜಬಲ್-‌ ಅಕ್ರಮ ಭೂಮಿ ಕಬಳಿಕೆ ಮತ್ತು ಮನಿಲಾಂಡ್ರಿಂಗ್‌ ಹಗರಣದ ಮೇಲೆ ಜೈಲಿಗೆ ಹೋಗಿ ಬಂದವರು.

ಮೋಹನ್‌ ಸಿಂಗ್‌ ರತ್ವಾ, ಕೊತ್ವಾಲ್‌, ಹಾರ್ದಿಕ್‌ ಪಟೇಲ್‌, ಭಾಗ ಭಗತ್‌, ಧರ್ಮಪಾಲ್‌ ಠಾಕೂರ್‌-  ಹೀಗೆ ಹಲವಾರು ಕಾಂಗ್ರೆಸ್‌ ಪಕ್ಷದ ದೊಡ್ಡ ದೊಡ್ಡ ಭ್ರಷ್ಟಾಚಾರಿಗಳು ಇಂದು ಬಿಜೆಪಿ ಸೇರಿ ಚುನಾವಣೆಯಲ್ಲಿಯೂ ಗೆದ್ದು ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮೊದಲೇ ತಿಳಿಸಿದಂತೆ ಮೋದಿಯವರ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡಿದೆ. ಜೊತೆಗೆ ಅಮಿತ್‌ ಶಾ ಅವರು ಕೇಂದ್ರದ ಪ್ರಭಾವಿ ಗೃಹ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ಸ್ವತಃ ಬಿಜೆಪಿಯೇ ಇಂದು ಭ್ರಷ್ಟಾಚಾರಿಗಳ ಪಡೆಯಾಗಿ ಬೆಳೆದು ನಿಂತಿದೆ.

’ನಾ ಖಾವೂಂಗಾ ನಾಖಾನೇ ದೂಂಗಾ’ ಎನ್ನತ್ತಾ ಪ್ರಧಾನಿ ಮೋದಿಯವರು ಭ್ರಷ್ಟಾಚಾರಿಗಳನ್ನು ಮಟ್ಟಹಾಕಿದ್ದು ಹೀಗೆ…!

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಿಂದುಳಿದ ಸಮುದಾಯಗಳೇ ಎಚ್ಚರ, ಮೋದಿ ನಿಮ್ಮ ಹಾದಿ ತಪ್ಪಿಸುತ್ತಿದ್ದಾರೆ: ಘರ್ಜಿಸಿದ ಸಿದ್ದರಾಮಯ್ಯ

ರಾಜ್ಯದ ಹಿಂದುಳಿದ ಸಮುದಾಯಗಳೇ ಎಚ್ಚರ. ಮೋದಿ ನಿಮ್ಮ ಹಾದಿ ತಪ್ಪಿಸಿ ಮುಸ್ಲಿಮರ...

ಪಿಎಂ ಮೋದಿ ಸೂಪರ್‌ ಮ್ಯಾನ್ ಅಲ್ಲ ದುಬಾರಿ ಮ್ಯಾನ್: ಪ್ರಿಯಾಂಕಾ ಗಾಂಧಿ ವ್ಯಂಗ್ಯ

ಪ್ರಧಾನಿ ನರೇಂದ್ರ ಮೋದಿ ಸೂಪರ್ ಮ್ಯಾನ್ ಅಲ್ಲ ಬದಲಾಗಿ ಅವರು ದುಬಾರಿ...

ಹಾಸನ ಪೆನ್ ಡ್ರೈವ್ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿ, ಸಂತ್ರಸ್ತ ಮಹಿಳೆಯರಿಗೆ ರಕ್ಷಣೆ ಕೊಡಿ: ಕುಶಾಲಾ ಸ್ವಾಮಿ

ಹಾಸನ ಸೇರಿದಂತೆ ರಾಜ್ಯದಾದ್ಯಂತ ಓಡಾಡುತ್ತಿರುವ ಸಾವಿರಾರು ಅಶ್ಲೀಲ ವಿಡಿಯೋಗಳುಳ್ಳ ಪೆನ್ ಡ್ರೈವ್,...

ಬರ ಪರಿಹಾರ | ಸುಪ್ರೀಂ ಕೋರ್ಟ್ ಉಗಿದಿದ್ದನ್ನೇ ಮೋದಿ ಪ್ರಸಾದ ಎನ್ನುತ್ತಿರುವ ಬಿಜೆಪಿ!

ರಾಜ್ಯಕ್ಕೆ 3,454 ಕೋಟಿ ರುಪಾಯಿ ಬರ ಪರಿಹಾರ ಸುಪ್ರೀಮ್ ಕೋರ್ಟ್ ಕೊಟ್ಟದ್ದೇ...