ಕೆಂಡದಂತಾದ ಬೇಸಿಗೆ | ʼಎಲ್ ನಿನೋʼ ಸದ್ದಿಲ್ಲದೆ ಜೀವ ಕಸಿಯುವ ಮುನ್ನ ಎಚ್ಚೆತ್ತುಕೊಳ್ಳಿ!

Date:

ಎಲ್ ನಿನೋ ಎಂಬುದು ನಿರಂತರವಾಗಿ ನಡೆಯುವ ಪ್ರಕ್ರಿಯೆಯಲ್ಲ. ಸಾಮಾನ್ಯವಾಗಿ ಪ್ರತಿ 2 ರಿಂದ 7 ವರ್ಷಕ್ಕೊಮ್ಮೆ ಸಂಭವಿಸುತ್ತದೆ. ಒಮ್ಮೆ ಆರಂಭವಾದ ಎಲ್ ನಿನೋ ಪ್ರಭಾವವು 9 ತಿಂಗಳಿಂದ ಹಿಡಿದು ಒಂದೂವರೆ ವರ್ಷದವರೆಗೆ ಇರಬಹುದು. ವಿಜ್ಞಾನಿಗಳ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ತಾಪಮಾನ ಏರಿಕೆಯಿಂದಾಗಿ ಎಲ್ ನಿನೋದ ತೀವ್ರತೆ ಮತ್ತಷ್ಟು ಹೆಚ್ಚುತ್ತಿದೆ.

- Advertisement -

“ಚಳಿಗಾಲ ಬಂದಾಗ ಎಷ್ಟು ಚಳಿ ಎಂದರು, ಬಂತಲ್ಲ ಬೇಸಿಗೆ, ಕೆಟ್ಟ ಬಿಸಿಲೆಂದರು. ಮಳೆ ಬಿತ್ತೋ ಬಿಡದಲ್ಲ ಶನಿ ಎಂದಿವರ ಟೀಕೆ, ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!” ಒಲವಿನ ಕವಿ ಕೆ ಎಸ್‌ ನರಸಿಂಹ ಸ್ವಾಮಿ ಅವರ ʼಇಕ್ಕಳʼ ಪದ್ಯ ನೆನಪಿರಬಹುದು. ಮನುಷ್ಯನ ಅತೃಪ್ತ ಸ್ವಭಾವನ್ನು ಕವಿ ಹಾಸ್ಯ ಮಾಡಿದ್ದರು. ಆದರೀಗ ಪರಿಸ್ಥಿತಿ ಆ ಟೀಕೆಯನ್ನೂ ಮೀರಿ ಹದಗೆಟ್ಟಿದೆ. ಮನುಷ್ಯ ಸಹಿಸಲಸಾಧ್ಯವಾದ ಋತುಮಾನಗಳನ್ನು ಎದುರಿಸುತ್ತಿದ್ದೇವೆ. ಉತ್ತರ ಕರ್ನಾಟಕದ ಭಾಗಗಳಲ್ಲಿ ತಾಪಮಾನ ದಾಖಲೆಯ ಗರಿಷ್ಟ ಮಟ್ಟ ತಲುಪಿದೆ. ಇತ್ತೀಚಿನ ವರ್ಷಗಳಲ್ಲಿ ಬೇಸಿಗೆ, ಮಳೆ, ಚಳಿ ಎಲ್ಲವೂ ವಿಪರೀತವೇ. ಈಗ ನಾವು ಅನುಭವಿಸುತ್ತಿರುವುದು ಬೇಸಿಗೆ ಋತುವಿನ ಸಾಮಾನ್ಯ ಬಿಸಿಲಲ್ಲ. ಇದು ʼಎಲ್ ನಿನೋʼ (El Niño) ಎಂಬ ಜಾಗತಿಕ ಹವಾಮಾನ ವೈಪರೀತ್ಯದ ರುದ್ರನರ್ತನ ಎನ್ನುತ್ತಿದ್ದಾರೆ ತಜ್ಞರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಏನಿದು ʼಎಲ್ ನಿನೋʼ (El Niño)?

ಸಾಮಾನ್ಯವಾಗಿ ಪೆಸಿಫಿಕ್ ಮಹಾಸಾಗರದ ಸಮಭಾಜಕ ವೃತ್ತದ ಬಳಿ ಮಾರುತಗಳು ಪಶ್ಚಿಮದ ಕಡೆಗೆ (ಏಷ್ಯಾದ ಕಡೆಗೆ) ಬೀಸುತ್ತವೆ. ಈ ಮಾರುತಗಳು ಸಮುದ್ರದ ಮೇಲ್ಮೈಯಲ್ಲಿರುವ ಬೆಚ್ಚಗಿನ ನೀರನ್ನು ಏಷ್ಯಾದತ್ತ ತಳ್ಳುತ್ತವೆ. ಆಗ ದಕ್ಷಿಣ ಅಮೆರಿಕದ ತೀರದಲ್ಲಿ ತಳಭಾಗದ ತಂಪಾದ ನೀರು ಮೇಲೆ ಬರುತ್ತದೆ. ಆದರೆ, ʼಎಲ್ ನಿನೋʼ ಸಂಭವಿಸಿದಾಗ ಈ ಮಾರುತಗಳು ದುರ್ಬಲಗೊಳ್ಳುತ್ತವೆ. ಇದರಿಂದ ಬೆಚ್ಚಗಿನ ನೀರು ಏಷ್ಯಾದ ಕಡೆಗೆ ಹೋಗುವ ಬದಲು ಪೂರ್ವಕ್ಕೆ ಅಂದರೆ ದಕ್ಷಿಣ ಅಮೆರಿಕದ ಕಡೆಗೆ ಹರಿಯಲು ಆರಂಭಿಸುತ್ತದೆ. ಈ ಪ್ರಕ್ರಿಯೆಯಿಂದಾಗಿ ಪೆಸಿಫಿಕ್ ಮಹಾಸಾಗರದ ಕೇಂದ್ರ ಮತ್ತು ಪೂರ್ವ ಭಾಗದ ನೀರಿನ ತಾಪಮಾನವು ಅಸಹಜವಾಗಿ ಏರಿಕೆಯಾಗುತ್ತದೆ.

ಆಸ್ಟ್ರೇಲಿಯಾದ ಹವಾಮಾನ ಸಂಸ್ಥೆಯ ಪ್ರಕಾರ, ಸಮುದ್ರದ ನೀರನ್ನು ತಂಪುಗೊಳಿಸುವ ಈ ಪ್ರಕ್ರಿಯೆ ಈಗ ಅಂತ್ಯಗೊಳ್ಳುತ್ತಿದ್ದು, ಇದು ಮುಂದೆ ಉಷ್ಣತೆ ಏರಿಕೆಯಾಗಲು ದಾರಿ ಮಾಡಿಕೊಡುತ್ತಿದೆ. ಪೆಸಿಫಿಕ್ ಮಹಾಸಾಗರದ ಆಚೆಗಿನ ಅಮೆರಿಕದ ಹವಾಮಾನ ಮುನ್ಸೂಚಕರು ಅಂದಾಜಿಸುವಂತೆ, 2026ರ ಕೊನೆಯವರೆಗೆ ಎಲ್‌ ನಿನೋ ಮುಂದುವರಿಯುವ ಸಾಧ್ಯತೆಯಿದೆ.

image 2026 04 16T183710.554

ಎಲ್ ನಿನೋ ಪ್ರಭಾವದಿಂದಾಗಿ ಜಾಗತಿಕ ತಾಪಮಾನವು ಸುಮಾರು 0.2°C ನಷ್ಟು ಏರಿಕೆಯಾಗಬಹುದು ಎಂದು ವಿಜ್ಞಾನಿಗಳು ಭವಿಷ್ಯ ನುಡಿದಿದ್ದಾರೆ. ಈಗಾಗಲೇ ಹೆಚ್ಚುತ್ತಿರುವ ತಾಪಮಾನದ ಮೇಲೆ ಈ ಬದಲಾವಣೆಯೂ ಸೇರಿದರೆ, ಇದು ವಿಶ್ವದಾದ್ಯಂತ ಚಂಡಮಾರುತಗಳು ಮತ್ತು ಮಳೆಯ ಹರಡುವಿಕೆಯನ್ನೇ ಬದಲಾಯಿಸಬಹುದು. ಪೆಸಿಫಿಕ್ ಮಹಾಸಾಗರದ ನೀರಿನ ಮಟ್ಟವು ಸಾಮಾನ್ಯಕ್ಕಿಂತ 1.5°C ಕ್ಕಿಂತ ಹೆಚ್ಚು ಏರಿಕೆಯಾದಾಗ ಅಕ್ಷರಶಃ ರೌದ್ರರೂಪ ತಾಳುತ್ತದೆ. ವರ್ಷದ ಕೊನೆಯ ತಿಂಗಳುಗಳಲ್ಲಿ ಇಂತಹ ತೀವ್ರ ಸ್ಥಿತಿ ತಲುಪುವ ಸಾಧ್ಯತೆ ಸುಮಾರು ಶೇ.33ರಷ್ಟಿದೆ ಎಂದು ಅಮೆರಿಕದ ಸಂಸ್ಥೆ ಎಚ್ಚರಿಸಿದೆ.

ಎಲ್ ನಿನೋ ಬಂದಾಗ ವಿವಿಧ ಪ್ರದೇಶಗಳ ಮೇಲೆ ಅದರ ಪರಿಣಾಮಗಳೂ ವಿಭಿನ್ನವಾಗಿರುತ್ತವೆ. ಆಸ್ಟ್ರೇಲಿಯಾ, ಇಂಡೋನೇಷ್ಯಾ ಮತ್ತು ಫಿಲಿಪೈನ್ಸ್‌ನಂತಹ ದೇಶಗಳಲ್ಲಿ ಆಕಾಶವು ಮಳೆ ಮೋಡಗಳಿಲ್ಲದೆ ಎಂದಿಗಿಂತಲೂ ಹೆಚ್ಚು ಶುಭ್ರವಾಗಿರುತ್ತದೆ. ಇದರಿಂದ ಭೂಮಿ ಒಣಗಿ ಕಾಳ್ಗಿಚ್ಚಿನ ಅಪಾಯ ಹೆಚ್ಚಾಗುತ್ತದೆ. ದಕ್ಷಿಣ ಅಮೆರಿಕದ ಪಶ್ಚಿಮ ಕರಾವಳಿಯ ಪೆರು ಮತ್ತು ಈಕ್ವೆಡಾರ್‌ಗಳಲ್ಲಿ ಚಂಡಮಾರುತಗಳು ಸಾಮಾನ್ಯಕ್ಕಿಂತ ಹೆಚ್ಚಿನ ಮಳೆ ಸುರಿಸುತ್ತವೆ, ಇದು ಕೆಲವೊಮ್ಮೆ ನದಿಗಳು ಮತ್ತು ರಸ್ತೆಗಳನ್ನು ಜಲಾವೃತಗೊಳಿಸುತ್ತದೆ. ಇದೇ ಮಾದರಿಯ ಬದಲಾವಣೆಗಳಿಂದಾಗಿ ಭಾರತದಲ್ಲಿ ಮಳೆಯ ಪ್ರಮಾಣ ಕುಸಿಯುತ್ತದೆ. ಅದೇ ಸಮಯದಲ್ಲಿ, ಪೆಸಿಫಿಕ್ ಮಹಾಸಾಗರದ ಬೆಚ್ಚಗಿನ ನೀರಿನ ಪ್ರವಾಹದಿಂದಾಗಿ ಅಮೆರಿಕದ ಗಲ್ಫ್ ಕೋಸ್ಟ್ ಸಮೀಪದ ಕೆಲವು ರಾಜ್ಯಗಳಲ್ಲಿ ಚಳಿಗಾಲದಲ್ಲಿ ಅತಿ ಹೆಚ್ಚು ಮಳೆಯಾಗುತ್ತದೆ.

ಎಲ್ ನಿನೋ ಎಂಬುದು ನಿರಂತರವಾಗಿ ನಡೆಯುವ ಪ್ರಕ್ರಿಯೆಯಲ್ಲ. ಸಾಮಾನ್ಯವಾಗಿ ಪ್ರತಿ 2 ರಿಂದ 7 ವರ್ಷಕ್ಕೊಮ್ಮೆ ಸಂಭವಿಸುತ್ತದೆ. ಒಮ್ಮೆ ಆರಂಭವಾದ ಎಲ್ ನಿನೋ ಪ್ರಭಾವವು 9 ತಿಂಗಳಿಂದ ಹಿಡಿದು ಒಂದೂವರೆ ವರ್ಷದವರೆಗೆ ಇರಬಹುದು. ವಿಜ್ಞಾನಿಗಳ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ತಾಪಮಾನ ಏರಿಕೆಯಿಂದಾಗಿ ಎಲ್ ನಿನೋದ ತೀವ್ರತೆ ಮತ್ತಷ್ಟು ಹೆಚ್ಚುತ್ತಿದೆ. ಆದ್ದರಿಂದ, ಇಂತಹ ಪರಿಸ್ಥಿತಿಗಳಲ್ಲಿ ನೀರಿನ ಸಂರಕ್ಷಣೆ, ಅರಣ್ಯೀಕರಣ ಮತ್ತು ತೀವ್ರ ಶಾಖದಿಂದ ರಕ್ಷಿಸಿಕೊಳ್ಳುವ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವುದು ಅನಿವಾರ್ಯವಾಗಿದೆ.

ಎಲ್ ನಿನೋ ಭೂಮಿಯ ಒಟ್ಟಾರೆ ತಾಪಮಾನವನ್ನು ಹೆಚ್ಚಿಸುತ್ತದೆ. ಇದರ ಪ್ರಭಾವ ಇರುವ ವರ್ಷಗಳಲ್ಲಿ ಬೇಸಿಗೆಯ ಅವಧಿ ದೀರ್ಘವಾಗಿರುತ್ತದೆ ಮತ್ತು ಶಾಖದ ಅಲೆಗಳು (Heat Waves) ತೀವ್ರವಾಗಿರುತ್ತವೆ. ತೇವಾಂಶ ಕಡಿಮೆಯಾಗಿ ಒಣ ಹವೆ ಸೃಷ್ಟಿಯಾಗುವುದರಿಂದ, ವಾತಾವರಣವು ಕೆಂಡದಂತಾಗುತ್ತದೆ. ಇದರಿಂದಾಗಿ ಮನುಷ್ಯರಲ್ಲಿ ನಿರ್ಜಲೀಕರಣ, ಹೀಟ್ ಸ್ಟ್ರೋಕ್ ಮತ್ತು ಚರ್ಮದ ಕಾಯಿಲೆಗಳು ಹೆಚ್ಚಾಗಿ ಕಂಡುಬರುತ್ತವೆ. ಈ ಬಾರಿ ನಾವು ಅನುಭವಿಸುತ್ತಿರುವ ಅತಿಯಾದ ಧಗೆಗೆ ಈ ಜಾಗತಿಕ ವಿದ್ಯಮಾನವೇ ಪ್ರಮುಖ ಕಾರಣ.

ಅಸಲಿಗೆ ಈ ʼಹೀಟ್‌ ವೇವ್‌ʼ ಎಂದರೇನು?: ಭಾರತೀಯ ಹವಾಮಾನ ಇಲಾಖೆಯ (IMD) ಪ್ರಕಾರ, ಸಾಮಾನ್ಯ ತಾಪಮಾನಕ್ಕಿಂತ 4.5°C ನಿಂದ 6.4°C ವರೆಗೆ ಏರಿಕೆಯಾದರೆ ಅದನ್ನು ʼಬಿಸಿಗಾಳಿʼ ಎಂದು ಮತ್ತು 6.4°C ಗಿಂತ ಹೆಚ್ಚು ಏರಿಕೆಯಾದರೆ ಅದನ್ನು ʼತೀವ್ರ ಬಿಸಿಗಾಳಿʼ (Severe Heat Wave) ಎಂದು ಕರೆಯಲಾಗುತ್ತದೆ. ಬಯಲು ಸೀಮೆಯಲ್ಲಿ 40°C ಅಥವಾ ಅದಕ್ಕಿಂತ ಹೆಚ್ಚಾದಾಗ, ಕರಾವಳಿಭಾಗದಲ್ಲಿ 37°C ದಾಟಿದಾಗ ಹಾಗೂ ಗುಡ್ಡಗಾಡು ಪ್ರದೇಶದಲ್ಲಿ 30°C ತಲುಪಿದಾಗ ಅದನ್ನು ಹೀಟ್ ವೇವ್ ಎಂದು ಪರಿಗಣಿಸಲಾಗುತ್ತದೆ.

image 2026 04 16T183829.282

ಹೀಟ್‌ ವೇವ್‌ ಏಕೆ ಅಪಾಯಕಾರಿ?: ಸಾಮಾನ್ಯ ಬಿಸಿಲಿಗಿಂತ ಹೀಟ್ ವೇವ್ ಭೀಕರವಾಗಿರಲು ಕಾರಣ ‘ಹೀಟ್ ಇಂಡೆಕ್ಸ್’ (Heat Index). ಅತಿಯಾದ ತಾಪಮಾನದ ಜೊತೆಗೆ ವಾತಾವರಣದಲ್ಲಿ ಆರ್ದ್ರತೆ (Humidity) ಹೆಚ್ಚಾದಾಗ, ದೇಹದ ಬೆವರು ಆವಿಯಾಗುವುದಿಲ್ಲ. ಬೆವರು ಆವಿಯಾಗದಿದ್ದರೆ ದೇಹ ತಂಪಾಗುವುದಿಲ್ಲ. ಇದರಿಂದಾಗಿ ದೇಹದ ಒಳಗಿನ ತಾಪಮಾನವು ಅಪಾಯಕಾರಿ ಮಟ್ಟಕ್ಕೆ ಏರಿ, ರಕ್ತದೊತ್ತಡದಲ್ಲಿ ಏರುಪೇರಾಗುತ್ತದೆ ಮತ್ತು ಮೆದುಳಿನ ಮೇಲೆ ನೇರ ಪರಿಣಾಮ ಬೀರುತ್ತದೆ.‌ ಇದು ಹೀಟ್‌ ಸ್ಟ್ರೋಕ್‌ ಅಥವಾ ಸನ್‌ ಸ್ಟ್ರೋಕ್‌ಗೂ ಕಾರಣವಾಗುತ್ತದೆ.

ಹೀಟ್‌ ವೇವ್‌ ಮತ್ತು ಹೀಟ್‌ ಸ್ಟ್ರೋಕ್‌ ಕುರಿತು ಡಾಕ್ಟರ್‌ ತ್ರಿವೇಣಿ ಶೇಖರ್‌ ಮಾತನಾಡಿ, “ಬಿಸಿಲಿನಲ್ಲಿ ಕೆಲಸ ಮಾಡುವವರ ಮೇಲೆ ಅಥವಾ ಬಿಸಿಲಿಗೆ ನೇರವಾಗಿ ಒಡ್ಡಿಕೊಳ್ಳುವವರ ಮೇಲೆ ಈ ʼಹೀಟ್‌ ವೇವ್‌ʼ ಗಂಭೀರ ಪರಿಣಾಮ ಬೀರುತ್ತದೆ. ಬಿಸಿಲಿನಿಂದ ದೇಹ ನಿರ್ಜಲೀಕರಣವಾಗುತ್ತದೆ. ಹೆಚ್ಚು ಬೆವರು ಬಂದಾಗ ದೇಹದಲ್ಲಿನ ಲವಣಾಂಶಗಳು ಕಡಿಮೆಯಾಗುತ್ತದೆ. ಆಗ ಅತಿಯಾದ ಬೆವರು, ತಲೆಸುತ್ತು, ಮತ್ತು ಸುಸ್ತು ಕಂಡುಬರುತ್ತದೆ. ಇದು ಹೀಟ್ ಸ್ಟ್ರೋಕ್‌ನ ಮೊದಲ ಹಂತ. ದೇಹವು ಬೆವರುವುದನ್ನು ನಿಲ್ಲಿಸಿ, ದೇಹದ ತಾಪಮಾನ 104°F (40°C) ದಾಟಿದಾಗ ಇದು ಪ್ರಾಣಾಪಾಯಕ್ಕೆ ಕಾರಣವಾಗುವ ತುರ್ತು ಸ್ಥಿತಿ. ರಕ್ತದ ಸಾಂದ್ರತೆ ಹೆಚ್ಚಾಗಿ ಹೃದಯದ ಮೇಲೆ ಒತ್ತಡ ಬೀಳುತ್ತದೆ. ಇದರಿಂದ ಹೃದಯಾಘಾತ ಸಂಭವಿಸುವ ಸಾಧ್ಯತೆಯೂ ಇರುತ್ತದೆ. ಇಂತಹ ಹೊತ್ತಿನಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದೊಂದೇ ರಕ್ಷಣಾತ್ಮಕ ಕ್ರಮ. ಮಧ್ಯಾಹ್ನ 12 ಗಂಟೆಯಿಂದ ಸಂಜೆ 4ರವರೆಗೆ ಸಾಧ್ಯವಾದಷ್ಟು ಬಿಸಿಲಿಗೆ ಬರುವುದನ್ನು ನಿಲ್ಲಿಸಬೇಕು. ಬಾಯಾರಿಕೆಯಾಗುವವರೆಗೆ ಕಾಯುವುದು ದೊಡ್ಡ ತಪ್ಪು. ನಿಯಮಿತವಾಗಿ ನೀರು ಕುಡಿಯುತ್ತಲೇ ಇರಬೇಕು. ದೇಹ ಹೈಡ್ರೇಟ್‌ ಆಗಿದ್ದಷ್ಟೂ ಅಪಾಯ ಕಡಿಮೆ. ಕೇವಲ ನೀರು ಕುಡಿದರೆ ಸಾಲದು, ನೀರಿನೊಂದಿಗೆ ಉಪ್ಪಿನಂಶವಿರುವ ಪಾನೀಯಗಳನ್ನು (ಓ.ಆರ್.ಎಸ್, ಮಜ್ಜಿಗೆ, ನಿಂಬೆ ಹಣ್ಣಿನ ರಸ) ಸೇವಿಸುವುದು ಅಗತ್ಯ. ಬಿಸಿಲಿಗೆ ನೇರವಾಗಿ ಒಡ್ಡಿಕೊಳ್ಳುವುದನ್ನು ತಪ್ಪಿಸಲು ಕೊಡೆ ಅಥವಾ ಟೋಪಿ ಬಳಸಬೇಕು. ಮುಖ್ಯವಾಗಿ, ಮಧ್ಯಾಹ್ನದ ವೇಳೆ ಯಾವುದೇ ಕಠಿಣ ದೈಹಿಕ ಶ್ರಮದ ಕೆಲಸಗಳನ್ನು ಮಾಡದಿರುವುದು ಒಳಿತು. ತೆಳುವಾದ ಹತ್ತಿ ಬಟ್ಟೆಗಳನ್ನು ಬಳಸಬೇಕು. ಇನ್ನು ಮಸಾಲೆಯುಕ್ತ ಸಾಲಿಡ್‌ ಆಹಾರ ಸೇವನೆಗಿಂತ ಹಗುರ ಹಾಗೂ ದ್ರವಯಕ್ತ ಆಹಾರ ಸೇವನೆ ಒಳ್ಳೆಯದು” ಎಂದರು.

ಹೀಟ್‌ ಸ್ಟ್ರೋಕ್‌ ಕೇವಲ ದೇಹಕ್ಕೆ ಮಾತ್ರವಲ್ಲ ಮಾನಸಿಕ ಮತ್ತು ನರಮಂಡಲದ ಮೇಲೂ ಪರಿಣಾಮ ಬೀರುತ್ತದೆ ಎಂಬುದನ್ನು ವೈಜ್ಞಾನಿಕ ಸಂಶೋಧನೆಗಳೂ ದೃಢಪಡಿಸಿವೆ. ಇದನ್ನು ಕ್ಲಿನಿಕಲ್‌ ಸೈಕಾಲಜಿಸ್ಟ್‌ ಸುಧಾರಾಣಿ ಸಿ ಎಸ್‌ ಹೀಗೆ ವಿವರಿಸುತ್ತಾರೆ.. “ನಮ್ಮ ಮಿದುಳು ತುಂಬಾ ಮೃದುವಾದ ಅಂಗ. ಅದು ಸರಿಯಾಗಿ ಕೆಲಸ ಮಾಡಲು ನಿರ್ದಿಷ್ಟ ತಾಪಮಾನದ ಅಗತ್ಯವಿರುತ್ತದೆ. ದೇಹದ ಉಷ್ಣತೆ 40°C ದಾಟಿದಾಗ, ಮಿದುಳಿನ ಜೀವಕೋಶಗಳು ಒತ್ತಡಕ್ಕೆ ಒಳಗಾಗುತ್ತವೆ. ಇದರಿಂದಾಗಿ ವ್ಯಕ್ತಿಯಲ್ಲಿ ಗೊಂದಲ, ಅಸಂಬದ್ಧ ಮಾತು, ದಿಕ್ಕೆಟ್ಟ ಭಾವ ಕಾಣಿಸಿಕೊಳ್ಳಬಹುದು. ಒಬ್ಬ ವ್ಯಕ್ತಿ ಇದ್ದಕ್ಕಿದ್ದಂತೆ ವಿಚಿತ್ರವಾಗಿ ವರ್ತಿಸುತ್ತಿದ್ದಾನೆ ಎಂದರೆ ಅದು ಮಿದುಳಿಗೆ ಹೀಟ್ ಸ್ಟ್ರೋಕ್ ತಟ್ಟಿರುವ ಸಂಕೇತವಾಗಿರಬಹುದು. ತೀವ್ರವಾದ ಶಾಖ ಅಥವಾ ಸೆಕೆ ಮನುಷ್ಯನ ತಾಳ್ಮೆಯನ್ನು ಕೆಡಿಸುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ದೇಹವು ತನ್ನನ್ನು ತಾನು ತಂಪುಗೊಳಿಸಿಕೊಳ್ಳಲು ಅತಿಯಾದ ಶಕ್ತಿ  ವ್ಯಯಿಸುತ್ತಿರುವಾಗ, ಮೆದುಳಿಗೆ ಹೋಗುವ ರಕ್ತದ ಹರಿವಿನಲ್ಲಿ ವ್ಯತ್ಯಾಸವಾಗಿ ವ್ಯಕ್ತಿಯಲ್ಲಿ ವಿಪರೀತ ಸಿಟ್ಟು, ಕಿರಿಕಿರಿ ಮತ್ತು ಆತಂಕ ಹೆಚ್ಚಾಗುತ್ತದೆ. ಬಿಸಿಲಿನ ದಿನಗಳಲ್ಲಿ ರಸ್ತೆಗಳಲ್ಲಿ ಜಗಳಗಳು ಅಥವಾ ‘ರೋಡ್ ರೇಜ್’ ಪ್ರಕರಣಗಳು ಹೆಚ್ಚಾಗಲು ಇದೂ ಒಂದು ಕಾರಣವಿರಬಹುದು”

image 2026 04 16T183941.233

ಇದನ್ನೂ ಓದಿ: ಅಬ್ಬರಿಸುತ್ತಿದೆ ಬೇಸಿಗೆ | ʼಹೀಟ್ ವೇವ್ʼ ಎದುರಿಸಲು ಸನ್ನದ್ಧರಾಗಿ

“ಸುಡುವ ಬಿಸಿಲಿನಲ್ಲಿ ಕೆಲಸ ಮಾಡುವಾಗ ಅಥವಾ ಸಂಚರಿಸುವಾಗ ನಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಏಕಾಗ್ರತೆ ಕೂಡ ಕಡಿಮೆಯಾಗುತ್ತದೆ. ಮೆದುಳು ನಿಧಾನವಾಗಿ ಪ್ರತಿಕ್ರಿಯಿಸಲು ಪ್ರಾರಂಭಿಸುತ್ತದೆ, ಇದರಿಂದಾಗಿ ಕೆಲಸದಲ್ಲಿ ತಪ್ಪುಗಳಾಗುವುದು ಅಥವಾ ವಾಹನ ಚಲಾಯಿಸುವಾಗ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚು. ಇದು ತಾತ್ಕಾಲಿಕವಾಗಿ ನಿಮ್ಮನ್ನು ಮೆಂಟಲ್ ಅಥವಾ ಮಂಕು ಕವಿದ ಸ್ಥಿತಿಗೆ ತಳ್ಳಬಹುದು. ಸರಳವಾಗಿ ಹೇಳುವುದಾದರೆ, ಬಿಸಿಲಿನ ಧಗೆಯು ರಾತ್ರಿಯ ನಿದ್ರೆ ಕೆಡಿಸುತ್ತದೆ. ಸರಿಯಾದ ನಿದ್ರೆ ಇಲ್ಲದಿದ್ದಾಗ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ದೀರ್ಘಕಾಲದವರೆಗೆ ಇಂತಹ ಬಿಸಿ ವಾತಾವರಣದಲ್ಲಿ ವಾಸಿಸುವ ಜನರಲ್ಲಿ ದಣಿವು ಮತ್ತು ಉತ್ಸಾಹದ ಕೊರತೆ ಕಂಡುಬರುತ್ತದೆ. ಇದು ಕಾಲಕ್ರಮೇಣ ಮಾನಸಿಕ ಬಳಲಿಕೆಗೆ ಕಾರಣವಾಗಬಹುದು. ಹೀಟ್ ಸ್ಟ್ರೋಕ್ ತೀವ್ರವಾದಾಗ ವ್ಯಕ್ತಿಗೆ ಇಲ್ಲದಿರುವುದು ಇದ್ದಂತೆ ಕಾಣುವ ‘ಭ್ರಮೆ’ ಉಂಟಾಗಬಹುದು. ಪ್ರಜ್ಞೆ ತಪ್ಪುವ ಮೊದಲು ಮನುಷ್ಯ ತನ್ನ ನಿಯಂತ್ರಣ ಕಳೆದುಕೊಳ್ಳುವುದು ಅಥವಾ ದಾರಿ ತಪ್ಪುವುದು ಸಂಭವಿಸುತ್ತದೆ. ಇದು ಅತ್ಯಂತ ತುರ್ತು ಪರಿಸ್ಥಿತಿಯಾಗಿದ್ದು, ತಕ್ಷಣ ಮೆದುಳನ್ನು ತಂಪು ಮಾಡದಿದ್ದರೆ ಶಾಶ್ವತ ನರ ದೌರ್ಬಲ್ಯ ಉಂಟಾಗಬಹುದು. ಹೀಗಾದಾಗ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು” ಎಂದರು.

ಇದನ್ನೂ ಓದಿ ಎಚ್‌ ಡಿ ದೇವೇಗೌಡರಿಗೊಂದು ಬಹಿರಂಗ ಪತ್ರ…

ಕಾಲ ಕಾಲಕ್ಕೆ ಪ್ರಕೃತಿ ನೀಡುವ ಅಪಾಯದ ಸೂಚನೆಗಳನ್ನು ಮರೆತಂತೆ ನಿರ್ಲಕ್ಷಿಸುವುದು ಮನುಕುಲ ಮಾಡುವ ದೊಡ್ಡ ತಪ್ಪು. ಎಂದೂ ಕಂದು ಕೇಳರಿಯದ ಬೇಸಿಗೆ, ಈ ʼಎಲ್‌ ನಿನೋʼ ಇವೆಲ್ಲವೂ ನಮ್ಮದೇ ಜೀವನ ಶೈಲಿಯ, ಪರಿಸರದ ಮೇಲೆ ನಾವು ಮಾಡುವ ದೌರ್ಜನ್ಯದ ಪ್ರತಿಫಲವೇ ಆಗಿವೆ. ಬರುವ ಮೇ ತಿಂಗಳು ಇನ್ನಷ್ಟು ಕಠಿಣ ದಿನಗಳನ್ನು ಒಡ್ಡಬಹುದು. ಅದೆಲ್ಲಕ್ಕೂ ಇಂದೇ ಸಿದ್ಧರಾಗಬೇಕಿದೆ. ಮುಂಜಾಗ್ರತಾ ಕ್ರಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವುದು, ನಮ್ಮವರ ಜತೆಗೆ ಮೂಕ ಪ್ರಾಣಿಗಳ ಮೇಲೂ ಕೊಂಚ ದಯೆ ಇರಿಸುವುದಷ್ಟೇ ನಾವು ಈಗ ಮಾಡಬಹುದಾದ ಮುಖ್ಯ, ಅನಿವಾರ್ಯ ಕಾರ್ಯ!

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹವಾಮಾನ ವರದಿ | ಬೆಂಗಳೂರು ಸೇರಿ ಕರ್ನಾಟಕದ ಹಲವೆಡೆ ಅ.22ರವರೆಗೆ ಮಳೆ

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಮಳೆ ಮುಂದುವರಿಯುವ...

ಬೀಳಗಿ | ಬೆಳೆ ಉಳಿಸಲು ಘಟಪ್ರಭಾ ಎಡದಂಡೆ ಕಾಲುವೆಯ ಕೊನೆಯವರೆಗೆ ನೀರು ಹರಿಸಿ: ಭಾರತೀಯ ಕಿಸಾನ್‌ ಸಂಘ ಆಗ್ರಹ

ಘಟಪ್ರಭಾ ಮತ್ತು ಕೃಷ್ಣಾ ನದಿಗಳಲ್ಲಿ ಸಾಕಷ್ಟು ನೀರಿದ್ದರೂ ಘಟಪ್ರಭಾ ಎಡದಂಡೆ ಕಾಲುವೆಯ...

ಈ ದಿನ ಸಂಪಾದಕೀಯ | ಅಂಕಿತಾ ಹತ್ಯೆ ಶಂಕಿತರಿಗೆ ಸಾಂವಿಧಾನಿಕ ಹುದ್ದೆ ಸರಿಯೇ?

ಅಂಕಿತಾ ಭಂಡಾರಿ ಕೊಲೆ ಪ್ರಕರಣದಲ್ಲಿದ್ದ ವಿಐಪಿ ದುಶ್ಯಂತ್‌ ಅವರ ಮೇಲಿನ...

‘ಮೋದಿಯನ್ನು ದೇವರನ್ನಾಗಿಸುವ ಯತ್ನ’: ಬಿಹಾರ ಸಿಎಂ ಹೇಳಿಕೆಗೆ ಪ್ರಶಾಂತ್ ಕಿಶೋರ್ ಕಿಡಿ

ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮನಿಗೂ ಮನೆ ಒದಗಿಸಿದರು ಎಂಬ ಬಿಹಾರ...