ಸೌರವ್‌, ವಿಜೇತಾ, ಆಶುತೋಷ್:‌ ಯಾರೀ ‌ʼಕಾಕ್ರೋಚ್ʼ ಸೇನಾನಿಗಳು?

Date:

ಒಬ್ಬರು ಡೇಟಾ ಮತ್ತು ತನಿಖೆಯಲ್ಲಿ ಎಕ್ಸ್‌ಪರ್ಟ್ ಆಗಿದ್ದರೆ, ಇನ್ನೊಬ್ಬರು ಸಿನಿಮಾ-ಸಾಹಿತ್ಯದ ಮೂಲಕ ಜನರ ಪ್ರಜ್ಞೆಯನ್ನು ಬಡಿದೆಬ್ಬಿಸಬಲ್ಲವರು, ಮಗದೊಬ್ಬರು ಅಂತಾರಾಷ್ಟ್ರೀಯ ಮಟ್ಟದ ರಣತಂತ್ರ ಮತ್ತು ತಳಮಟ್ಟದ ಯುವ ಹೋರಾಟದ ಅನುಭವ ಹೊಂದಿರುವವರು. ಡಿಜಿಟಲ್ ಪರದೆಯನ್ನು ದಾಟಿ ನೈಜ ಯುವ ಕ್ರಾಂತಿಗೆ ಸಜ್ಜಾಗಿರುವ ಈ ಮೂವರೂ CJP ಸಾರಥಿಗಳು ಸಾಂಪ್ರದಾಯಿಕ ರಾಜಕೀಯದ ಲೆಕ್ಕಾಚಾರಗಳನ್ನು ಉಲ್ಟಾ ಮಾಡುವುದಂತೂ ಖಂಡಿತ!

- Advertisement -

‘ಕಾಕ್ರೋಚ್ ಜನತಾ ಪಾರ್ಟಿ’ ಈಗ ಆನ್‌ಲೈನ್ ವಿಡಂಬನಾತ್ಮಕ ವೇದಿಕೆಯಾಗಿ ಉಳಿದಿಲ್ಲ. ದೇಶದ ಶಿಕ್ಷಣ ವ್ಯವಸ್ಥೆಯ ಲೋಪದೋಷಗಳ ವಿರುದ್ಧ ದೆಹಲಿಯಲ್ಲಿ ಬೃಹತ್ ಹೋರಾಟಕ್ಕೆ ಸಜ್ಜಾಗಿರುವ ʼಯುವ ಸೈನ್ಯʼ. ಸಾಂಪ್ರದಾಯಿಕ ರಾಜಕೀಯ ಪಕ್ಷಗಳಂತೆ ಹಿರಿಯ ನಾಯಕರನ್ನೋ ಅಥವಾ ನಿವೃತ್ತ ಅಧಿಕಾರಶಾಹಿಗಳನ್ನೋ ನೆಚ್ಚಿಕೊಳ್ಳದ CJP, ಇಂಟರ್ನೆಟ್ ಯುಗದ ಯುವ ಜನತೆಯ ನಾಡಿಮಿಡಿತ ಬಲ್ಲ, ತಳಮಟ್ಟದ ಹೋರಾಟಗಳ ಅನುಭವವಿರುವ ಮೂವರು ಪ್ರಭಾವಶಾಲಿ ಯುವ ಬುದ್ಧಿಜೀವಿಗಳನ್ನು ತನ್ನ ಅಧಿಕೃತ ವಕ್ತಾರರನ್ನಾಗಿ ನೇಮಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರಾಮಲೀಲೆಗಳಲ್ಲಿ ರಾಮ, ಹನುಮ, ಲಕ್ಷ್ಮಣ ಪಾತ್ರಗಳಲ್ಲಿ ದಾನಿಶ್ –...

ರಾಮನಾಗಿ ದಾನಿಶ್. ಹನುಮಂತನಾಗಿ ಯೂನುಸ್. ಲಕ್ಷ್ಮಣನಾಗಿ ಶೇರ್ ಖಾನ್. ರಾವಣನಾಗಿ ಇಕ್ಬಾಲ್ ಅಹ್ಮದ್. ಇವರೆಲ್ಲರೂ ಮುಸ್ಲಿಂ ಕಲಾವಿದರು. ಆದರೆ, ಇವರು ಅಭಿನಯಿಸಿರುವುದು ಹಿಂದುಗಳ ಮಹಾಕಾವ್ಯ ರಾಮಾಯಣದ ಪಾತ್ರಗಳಲ್ಲಿ. ಉತ್ತರ ಭಾರತದ ಹಲವು ರಾಮಲೀಲೆಗಳಲ್ಲಿ...

ಅಮೆರಿಕದ ಮಧ್ಯಂತರ ಚುನಾವಣೆ: ಬೆಲೆ ಏರಿಕೆ, ಇರಾನ್ ಯುದ್ಧದ...

ಅಮೆರಿಕದಲ್ಲಿ ಏರುತ್ತಿರುವ ಪೆಟ್ರೋಲ್ ಬೆಲೆ, ದುಬಾರಿಯಾಗುತ್ತಿರುವ ದಿನಬಳಕೆಯ ವಸ್ತುಗಳು ಹಾಗೂ ಇರಾನ್ ವಿರುದ್ಧದ ಯುದ್ಧದ ಆರ್ಥಿಕ ಪರಿಣಾಮಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ದೊಡ್ಡ ರಾಜಕೀಯ ಸವಾಲಾಗಿವೆ. ನವೆಂಬರ್ 3ರಂದು ನಡೆಯಲಿರುವ ಮಧ್ಯಂತರ...

ಖಾಲಿದ್‌ರಂತೆ ಸಿಜೆಪಿ ನಾಯಕರನ್ನೂ ದೀರ್ಘ ಜೈಲುವಾಸದ ಸುಳಿಯಲ್ಲಿ ಸಿಲುಕಿಸುವ...

ಚುನಾವಣಾ ಆಯೋಗದ ಅಕ್ರಮ ಪ್ರಶ್ನಿಸಿದ ಸಿಜೆಪಿ ನಾಯಕರ ವಿರುದ್ಧ ಸರಣಿ ದೂರು ದಾಖಲಿಸಲಾಗುತ್ತಿದೆ. ಮೋದಿ ಸರ್ಕಾರದ ಅವಧಿಯಲ್ಲಿ ‘ವಿಚಾರಣೆಯೇ ಒಂದು ಶಿಕ್ಷೆ’ ಎನ್ನುವ ತಂತ್ರ ಪುನರಾವರ್ತನೆಯಾಗುತ್ತಿದೆಯೇ? ಉಮರ್‌ ಖಾಲಿದ್‌ ರೀತಿಯಲ್ಲೇ ಸೌರವ್ ದಾಸ್,...

ದೇಶದ ಇತಿಹಾಸದಲ್ಲೇ ಹೊಸ ತಲೆಮಾರಿನ ನಾಯಕತ್ವದ ಮಾದರಿಯನ್ನು ಹುಟ್ಟುಹಾಕುತ್ತಿರುವ ಆ ಮೂವರು ಯುವ ಸಂವಹನ ಸಾರಥಿಗಳು ಇವರೇ…

1. ಸೌರವ್‌ ದಾಸ್

ನವದೆಹಲಿ ಮೂಲದ ಸೌರವ್ ದಾಸ್ ಒಬ್ಬ ಇನ್ವೆಸ್ಟಿಗೇಟಿವ್‌ ಜರ್ನಲಿಸ್ಟ್. ಸಿಜೆಪಿಯ ಮುಖ್ಯ ವಕ್ತಾರರಾಗಿ ಇಡೀ ಸಂವಹನ ಪಡೆಯನ್ನು ಮುನ್ನಡೆಸಲಿದ್ದಾರೆ. ಜರ್ನಲಿಸಂ ಮತ್ತು ಮಾಸ್ ಕಮ್ಯುನಿಕೇಷನ್ ಪದವೀಧರರಾದ ಸೌರವ್, 2020 ರಿಂದ ತಮ್ಮ ಬರವಣಿಗೆಯ ವೃತ್ತಿಜೀವನವನ್ನು ಆರಂಭಿಸಿದರು. ಆಡಳಿತದಲ್ಲಿ ಪಾರದರ್ಶಕತೆ, ಶಾಸನ ಮತ್ತು ನ್ಯಾಯಾಂಗದ ಹೊಣೆಗಾರಿಕೆಯ ಕುರಿತು ದೇಶದ ಪ್ರಮುಖ ಮಾಧ್ಯಮಗಳಲ್ಲಿ ತನಿಖಾ ವರದಿಗಳನ್ನು ಪ್ರಕಟಿಸುವ ಮೂಲಕ “ಸಾಮಾಜಿಕ ಪ್ರಜ್ಞೆಯುಳ್ಳ ಪತ್ರಕರ್ತ” ಎಂದು ಗುರುತಿಸಿಕೊಂಡಿದ್ದಾರೆ. ವಿಶೇಷವಾಗಿ ಮಾಹಿತಿ ಹಕ್ಕು ಕಾಯ್ದೆಯನ್ನು (RTI) ಸಮರ್ಥವಾಗಿ ಬಳಸಿ ಸರ್ಕಾರದ ಆಡಳಿತಾತ್ಮಕ ಲೋಪಗಳನ್ನು ಹೊರತರುವುದರಲ್ಲಿ ಇವರು ಎಕ್ಸ್‌ಪರ್ಟ್.

ಇವರು ಬೀದಿ ಹೋರಾಟಗಳಲ್ಲೂ ಮುಂಚೂಣಿಯಲ್ಲಿದ್ದಾರೆ. ನವೆಂಬರ್ 2025 ರಲ್ಲಿ ದೆಹಲಿಯಲ್ಲಿ ವಾಯು ಮಾಲಿನ್ಯ ಭೀಕರ ಮಟ್ಟಕ್ಕೆ ತಲುಪಿದಾಗ, ಇಂಡಿಯಾ ಗೇಟ್ ಬಳಿ ನಡೆದ ಬೃಹತ್ ‘ಮಾಲಿನ್ಯ ವಿರೋಧಿ ಪ್ರತಿಭಟನೆ’ಯ ನೇತೃತ್ವ ವಹಿಸಿದವರಲ್ಲಿ ಇವರೂ ಒಬ್ಬರು.

ಸಿಜೆಪಿ ಸೇರಿದ ಬೆನ್ನಲ್ಲೇ ಸೌರವ್ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ನಿಗಾಕ್ಕೆ ಒಳಗಾಗಿದ್ದಾರೆ. ಆಮ್ ಆದ್ಮಿ ಪಾರ್ಟಿಗೆ (AAP) ಸಂಬಂಧಿಸಿದ ಪ್ರಮುಖ ಕಾನೂನು ಪ್ರಕರಣವೊಂದರಲ್ಲಿ ನ್ಯಾಯಾಧೀಶರಾದ ಸ್ವರ್ಣಕಾಂತ ಶರ್ಮಾ ಅವರ ವಿರುದ್ಧ ಇವರು ನಡೆಸಿದ್ದ ತೀಕ್ಷ್ಣ ವಾಗ್ದಾಳಿ ಹಾಗೂ ಈ ಹಿಂದೆ ಉಮರ್ ಖಾಲಿದ್ ಸೇರಿದಂತೆ ಹಲವು ಹೋರಾಟಗಾರರೊಂದಿಗೆ ಇವರಿಗಿದ್ದ ವೃತ್ತಿಪರ ಸಂಪರ್ಕವನ್ನು ಮುಂದಿಟ್ಟುಕೊಂಡು ವಿರೋಧಿಗಳು ಆನ್‌ಲೈನ್‌ನಲ್ಲಿ ಪ್ರಶ್ನಿಸುತ್ತಿದ್ದಾರೆ. ಆದರೆ, ಇವೆಲ್ಲವನ್ನೂ ತಳ್ಳಿಹಾಕಿರುವ ಸೌರವ್, “ದೇಶದ ಯುವಕರಿಗೆ ಭವಿಷ್ಯದ ಭರವಸೆ ನೀಡಿ ನಂತರ ಅವರನ್ನು ಕಸದಂತೆ ಕಾಣುವ ವ್ಯವಸ್ಥೆಯನ್ನು ಬದಲಾಯಿಸುವ ಸಮಯ ಈಗ ಬಂದಿದೆ” ಎಂದು ದೃಢವಾಗಿ ನಿಂತಿದ್ದಾರೆ.

image 2026 06 05T180128.209

2. ವಿಜೇತಾ ದಹಿಯಾ

ವಿಜೇತಾ ದಹಿಯಾ ಅವರು ತಾಂತ್ರಿಕ ಶಿಕ್ಷಣದ ಹಿನ್ನೆಲೆ ಹೊಂದಿದ್ದರೂ, ಕಲೆ, ಸಾಹಿತ್ಯ, ಸಿನಿಮಾ ಮತ್ತು ಡಿಜಿಟಲ್ ಜಗತ್ತಿನ ವೈಚಾರಿಕ ಸಂಶೋಧನೆಯಲ್ಲಿ ಅದ್ಭುತ ಸಾಧನೆ ಮಾಡಿರುವ ಬಹುಮುಖ ಪ್ರತಿಭೆ.

ದೆಹಲಿಯ ಪ್ರತಿಷ್ಠಿತ ಇಂಜಿನಿಯರಿಂಗ್ ಸಂಸ್ಥೆಯಾದ ‘ಡೆಲ್ಲಿ ಟೆಕ್ನಾಲಜಿಕಲ್ ಯೂನಿವರ್ಸಿಟಿ’ (DTU) ಯ ಹಳೆಯ ವಿದ್ಯಾರ್ಥಿ. ಭಾರತದ ಹಲವು ಮುಂಚೂಣಿ ಡಿಜಿಟಲ್ ಕ್ರಿಯೇಟರ್‌ಗಳಿಗೆ ರಾಜಕೀಯ ಹಾಗೂ ಸಾಮಾಜಿಕ ವಿಷಯಗಳ ಕುರಿತು ಆಳವಾದ ಸಂಶೋಧನೆ ಮತ್ತು ಕಂಟೆಂಟ್ ರೈಟರ್ ಆಗಿ ಇವರು ಕೆಲಸ ಮಾಡಿದ್ದಾರೆ. ಸಮಾಜ, ರಾಜಕಾರಣ, ಸಂಸ್ಕೃತಿ ಮತ್ತು ಧರ್ಮದ ಕುರಿತು ಇನ್‌ಸ್ಟಾಗ್ರಾಮ್ ಮೂಲಕ ತಮ್ಮ ವಿಚಾರಗಳನ್ನು ಹಂಚಿಕೊಳ್ಳುತ್ತಾ ಯುವ ಸಮೂಹದಲ್ಲಿ ಪ್ರಭಾವ ಬೀರಿದ್ದಾರೆ.

ಹರಿಯಾಣ ಪ್ರೇಕ್ಷಕರ ಮನಗೆದ್ದ ‘ದರಾರೇಂ’ (Dararein) ಚಲನಚಿತ್ರ ಮತ್ತು ‘ಓಪರಿ ಪರಾಯಿ’ (Opri Paraai) ವೆಬ್ ಸೀರೀಸ್‌ಗಳನ್ನು ಇವರೇ ಸ್ವತಃ ಬರೆದು ನಿರ್ದೇಶಿಸಿದ್ದಾರೆ. ಸಾಹಿತ್ಯ ಲೋಕದಲ್ಲೂ ಗುರುತಿಸಿಕೊಂಡಿರುವ ಇವರ ಚೊಚ್ಚಲ ಪುಸ್ತಕ ‘Power of Universe’ (ಲಾ ಆಫ್ ಅಟ್ರಾಕ್ಷನ್ ಪರಿಕಲ್ಪನೆಯನ್ನು ವೈಜ್ಞಾನಿಕವಾಗಿ ಪ್ರಶ್ನಿಸಿದ ಕೃತಿ) 2024 ರ ಬೆಸ್ಟ್ ಸೆಲ್ಲರ್ ಆಗಿತ್ತು. ನಂತರ ಕಾರ್ಪೊರೇಟ್ ಸಂಸ್ಕೃತಿಯನ್ನು ವಿಡಂಬಿಸುವ ‘To Hell with That Job’ ಎಂಬ ಎರಡನೇ ಪುಸ್ತಕವನ್ನು ಬರೆದಿದ್ದಾರೆ. ಫ್ರಾಂಜ್ ಕಾಫ್ಕಾ ಮತ್ತು ಮೋಹನ್ ರಾಕೇಶ್ ಅವರಂತಹ ಶ್ರೇಷ್ಠ ಸಾಹಿತಿಗಳಿಂದ ಪ್ರೇರಿತರಾಗಿರುವ ವಿಜೇತಾ, ‘ಸಾಹಿತ್ಯ, ಸಿನಿಮಾ ಮತ್ತು ಸಂಗೀತವು ಸಮಾಜದ ಸಾಮೂಹಿಕ ಪ್ರಜ್ಞೆಯನ್ನು ರೂಪಿಸುವ ಪ್ರಬಲ ಅಸ್ತ್ರಗಳು’ ಎಂದು ಬಲವಾಗಿ ನಂಬಿದ್ದಾರೆ.

3. ಆಶುತೋಷ್ ರಂಕಾ

ಆಶುತೋಷ್ ರಂಕಾ ಅವರು ವಿದೇಶದಲ್ಲಿ ಅತ್ಯಂತ ಆರಾಮದಾಯಕ ಮತ್ತು ಲಕ್ಷಾಂತರ ರೂಪಾಯಿ ಸಂಬಳದ ಜಾಗತಿಕ ಉದ್ಯೋಗದಲ್ಲಿದ್ದರೂ, ಅದನ್ನು ತೊರೆದು ತಾಯ್ನಾಡಿನ ಯುವಕರಿಗಾಗಿ ಹೋರಾಡಲು ಭಾರತಕ್ಕೆ ಮರಳಿದ ಯುವಕ.

ಇವರು ಭಾರತದ ಐಐಟಿ ಕಾನ್ಪುರ (IIT Kanpur) ದಲ್ಲಿ ಪದವಿ ಮುಗಿಸಿದ ನಂತರ, ಲಂಡನ್‌ನ ‘ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್’ (LSE) ನಲ್ಲಿ ಉನ್ನತ ಶಿಕ್ಷಣ ಪೂರೈಸಿದ್ದಾರೆ. ಆನಂತರ, ಜಾಗತಿಕ ಮಟ್ಟದ ಅತ್ಯಂತ ಪ್ರತಿಷ್ಠಿತ ಮ್ಯಾನೇಜ್‌ಮೆಂಟ್ ಕನ್ಸಲ್ಟಿಂಗ್ ಸಂಸ್ಥೆಯಾದ ‘ಮೆಕಿನ್ಸೆ ಆಂಡ್ ಕಂಪನಿ’ (McKinsey & Company) ಯ ಲಂಡನ್ ಶಾಖೆಯಲ್ಲಿ ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

2025 ರಲ್ಲಿ ಲಂಡನ್ ಉದ್ಯೋಗವನ್ನು ತೊರೆದು ಭಾರತಕ್ಕೆ ಮರಳಿದ ಇವರು, ರಾಜಸ್ಥಾನದ ಜೈಪುರವನ್ನು ಕೇಂದ್ರವಾಗಿರಿಸಿಕೊಂಡು ಪರಿಸರ, ಶಿಕ್ಷಣ ಮತ್ತು ಯುವಜನತೆಗೆ ಸಂಬಂಧಿಸಿದ ಹಲವು ಪ್ರಮುಖ ಸಾರ್ವಜನಿಕ ಚಳವಳಿಗಳನ್ನು ಮುನ್ನಡೆಸುತ್ತಿದ್ದಾರೆ. ಪರಿಸರ ಕಾಳಜಿಯ ‘ಡೋಲ್ ಕಾ ಬಾಧ್’ ಅಭಿಯಾನ, ವಿದ್ಯಾರ್ಥಿಗಳ ಮಾನಸಿಕ ಒತ್ತಡದ ವಿರುದ್ಧ ನಡೆದ ‘ಅಮೈರಾ ಆತ್ಮಹತ್ಯೆ ಪ್ರಕರಣ’ ಮತ್ತು ಪ್ರಸ್ತುತ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿರುವ ‘ನೀಟ್ (NEET) ಪೇಪರ್ ಲೀಕ್’ ವಿವಾದಕ್ಕೆ ಸಂಬಂಧಿಸಿದ ಯುವ ಚಳವಳಿಗಳಲ್ಲಿ ಇವರು ಮುಂಚೂಣಿಯಲ್ಲಿದ್ದಾರೆ.

ಪಕ್ಷದ ವಕ್ತಾರರ ಹಳೆಯ ಹಿನ್ನೆಲೆಗಳ ಕುರಿತು ಆನ್‌ಲೈನ್‌ನಲ್ಲಿ ಟೀಕೆಗಳು ವ್ಯಕ್ತವಾದಾಗ ಪತ್ರಿಕಾಗೋಷ್ಠಿಯಲ್ಲಿ ಅತ್ಯಂತ ಪ್ರಬುದ್ಧವಾಗಿ ಉತ್ತರಿಸಿದ ಆಶುತೋಷ್, “ನಮ್ಮ ಹಳೆಯ ಸಂಪರ್ಕಗಳು ಅಥವಾ ಹಿನ್ನೆಲೆ ಇಲ್ಲಿ ಮುಖ್ಯವಲ್ಲ. ಈ ಹೋರಾಟ ಅದಕ್ಕಿಂತಲೂ ದೊಡ್ಡದಾಗಿದೆ. ದೇಶದ ಯುವಕರ ಭವಿಷ್ಯಕ್ಕಾಗಿ ನಡೆಯುತ್ತಿರುವ ಈ ಹೋರಾಟದಲ್ಲಿ ಸಿಜೆಪಿ ಯಾವುದೇ ವ್ಯಕ್ತಿ ಅಥವಾ ಹಳೆಯ ಸಂಘಟನೆಗಳಿಗಿಂತ ಮಿಗಿಲಾದುದು” ಎಂದು ಹೇಳುವ ಮೂಲಕ ವಿರೋಧಿಗಳ ಬಾಯಿ ಮುಚ್ಚಿಸಿದ್ದಾರೆ. ಪಕ್ಷ ಸೇರಿದ ಬೆನ್ನಲ್ಲೇ ಇವರು “ಇಂಕ್ವಿಲಾಬ್ ಜಿಂದಾಬಾದ್” ಘೋಷಣೆ ಕೂಗಿ ಯುವ ಪಡೆಗೆ ಹೊಸ ಸ್ಫೂರ್ತಿ ತುಂಬಿದ್ದಾರೆ.

ಇದನ್ನೂ ಓದಿ: ‘ನನ್ನ ಹಣೆಬರಹವನ್ನು ಸಂವಿಧಾನದ ಕೈಗಿಟ್ಟಿದ್ದೇನೆ’; ಭಾರತದೆಡೆಗೆ ಹೊರಟಿರುವ ಅಭಿಜೀತ್ ದೀಪ್ಕೆ

ಪಕ್ಷದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರ ದೆಹಲಿ ಆಗಮನದಂದು ಸರಿಯಾಗಿ (ಜೂನ್ 6) ಜಂತರ್ ಮಂತರ್‌ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಯಲಿದೆ. ಕೆಲವರು ಇದನ್ನು ಕೇವಲ ‘ಆನ್‌ಲೈನ್ ನಾಟಕ’ ಎಂದು ಲೇವಡಿ ಮಾಡುತ್ತಿದ್ದರೂ, ಸಿಜೆಪಿ ತಂಡ ಮಾತ್ರ ಬೀದಿ ಹೋರಾಟದ ಮೂಲಕ ದೇಶದ ಸಾರ್ವಜನಿಕ ಸಂಸ್ಥೆಗಳಲ್ಲಿ ಪಾರದರ್ಶಕತೆ ತರಲು ಭದ್ರವಾದ ಹೆಜ್ಜೆ ಇಡಲು ಮುಂದಾಗಿದೆ.

ಒಬ್ಬರು ಡೇಟಾ ಮತ್ತು ತನಿಖೆಯಲ್ಲಿ ಎಕ್ಸ್‌ಪರ್ಟ್ ಆಗಿದ್ದರೆ, ಇನ್ನೊಬ್ಬರು ಸಿನಿಮಾ-ಸಾಹಿತ್ಯದ ಮೂಲಕ ಜನರ ಸಾಮೂಹಿಕ ಪ್ರಜ್ಞೆಯನ್ನು ಬಡಿದೆಬ್ಬಿಸಬಲ್ಲವರು , ಮಗದೊಬ್ಬರು ಅಂತಾರಾಷ್ಟ್ರೀಯ ಮಟ್ಟದ ರಣತಂತ್ರ ಮತ್ತು ತಳಮಟ್ಟದ ಯುವ ಹೋರಾಟದ ಅನುಭವ ಹೊಂದಿದ್ದಾರೆ. ಡಿಜಿಟಲ್ ಪರದೆಯನ್ನು ದಾಟಿ ನೈಜ ಯುವ ಕ್ರಾಂತಿಗೆ ಸಜ್ಜಾಗಿರುವ ಈ ಮೂವರೂ ‘ಜೆನ್ ಝೀ’ ನಾಯಕರು ಸಾಂಪ್ರದಾಯಿಕ ರಾಜಕೀಯದ ಲೆಕ್ಕಾಚಾರಗಳನ್ನು ಉಲ್ಟಾ ಮಾಡುವುದಂತೂ ಖಂಡಿತ!

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಜೆಪಿಗೆ ಅಣ್ಣಾಮಲೈ ಬೆಂಬಲ: ‘ಬಂಧನವು ಅವರನ್ನು ಮತ್ತಷ್ಟು ಬಲಶಾಲಿಗಳನ್ನಾಗಿಸುತ್ತದೆ’ ಎಂದ ನಾಯಕ

ಚುನಾವಣಾ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್) ಅಕ್ರಮಗಳು ನಡೆದಿವೆ ಎಂದು...

ಆರ್‌ಎಸ್‌ಎಸ್‌ ಕೇವಲ ಪುರುಷರಿರುವ ‘ಸಂವಿಧಾನ ವಿರೋಧಿ’ ಸಂಘಟನೆ: ರಾಹುಲ್ ಗಾಂಧಿ ವಾಗ್ದಾಳಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ವಿರುದ್ಧ ಮಂಗಳವಾರ ತೀವ್ರ ವಾಗ್ದಾಳಿ ನಡೆಸಿರುವ...

ಅಪ್ರಾಪ್ತ ಮಗನ ಕಾರು ಅಪಘಾತದಲ್ಲಿ ಮೂವರ ಸಾವು; ತಂದೆ ವಿರುದ್ಧದ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಕಾರ

ಅಪ್ರಾಪ್ತ ವಯಸ್ಸಿನ ಮಗನಿಗೆ ಕಾರು ಚಲಾಯಿಸಲು ಅವಕಾಶ ನೀಡಿದ ಆರೋಪ ಎದುರಿಸುತ್ತಿರುವ...

ರಾತ್ರೋರಾತ್ರಿ ತುರ್ತು ವಿಚಾರಣೆ ಕೋರಿ ದೆಹಲಿ ಹೈಕೋರ್ಟ್ ಮೊರೆಹೋದ ಸಿಜೆಪಿ ನಾಯಕರು

ತಮ್ಮ ನ್ಯಾಯಾಂಗ ಬಂಧನ ವಿಸ್ತರಣೆಯನ್ನು ಪ್ರಶ್ನಿಸಿ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ)...