ಮನೆಯ ಕೆಲಸ ಕೇವಲ ಹೆಣ್ಣಿನ ಜವಾಬ್ದಾರಿಯೇ? ಸ್ತ್ರೀ ಸಮಾನತೆ ಮನೆಯಿಂದಲೇ ಶುರುವಾಗಲಿ

Date:

ಇತ್ತೀಚಿನ ಹೈಕೋರ್ಟ್ ತೀರ್ಪು ಈ ಪ್ರಶ್ನೆಗೆ ಕಾನೂನಿನ ಭಾಷೆಯಲ್ಲಿ ಉತ್ತರ ನೀಡಿದೆ. ಆದರೆ ಆ ಉತ್ತರವನ್ನು ನಮ್ಮ ಮನೆಯ ಬದುಕಿನ ಭಾಗವನ್ನಾಗಿ ಮಾಡುವುದು ಸಮಾಜದ ಜವಾಬ್ದಾರಿ. ಶತಮಾನಗಳಿಂದ ಹೆಣ್ಣನ್ನು ಮನೆಯ ನಾಲ್ಕು ಗೋಡೆಗಳಿಗೆ ಸೀಮಿತಗೊಳಿಸಲಾಗಿದೆ. ಮನೆಯ ಕೆಲಸ ಅವಳ ಕರ್ತವ್ಯ, ಸೇವೆ ಅವಳ ಸ್ವಭಾವ, ಸಹನೆ ಅವಳ ಗುಣ ಎಂದು ಸಮಾಜವೇ ಕೆಲವು ಪಾತ್ರಗಳನ್ನು ಅವಳ ಮೇಲೆ ಹೇರಿದೆ. ಪುರುಷನು ಹೊರಗೆ ದುಡಿಯುವವನು, ಹೆಣ್ಣು ಮನೆಯೊಳಗೆ ದುಡಿಯುವವಳು ಎಂಬ ವಿಭಜನೆ, ಕ್ರಮೇಣ ಪುರುಷಪ್ರಧಾನ ವ್ಯವಸ್ಥೆಯ ಬೇರುಗಳನ್ನು ಗಟ್ಟಿಗೊಳಿಸಿದೆ.

- Advertisement -

“ಮನೆಯ ಕೆಲಸವನ್ನು ಹೆಣ್ಣಿನ ಕರ್ತವ್ಯವೆಂದು ಬಲವಂತವಾಗಿ ಹೇರಲಾಗದು. ಮನೆಯ ಜವಾಬ್ದಾರಿಗಳನ್ನು ಪುರುಷರು ಮತ್ತು ಮಹಿಳೆಯರು ಸಮಾನವಾಗಿ ಹಂಚಿಕೊಳ್ಳಬೇಕು.” ಇತ್ತೀಚೆಗೆ ಕರ್ನಾಟಕ ಹೈಕೋರ್ಟ್ ನೀಡಿರುವ ಈ ಮಹತ್ವದ ಅಭಿಪ್ರಾಯ ಮತ್ತೊಮ್ಮೆ ನಮ್ಮ ಸಮಾಜದ ಮುಂದೆ ಒಂದು ಮೂಲಭೂತ ಪ್ರಶ್ನೆಯನ್ನು ಇಟ್ಟಿದೆ. ಮನೆಯ ಕೆಲಸ ನಿಜಕ್ಕೂ ಹೆಣ್ಣಿನ ಕೆಲಸವೇ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಹೆಣ್ಣು ಮದುವೆಯಾದ ಬಳಿಕ ಗಂಡನ ಮನೆಗೆ ಹೋಗುತ್ತಾಳೆ. ಅಲ್ಲಿಗೆ ಹೋದ ಮೇಲೆ ಗಂಡನ ಕುಟುಂಬದ ಸದಸ್ಯರ ಆರೈಕೆ ಮಾಡುವುದು, ಅಡುಗೆ ಮಾಡುವುದು, ಮನೆ ಸ್ವಚ್ಛಗೊಳಿಸುವುದು ಸೇರಿದಂತೆ ಮನೆಯ ಎಲ್ಲ ಜವಾಬ್ದಾರಿಗಳನ್ನು ಹೊರುವುದು ಅವಳ ಸಹಜ ಕರ್ತವ್ಯ ಎಂಬ ಮನೋಭಾವ ನಮ್ಮ ಸಮಾಜದಲ್ಲಿ ಬಹುಕಾಲದಿಂದ ಇದೆ. ಆದರೆ, ಇತ್ತೀಚಿನ ತೀರ್ಪಿನಲ್ಲಿ ಹೈಕೋರ್ಟ್ ಇಂತಹ ಮನೋಭಾವಕ್ಕೆ ಸ್ಪಷ್ಟವಾದ ಪ್ರಶ್ನೆ ಎತ್ತಿದೆ.

ನ್ಯಾಯಮೂರ್ತಿ ಡಾ. ಚಿಲ್ಲಕೂರು ಸುಮಲತಾ ಅವರಿದ್ದ ಏಕಸದಸ್ಯ ಪೀಠ, ಗಂಡ ಸೇರಿದಂತೆ ಯಾರಿಗೂ ತನ್ನ ಪತ್ನಿಯನ್ನು ಮನೆಯ ಕೆಲಸ ಮಾಡಲು ಅಥವಾ ತನ್ನ ತಂದೆ, ತಾಯಿಯನ್ನು ನೋಡಿಕೊಳ್ಳಲು ಬಲವಂತಪಡಿಸುವ ಅಧಿಕಾರವಿಲ್ಲ ಎಂದು ಹೇಳಿದೆ. ಮನೆಯ ಕೆಲಸಗಳನ್ನು ಪುರುಷರು ಮತ್ತು ಮಹಿಳೆಯರು ಸಮಾನವಾಗಿ ಹಂಚಿಕೊಳ್ಳಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಅತ್ತೆ, ಮಾವಂದಿರನ್ನು ನೋಡಿಕೊಳ್ಳುವುದು ಸೊಸೆಯ ಕಡ್ಡಾಯ ಕರ್ತವ್ಯವಲ್ಲ. ಅದು ಸ್ವಯಂಪ್ರೇರಿತವಾಗಿರಬೇಕು ಎಂಬುದನ್ನೂ ನ್ಯಾಯಾಲಯ ಹೇಳಿದೆ.

ಇದು ಕೇವಲ ಒಂದು ಕೌಟುಂಬಿಕ ವ್ಯಾಜ್ಯದ ತೀರ್ಪಲ್ಲ. ನಮ್ಮ ಸಮಾಜದೊಳಗೆ ಶತಮಾನಗಳಿಂದ ಬೇರೂರಿರುವ ‘ಮನೆಯ ಕೆಲಸ ಹೆಣ್ಣಿನ ಕೆಲಸ’ ಎಂಬ ಮನೋಭಾವದ ಮೇಲಿನ ಗಂಭೀರ ಪ್ರಶ್ನೆಯಾಗಿದೆ. ಹಾಗೆ ನೋಡಿದರೆ, ಸಮಾನತೆಯ ಬಗ್ಗೆ ನಾವು ಬಹಳ ಮಾತನಾಡುತ್ತೇವೆ. ಹೆಣ್ಣು ಶಿಕ್ಷಣ ಪಡೆಯಬೇಕು, ಉದ್ಯೋಗ ಮಾಡಬೇಕು, ರಾಜಕೀಯಕ್ಕೆ ಬರಬೇಕು, ಆಡಳಿತ ನಡೆಸಬೇಕು, ಪುರುಷರೊಂದಿಗೆ ಸಮಾನವಾಗಿ ಸ್ಪರ್ಧಿಸಬೇಕು ಎನ್ನುತ್ತೇವೆ. ಆದರೆ ಅದೇ ಹೆಣ್ಣು ಸಂಜೆ ಮನೆಗೆ ಬಂದಾಗ ಅಡುಗೆ ಮನೆಯ ಜವಾಬ್ದಾರಿ ಅವಳದೇ ಎಂದು ಏಕೆ ಭಾವಿಸುತ್ತೇವೆ?, ಅವಳು ಕಚೇರಿಯಲ್ಲಿ ಎಂಟು ಗಂಟೆ ಕೆಲಸ ಮಾಡಿದರೂ ಮನೆಯ ಕೆಲಸಕ್ಕೆ ಸಮಯ ಕೊಡಬೇಕು. ಮಕ್ಕಳ ಆರೈಕೆ, ಅಡುಗೆ, ಬಟ್ಟೆ, ಮನೆ ಸ್ವಚ್ಛತೆ, ಕುಟುಂಬದ ಹಿರಿಯರ ಆರೈಕೆ, ಇವೆಲ್ಲವೂ ಹೆಣ್ಣಿನ ಜವಾಬ್ದಾರಿ ಎಂಬ ನಿರೀಕ್ಷೆ ಇನ್ನೂ ಅನೇಕ ಮನೆಗಳಲ್ಲಿ ಜೀವಂತವಾಗಿದೆ.

ಇತ್ತೀಚಿನ ಹೈಕೋರ್ಟ್ ತೀರ್ಪು ಈ ಪ್ರಶ್ನೆಗೆ ಕಾನೂನಿನ ಭಾಷೆಯಲ್ಲಿ ಉತ್ತರ ನೀಡಿದೆ. ಆದರೆ ಆ ಉತ್ತರವನ್ನು ನಮ್ಮ ಮನೆಯ ಬದುಕಿನ ಭಾಗವನ್ನಾಗಿ ಮಾಡುವುದು ಸಮಾಜದ ಜವಾಬ್ದಾರಿ. ಶತಮಾನಗಳಿಂದ ಹೆಣ್ಣನ್ನು ಮನೆಯ ನಾಲ್ಕು ಗೋಡೆಗಳಿಗೆ ಸೀಮಿತಗೊಳಿಸಲಾಗಿದೆ. ಮನೆಯ ಕೆಲಸ ಅವಳ ಕರ್ತವ್ಯ, ಸೇವೆ ಅವಳ ಸ್ವಭಾವ, ಸಹನೆ ಅವಳ ಗುಣ ಎಂದು ಸಮಾಜವೇ ಕೆಲವು ಪಾತ್ರಗಳನ್ನು ಅವಳ ಮೇಲೆ ಹೇರಿದೆ. ಪುರುಷನು ಹೊರಗೆ ದುಡಿಯುವವನು, ಹೆಣ್ಣು ಮನೆಯೊಳಗೆ ದುಡಿಯುವವಳು ಎಂಬ ವಿಭಜನೆ, ಕ್ರಮೇಣ ಪುರುಷಪ್ರಧಾನ ವ್ಯವಸ್ಥೆಯ ಬೇರುಗಳನ್ನು ಗಟ್ಟಿಗೊಳಿಸಿದೆ.

ಇಂದು ಹೆಣ್ಣು ಮನೆಯ ಗಡಿಯಾಚೆ ಹೆಜ್ಜೆ ಇಟ್ಟಿದ್ದಾಳೆ. ಶಿಕ್ಷಣ, ಉದ್ಯೋಗ, ವಿಜ್ಞಾನ, ಸಾಹಿತ್ಯ, ರಾಜಕೀಯ, ಆಡಳಿತ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಪುರುಷನಿಗೆ ಸರಿಸಮನಾಗಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾಳೆ. ಆದರೆ ಒಂದು ವಿಪರ್ಯಾಸವೇನೆಂದರೆ, ಹೊರ ಜಗತ್ತಿನಲ್ಲಿ ಎಷ್ಟೇ ಎತ್ತರದ ಸ್ಥಾನಕ್ಕೇರಿದರೂ, ಮನೆಯ ಬಾಗಿಲು ದಾಟಿದ ಕ್ಷಣದಲ್ಲಿ ಅವಳ ಮೇಲೆ ಹಳೆಯ ಜವಾಬ್ದಾರಿಗಳ ಸರಪಳಿ ಮತ್ತೆ ಬೀಳುತ್ತದೆ. ಅವಳು ವೈದ್ಯೆಯಾಗಿರಲಿ, ಅಧಿಕಾರಿಯಾಗಿರಲಿ, ಶಿಕ್ಷಕಿಯಾಗಿರಲಿ ಅಥವಾ ಯಾವುದೇ ದೊಡ್ಡ ಹುದ್ದೆಯಲ್ಲಿರಲಿ ಮನೆಯ ಕೆಲಸ ಮಾತ್ರ ಅವಳದೇ ಎಂಬ ನಿರೀಕ್ಷೆ ಇನ್ನೂ ಅನೇಕ ಮನೆಗಳಲ್ಲಿ ಜೀವಂತವಾಗಿದೆ. ಹೀಗಿರುವಾಗ, ಹೆಣ್ಣು ಎಲ್ಲ ಕ್ಷೇತ್ರಗಳಲ್ಲಿಯೂ ಸಮಾನಳಾಗಿದ್ದಾಳೆ ಎಂದು ಹೇಳುವುದಕ್ಕೆ ಅರ್ಥವಿದೇಯೇ ? ಹೊರಗಿನ ಜಗತ್ತಿನಲ್ಲಿ ಅವಳಿಗೆ ಸ್ವಾತಂತ್ರ್ಯ ನೀಡಿ, ಮನೆಯೊಳಗೆ ಅವಳನ್ನು ಜವಾಬ್ದಾರಿಗಳ ಬಂಧನದಲ್ಲಿ ಉಳಿಸಿದರೆ, ಆ ಸಮಾನತೆ ಅಪೂರ್ಣವೇ ಆಗುತ್ತದೆ. ಆದರೆ, ನಿಜವಾದ ಮನುಷ್ಯತ್ವ ದರ್ಪದಲ್ಲಿ ಅಡಗಿಲ್ಲ. ಅದು ಸಮಾನತೆಯಲ್ಲಿ ಅಡಗಿದೆ. ನಿಜವಾದ ಪುರುಷತ್ವ ಅಜ್ಞಾಪಿಸುವುದರಲ್ಲಿ ಇಲ್ಲ. ತನ್ನ ಜೊತೆಯಲ್ಲಿರುವ ವ್ಯಕ್ತಿಯ ಜವಾಬ್ದಾರಿಯನ್ನು ತನ್ನದಾಗಿಯೂ ಭಾವಿಸುವುದರಲ್ಲಿ ಇದೆ. ಹೊರಗೆ ಸಮಾನತೆ, ಮನೆಯೊಳಗೆ ಅಸಮಾನತೆ. ಈ ವೈರುಧ್ಯವನ್ನು ಮುರಿಯಬೇಕಿದೆ.

ಮನೆಯ ಕೆಲಸದಲ್ಲಿ ಪುರುಷರು ಪಾಲ್ಗೊಳ್ಳುವುದು ಹೆಣ್ಣಿಗೆ ಮಾಡುವ ‘ಸಹಾಯ’ವಲ್ಲ, ಅದು ಅವರ ಜವಾಬ್ದಾರಿ. ಅಡುಗೆ ಮಾಡುವುದು ಪುರುಷತ್ವಕ್ಕೆ ಧಕ್ಕೆ ತರುವುದಿಲ್ಲ. ಮಗುವನ್ನು ನೋಡಿಕೊಳ್ಳುವುದು ಪುರುಷನ ಗೌರವವನ್ನು ಕಡಿಮೆ ಮಾಡುವುದಿಲ್ಲ. ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು, ಮನೆ ಸ್ವಚ್ಛಗೊಳಿಸುವುದು ಅಥವಾ ಕುಟುಂಬದ ಜವಾಬ್ದಾರಿ ಹೊರುವುದು ಪುರುಷನನ್ನು ಸಣ್ಣವನನ್ನಾಗಿಸುವುದಿಲ್ಲ.
ವಾಸ್ತವವಾಗಿ, ತನ್ನೊಂದಿಗೆ ಬದುಕುವ ವ್ಯಕ್ತಿಯ ಜವಾಬ್ದಾರಿಯನ್ನು ತನ್ನ ಜವಾಬ್ದಾರಿಯೆಂದು ಭಾವಿಸುವುದೇ ನಿಜವಾದ ಮನುಷ್ಯತ್ವ.

ಇಲ್ಲಿ ಹೈಕೋರ್ಟ್ ತೀರ್ಪಿನ ಮತ್ತೊಂದು ಮಹತ್ವದ ಅಂಶವೂ ಗಮನಾರ್ಹ. ಮದುವೆಯಾದ ಮಹಿಳೆ ತನ್ನ ತವರು ಮನೆಗೆ ಹೋಗಲು ಮನೆಯವರ ಅನುಮತಿ ಪಡೆಯಬೇಕೆಂಬ ಮನೋಭಾವವನ್ನೂ ನ್ಯಾಯಾಲಯ ಪ್ರಶ್ನಿಸಿದೆ. ಮದುವೆಯಾದ ನಂತರವೂ ಮಹಿಳೆ ತನ್ನದೇ ಆದ ವ್ಯಕ್ತಿತ್ವ ಮತ್ತು ಸ್ವಾತಂತ್ರ್ಯ ಹೊಂದಿರುವ ವ್ಯಕ್ತಿ ಎಂಬುದನ್ನು ಈ ಅಭಿಪ್ರಾಯ ನೆನಪಿಸುತ್ತದೆ.ಮದುವೆ ಎಂದರೆ ಒಬ್ಬ ವ್ಯಕ್ತಿಯ ಸ್ವಾತಂತ್ರ್ಯ ಮತ್ ತೊಬ್ಬನಿಗೆ ಹಸ್ತಾಂತರವಾಗುವುದು ಅಲ್ಲ.

162783 iixlqcyorn 1628865688

ಮದುವೆ ಎಂಬುದು ಸಹಭಾಗಿತ್ವವೇ ಹೊರತು ಅಧೀನತೆ ಅಲ್ಲ. ಮನೆಯು ಸಹಜೀವನ, ಉದ್ಯೋಗದ ಸ್ಥಳವಲ್ಲ. ಪತ್ನಿ ಸಂಗಾತಿ, ಮನೆಗೆ ನೇಮಿಸಿಕೊಂಡ ಕೆಲಸಗಾರಳಲ್ಲ. ಈ ಸರಳ ಸತ್ಯವನ್ನು ಸಮಾಜ ಅರ್ಥಮಾಡಿಕೊಳ್ಳಬೇಕಿದೆ. ಸಮಾನತೆ ಎಂದರೆ ಕೇವಲ ಮಹಿಳೆಗೆ ಶಿಕ್ಷಣ ನೀಡುವುದು ಅಥವಾ ಉದ್ಯೋಗಕ್ಕೆ ಕಳುಹಿಸುವುದಲ್ಲ. ಅವಳಿಗೆ ಮನೆಯೊಳಗೂ ಸಮಾನ ಸ್ಥಾನ ನೀಡುವುದು. ಅವಳ ಮಾತಿಗೆ ಬೆಲೆ ಕೊಡುವುದು. ಅವಳ ನಿರ್ಧಾರಗಳನ್ನು ಗೌರವಿಸುವುದು. ಅವಳಿಗೂ ವಿಶ್ರಾಂತಿಯ ಹಕ್ಕಿದೆ ಎಂಬುದನ್ನು ಒಪ್ಪಿಕೊಳ್ಳುವುದು.

ಮನೆಯ ಕೆಲಸ ಹಂಚಿಕೊಳ್ಳುವುದರ ಜೊತೆಗೆ ನಿರ್ಧಾರಗಳನ್ನೂ ಹಂಚಿಕೊಳ್ಳಬೇಕು. ಮನೆಯ ಖರ್ಚು ಹೇಗೆ ನಡೆಯಬೇಕು? ಮಕ್ಕಳ ಶಿಕ್ಷಣದ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳಬೇಕು? ಕುಟುಂಬ ಎಲ್ಲಿಗೆ ಹೋಗಬೇಕು? ಮಹಿಳೆ ತನ್ನ ಉದ್ಯೋಗ ಮುಂದುವರಿಸಬೇಕೇ? ತನ್ನ ಹಣವನ್ನು ಹೇಗೆ ಬಳಸಬೇಕು? ಇಂತಹ ಪ್ರಶ್ನೆಗಳಲ್ಲಿ ಅವಳ ಮಾತಿಗೂ ಪುರುಷನಷ್ಟೇ ಮೌಲ್ಯ ಇರಬೇಕು.

ಮನೆಯಲ್ಲಿರುವ ಮಗನಿಗೂ ಮಗಳಿಗೂ ಒಂದೇ ರೀತಿಯ ಜವಾಬ್ದಾರಿಗಳನ್ನು ಕಲಿಸುವ ದಿನ ಬರಬೇಕು. ಅಡುಗೆ ಹೆಣ್ಣಿನ ಕೆಲಸವಲ್ಲ, ಮನೆಯ ಕೆಲಸ ಎಂದು ಮಕ್ಕಳು ಬಾಲ್ಯದಲ್ಲೇ ಕಲಿಯಬೇಕು. ತಾಯಿಗೆ ಸಹಾಯ ಮಾಡುತ್ತಿರುವ ಮಗ ಎಂದು ಹೇಳುವ ಬದಲು, ತನ್ನ ಮನೆಯ ಕೆಲಸ ಮಾಡುತ್ತಿರುವ ವ್ಯಕ್ತಿ ಎಂದು ಸಹಜವಾಗಿ ನೋಡುವ ಮನೋಭಾವ ಬೆಳೆಯಬೇಕು. ಆಗ ಮಾತ್ರ ಕಾನೂನು ಹೇಳುವ ಸಮಾನತೆ ಸಮಾಜದ ಬದುಕಿನಲ್ಲೂ ಕಾಣಿಸಿಕೊಳ್ಳುತ್ತದೆ.

ಏಕೆಂದರೆ ಹೆಣ್ಣಿನ ಕೈಗಳ ಮೇಲಿನ ಕೆಲಸದ ಭಾರ ಕಡಿಮೆ ಮಾಡುವುದಷ್ಟೇ ಸಾಕಾಗುವುದಿಲ್ಲ. ಅವಳ ಮನಸ್ಸಿನ ಮೇಲಿರುವ ಕಾಣದ ಬಂಧನಗಳನ್ನೂ ಕಳಚಬೇಕು. ಹೀಗಾಗಿ ಇತ್ತೀಚಿನ ಹೈಕೋರ್ಟ್ ತೀರ್ಪು ನಮಗೆ ಕೇವಲ ಕಾನೂನಿನ ಸಂದೇಶವಲ್ಲ, ಸಾಮಾಜಿಕ ಬದಲಾವಣೆಯ ಕರೆ ಕೂಡ ಹೌದು. ಆದರೆ ಒಂದು ದಿನ ಇಂತಹ ತೀರ್ಪುಗಳನ್ನೂ, ನಿಯಮಗಳನ್ನೂ ನೆನಪಿಸುವ ಅಗತ್ಯವೇ ಇಲ್ಲದಂತಾಗಬೇಕು.

ಹೆಣ್ಣಿನ ನಿಜವಾದ ವಿಮೋಚನೆ ಕೇವಲ ಅವಳಿಗೆ ಶಿಕ್ಷಣ ನೀಡುವುದರಿಂದಲೂ, ಉದ್ಯೋಗ ನೀಡುವುದರಿಂದಲೂ ಅಥವಾ ದೊಡ್ಡ ಹುದ್ದೆಗಳನ್ನು ನೀಡುವುದರಿಂದಲೂ ಸಂಪೂರ್ಣವಾಗುವುದಿಲ್ಲ. ಅವಳು ತನ್ನ ಮನೆಯೊಳೆಗೂ ಒಬ್ಬ ಸ್ವತಂತ್ರ ವ್ಯಕ್ತಿಯಾಗಿ ಬದುಕುವ ಹಕ್ಕು ಪಡೆದಾಗ ಮಾತ್ರ ಆ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ಸಿಗುತ್ತದೆ.

ಸಮಾಜ ಹೆಣ್ಣನ್ನು ಹೊರಜಗತ್ತಿಗೆ ಕರೆತಂದಿದ್ದೇವೆ ಎಂದು ಹೆಮ್ಮೆಪಡುವ ಮೊದಲು, ಮನೆಯೊಳಗೂ ಅವಳಿಗೆ ಸಮಾನವಾದ ಸ್ಥಾನವನ್ನು ನೀಡಬೇಕು. ಏಕೆಂದರೆ ನಿಜವಾದ ಸಮಾನತೆ ವೇದಿಕೆಗಳ ಮೇಲಿನ ಭಾಷಣಗಳಲ್ಲಿ ಹುಟ್ಟುವುದಿಲ್ಲ. ಅದು ಮನೆಯ ಅಡುಗೆಮನೆಯಿಂದಲೇ ಆರಂಭವಾಗುತ್ತದೆ. ಇದರ ಜೊತೆಗೆ ಹೆಣ್ಣಿನ ಸ್ವಾತಂತ್ರ್ಯವೆಂದರೆ ಕೇವಲ ಅವಳ ಕೈಗಳ ಮೇಲಿನ ಕೆಲಸದ ಭಾರವನ್ನು ಕಡಿಮೆ ಮಾಡುವುದಷ್ಟೇ ಅಲ್ಲ, ಅವಳ ಮನಸ್ಸಿನ ಮೇಲಿರುವ ಕಾಣದ ಬಂಧನಗಳನ್ನೂ ಕಳಚುವುದು. ತನ್ನ ಬದುಕಿನ ಕುರಿತು ತಾನೇ ಯೋಚಿಸುವ, ನಿರ್ಧರಿಸುವ ಮತ್ತು ತನ್ನ ಇಚ್ಛೆಯಂತೆ ಬದುಕುವ ಸ್ವಾತಂತ್ರ ಅವಳ ಮೂಲಭೂತ ಹಕ್ಕು, ಅಂತಹ ಅರಿವು ನಮ್ಮ ಸಮಾಜದ ಪ್ರತಿಯೊಂದು ಮನಸ್ಸಿನಲ್ಲೂ ಮೂಡಬೇಕು. ಏಕೆಂದರೆ ನಿಜವಾದ ಸಮಾನತೆ ಹೆಣ್ಣಿಗೆ ಕೆಲಸದಲ್ಲಿ ಸಹಾಯ ಮಾಡುವುದರಲ್ಲಿ ಮಾತ್ರವಲ್ಲ, ಅವಳ ನಿರ್ಧಾರಗಳಿಗೂ ಸಮಾನ ಗೌರವ ನೀಡುವುದರಲ್ಲಿ ಅಡಗಿದೆ. ಅಂತಹ ದಿನಗಳತ್ತ ನಮ್ಮ ಸಮಾಜ ಹೆಜ್ಜೆ ಇಡಲಿ.

ಇದನ್ನೂ ಓದಿ SIR | ಒಂದೂವರೆ ಕೋಟಿ ಜನರನ್ನು ಕೈಕಟ್ಟಿ ನಿಲ್ಲಿಸುವುದನ್ನು ಕರ್ನಾಟಕ ಒಪ್ಪುವುದಿಲ್ಲ: ನಟ ಪ್ರಕಾಶ್ ರಾಜ್ ಆಕ್ರೋಶ

ಸಮಾನತೆ ವಿಧಾನಸಭೆಯಲ್ಲಿ ಆರಂಭವಾಗುವುದಿಲ್ಲ, ಅದು ಶಾಲೆಯಲ್ಲಿ ಮಾತ್ರ ಆರಂಭವಾಗುವುದಿಲ್ಲ, ಅದು ಮನೆಯ ಬಾಗಿಲು ದಾಟಿದ ಕ್ಷಣದಿಂದ ಆರಂಭವಾಗಬೇಕು. ಹೆಣ್ಣಿನ ಕೈಯಲ್ಲಿರುವ ಪಾತ್ರೆಯನ್ನು ಪುರುಷನ ಕೈ ಹಂಚಿಕೊಂಡಾಗ, ಮಗುವಿನ ಜವಾಬ್ದಾರಿಯನ್ನು ತಂದೆ, ತಾಯಿ ಇಬ್ಬರೂ ಹಂಚಿಕೊಂಡಾಗ, ಮನೆಯ ನಿರ್ಧಾರದಲ್ಲಿ ಹೆಣ್ಣಿನ ಧ್ವನಿಗೂ ಸಮಾನ ಸ್ಥಾನ ಸಿಕ್ಕಾಗ, ಅವಳಿಗೆ ತನ್ನ ಬದುಕಿನ ಬಗ್ಗೆ ತಾನೇ ನಿರ್ಧರಿಸುವ ಸ್ವಾತಂತ್ರ್ಯ ದೊರೆತಾಗ, ಅಲ್ಲಿಂದಲೇ ನಿಜವಾದ ಸಮಾನತೆ ಹುಟ್ಟುತ್ತದೆ.

ಹೈಕೋರ್ಟ್ ತೀರ್ಪು ನಮಗೆ ದಾರಿ ತೋರಿಸಿದೆ. ಈಗ ಆ ದಾರಿಯಲ್ಲಿ ನಡೆಯಬೇಕಿರುವುದು ಸಮಾಜ. ಏಕೆಂದರೆ ಸಮಾನತೆ ಒತ್ತಾಯದಿಂದ ಬದುಕುವ ವ್ಯವಸ್ಥೆಯಾಗಬಾರದು. ಅದು ಮನೆಯೊಳಗಿನಿಂದಲೇ ಬೆಳೆಸುವ ಸಂಸ್ಕೃತಿಯಾಗಬೇಕು. ಮನೆಯ ಬಾಗಿಲು ತೆರೆದಾಗ, ಸಮಾನತೆಯ ಬಾಗಿಲೂ ತೆರೆಯಲಿ.

Nidhi gowda
ನಿಧಿ ಗೌಡ ಬಿ ವಿ
+ posts

ಕನ್ನಡ ಉಪನ್ಯಾಸಕರು, ತುಮಕೂರು

ಪೋಸ್ಟ್ ಹಂಚಿಕೊಳ್ಳಿ:

ನಿಧಿ ಗೌಡ ಬಿ ವಿ
ನಿಧಿ ಗೌಡ ಬಿ ವಿ
ಕನ್ನಡ ಉಪನ್ಯಾಸಕರು, ತುಮಕೂರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅಂಕಿತಾ ಹತ್ಯೆ ಶಂಕಿತರಿಗೆ ಸಾಂವಿಧಾನಿಕ ಹುದ್ದೆ ಸರಿಯೇ?

ಅಂಕಿತಾ ಭಂಡಾರಿ ಕೊಲೆ ಪ್ರಕರಣದಲ್ಲಿದ್ದ ವಿಐಪಿ ದುಶ್ಯಂತ್‌ ಅವರ ಮೇಲಿನ...

‘ಮೋದಿಯನ್ನು ದೇವರನ್ನಾಗಿಸುವ ಯತ್ನ’: ಬಿಹಾರ ಸಿಎಂ ಹೇಳಿಕೆಗೆ ಪ್ರಶಾಂತ್ ಕಿಶೋರ್ ಕಿಡಿ

ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮನಿಗೂ ಮನೆ ಒದಗಿಸಿದರು ಎಂಬ ಬಿಹಾರ...

ಬಾಗಲಕೋಟೆ | ಎಸ್‌ಐಆರ್ ಪ್ರಕ್ರಿಯೆ ಸ್ಥಗಿತಕ್ಕೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾಗೊಳಿಸಿ, ಅವರ ವಿರುದ್ಧ ಕ್ರಿಮಿನಲ್...

ಬೆಳಗಾವಿ | ಚೂನಪ್ಪ ಪೂಜೇರಿ, ನಾನು ಸತ್ತರೂ ಒಂದೇ ಗೋರಿಯಲ್ಲಿ ಮಣ್ಣಾಗಬೇಕು: ಶಶಿಕಾಂತ ಗುರೂಜಿ

ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಹತ್ತರಗಿ...