ಗಾಂಧಿಯಿಂದ ಸೋನಮ್ ವಾಂಗ್‌ಚುಕ್‌ವರೆಗೆ ಸತ್ಯಾಗ್ರಹದ ಹಾದಿ: ಉಪವಾಸದ ಹಿಂದಿನ ವಿಜ್ಞಾನವೇನು?

Date:

“ಸೋನಮ್ ವಾಂಗ್ಚುಕ್‌ ಚೆನ್ನಾಗಿ ತಿಂದುಂಡು ಸತ್ಯಾಗ್ರಹದ ನಾಟಕ ಮಾಡ್ತಿದ್ದಾರೆ. ಊಟ ಬಿಟ್ಟು ಇಷ್ಟು ದಿನ ಬದುಕುಳಿಯಲು ಸಾಧ್ಯವೇ ಇಲ್ಲ” ಎಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಒಬ್ಬ ವ್ಯಕ್ತಿ ನೀರು ಕುಡಿದು, ಘನ ಆಹಾರವಿಲ್ಲದೇ ಎಷ್ಟು ದಿನ ಬದುಕಬಲ್ಲ? ವೈದ್ಯ ಲೋಕ ಈ ಕುರಿತು ನೀಡುವ ಮಾಹಿತಿ ಕೆದಕುತ್ತಾ ಹೋದಲ್ಲಿ ಮನುಷ್ಯ ದೇಹ ಅಡಗಿಸಿಟ್ಟ ತಿಳಿವುಗಳ ಹಲವು ಪದರಗಳು ತೆರೆದುಕೊಳ್ಳುತ್ತವೆ….

- Advertisement -

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಶಿಕ್ಷಣ ವ್ಯವಸ್ಥೆಯ ಅಕ್ರಮಗಳನ್ನು ಖಂಡಿಸಿ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜಿನಾಮೆಗೆ ಆಗ್ರಹಿಸಿ, ಕಾಕ್ರೋಚ್‌ ಜನತಾ ಪಾರ್ಟಿ ನೇತೃತ್ವದಲ್ಲಿ ದೆಹಲಿಯ ಜಂತರ್‌ ಮಂತರ್‌ನಲ್ಲಿ ಜೂನ್‌ 28ರಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಸೋನಮ್‌ ವಾಂಗ್‌ಚುಕ್‌ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡು ಇಂದಿಗೆ 20 ದಿನ. ದೇಶದ ಮಾನವೀಯ ಮನಸ್ಸುಗಳು ಅವರಿಗೆ ಉಪವಾಸ ಕೈಬಿಡುವಂತೆ ಮನವಿ ಮಾಡುತ್ತಿದ್ದರೆ, ಇತ್ತ ಕೆಲ ಹೃದಯ ವಿಹೀನರು ಉಪವಾಸವೇ ನಾಟಕ, ಆಹಾರ ಸೇವಿಸದೆ ಬದುಕಿರುವುದು ಅಸಾಧ್ಯವೆಂದು ಬಡಬಡಿಸುತ್ತಾ ಮಿದುಳು ಅಡವಿಟ್ಟು, ನಾಲಿಗೆ ಹರಿಬಿಟ್ಟಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

“ಸೋನಮ್ ಚೆನ್ನಾಗಿ ತಿಂದುಂಡು ಸತ್ಯಾಗ್ರಹದ ನಾಟಕ ಮಾಡ್ತಿದ್ದಾರೆ. ಊಟ ಬಿಟ್ಟು ಇಷ್ಟು ದಿನ ಬದುಕುಳಿಯಲು ಸಾಧ್ಯವೇ ಇಲ್ಲ” ಎಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಒಬ್ಬ ವ್ಯಕ್ತಿ ನೀರು ಕುಡಿದು, ಘನ ಆಹಾರವಿಲ್ಲದೇ ಎಷ್ಟು ದಿನ ಬದುಕಬಲ್ಲ? ವೈದ್ಯ ಲೋಕ ಈ ಕುರಿತು ನೀಡುವ ಮಾಹಿತಿ ಕೆದಕುತ್ತಾ ಹೋದಲ್ಲಿ ಮನುಷ್ಯ ದೇಹ ಅಡಗಿಸಿಟ್ಟ ತಿಳಿವುಗಳ ಹಲವು ಪದರಗಳು ತೆರೆದುಕೊಳ್ಳುತ್ತವೆ.

sonum hunger strike

ಆಹಾರ ನೀರು ಇಲ್ಲದೆ ಮನುಷ್ಯ ಎಷ್ಟು ಕಾಲ ಬದುಕಬಹುದು ಎಂಬುದರ ಕುರಿತಾಗಿ ವೈದ್ಯಕೀಯ ಲೋಕದಲ್ಲಿ ಬಹುದೊಡ್ಡ ಚರ್ಚೆಯೇ ನಡೆದಿದೆ. ವೈದ್ಯರ ಪ್ರಕಾರ, ಮನುಷ್ಯನ ದೇಹವು ಅದ್ಭುತವಾದ ರಕ್ಷಣಾ ವ್ಯವಸ್ಥೆಯನ್ನು (Survival Mechanism) ಹೊಂದಿದೆ. ಘನ ಆಹಾರ ಸಿಗದಿದ್ದಾಗ ದೇಹವು ಮೊದಲು ಗ್ಲುಕೋಸ್, ನಂತರ ದೇಹದಲ್ಲಿ ಶೇಖರವಾದ ಕೊಬ್ಬು ಮತ್ತು ಕೊನೆಯದಾಗಿ ನಮ್ಮ ದೇಹದಲ್ಲಿಯ ಪ್ರೊಟೀನನ್ನು ಶಕ್ತಿಯಾಗಿ ಪರಿವರ್ತಿಸುತ್ತದೆ. ಹೀಗಾಗಿ ಸೂಕ್ತ ಪ್ರಮಾಣದಲ್ಲಿ ನೀರು ಮತ್ತು ಲವಣಾಂಶಗಳು (Electrolytes) ಸಿಗುತ್ತಿದ್ದರೆ, ವ್ಯಕ್ತಿ ಹಲವು ವಾರಗಳ ಕಾಲ ಉಪವಾಸ ಇರಲು ಸಾಧ್ಯವಿದೆ ಎಂದು ಹಿರಿಯ ವೈದ್ಯರು ಸ್ಪಷ್ಟಪಡಿಸುತ್ತಾರೆ.

ಕೇವಲ ದ್ರವಾಹಾರಗಳ ಮೂಲಕ ವ್ಯಕ್ತಿ ಬದುಕಬಹುದೇ ಎಂಬ ಪ್ರಶ್ನೆಯ ಕುರಿತು ಈ ದಿನ.ಕಾಮ್‌ ಜೊತೆಗೆ ಮಾಹಿತಿ ಹಂಚಿಕೊಂಡ ಡಾ. ಪೂರ್ಣಿಮಾ, “ಉಪವಾಸ, ದ್ರವಾಹಾರ ಸೇವನೆ ಎಂಬುದು ಬಹಳ ಹಿಂದಿನಿಂದಲೂ ರೂಢಿಯಿರುವ ಆಹಾರ ಶಿಸ್ತಿನ ಭಾಗ. ದಿನಗಳಿಂದ ಹಿಡಿದು ವರ್ಷಗಳವರೆಗೆ ಕೇವಲ ನೀರು ಮತ್ತು ದ್ರವ ರೂಪದ ಆಹಾರ ಸೇವಿಸಬಹುದೆಂಬುದನ್ನು ಸಾಬೀತು ಪಡಿಸಿದ ಹಲವು ನಿದರ್ಶನಗಳಿವೆ. ನಮ್ಮ ದೇಹ ಬಾಹ್ಯ ಮೂಲಗಳಿಂದ ಆಹಾರ ಸಿಗದಿದ್ದಾಗ ಶರೀರದಲ್ಲಿಯ ಗ್ಲುಕೋಸ್‌ ಅಂಶ, ಕೊಬ್ಬು ಹಾಗೂ ಪ್ರೊಟೀನ್‌ಗಳನ್ನು ಅರಗಿಸಿಕೊಂಡು ಸ್ವರಕ್ಷಣೆಗೆ ಮುಂದಾಗುತ್ತದೆ. ಎಷ್ಟು ದಿನಗಳ ಕಾಲ ಆಹಾರವಿಲ್ಲದೆ ಉಳಿಯಬಲ್ಲ ಎಂಬುದು ವ್ಯಕ್ತಿಗತ ನೆಲೆಯಲ್ಲಿ ನಿರ್ಧರಿತವಾಗುತ್ತದೆ, ಉಳಿವಿನ ಸಾಮರ್ಥ್ಯ ಮನುಷ್ಯನ ದೇಹ ರಚನೆ ಹಾಗೂ ಆರೋಗ್ಯ ಸ್ಥಿತಿಯನ್ನು ಅವಲಂಬಿಸಿದೆ” ಎಂದು ತಿಳಿಸಿದರು.

ಇಂತಹುದ್ದೇ ಒಂದಷ್ಟು ಘಟನೆಗಳನ್ನು ಉದಾಹರಿಸಿದ ಅವರು, 1965ರಲ್ಲಿ ಸುಮಾರು 27 ವರ್ಷದ ಅಂಗೂಸ್‌ ಬಾರ್‌ಬೈರಿ ಎಂಬ ವ್ಯಕ್ತಿ ತೂಕ ಇಳಿಸಲೆಂದು 382 ದಿನಗಳ ಕಾಲ ಉಪವಾಸವಿದ್ದ. 207 ಕಿಲೋ ತೂಕವಿದ್ದ ಆತ ವರ್ಷದ ಕಾಲ ಉಪವಾಸವಿದ್ದು ತನ್ನ ತೂಕವನ್ನು 82 ಕಿಲೋಗೆ ಇಳಿಸಿಕೊಂಡನು. ಟೀ, ಕಾಫಿ, ಈಸ್ಟ್‌ ಉಪೋತ್ಪನ್ನಗಳು, ನೀರು ಹಾಗೂ ವಿಟಮಿನ್‌ ಸಪ್ಲಿಮೆಂಟರಿಗಳ ಮೂಲಕ ನಿರಂತರ ವೈದ್ಯಕೀಯ ತಪಾಸಣೆಗೆ ಒಳಪಟ್ಟು ಈ ಸುದೀರ್ಘ ಉಪವಾಸವನ್ನು ಯಶಸ್ವಿಯಾಗಿಸಿದ.

ಜೈನರು ಕಾಲಾಂತರದಿಂದಲೂ ದ್ರವಾಹಾರ ಸೇವಿಸಿ ಬದುಕುತ್ತಾರೆ. ಅವರದ್ದು ಬಹಳ ಶಿಸ್ತಿನ ಉಪವಾಸ ಕ್ರಮ. ದೇಹ ದಂಡಿಸುವ ಮೂಲಕ ಚೈತನ್ಯ ವೃದ್ದಿಸುತ್ತದೆ ಎಂಬುದು ವೈದ್ಯಕೀಯ ಲೋಕ ಕಂಡುಕೊಂಡ ಸತ್ಯವೂ ಹೌದು. ನಮ್ಮ ದೇಹದ ಕೊಬ್ಬು ಆಹಾರವಾಗಿ ಪರಿವರ್ತನೆಯಾದಾಗ ಸಾಮಾನ್ಯಕ್ಕಿಂತಲೂ ಹೆಚ್ಚು ಚೈತನ್ಯ ದೊರೆಯುತ್ತದೆ ಮತ್ತು ದೇಹವು ಶಕ್ತಿಗಾಗಿ ಆಹಾರ (ಕಾರ್ಬೋಹೈಡ್ರೇಟ್‌ಗಳು) ಖಾಲಿಯಾದಾಗ, ಅದು ಕೀಟೋಸಿಸ್ ಎಂಬ ಚಯಾಪಚಯ ಸ್ಥಿತಿಗೆ ಬದಲಾಗುತ್ತದೆ. ಈ ಸಮಯದಲ್ಲಿ, ಯಕೃತ್ತು ದೇಹದ ಕೊಬ್ಬನ್ನು ಕೀಟೋನ್‌ ಎಂಬ ಅಣುಗಳಾಗಿ ಪರಿವರ್ತಿಸುತ್ತದೆ , ಇದನ್ನು ದೇಹ ಮತ್ತು ಮಿದುಳು ಪರ್ಯಾಯ, ಹೆಚ್ಚು ಪರಿಣಾಮಕಾರಿ ಶಕ್ತಿಯ ಮೂಲವಾಗಿ ಬಳಸುತ್ತವೆ ಎನ್ನುತದೆ ವೈದ್ಯಲೋಕ.

ಇತಿಹಾಸವನ್ನು ಗಮನಿಸಿದರೆ, ಉಪವಾಸ ಎನ್ನುವುದು ಕೇವಲ ಹಠವಲ್ಲ, ಅದೊಂದು ವೈಜ್ಞಾನಿಕ ಪ್ರಕ್ರಿಯೆ ಕೂಡ ಹೌದು. ಮಹಾತ್ಮ ಗಾಂಧೀಜಿಯವರು 1943ರಲ್ಲಿ ಜೈಲಿನಲ್ಲಿದ್ದಾಗ ಬ್ರಿಟಿಷ್ ಸರ್ಕಾರದ ವಿರುದ್ಧ ಉಪವಾಸ ಸತ್ಯಾಗ್ರಹ ಮಾಡಿದ್ದರು. ಆಗ ಅವರ ಆರೋಗ್ಯವನ್ನು ತಪಾಸಣೆ ಮಾಡಿದ ಬ್ರಿಟಿಷ್ ವೈದ್ಯರ ತಂಡವೇ, ಗಾಂಧೀಜಿಯವರ ದೃಢ ಸಂಕಲ್ಪ ಮತ್ತು ಅವರು ತೆಗೆದುಕೊಳ್ಳುತ್ತಿದ್ದ ನೀರಿನ ಪ್ರಮಾಣವೇ ಅವರನ್ನು ಸಾವಿನ ದವಡೆಯಿಂದ ಪಾರು ಮಾಡಿತು ಎಂದು ವರದಿ ನೀಡಿತ್ತು.

ಗಾಂಧೀಜಿ ಎಷ್ಟು ದಿನ ಉಪವಾಸ ಮಾಡಿದ್ದರು?

ಗಾಂಧೀಜಿಯವರು ತಮ್ಮ ಜೀವಿತಾವಧಿಯಲ್ಲಿ ಸುಮಾರು 17 ಪ್ರಮುಖ ಉಪವಾಸಗಳನ್ನು ಮಾಡಿದ್ದರು. ಅದರಲ್ಲಿ ಅತ್ಯಂತ ಸುದೀರ್ಘವಾದ ಉಪವಾಸಗಳೆಂದರೆ 21 ದಿನಗಳ ಉಪವಾಸ. ಅವರು ಇಂತಹ 21 ದಿನಗಳ ಉಪವಾಸವನ್ನು ಮೂರು ಬಾರಿ (1924, 1933 ಮತ್ತು 1943 ರಲ್ಲಿ) ಯಶಸ್ವಿಯಾಗಿ ಮಾಡಿದ್ದರು. ಬ್ರಿಟಿಷರ ಆಡಳಿತದಲ್ಲಿದ್ದಾಗ, ತಮ್ಮ 70ರ ಇಳಿವಯಸ್ಸಿನಲ್ಲೂ ಅವರು 21 ದಿನಗಳ ಕಾಲ ಕೇವಲ ನೀರು ಮತ್ತು ಲವಣಾಂಶಗಳನ್ನು ಮಾತ್ರ ಪಡೆದು ಉಪವಾಸವಿದ್ದರು.

20251001044215 4 1
  • ಗಾಂಧೀಜಿ ಅಷ್ಟು ದಿನ ಬದುಕುಳಿದಿದ್ದು ಹೇಗೆ?

ಗಾಂಧೀಜಿಯವರ ದೀರ್ಘಕಾಲದ ಉಪವಾಸದ ಬಗ್ಗೆ ಆಗಿನ ಬ್ರಿಟಿಷ್ ವೈದ್ಯರೇ ಆಶ್ಚರ್ಯಚಕಿತರಾಗಿದ್ದರು. ವೈದ್ಯಕೀಯ ವರದಿಗಳ ಪ್ರಕಾರ, ಗಾಂಧೀಜಿಯವರ ದೇಹವು ಕನಿಷ್ಠ ಶಕ್ತಿಯಲ್ಲಿ ಕೆಲಸ ಮಾಡುವ ದೈಹಿಕ ಪ್ರಕೃತಿಯನ್ನು ರೂಢಿಸಿಕೊಂಡಿತ್ತು. ಗಾಂಧೀಜಿಯವರು ಸಂಪೂರ್ಣವಾಗಿ ನೀರನ್ನು ತ್ಯಜಿಸುತ್ತಿರಲಿಲ್ಲ. ಉಪವಾಸದ ಸಮಯದಲ್ಲಿ ಅವರು ನಿಯಮಿತವಾಗಿ ನೀರು ಮತ್ತು ಅದರಲ್ಲಿ ಕೆಲವು ಹನಿ ನಿಂಬೆ ರಸ ಅಥವಾ ಉಪ್ಪನ್ನು (Electrolytes) ತೆಗೆದುಕೊಳ್ಳುತ್ತಿದ್ದರು. ಇದು ಅವರ ಕಿಡ್ನಿಗಳು ವಿಫಲವಾಗದಂತೆ ಮತ್ತು ದೇಹದಲ್ಲಿ ರಕ್ತದೊತ್ತಡ ನಿಯಂತ್ರಣದಲ್ಲಿರುವಂತೆ ನೋಡಿಕೊಳ್ಳುತ್ತಿತ್ತು. ದೀರ್ಘಕಾಲದ ಉಪವಾಸಕ್ಕೆ ಮಾನಸಿಕ ಶಕ್ತಿ ಅತಿ ಮುಖ್ಯ. ಗಾಂಧೀಜಿಯವರ ಪ್ರಾರ್ಥನೆ, ಧ್ಯಾನ ಮತ್ತು ಮೌನವ್ರತಗಳು ಅವರ ದೇಹದ ಶಕ್ತಿ ಅನಗತ್ಯವಾಗಿ ವ್ಯಯವಾಗದಂತೆ ತಡೆಯುತ್ತಿದ್ದವು.

  • ಜತೀಂದ್ರ ನಾಥ್ ದಾಸ್ (ಜತಿನ್ ದಾಸ್) – 63 ದಿನಗಳ ಉಪವಾಸ

ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಅತ್ಯಂತ ದೀರ್ಘಾವಧಿಯ ಮತ್ತು ಕಠಿಣವಾದ ಉಪವಾಸ ಸತ್ಯಾಗ್ರಹ ನಡೆಸಿದ ಕ್ರಾಂತಿಕಾರಿ ಇವರು. ಲಾಹೋರ್ ಜೈಲಿನಲ್ಲಿದ್ದ ರಾಜಕೀಯ ಕೈದಿಗಳಿಗೆ ಯೋಗ್ಯ ಸೌಲಭ್ಯಗಳು ಮತ್ತು ಸಮಾನ ಹಕ್ಕುಗಳನ್ನು ನೀಡಬೇಕು ಎಂದು ಒತ್ತಾಯಿಸಿ ಭಗತ್ ಸಿಂಗ್ ಅವರೊಂದಿಗೆ ಜತಿನ್ ದಾಸ್ ಉಪವಾಸ ಆರಂಭಿಸಿದರು. ಬ್ರಿಟಿಷ್ ಅಧಿಕಾರಿಗಳು ಬಲವಂತವಾಗಿ ಆಹಾರ ನೀಡಲು ಪ್ರಯತ್ನಿಸಿದರೂ ಜಗ್ಗದ ಜತಿನ್ ದಾಸ್ ಅವರು, ಸತತ 63 ದಿನಗಳ ಕಾಲ ಉಪವಾಸವಿದ್ದು ಜೈಲಿನಲ್ಲೇ ಹುತಾತ್ಮರಾದರು. ಇದು ದೇಶಾದ್ಯಂತ ಬ್ರಿಟಿಷರ ವಿರುದ್ಧ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

images 12 3
  • ಇರೋಮ್ ಶರ್ಮಿಳಾ (ಮಣಿಪುರದ ಉಕ್ಕಿನ ಮಹಿಳೆ) – 16 ವರ್ಷಗಳ ಸುದೀರ್ಘ ಹೋರಾಟ

ವಿಶ್ವದ ಇತಿಹಾಸದಲ್ಲೇ ಅತ್ಯಂತ ದೀರ್ಘಾವಧಿಯ ಉಪವಾಸ ಸತ್ಯಾಗ್ರಹ ನಡೆಸಿದ ಹೆಗ್ಗಳಿಕೆ ಇವರದ್ದು. ಮಣಿಪುರದಲ್ಲಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ (AFSPA) ರದ್ದುಗೊಳಿಸಬೇಕೆಂದು ಒತ್ತಾಯಿಸಿ ಇವರು 2000 ಇಸವಿಯಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿ 2016ರವರೆಗೂ ಉಪವಾಸವಿದ್ದರು. ಆದರೆ, ಇವರನ್ನು ಬಂಧನದಲ್ಲಿಟ್ಟು ಮೂಗಿಗೆ ಹಾಕಿದ್ದ ನಳಿಕೆಯ ಮೂಲಕ ಸರ್ಕಾರವು ಬಲವಂತವಾಗಿ ದ್ರವರೂಪದ ಆಹಾರ ಮತ್ತು ಪೋಷಕಾಂಶಗಳನ್ನು ನೀಡಿ ಜೀವ ಉಳಿಸಿತ್ತು. 2016 ರಲ್ಲಿ ಇವರು ತಮ್ಮ ಸುದೀರ್ಘ ಉಪವಾಸವನ್ನು ಕೈಬಿಟ್ಟರು.

Irom Chanu Sharmila

ಪೊಟ್ಟಿ ಶ್ರೀರಾಮುಲು – 56 ದಿನಗಳ ಉಪವಾಸ

ಮಹಾತ್ಮ ಗಾಂಧೀಜಿಯವರ ಪರಮ ಅನುಯಾಯಿಯಾಗಿದ್ದ ಪೊಟ್ಟಿ ಶ್ರೀರಾಮುಲು ಹೆಸರು ಭಾರತದ ಭಾಷಾವಾರು ಪ್ರಾಂತ್ಯಗಳ ರಚನೆಯ ಇತಿಹಾಸದಲ್ಲಿ ಅಚ್ಚಳಿಯದ ಮುನ್ನುಡಿಯಾಗಿದೆ. ಸತತ 56 ದಿನಗಳ ಕಾಲ ಅನ್ನ-ನೀರು ಇಲ್ಲದೆ ಉಪವಾಸವಿದ್ದ ಇವರು ಅಂತಿಮವಾಗಿ ಪ್ರಾಣತ್ಯಾಗ ಮಾಡಿದರು. ಇವರ ಬಲಿದಾನ ದೇಶಾದ್ಯಂತ ಸಂಚಲನ ಮೂಡಿಸಿತು ಮತ್ತು ಇದರ ಬೆನ್ನಲ್ಲೇ ಭಾಷಾವಾರು ಪ್ರಾಂತ್ಯಗಳ ರಚನೆಗೆ ಸರ್ಕಾರ ಮುಂದಾಗಬೇಕಾಯಿತು. ಅಂದಿನ ಮದ್ರಾಸ್ ಪ್ರಾಂತ್ಯದಿಂದ ತೆಲುಗು ಮಾತನಾಡುವ ಜನರಿಗಾಗಿ ಪ್ರತ್ಯೇಕ “ಆಂಧ್ರ ರಾಜ್ಯ”ವನ್ನು ರಚಿಸಬೇಕೆಂದು ಒತ್ತಾಯಿಸಿ 1952 ರಲ್ಲಿ ಇವರು ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದರು.

potti sriramul

ಹೀಗೆ ಇತಿಹಾಸದ ಪುಟಗಳನ್ನು ತಿರುವಿ ನೋಡಿದಾಗ, ಉಪವಾಸ ಸತ್ಯಾಗ್ರಹ ಎನ್ನುವುದು ಕೇವಲ ಆಹಾರ ತ್ಯಜಿಸುವ ಹಠವಲ್ಲ. ಅದು ದೃಢವಾದ ಮಾನಸಿಕ ಸಂಕಲ್ಪ, ದೇಹದ ಅದ್ಭುತ ರಕ್ಷಣಾ ವ್ಯವಸ್ಥೆ ಮತ್ತು ಉದಾತ್ತ ಆಶಯಗಳ ಸಮ್ಮಿಲನ. ಸೂಕ್ತ ದ್ರವಾಹಾರದ ಬೆಂಬಲದೊಂದಿಗೆ ವ್ಯವಸ್ಥೆಯ ವಿರುದ್ಧ ತಿರುಗಿಬೀಳುವ ಇಂತಹ ಹೋರಾಟಗಳು ಕೇವಲ ‘ನಾಟಕ’ವಲ್ಲ, ಇತಿಹಾಸವನ್ನು ಬದಲಾಯಿಸಿದ ವೈಜ್ಞಾನಿಕ ವಾಸ್ತವಗಳು ಎಂಬುದಕ್ಕೆ ಈ ಮಹಾತ್ಮರೇ ಸಾಕ್ಷಿ.

WhatsApp Image 2026 03 09 at 18.17.26
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅಂಕಿತಾ ಹತ್ಯೆ ಶಂಕಿತರಿಗೆ ಸಾಂವಿಧಾನಿಕ ಹುದ್ದೆ ಸರಿಯೇ?

ಅಂಕಿತಾ ಭಂಡಾರಿ ಕೊಲೆ ಪ್ರಕರಣದಲ್ಲಿದ್ದ ವಿಐಪಿ ದುಶ್ಯಂತ್‌ ಅವರ ಮೇಲಿನ...

‘ಮೋದಿಯನ್ನು ದೇವರನ್ನಾಗಿಸುವ ಯತ್ನ’: ಬಿಹಾರ ಸಿಎಂ ಹೇಳಿಕೆಗೆ ಪ್ರಶಾಂತ್ ಕಿಶೋರ್ ಕಿಡಿ

ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮನಿಗೂ ಮನೆ ಒದಗಿಸಿದರು ಎಂಬ ಬಿಹಾರ...

ಬಾಗಲಕೋಟೆ | ಎಸ್‌ಐಆರ್ ಪ್ರಕ್ರಿಯೆ ಸ್ಥಗಿತಕ್ಕೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾಗೊಳಿಸಿ, ಅವರ ವಿರುದ್ಧ ಕ್ರಿಮಿನಲ್...

ಬೆಳಗಾವಿ | ಚೂನಪ್ಪ ಪೂಜೇರಿ, ನಾನು ಸತ್ತರೂ ಒಂದೇ ಗೋರಿಯಲ್ಲಿ ಮಣ್ಣಾಗಬೇಕು: ಶಶಿಕಾಂತ ಗುರೂಜಿ

ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಹತ್ತರಗಿ...