‘ಹುಟ್ಟಿಗೂ, ಸಾವಿಗೂ ನಾವೇ ಬೇಕು… ನಮ್ಮ ಜೊತೆ ನಿಲ್ಲೋಕೆ ಯಾರೂ ಇಲ್ಲ’; ಆಶಾ ಅಳಲು

Date:

ಕಳೆದ ಏಳು ದಿನಗಳಿಂದ ಕನಿಷ್ಟ ಗೌರವ ಧನಕ್ಕಾಗಿ ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರು ಇಂದು ಫ್ರೀಡಂ ಪಾರ್ಕಿನಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಘೋಷವಾಕ್ಯ ಕೂಗಿದರು. 15,000 ಕೊಡದ ಹೊರತು ಕದಲುವುದಿಲ್ಲ, ಜಗ್ಗುವುದಿಲ್ಲ. ಸಿಂಪತಿ ಬೇಡ, ವೇತನ ನೀಡಿ. ಎಂಬ ಕೂಗು ಬಯಲ ಮೂಲೆ ಮೂಲೆಯಲ್ಲೂ ಪ್ರತಿಧ್ವನಿಸಿತು. “ಕೇರಳದಲ್ಲಿ 12,000 ಕರ್ನಾಟಕದಲ್ಲಿ 5,000 ಇದು ನ್ಯಾಯವೇ”, “ನಿಮ್ಮ ಅನುಕಂಕ ಸಹಾನುಭೂತಿ ಬೇಡ, ನಮ್ಮ ಶ್ರಮಕ್ಕೆ ತಕ್ಕ ವೇತನ ನೀಡಿ” ಎಂಬ ಸಾಲುಗಳನ್ನು ಕೊರಳಿಗೆ ನೇತು ಹಾಕಿಕೊಂಡ ಆಶಾ ಸಹೋದರಿಯರು ಕೈ-ಕೈ ಜೋಡಿಸಿ, ಹಸಿವು-ದಣಿವರಿಯದೆ ಬೀದಿಗಿಳಿದು ಪ್ರತಿಭಟಿಸಿದರು.

- Advertisement -

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಸೇವೆ ತಲುಪಿಸುವಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಅತ್ಯಂತ ಮಹತ್ವದ್ದು. ಆದರೆ, ಹಗಲಿರುಳು ಜನರ ಆರೋಗ್ಯಕ್ಕಾಗಿ ಶ್ರಮಿಸುವ ಈ ಕಾರ್ಯಕರ್ತೆಯರು ಇಂದು ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಬೀದಿಗಿಳಿದು ಹೋರಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಏಳು ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಿಸಿಲು, ಚಳಿ ಎನ್ನದೆ ಪ್ರತಿಭಟನೆ ನಡೆಸುತ್ತಿರುವ ತುಮಕೂರಿನ ಆಶಾ ಕಾರ್ಯಕರ್ತೆಯರು ತಮ್ಮ ನೋವು, ಸಂಕಷ್ಟ ಹಾಗೂ ಸರ್ಕಾರದ ನಿರ್ಲಕ್ಷ್ಯದ ಕುರಿತು ಈ ದಿನ.ಕಾಮ್ ಜೊತೆಗೆ ಹಂಚಿಕೊಂಡ ಒಂದಿಷ್ಟು ವಿಷಯಗಳು ಇಲ್ಲಿವೆ…

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅರಬ್ ಜನಾದೇಶ ಬದಿಗಿಟ್ಟು ನೆತನ್ಯಾಹು ಕೈಹಿಡಿಯಲು ಹೊರಟ ಐಸೆನ್‌ಕೋಟ್;...

ಇಸ್ರೇಲ್‌ನ ತ್ರಿಶಂಕು ಸಂಸತ್ತಿನಲ್ಲಿ ಅಧಿಕಾರ ಹಿಡಿಯಲು ವಿರೋಧ ಪಕ್ಷದ ನಾಯಕ ಗಾಡಿ ಐಸೆನ್‌ಕೋಟ್ ತಮ್ಮ ಮಾತನ್ನೇ ನುಂಗಿ ಹಂಗಾಮಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆ ಮೈತ್ರಿ ಮಾತುಕತೆಗೆ ಮುಂದಾಗಿದ್ದಾರೆ. 19 ಸ್ಥಾನ ಗೆದ್ದ...

SIR ಪ್ರತಿರೋಧ – ಭಾರತದ ಎರಡನೇ ಸ್ವಾತಂತ್ರ್ಯ ಸಂಗ್ರಾಮ!...

ಮೋದಿ ಸರ್ಕಾರ ಬ್ರಿಟಿಷರಂತೆ ಪೊಲೀಸ್‌ ಮತ್ತು ಪೊಲೀಸ್‌ ವೇಷದ ಆರ್‌ ಎಸ್‌ ಎಸ್‌, ಹಿಂದುತ್ವವಾದಿಗಳ ಹಿಂದೆ ಅವಿತು ಭಾರತದ ಯುವಜನರ ಧಮನಕ್ಕೆ ಇಳಿದಿದೆ. ಗ್ಯಾನೇಶ್‌ ಕುಮಾರ್‌ ನನ್ನು ಮೋದಿ ಮತ್ತು ಅಮಿತ್‌ ಶಾ,...

ಕೋಲ್ಕತ್ತಾ: SFI ಪುಸ್ತಕ ಮಳಿಗೆ ಮೇಲೆ ದಾಳಿ; ABVP...

ಬ್ರಿಟಿಷ್ ಆಡಳಿತದ ಪರವಾಗಿದ್ದ ಶ್ಯಾಮಪ್ರಸಾದ್ ಮುಖರ್ಜಿ ಅವರ ರಾಜಕೀಯ ನಿಲುವುಗಳು, ಸಂಘಪರಿವಾರದ ಸೈದ್ಧಾಂತಿಕ ಹಿನ್ನೆಲೆ ಮತ್ತು ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಮರೆಮಾಚುವ ಪ್ರಯತ್ನಗಳ ವಿಶ್ಲೇಷಣೆ. ಪುಸ್ತಕಗಳು ಜ್ಞಾನವನ್ನು ನೀಡುತ್ತವೆ. ಇತಿಹಾಸವನ್ನು ಪರಿಚಯಿಸುತ್ತವೆ. ಪ್ರಶ್ನಿಸುವ ಮನೋಭಾವವನ್ನು...
304166e6 44e7 4e20 b61b c19351983b54 e1795431826246

ಈ ದಿನ.ಕಾಮ್‌ ಜೊತೆಗೆ ತುಮಕೂರಿನ ಆಶಾ ಕಾರ್ಯಕರ್ತೆ ಸುಧಾರಾಣಿ ಮಾತನಾಡಿ, “7 ದಿನದಿಂದ ಬಿಸಿಲು, ಚಳಿ ಅನ್ನೋದ್‌ ಮರ್ತು ಈ ಬಯಲಲ್ಲಿ ಕುಂತಿದ್ದೀವಿ. ಯೂನಿಯನ್‌ ಕಡೆಯಿಂದ ಟಾಯ್ಲೆಟ್‌ ಕಟ್ಸಿದ್ರು, ಸರ್ಕಾರ ನೀರಿನ ಅನುಕೂಲ, ಶೌಚಾಲಯದ ವ್ಯವಸ್ಥೆ ಮಾಡೋದಾಗಿ ಹೇಳಿ ನಂತ್ರ ತಿರ್ಗೂ ನೋಡಿಲ್ಲ. ಸರ್ಕಾರಕ್ಕೆ ಕಣ್ಣಿಲ್ಲ… ಬೇರೆ ಏನೂ ಕೇಳ್ತಿಲ್ಲ ದುಡಿತೀರೋದ್ಕೆ 15000 ಕೊಡಿ ಅಂತ ಕೇಳ್ತಿದ್ದೀವಿ ಅಷ್ಟೇ. ಮಹಿಳೆಯರಿಗೆ ತಿಂಗಳ ಮುಟ್ಟಿನ ಸಮಸ್ಯೆ ಇದೆಯಂತ ಅರಿವಿದ್ದೂ ಕನಿಷ್ಟ ನೀರಿನ ಸೌಕರ್ಯ ಇಲ್ದೆ ನಾವು ಒದ್ದಾಡ್ಬೇಕು ಹಾಗೆ ಮಾಡಿದಾರೆ. ಇವ್ರಿಗೆ ಎಲ್ಲಾ ಕೆಲ್ಸಕ್ಕೂ ನಾವ್‌ ಬೇಕು ಆದರೆ, ನಮ್ಮ ಬದುಕಿಗೆ ಒಂದು ವ್ಯವಸ್ಥೆ ಮಾಡ್ಕೊಡಿ ಅಂದ್ರೆ ಸಮಾಧಾನದ ಮಾತಾಡಿ, ಆಶ್ವಾಸನೆ ಕೊಟ್ಟು ಬಾಯಿ ಮುಚ್ಸೋಕೆ ನೋಡ್ತಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಪಿಂಕ್‌ ಕಲರ್‌ ಸ್ಯಾರಿ ಅಂದ್ರೆ ಆಶಾ ವರ್ಕರ್ಸ್‌ ಅನ್ನುತ್ತೇ ಇಡೀ ದೇಶ ನಮ್ಮನ್ನ ಹಾಗೆ ಗುರುತ್ಸುತ್ತೆ ಆದ್ರೆ ಏನ್‌ ಬಂತು ನಮ್ಮ ಕಷ್ಟ ಸುಖ ಕೇಳೋಕೆ ಇವ್ರ್‌ ಬರ್ದಿದ್ರೆ. ಮುಖ್ಯಮಂತ್ರಿ ಎಲ್ಲೋ ಹೊರದೇಶದಲ್ಲಿ ಕೂತಿದಾರೆ ನಾವಿಲ್ಲಿ ಎಲ್ಲಿದ್ದೀವಿ ನೋಡಿ. ಪೆಂಡಾಲ್‌ ವ್ಯವಸ್ಥೆ ಇಲ್ಲ ಏನೇನು ಇಲ್ಲ. ಚಳೀಲಿ ಕುಂತ್ಕೊಬೇಡಿ ಹೋಗಿ ನಿಮ್ಮ ಬೇಡಿಕೆ ಈಡೇರುಸ್ತೀವಿ ಅಂತಾರೆ ಬಾಯಿಮಾತಿಗೆ ಕಾಳಜಿ ತೋರ್ಸಿದ್ರೆ ಕೇಳ್ಕೊಂಡ್‌ ಹೋಗೋಕೆ ಬಂದಿಲ್ಲ ನಾವು ಈ ಸಲ ಅವ್ರು ನಮ್ಗೆ ಲಿಖಿತ ರೂಪ್ದಲ್ಲಿ ಬರ್ದ್‌ ಕೊಡ್ಬೇಕು ನಮ್ಮೆಲ್ಲಾ ಬೇಡಿಕೆ ಈಡೇರಿಸೋಕೆ ಸಿದ್ಧ ಅಂತ ಅಲ್ಲೀವರ್ಗೂ ನಮ್ಮ ಹೋರಾಟ ಮುಂದುವರಿಯುತ್ತೆ. 7 ದಿನ ಅಲ್ಲ 14 ದಿನ ಆಗ್ಲಿ ನಮ್ಗೇನಾದರೂ ಆಗ್ಲಿ ನಾವು ಫ್ರೀಡಂ ಪಾರ್ಕ್‌ ಬಿಟ್ಟು ಹೋಗಲ್ಲ” ಎಂದು ತಮ್ಮ ನಿಲುವನ್ನು ವ್ಯಕ್ತಪಡಿಸಿದರು.

28a42455 4907 4a3f 957e 49e487881292 e1795431776940



ನಮ್ಮೊಂದಿಗೆ ಆಶಾಕಾರ್ಯಕರ್ತೆ ಸುಜಾತ ಮಾತನಾಡಿ “ಹುಟ್ಟಿನಿಂದ ಸಾಯೋವರ್ಗೂ ನಾವೇನೆ… ಊರಿಗೆ ಹೊಸ ಹೆಣ್ಣು ಬಂದ್ರು. ಊರಿಂದ ಹೆಣ ಹೋದ್ರೂ ಬರಿಯೋಕೆ ನಮ್ಮನ್ನೇ ಕಳುಹಿಸ್ತಾರೆ. ಎಷ್ಟೋ ಮನೆಗ್‌ ಹೋಗಿ ನಾಯಿಯಿಂದ ಕಚ್ಚುಸ್ಕೊಂಡು ಬರ್ತೀವಿ. ಬಿಸಿಲು ಮಳೇಲಿ ಅಲಿತೀವಿ ಇದ್ಯಾವ್ದು ಅವ್ರ ಕಣ್ಣಿಗೆ ಕಾಣೋದಿಲ್ಲ. ನಮ್ಮ ಮೇಲೆ ಯಾರ್ಗೂ ಗಮನ ಇಲ್ಲ. ದಿನಕ್ಕೇ ಇಬ್ರೂ ಮೂವರು ತಲೆ ಸುತ್ತಿ ಬಿದ್ದು ಆಸ್ಪತ್ರೆ ಸೇರ್ತಿದಾರೆ. ಸಣ್ಣ ಸಣ್ಣ ಮಕ್ಕಳ ಜೊತೆಗೆ ಇಲ್ಲಿ ಬಂದು 7 ದಿನ್ದಿಂದ ಪ್ರತಿಭಟನೆಗೆ ಕೂತಿದ್ದಾರೆ. ಐದಾರು ತಿಂಗಳ ಬಾಣಂತಿಯರು ಚಳೀಲಿ ಕೂತು ತಮಗೇ ಬೇಕಾಗಿರೋ ನ್ಯಾಯ ಕೇಳ್ತಿದಾರೆ. ಇಲ್ಲಿ ಯಾರಿಗೇನೇ ಸಮಸ್ಯೆ ಆದ್ರೂ ಅದ್ಕೆ ಸರ್ಕಾರನೇ ಹೊಣೆ” ಎಂದು ಆಕ್ರೋಷ ವ್ಯಕ್ತಪಡಿಸಿದರು.

“ಎಷ್ಟು ಕ್ರೂರತನ ಇದೆ ಅಂದ್ರೆ; ನಮಗೆ ಸಹಾಯ ಮಾಡಕ್ಕೆ ಯಾರೋ ತರಕಾರಿ, ಹಣ್ಣು ಹಂಪಲು ತಗೊಂಡು ದೊಡ್ಡಬಳ್ಳಾಪುರದಿಂದ ಬಂದಿದ್ರು ಅವರನ್ನ ಇಲ್ಲಿಗೆ ಬಿಡಲೇ ಇಲ್ಲ. ಅವ್ರು ತಂದಿರೋ ವಸ್ತುಗಳನ್ನು ವಾಪಾಸ್‌ ಕಳ್ಸಿದಾರೆ. ಅವೆಲ್ಲಾ ಸಿಕ್ಬಿಟ್ರೆ ನಾವಿನ್ನೂ ಜಾಸ್ತಿ ದಿನ ಇರ್ತೀವಿ, ಹೀಗೆಲ್ಲಾ ಟಾರ್ಚರ್‌ ಕೊಟ್ರೆ ನಾವು ಹೋಗ್ಬಹುದು ಅಂದ್ಕೊಂಡು ಈ ಥರ ಮಾಡ್ತಿದ್ದಾರೆ. ಇವ್ರು ಸಹಾಯ ಮಾಡಲ್ಲ, ಬೇರೆಯವರಿಗೂ ಬಿಡ್ತಿಲ್ಲ. ನಮಗೆ ಯಾರ ನೆರವೂ ಸಿಗಲ್ಲ ಅಂದ್ರೆ ನಾವಿಲ್ಲಿಂದ ಹೋಗತೀವಿ ಅನ್ನೋ ಭ್ರಮೇಲಿ ಇದಾರೆ ಆದ್ರೆ, ನಾವು ಹೆದರಿ ಹೋಗೋರಲ್ಲ. ಊರಿಗೆಲ್ಲಾ ಆರೋಗ್ಯ ಸೇವೆಲಿ ಭಾಗಿಯಾಗೋ ನಮ್ಮ ಆರೋಗ್ಯ ಹದಗೆಡ್ತಿದೆ. ಚಳಿಯಲ್ಲಿ ಮಲ್ಕೊತಿವಿ, ಉಪವಾಸ ವನವಾಸ ಇದ್ದೀವಿ ಆದರೂ, ಸರ್ಕಾರಕ್ಕೆ ನಮ್ಮ ಮೇಲೆ ಏನೂ ದ್ವೇಷವೋ ಅರ್ಥವಾಗದು” ಎಂದು ಕಣ್ತುಂಬಿಕೊಂಡರು.

ಆಶಾಕಾರ್ಯಕರ್ತೆಯರ ಮಾತುಗಳು, ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಹೋರಾಟದ ಕಠೋರ ವಾಸ್ತವವನ್ನು ಬಿಚ್ಚಿಡುತ್ತವೆ. ಜನರ ಆರೋಗ್ಯ ರಕ್ಷಣೆಯಲ್ಲಿ ಹುಟ್ಟಿನಿಂದ ಸಾವಿನವರೆಗೂ ದುಡಿಯುವ ಈ ಕಾರ್ಯಕರ್ತೆಯರಿಗೆ ಕನಿಷ್ಠ ನೀರು, ಶೌಚಾಲಯ, ಆಶ್ರಯ ಅಥವಾ ಮೂಲಭೂತ ಸೌಲಭ್ಯಗಳೂ ಇಲ್ಲದಿರುವುದು ದುರದೃಷ್ಟಕರ. ಇದೆಲ್ಲಾ ಆರೋಪಗಳು ಕನಿಷ್ಟಪಕ್ಷ ಮನುಷ್ಯನಿಗೆ ಮನುಷ್ಯನ ಮೇಲಿರಬೇಕಾದ ಸಹಾನುಭೂತಿ, ಮಾನವೀಯತೆಯಂತಹ ಮೌಲ್ಯಗಳನ್ನೇ ಅಲುಗಿಸುವಂತಿದೆ.

15,000 ರೂಪಾಯಿ ಗೌರವಧನ ಮತ್ತು ತಮ್ಮ ನ್ಯಾಯಯುತ ಬೇಡಿಕೆಗಳಿಗೆ ಸರ್ಕಾರದಿಂದ ಕೇವಲ ಮೌಖಿಕ ಭರವಸೆಗಳಲ್ಲ, ಬದಲಿಗೆ ಲಿಖಿತ ಭರವಸೆ ಸಿಗುವವರೆಗೂ ಹೋರಾಟವನ್ನು ಮುಂದುವರಿಸುವ ದೃಢ ನಿರ್ಧಾರವನ್ನು ಅವರು ವ್ಯಕ್ತಪಡಿಸಿದ್ದಾರೆ. ಚಳಿ, ಬಿಸಿಲು, ಅನಾರೋಗ್ಯ ಹಾಗೂ ಹೊರಗಿನಿಂದ ಬಂದ ಆಹಾರ-ಸಾಮಗ್ರಿಗಳ ತಡೆಯ ನಡುವೆಯೂ, ತಮ್ಮ ಹಕ್ಕುಗಳಿಗಾಗಿ ಎದೆಗುಂದದೆ ನಿಂತಿರುವ ಈ ಹೋರಾಟಕ್ಕೆ ಸರ್ಕಾರ ತಕ್ಷಣ ಸ್ಪಂದಿಸಿ, ಸೂಕ್ತ ಪರಿಹಾರ ಒದಗಿಸುವುದು ಅತ್ಯಗತ್ಯವಾಗಿದೆ.

ಪೆಂಡಾಲಿನ ಒಂದು ಮೂಲೆಯಿಂದ ಆಶಾ ಕಾಯಕರ್ತೆಯರು ” ರೂಪ ರೂಪಗಳನು ದಾಟಿ, ನಾಮ ಕೋಟಿಗಳನು ಮೀಟಿ, ಎದೆಯ ಬಿರಿಯೆ ಭಾವದೀಟಿ, ಓ ನನ್ನ ಚೇತನ… ಆಗು ಅನಿಕೇತನ” ಕವಿತೆಯ ಸಾಲುಗಳನ್ನು ಎದೆತುಂಬಿ ಹಾಡುತ್ತಿದ್ದರು. ಎಲ್ಲಾ ಬವಣೆಯ ದಾಟಿ ಮುಂದುವರೆಯುತ್ತಿರುವ ಈ ಹೋರಾಟ, ನ್ಯಾಯ ಗೆಲುವವರೆಗೂ ನಿಲ್ಲದಿರಲಿ. ಈ ನಾಡಲ್ಲಿ ಹೋರಾಟದ ಚೇತನ ಅನಂತವಾಗಲಿ.

WhatsApp Image 2026 03 09 at 18.17.26
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

SIR ಪ್ರತಿರೋಧ – ಭಾರತದ ಎರಡನೇ ಸ್ವಾತಂತ್ರ್ಯ ಸಂಗ್ರಾಮ! ದೆಹಲಿಯ ಬೀದಿಯಲ್ಲಿ ಕಂಡ ಯುವಶಕ್ತಿ

ಮೋದಿ ಸರ್ಕಾರ ಬ್ರಿಟಿಷರಂತೆ ಪೊಲೀಸ್‌ ಮತ್ತು ಪೊಲೀಸ್‌ ವೇಷದ ಆರ್‌ ಎಸ್‌...

SSLC ಪರೀಕ್ಷೆಗೆ ಸಿದ್ಧತೆ: ‘ಮಿಷನ್ 40+’ ಜಾರಿಗೆ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಸೂಚನೆ; ಕನಿಷ್ಠ 40 ಅಂಕಗಳ ಗುರಿ!

ಮುಂಬರುವ ಎಸ್‌ಎಸ್‌ಎಲ್‌ಸಿ (SSLC) ವಾರ್ಷಿಕ ಪರೀಕ್ಷೆಯಲ್ಲಿ ಶೇ. 100ರಷ್ಟು ಫಲಿತಾಂಶ ದಾಖಲಿಸುವ...

2018ರ ಮಾನನಷ್ಟ ಮೊಕದ್ದಮೆ: ಧ್ರುವ್ ರಾಠಿ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ

2018ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಪ್ರಸಿದ್ಧ ಯೂಟ್ಯೂಬರ್ ಧ್ರುವ್ ರಾಠಿ...

ಕಾಲಡಿ ಸಂಸ್ಕೃತ ವಿವಿ ವಿದ್ಯಾರ್ಥಿಗಳ ಅಮಾನತು ರದ್ದುಗೊಳಿಸಿದ ಕೇರಳ ಹೈಕೋರ್ಟ್; 6 ವಾರಗಳಲ್ಲಿ ವಿಶೇಷ ಪರೀಕ್ಷೆಗೆ ಆದೇಶ!

ಅಮಾನತು ಶಿಕ್ಷೆಗೆ ಗುರಿಯಾಗಿದ್ದ ಕಾಲಡಿಯ ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯದ 16...