ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

Date:

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ ಆಘಾತಕಾರಿ. ಈ ಸರಣಿ ಘಟನೆಗಳು ಮಹಿಳೆಯರ ಸುರಕ್ಷತೆಯನ್ನು, ದೇಶದ ಕಾನೂನು ಸುವ್ಯವಸ್ಥೆಯಲ್ಲಿರುವ ಲೋಪವನ್ನು ಅಣಕವಾಡುತ್ತಿವೆ. 

ಕಠಿಣ ಕಾನೂನುಗಳಿದ್ದರೂ ಮಹಿಳೆಯರ ಮೇಲಿನ ಅಪರಾಧಗಳು ಮುಂದುವರಿಯಲು ವಿಚಾರಣಾ ಹಂತದ ವಿಳಂಬ ಮತ್ತು ಶಿಕ್ಷೆಯ ಪ್ರಮಾಣದ ಕುಸಿತವೇ ಮುಖ್ಯ ಕಾರಣ. 2024ರ NCRB ವರದಿಯ ಪ್ರಕಾರ, ಕೋರ್ಟ್‌ಗೆ ಬರುವ ಒಟ್ಟು ಅತ್ಯಾಚಾರ ಪ್ರಕರಣಗಳಲ್ಲಿ ಶಿಕ್ಷೆಯಾಗುತ್ತಿರುವುದು ಬೆರಳೆಣಿಕೆಯಷ್ಟು (ಕೇವಲ ಶೇ. 1.5 – 2) ಪ್ರಕರಣಗಳಿಗೆ ಮಾತ್ರ. ದೆಹಲಿಯ ಸಾರ್ವಜನಿಕ ಉದ್ಯಾನವನದಲ್ಲಿ ನಡೆದ ಭೀಕರ ಸಾಮೂಹಿಕ ಅತ್ಯಾಚಾರ ಹಾಗೂ ಬಿಹಾರದ ಸರಣಿ ಕಿರುಕುಳದಂತಹ ಘಟನೆಗಳು ಪೊಲೀಸ್ ತನಿಖೆ ಮತ್ತು ಸಮಯಬದ್ಧ ನ್ಯಾಯಾಂಗ ವ್ಯವಸ್ಥೆಯ ತುರ್ತು ಅಗತ್ಯವನ್ನು ಪುನಃ ಜ್ಞಾಪಿಸಿವೆ.

- Advertisement -

ಇತ್ತೀಚೆಗೆ ದೆಹಲಿಯ ಆಸ್ಥಾ ಕುಂಜ್ ಪಾರ್ಕ್‌ನಲ್ಲಿ 17 ವರ್ಷದ ಬಾಲಕಿಯ ಮೇಲೆ ನಡೆದ ಭೀಕರ ಸಾಮೂಹಿಕ ಅತ್ಯಾಚಾರ ಹಾಗೂ ಬಿಹಾರದ ಜಮುಯಿ ಮತ್ತು ಸಮಸ್ತಿಪುರಗಳಲ್ಲಿ ಅಪ್ರಾಪ್ತರ ಮೇಲೆ ನಡೆದ ಕಿರುಕುಳ ಹಾಗೂ ಅವುಗಳ ವಿಡಿಯೋ ಬಹಿರಂಗಗೊಂಡ ಘಟನೆಗಳು ಇಡೀ ಸಮಾಜ ತಲೆತಗ್ಗಿಸುವಂತೆ ಮಾಡಿವೆ.

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ ಆಘಾತಕಾರಿ. ಈ ಸರಣಿ ಘಟನೆಗಳು ಮಹಿಳೆಯರ ಸುರಕ್ಷತೆಯನ್ನು, ದೇಶದ ಕಾನೂನು ಸುವ್ಯವಸ್ಥೆಯಲ್ಲಿರುವ ಲೋಪವನ್ನು ಅಣಕವಾಡುತ್ತಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ಎಸ್‌ಐಆರ್‌ | 13 ಕೋಟಿ ಮತಗಳ ಮಾರಣಹೋಮ

ಭಾರತೀಯ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಅತ್ಯಂತ ಪ್ರಮುಖ ಅಡಿಪಾಯವೇ ಮತದಾನದ ಹಕ್ಕು. ದೇಶದ ಪ್ರಜಾಪ್ರಭುತ್ವದ ಮೌಲ್ಯಗಳು ಉಳಿದುಕೊಂಡಿರುವುದೇ ಚುನಾವಣಾ ವ್ಯವಸ್ಥೆಯ ಮೇಲಿರುವ ಸಾರ್ವಜನಿಕರ ಅಪಾರ ನಂಬಿಕೆಯಿಂದ. ಆದರೆ, ಚುನಾವಣಾ ಆಯೋಗವು (ECI) ದೇಶಾದ್ಯಂತ ಜಾರಿಗೆ...
2018ರಿಂದ ಈಚೆಗಿನ ಅಂಕಿ ಅಂಶಗಳು ಹೇಳುವುದೇನು?

2018ರಿಂದ ಅತ್ಯಾಚಾರ ಪ್ರಕರಣಗಳ ದಾಖಲಾತಿ ಸ್ಥಿರವಾಗಿದ್ದು, ವರ್ಷಕ್ಕೆ ಸರಾಸರಿ 84 ಪ್ರಕರಣಗಳು (ದಿನಕ್ಕೆ ಸುಮಾರು ಮೂರು ಪ್ರಕರಣಗಳು) ದಾಖಲಾಗುತ್ತಿವೆ. ಆದರೆ ನ್ಯಾಯಾಲಯಗಳಲ್ಲಿ ಬಾಕಿಯುಳಿವ ಪ್ರಕರಣಗಳು ಹೆಚ್ಚುತ್ತಿವೆ ಮತ್ತು ಅದೇ ವರ್ಷವೇ ವಿಚಾರಣೆಗೊಳಪಟ್ಟು ಶಿಕ್ಷೆಯಾಗುವ ಪ್ರಕರಣಗಳ ಪ್ರಮಾಣ ಬೆರಳೆಣಿಕೆಯಷ್ಟಿದೆ.

ಇತ್ತೀಚಿಗೆ ಬಿಡುಗಡೆಯಾದ NCRB ವರದಿಯಂತೆ, 2024ರಲ್ಲಿ ಸುಮಾರು 40,000 ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ತನಿಖೆಗೆ ತೆಗೆದುಕೊಳ್ಳಲಾಗಿತ್ತು. ಅದರಲ್ಲಿ 29,536 ಪ್ರಕರಣಗಳು ಹೊಸದಾಗಿ ದಾಖಲಾದವು ಮತ್ತು ಉಳಿದವು ಹಿಂದಿನ ವರ್ಷದ ಬಾಕಿ ಮತ್ತು ಮರುತನಿಖೆಗೆ ತೆರೆದುಕೊಂಡ ಪ್ರಕರಣಗಳು. ಸುಮಾರು 25,000 ಪ್ರಕರಣಗಳು (63%) ದೋಷಾರೋಪ ಪಟ್ಟಿ (chargesheet) ಸಲ್ಲಿಸಲಾಗಿತ್ತು. ಇನ್ನುಳಿದ ಪ್ರಕರಣಗಳು ಪೊಲೀಸ್ ತನಿಖೆ ಅಪೂರ್ಣ, ಏಜೆನ್ಸಿ ವರ್ಗಾವಣೆ ಅಥವಾ ತನಿಖೆ ಖೈದಾಗಿ ವಿಲೇವಾರಿ ಮಾಡಲಾಗಿತ್ತು.

ದೋಷಾರೋಪ ಪಟ್ಟಿ ಸಲ್ಲಿಕೆಯಾದ ಪ್ರಕರಣಗಳು, ಬಾಕಿ ಇರುವ ಲಕ್ಷಾಂತರ ಪ್ರಕರಣಗಳು ಸೇರಿ 2024ರಲ್ಲಿ ಒಟ್ಟು 2,06,777 ಅತ್ಯಾಚಾರ ಪ್ರಕರಣಗಳು ನ್ಯಾಯಾಲಯದ ವಿಚಾರಣೆಗೆ ಬಂದಿದ್ದವು. ಅದರಲ್ಲಿ ಸುಮಾರು 90 ಶೇಕಡ ಪ್ರಕರಣಗಳು ವರ್ಷಾಂತ್ಯಕ್ಕೆ ಬಾಕಿ ಉಳಿದಿದ್ದವು. ನ್ಯಾಯಾಲಯಗಳು ಒಟ್ಟು 20,587 ಪ್ರಕರಣಗಳನ್ನು ವಿಲೇವಾರಿ ಮಾಡಿದ್ದು, ಅದರಲ್ಲಿ ಸುಮಾರು 68% ಪ್ರಕರಣಗಳ ಆರೋಪಿಗಳು ನಿರಪರಾಧಿಗಳೆಂದು ಕೋರ್ಟ್‌ ತೀರ್ಪು ನೀಡಿತು. 8% ವಜಾಗೊಂಡರೆ ಶಿಕ್ಷೆ ಘೋಷಣೆಯಾಗಿದ್ದು ಕೇವಲ 24% ಪ್ರಕರಣಗಳಿಗೆ ಮಾತ್ರ. ಆದರೆ ಅದೇ ವರ್ಷದಲ್ಲಿ ವಿಚಾರಣೆಗೆ ಬಂದ ಪ್ರಕರಣಗಳಲ್ಲಿ ಕೇವಲ 421 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ. ಇದು ವಿಚಾರಣೆಗೆ ತೆಗೆದುಕೊಂಡ ಪ್ರಕರಣಗಳ 2% ಮತ್ತು ಆ ವರ್ಷ ದಾಖಲಾದ ಒಟ್ಟು ಪ್ರಕರಣಗಳ 1.5% ಕಡಿಮೆ.

ಹಿಂದಿನ ವರ್ಷಗಳಲ್ಲೂ ಇದೇ ರೀತಿಯ ಹದುಗುವಿಕೆ ಪ್ರತಿವರ್ಷವೂ ಮುಂದುವರೆದಿದ್ದು, 2023ರಲ್ಲಿ ವಿಚಾರಣೆಗೆ ಹೋದ ಪ್ರಕರಣಗಳಲ್ಲಿ ಕೇವಲ 2.3 ಪ್ರತಿಶತ, 2022ರಲ್ಲಿ 1.9 ಪ್ರತಿಶತ ಮತ್ತು 2021ರಲ್ಲಿ 1.2 ಪ್ರತಿಶತ ಪ್ರಕರಣಗಳಲ್ಲಿ ಮಾತ್ರ ಅದೇ ವರ್ಷದಲ್ಲಿ ಶಿಕ್ಷೆಯಾಗಿದೆ. ಕಾನೂನು ತಿದ್ದುಪಡಿಗಳ ಹೊರತಾಗಿಯೂ ಸಮಯಬದ್ಧ ನ್ಯಾಯ ಒದಗಿಸುವಲ್ಲಿ ದೇಶದ ಕಾನೂನು ವ್ಯವಸ್ಥೆ ವಿಫಲಗೊಂಡಿದೆ.

ಬೆಚ್ಚಿಬೀಳಿಸುವ ಘಟನೆಗಳು…

ಸೆಪ್ಟೆಂಬರ್ 21ರಂದು 17 ವರ್ಷದ ಬಾಲಕಿ ತನ್ನ 17 ವರ್ಷದ ಸ್ನೇಹಿತನೊಂದಿಗೆ ತನ್ನ ಹುಟ್ಟುಹಬ್ಬದ ನಿಮಿತ್ತ ಕಾಲ್ಕಾಜಿ ಮಂದಿರಕ್ಕೆ ದರ್ಶನಕ್ಕೆ ಹೋಗಿದ್ದಳು. ಪ್ರಾರ್ಥನೆಯ ನಂತರ ಅವರು ಆಸ್ಥಾ ಕುಂಜ್ ಪಾರ್ಕ್‌ನ ಗೇಟ್ ನಂ. 7 ಮೂಲಕ ಪ್ರವೇಶಿಸಿ ಬೆಂಚ್ ಮೇಲೆ ಕುಳಿತು ಚಿಪ್ಸ್ ತಿನ್ನುತ್ತಿದ್ದರು. ಅಲ್ಲಿಗೆ ಮೂವರು ವ್ಯಕ್ತಿಗಳು (ಆಸಿಫ್, ಹೇಮಂತ್ ಮತ್ತು ಮುಕೇಶ್) ಬಂದು ತಾವು ಪೊಲೀಸ್ ಸಿಬ್ಬಂದಿ ಎಂದು ನಟಿಸಿ, ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಬೆದರಿಸಿದರು.

ಬಾಲಕಿಯ ಸ್ನೇಹಿತನನ್ನು ಹೊಡೆದು ಬಡೆದು, ಮೊಬೈಲ್‌ ಫೋನ್‌ಗಳನ್ನು ಕಸಿದು ಬಾಲಕಿಯನ್ನು ಪಾರ್ಕ್‌ನ ಏಕಾಂತ ಪ್ರದೇಶಕ್ಕೆ ಕರೆದೊಯ್ದರು. ಆಸಿಫ್ ಪಿಸ್ತೂಲ್ ಮತ್ತು ಚಾಕುವಿನಿಂದ ಬೆದರಿಸಿ ಅತ್ಯಾಚಾರ ನಡೆಸಿದನು. ನಂತರ ಹೇಮಂತ್ ಮತ್ತು ಮುಕೇಶ್ ಸಹ ಚಾಕುವಿನಿಂದ ಬೆದರಿಸಿ ಸಾಮೂಹಿಕ ಅತ್ಯಾಚಾರ ನಡೆಸಿದರು. ನಂತರ ವಿಷಯ ಯಾರಿಗೂ ಹೇಳದಂತೆ ಬೆದರಿಕೆ ಹಾಕಿ ಹೊರಟುಹೋದರು. ಕಂಗೆಟ್ಟ ಬಾಲಕ ಪಿಸಿಆರ್‌ಗೆ ಕರೆ ಮಾಡಿ ಪೊಲೀಸರಿಗೆ ವಿಷಯ ಮುಟ್ಟಿಸಿದ.

ಪ್ರಕರಣವನ್ನು ಬಿಎನ್‌ಎಸ್ ಸೆಕ್ಷನ್‌ಗಳು 70(2) (ಸಾಮೂಹಿಕ ಅತ್ಯಾಚಾರ), 61(2) (ಕ್ರಿಮಿನಲ್ ಕನ್‌ಸ್ಪಿರಸಿ), 115(2), 351(3) ಹಾಗೂ ಪೋಕ್ಸೊ ಕಾಯಿದೆಯ ಸೆಕ್ಷನ್‌ಗಳು 6 ಮತ್ತು 17ರ ಅಡಿ ದಾಖಲಿಸಲಾಯಿತು. ಸುಮಾರು 12 ಗಂಟೆಗಳ ನಂತರ ಮೂವರನ್ನೂ ಬಂಧಿಸಲಾಯಿತು.

ಬಿಹಾರದ ಜಮುಯಿ ಮತ್ತು ಸಮಸ್ತಿಪುರದ ವಿಡಿಯೋಗಳು

ಬಿಹಾರದ ಜಮುಯಿ ಜಿಲ್ಲೆಯಲ್ಲಿ ಸೆಪ್ಟೆಂಬರ್ 19ರ ಸಂಜೆ 10ನೇ ತರಗತಿಯ ಬಾಲಕಿ ಮತ್ತು ಬಾಲಕ ಸ್ನೇಹಿತನು ಸ್ಕೂಟರ್‌ನಲ್ಲಿ ಮಡ್ವಾ ಪಹಾಡ್‌ನಿಂದ ಹಿಂತಿರುಗುತ್ತಿದ್ದಾಗ ಒಂದು ಗುಂಪು ಅವರನ್ನು ನಿಲ್ಲಿಸಿ, ಬೆದರಿಸಿ, ಹೊಡೆದು, ಬಾಲಕಿಯನ್ನು ಅನುಚಿತವಾಗಿ ಸ್ಪರ್ಶಿಸಿ ಕಿರುಕುಳ ನೀಡಿತು. ಈ ದೃಶ್ಯಗಳನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಲಾಯಿತು. ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡರು. ಮೂವರನ್ನು ಬಂಧಿಸಿದ್ದು, ಇತರರನ್ನು ಹುಡುಕುತ್ತಿದ್ದಾರೆ. ಅಪ್ರಾಪ್ತರ ಗುರುತು ಬಹಿರಂಗಪಡಿಸಿದ್ದಕ್ಕಾಗಿ ಸುಮಾರು 120 ಸಾಮಾಜಿಕ ಖಾತೆಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಅದೇ ಸಮಯದಲ್ಲಿ ಸಮಸ್ತಿಪುರದಲ್ಲಿ ಸಹ ಇದೇ ರೀತಿಯ ಕಿರುಕುಳದ ವಿಡಿಯೋ ಹೊರಬಂದಿದ್ದು, ನಾಲ್ಕು ಜನರನ್ನು ಬಂಧಿಸಲಾಗಿದೆ. ಈ ಘಟನೆಗಳು ಬಿಹಾರದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ರಾಜಕೀಯ ಚರ್ಚೆಯನ್ನು ಹುಟ್ಟುಹಾಕಿವೆ.

ಮುಂಚೂಣಿಯಲ್ಲಿ ಬಿಹಾರ…

ಬಿಹಾರದಲ್ಲಿ ಮಹಿಳೆಯರ ಮತ್ತು ಹೆಣ್ಣು ಮಕ್ಕಳ ವಿರುದ್ಧದ ಲೈಂಗಿಕ ಅಪರಾಧಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ. 2026ರ ಮೊದಲ ಮೂರು ತಿಂಗಳಲ್ಲಿ ಹನ್ನೆರಡಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ಬಿಹಾರ ಪೊಲೀಸ್ DGP ವಿನಯ್ ಕುಮಾರ್ ಅವರ 2025ರ ವರದಿ ಪ್ರಕಾರ, ಅತ್ಯಾಚಾರ ಪ್ರಕರಣಗಳು 2,205ರಿಂದ 2,025ಕ್ಕೆ (8.2% ಕಡಿಮೆ) ಇಳಿದಿವೆ. ಇವುಗಳಲ್ಲಿ 1,150ಕ್ಕೂ ಹೆಚ್ಚು POCSO ಅಡಿ ದಾಖಲಾಗಿವೆ. ಆದರೆ ದೀರ್ಘಾವಧಿಯಲ್ಲಿ ಅತ್ಯಾಚಾರಗಳು ಹೆಚ್ಚುತ್ತಲೇ ಬಂದಿವೆ. DGP ಅವರೇ ಹೇಳಿದಂತೆ, ಲೈಂಗಿಕ ಅಪರಾಧಗಳಲ್ಲಿ ಕೇವಲ 2% ಮಾತ್ರ ವರದಿಯಾಗುತ್ತವೆ.

ಸುರಕ್ಷತೆಯ ಕೊರತೆ ಮತ್ತು ಅಗತ್ಯ ಕ್ರಮಗಳು

ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಮತ್ತು ಅಪ್ರಾಪ್ತ ಬಾಲಕಿಯರ ಮೇಲೆ ನಡೆಯುತ್ತಿರುವ ಇಂತಹ ಭೀಕರ ದೌರ್ಜನ್ಯಗಳು ಹಾಗೂ ಕಿರುಕುಳದ ಘಟನೆಗಳು ಸಮಾಜದ ಭದ್ರತಾ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿವೆ. ಸರ್ಕಾರ ಹಾಗೂ ಪೊಲೀಸ್ ಇಲಾಖೆಯು ಕೇವಲ ಕಾನೂನುಗಳನ್ನು ರೂಪಿಸುವುದಕ್ಕೆ ಸೀಮಿತವಾಗದೆ, ಉದ್ಯಾನವನಗಳು ಸೇರಿದಂತೆ ಎಲ್ಲಾ ಸಾರ್ವಜನಿಕ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಕೆ, ಸಾಕಷ್ಟು ಬೆಳಕಿನ ವ್ಯವಸ್ಥೆ ಹಾಗೂ ಕಟ್ಟುನಿಟ್ಟಿನ ಭದ್ರತಾ ಸಿಬ್ಬಂದಿಯ ಕಾವಲನ್ನು ಖಚಿತಪಡಿಸಬೇಕಿದೆ. ಮಹಿಳೆಯರು ಯಾವುದೇ ಭಯವಿಲ್ಲದೆ, ಸ್ವತಂತ್ರವಾಗಿ ಹಾಗೂ ಸುರಕ್ಷಿತವಾಗಿ ಸಂಚರಿಸುವ ವಾತಾವರಣವನ್ನು ನಿರ್ಮಿಸುವುದು ಸರ್ಕಾರ ಹಾಗೂ ಸಮಾಜದ ಜಂಟಿ ಜವಾಬ್ದಾರಿಯಾಗಿದೆ.

ನ್ಯಾಯಾಂಗ ವ್ಯವಸ್ಥೆಯಲ್ಲಿನ ವಿಳಂಬ ಮತ್ತು ಶಿಕ್ಷೆಯ ಪ್ರಮಾಣದಲ್ಲಿನ ಕುಸಿತವೇ ಅಪರಾಧಿಗಳಿಗೆ ಕಾನೂನಿನ ಭಯವಿಲ್ಲದಂತೆ ಮಾಡುತ್ತಿದೆ ಎಂಬುದನ್ನು ಅಂಕಿ-ಅಂಶಗಳು ಸ್ಪಷ್ಟಪಡಿಸುತ್ತವೆ. ದೆಹಲಿ ಮತ್ತು ಬಿಹಾರದ ಘಟನೆಗಳು ಸಾರ್ವಜನಿಕ ಸ್ಥಳಗಳಲ್ಲಿ ತಲೆದೋರಿರುವ ಭದ್ರತಾ ಲೋಪಗಳಿಗೆ ಹಿಡಿದ ಕನ್ನಡಿಯಾಗಿವೆ. ಸರ್ಕಾರಗಳು ಕೇವಲ ಘಟನೆಗಳು ನಡೆದಾಗ ಸಂತಾಪ ಸೂಚಿಸುವುದನ್ನು ಹೊರತುಪಡಿಸಿ, ಸಮಯಬದ್ಧ ತನಿಖೆ ಮತ್ತು ಭದ್ರತಾ ವ್ಯವಸ್ಥೆಯನ್ನು ಬಲಪಡಿಸುವ ಕಡೆಗೆ ಆದ್ಯತೆ ನೀಡಬೇಕಿದೆ. ಪ್ರತಿಯೊಬ್ಬ ಮಹಿಳೆಗೂ ಸುರಕ್ಷತೆ ಮತ್ತು ಅಭಯ ನೀಡುವುದು ಆಧುನಿಕ ಸಮಾಜದ ಪ್ರಾಥಮಿಕ ಕರ್ತವ್ಯವಾಗಿದೆ.





WhatsApp Image 2026 03 09 at 18.17.26
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಇಸಿ ಗ್ಯಾನೇಶ್‌ ಕುಮಾರ್‌ ಮನೆ ಮುಂದೆ ಕಾಂಗ್ರೆಸ್‌ ಪ್ರತಿಭಟನೆ; ‘ಗದ್ದಾರ್‌ ಗ್ಯಾನೇಶ್‌’ ಎಂದು ಗೋಡೆಗೆ ಬಣ್ಣ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್‌ ಕುಮಾರ್‌ ಅವರ ಆಗ್ರಾದ ವಿಜಯನಗರದಲ್ಲಿರುವ...

AAP ದೇಣಿಗೆಯಲ್ಲಿ ಶೇ.68 ಕುಸಿತ; ಇತರೆ ಪ್ರಾದೇಶಿಕ ಪಕ್ಷಗಳ ದೇಣಿಗೆಯಲ್ಲೂ ಭಾರೀ ಇಳಿಕೆ

ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ...

ಎಸ್‌ಐಆರ್‌ | 13 ಕೋಟಿ ಮತಗಳ ಮಾರಣಹೋಮ

ಭಾರತೀಯ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಅತ್ಯಂತ ಪ್ರಮುಖ ಅಡಿಪಾಯವೇ ಮತದಾನದ ಹಕ್ಕು. ದೇಶದ...

‘ಇವು ಕೇವಲ ಉಪಚುನಾವಣೆಗಳು’: ನಂದಿಗ್ರಾಮ, ರೆಜಿನಗರ ‘ಎಸ್‌ಐಆರ್’ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ನಕಾರ

ಪಶ್ಚಿಮ ಬಂಗಾಳದ ನಂದಿಗ್ರಾಮ ಮತ್ತು ರೆಜಿನಗರ ಕ್ಷೇತ್ರಗಳ ಉಪಚುನಾವಣೆಗೂ ಮುನ್ನ ‘ವಿಶೇಷ...