ವಿಶ್ವ ಪರಿಸರ ದಿನ ವಿಶೇಷ | ಕಾಕ್ರೋಚ್‌ಗಳು ಇಲ್ಲದೇ ಇದ್ದರೆ ಏನಾಗುತ್ತಿತ್ತು? ಇಕಾಲಜಿಯ ಒಂದು ಪ್ರಶ್ನೆ

Date:

ಕಾಕ್ರೋಚ್- ಈಗ ದೇಶದಾದ್ಯಂತ ಸದ್ದು ಮಾಡುತ್ತಿದೆ. ಆದರೆ, ಇದು ಆ ಕಾಕ್ರೋಚ್ ಅಲ್ಲ, ನಿಜ ಕಾಕ್ರೋಚ್. ಕಾಕ್ರೋಚ್‌ಗಳು ಇಲ್ಲದೇ ಇದ್ದರೆ ಏನಾಗುತ್ತಿತ್ತು ಎಂಬ ಇಕಾಲಜಿಯ ಪ್ರಶ್ನೆಗೆ ಉತ್ತರ ಹುಡುಕಿರುವ ಕೃಷಿ ವಿಜ್ಞಾನಿ ಡಾ. ಟಿ.ಎಸ್. ಚನ್ನೇಶ್ ಅವರ ವಿದ್ವತ್ಪೂರ್ಣ ಬರೆಹ... 

ಒಂದು ವೇಳೆ ಈ ಕಾಕ್ರೋಚ್‌ಗಳು ಇಲ್ಲದೇ ಇದ್ದರೆ ಏನಾಗುತ್ತಿತ್ತು? ಇದೇನು ಕೇವಲ ಜೀವಿವಿಜ್ಞಾನದ ಪ್ರಶ್ನೆಯಲ್ಲ! ಬಯಾಲಜಿಯ ಗಂಧಗಾಳಿಯಿಲ್ಲದವರೂ ತಿಳಿಯಬಹುದು. ಕಾನೂನು ಅಂದ್ರೆ ‘ಲಾ’ ಓದಿದವರಿಗೂ, ಡಾಕ್ಟರಾದವರಿಗೂ, ವ್ಯಾಪಾರ-ವ್ಯವಹಾರದ ಅಂತಂದ್ರೆ ಕಾಮರ್ಸ್‌ ವಿದ್ಯಾರ್ಥಿಗಳಿಗೂ, ಕನಿಷ್ಠ ಮನೆ-ಮಠ ಅಂತಾ ಇಷ್ಟ ಪಡೋರಿಗೂ ಇದರ ಉತ್ತರದೊಳಗೆ ಸಾಕಷ್ಟು ಕುತೂಹಲವಿದೆ. ಎಲ್ಲರೂ ಅಡುಗೆಯ ಮನೆಯಲ್ಲಿ ಒಂದೆರಡು ಜಿರಳೆಗಳ ಕಂಡು ಅವುಗಳಿಲ್ಲದಿದ್ದರೆ ಚೆನ್ನಾಗಿತ್ತು, ಎಂದು ಹೇಳಬಹುದು. ಆದರೆ ಒಂದೆರಡಲ್ಲ! ಈ ಭೂಮಿಯಲ್ಲಿ ಸರಿ ಸುಮಾರು 4,600 ಬಗೆಯ ಪ್ರಭೇದಗಳು ಇವೆ ಎಂಬುದು ಯಾರ ಊಹೆಗೂ ನಿಲುಕುವುದಿಲ್ಲ.

- Advertisement -

ಅಡುಗೆಯ ಮನೆಯಲ್ಲೋ, ಬಾತ್‌ರೂಂನಲ್ಲೋ, ಪಾಯಕಾನೆಯಲ್ಲೋ, ಚರಂಡಿಯಲ್ಲಿಯೋ… ಹೀಗೆ ನಮ್ಮ ಸುತ್ತಲಿನಲ್ಲಿ ಕಾಣಬರುವ ಪ್ರಮುಖವಾದ ಕಾಕ್ರೋಚ್‌ಗಳು 4-5 ಪ್ರಭೇದಗಳು ಮಾತ್ರ! ಇವುಗಳಲ್ಲಿ ಮೂರಷ್ಟೇ ಶತ್ರುಗಳು! ಅಬ್ಬಬ್ಬಾ ಅಂದರೆ ಒಟ್ಟಾರೆಯ ಮಾನವ ಸಾಂಗತ್ಯದ ಜಿರಳೆಗಳ ಪ್ರಪಂಚವಂತೂ ಕೇವಲ 30 ಪ್ರಭೇದಗಳನ್ನೂ ದಾಟುವುದಿಲ್ಲ. ಕಣ್ಣಿಗೆ ಬೀಳುವ ಮೂರೋ ನಾಲ್ಕನ್ನು ನೋಡಿ ಇವುಗಳೆಲ್ಲಾ ಇಲ್ಲದೇ ಇದ್ದರೆ, ಅನ್ನುವವರಿಗೆ 4,600 ಪ್ರಭೇದಗಳಿವೆ ಎನ್ನುವುದು ಅಚ್ಚರಿಯ ಮಾತಷ್ಟೇ ಅಲ್ಲಾ, ಭಯವೂ ಆದೀತು. ನಾವು So Called ಮಾನವ ಪ್ರಭೇದ Homo sapiens ಈ ಭೂಮಿಗೆ ಬಂದು ಕೇವಲ ಎರಡು-ಎರಡೂವರೆ ಲಕ್ಷ ವರ್ಷಗಳಷ್ಟೇ ಆಗಿವೆ. ಆದರೆ ಈ ಕಾಕ್ರೋಚುಗಳೋ ಸರಿ ಸುಮಾರು 300 ದಶಲಕ್ಷ ವರ್ಷಗಳಿಗೂ ಹಿಂದಿನಿಂದ ಈ ನೆಲದ ಮೇಲೆ ಹರಿದಾಡುತ್ತಿವೆ. ಭೂಮಿಯ ಜೀವಜಾಲದ ವ್ಯವಸ್ಥೆಯಲ್ಲಿ ಸಾಕಷ್ಟು ಆಳವಾಗಿಯೇ ನೆಲೆಯೂರಿವೆ. ಅವುಗಳಿರೋದೇ ಬೇಡ ಅಂತಾ ನಾವು ಯಾರಾದರೂ ಅನ್ನೋದು ಅವುಗಳಿಗೇನಾದರೂ ಗೊತ್ತಾದರೆ, ಸುಮ್ಮನೆ ನಕ್ಕು ಮೀಸೆ ತಿರುವಿಕೊಂಡು ಓಡಾಡುತ್ತವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಮೆರಿಕದ ಮಧ್ಯಂತರ ಚುನಾವಣೆ: ಬೆಲೆ ಏರಿಕೆ, ಇರಾನ್ ಯುದ್ಧದ...

ಅಮೆರಿಕದಲ್ಲಿ ಏರುತ್ತಿರುವ ಪೆಟ್ರೋಲ್ ಬೆಲೆ, ದುಬಾರಿಯಾಗುತ್ತಿರುವ ದಿನಬಳಕೆಯ ವಸ್ತುಗಳು ಹಾಗೂ ಇರಾನ್ ವಿರುದ್ಧದ ಯುದ್ಧದ ಆರ್ಥಿಕ ಪರಿಣಾಮಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ದೊಡ್ಡ ರಾಜಕೀಯ ಸವಾಲಾಗಿವೆ. ನವೆಂಬರ್ 3ರಂದು ನಡೆಯಲಿರುವ ಮಧ್ಯಂತರ...

ಖಾಲಿದ್‌ರಂತೆ ಸಿಜೆಪಿ ನಾಯಕರನ್ನೂ ದೀರ್ಘ ಜೈಲುವಾಸದ ಸುಳಿಯಲ್ಲಿ ಸಿಲುಕಿಸುವ...

ಚುನಾವಣಾ ಆಯೋಗದ ಅಕ್ರಮ ಪ್ರಶ್ನಿಸಿದ ಸಿಜೆಪಿ ನಾಯಕರ ವಿರುದ್ಧ ಸರಣಿ ದೂರು ದಾಖಲಿಸಲಾಗುತ್ತಿದೆ. ಮೋದಿ ಸರ್ಕಾರದ ಅವಧಿಯಲ್ಲಿ ‘ವಿಚಾರಣೆಯೇ ಒಂದು ಶಿಕ್ಷೆ’ ಎನ್ನುವ ತಂತ್ರ ಪುನರಾವರ್ತನೆಯಾಗುತ್ತಿದೆಯೇ? ಉಮರ್‌ ಖಾಲಿದ್‌ ರೀತಿಯಲ್ಲೇ ಸೌರವ್ ದಾಸ್,...

ಎಚ್ಚೆತ್ತುಕೊಳ್ಳುತ್ತಿವೆ DMK, YSRCP; ಡಿಲಿಮಿಟೇಷನ್‌ ಮಸೂದೆ ಮತ್ತೆ ಸೋಲುವ...

ಮೋದಿಯವರ ಅಹಂಕಾರದ ಆಡಳಿತಕ್ಕೆ ದಕ್ಷಿಣ ಭಾರತವು ಎಂದಿಗೂ ತಲೆಬಾಗುವುದಿಲ್ಲ, ಮತ್ತು ಈ ಬಾರಿಯ ಅವರ ಹತಾಶೆಯ ರಾಜಕೀಯ ಕುತಂತ್ರಗಳು ಅವರ ಪಾಲಿಗೆ ತಿರುಗುಬಾಣವಾಗಿ ದೇಶದ ಪ್ರಜಾಪ್ರಭುತ್ವವು ಗೆಲ್ಲುವುದು ಖಚಿತ ಮಹಿಳಾ ಮೀಸಲಾತಿ ಎಂಬ ಪವಿತ್ರ...

ಜಿರಳೆಗಳು ಅದೆಂತಹಾ ಬಲಿಷ್ಠವಾದ ಜೀವಿಗಳು ಎಂದರೆ ವಾರಗಳವರೆಗೆ ತಲೆಯನ್ನು ಕಳೆದುಕೊಂಡೂ ಬದುಕಬಲ್ಲವು. ಅಲ್ಲದೆ ಸುಮಾರು ಐದರಿಂದ ಏಳು ನಿಮಿಷಗಳ ಕಾಲ ಉಸಿರನ್ನು ಹಿಡಿದಿಟ್ಟುಕೊಳ್ಳಬಲ್ಲವು. ಜೊತೆಗ ಪರಮಾಣು ವಿಕಿರಣದಿಂದ ಬದುಕುಳಿಯುವ ಸಾಮರ್ಥ್ಯದಲ್ಲಿ ಮಾನವರಿಗಿಂತಲೂ ಬಲಿಷ್ಠವಾದ ಇವು ಕೀಟ ಜಗತ್ತಿನಲ್ಲಿ ವಿಶಿಷ್ಟವಾದವು. ತಮ್ಮ ಮನೆಗಳನ್ನು ಜಿರಳೆಗಳ ಬಾಧೆಯಿಂದ ಮುಕ್ತಗೊಳಿಸಲು ಆಶಿಸುವವರಿಗೆ ಭೀಕರ ಶತ್ರುಗಳಾಗಿಯೂ ಕಾರ್ಯನಿರ್ವಹಿಸಬಲ್ಲವು.

ವಿಕಾಸದಲ್ಲಿ ಸಾವಿರ ಪಟ್ಟು ಹಿರಿಯ ಜೀವಿಗಳಾದ ಜಿರಳೆಗಳಿಗೆ ಮಾನವ ಪ್ರಭೇದವು ಕೂಸಿಗೆ ಸಮ. ಇವುಗಳಿಲ್ಲದೇ ಹೋಗಿದ್ದರೆ, ದಟ್ಟ ಕಾಡುಗಳೂ ಈಗಿದ್ದಂತೆ ಇರುತ್ತಿರಲಿಲ್ಲ! ಭವ್ಯವಾದ ಜೀವಿ ಸಂಕುಲವು ಈಗಿದ್ದ ರೀತಿಯಲ್ಲಂತೂ ಇರುತ್ತಿರಲಿಲ್ಲ. ಯಾವುದೇ ಜೀವಿ ಸತ್ತು ಮಣ್ಣಾಗಲು ಈಗಿರುವಂತೆ ಸುಲಭವಾಗಿ ಕೊಳೆತು ಅನುಕೂಲವಾಗುತ್ತಲೇ ಇರಲಿಲ್ಲ. ಜಿರಳೆಗಳು ಬಹಳ ಮುಖ್ಯವಾದ ಡಿಕಂಪೋಸರ್ಸ್ (Decomposers)-ವಿಭಜಕಗಳು!

ಇದನ್ನು ಓದಿದ್ದೀರಾ?: ನಾಳೆ CJP ಬೃಹತ್ ಪ್ರತಿಭಟನೆ | ರಾಜೀನಾಮೆ ಕೊಡಲಿದ್ದಾರೆಯೇ ಶಿಕ್ಷಣ ಸಚಿವರು?‌

ಜಿರಳೆಗಳು ಯಾವುದೇ ಸತ್ತ ಸಸ್ಯ ಪದಾರ್ಥಗಳಾಗಿರಲಿ -ಉದಾಹರಣೆಗೆ ಕೊಳೆಯುತ್ತಿರುವ ಮರ ಇತ್ಯಾದಿಗಳನ್ನು ಹಾಗೆಯೇ ಯಾವುದೇ ಸಾವಯವ ತ್ಯಾಜ್ಯವನ್ನು ಒಡೆದು, ಕೊಳೆಯಲು ಸಹಾಯ ಮಾಡಿ, ಅವುಗಳಿಂದ ಬರುವ ಪೋಷಕಾಂಶಗಳನ್ನು ಮತ್ತೆ ಮಣ್ಣಿನಲ್ಲಿ ಮರುಬಳಕೆಗೆ ಅಣಿ ಮಾಡುತ್ತವೆ. ಅವುಗಳಿಲ್ಲದೆ, ಹೋದರೆ ಎಲೆಗಳ ಕಸ ಮತ್ತು ಭಗ್ನಾವಶೇಷಗಳು ಈ ನೆಲದ ಮೇಲೆ ಹೆಚ್ಚು ಹೆಚ್ಚು ಸಂಗ್ರಹವಾಗುತ್ತಿತ್ತು. ಅದರಲ್ಲೂ ವಿಶೇಷವಾಗಿ ಕಾಡುಗಳು ಮತ್ತು ಉಷ್ಣವಲಯಗಳಲ್ಲಿ ಪೋಷಕಾಂಶಗಳ ದೊರೆಯುವಿಕೆಯ ವರ್ತುಲವು ಈಗಿರುವಷ್ಟು ಪರಿಣಾಮಕಾರಿಯಾಗಿ ಇರುತ್ತಿರಲಿಲ್ಲ.

ಅಷ್ಟೇ ಏಕೆ ಕೆಲವು ಜೀವಿಗಳಿಗೆ ಮುಖ್ಯವಾಗಿ- ಕೆಲವೊಂದು ಬಗೆಯ ಪಕ್ಷಿಗಳು, ಹಲ್ಲಿಗಳು, ಕಪ್ಪೆಗಳು, ಜೇಡಗಳು ಹಾಗೂ ಕಣಜಗಳು ಉಪವಾಸ ಇರಬೇಕಾಗುತ್ತಿತ್ತು. ಏಕೆಂದರೆ ಇವೆಲ್ಲವುಗಳ ಪ್ರಮುಖ ಆಹಾರ ಜಿರಳೆಗಳೇ! ಬೆಕ್ಕುಗಳೂ ಕೂಡ ಜಿರಳೆಗಳನ್ನು ಹಿಡಿದು ತಿನ್ನುತ್ತವೆ. ಜಿರಳೆಗಳಿಲ್ಲದಿದ್ದರೆ ಈ ಎಲ್ಲಾ ಬಗೆಯ ಜೀವಿ ಪ್ರಭೇದಗಳು ಇತರೆ ಯಾವುದೋ ಜೀವಿಗಳನ್ನು ಅವಲಂಭಿಸಬೇಕಾಗುತ್ತಿತ್ತು. ಆಗ ಆಹಾರದ ಸರಪಳಿಯು ಖಂಡಿತಾ ವ್ಯತ್ಯಾಸಗೊಂಡು ಹದಗೆಡುತ್ತಿತ್ತು.

ಜಿರಳೆಗಳನ್ನೇ ನಂಬಿ ವಿಕಾಸಗೊಂಡ ಕೆಲವೊಂದು ವಿಶೇಷವಾದ ಕಣಜಗಳಿವೆ. ನಮ್ಮ ಸುತ್ತಲಿನ ಗೆದ್ದಲುಗಳೂ ಸಹಾ ಜಿರಳೆಗಳಿಂದಲೇ ವಿಕಾಸವಾಗಿವೆ. ಹಾಗಾಗಿ ಸಾಮಾಜಿಕ ಜೀವನದ ವಿಕಾಸಕ್ಕೆ ಜಿರಳೆಗಳೇ ಅಡಿಪಾಯ ಹಾಕಿಕೊಟ್ಟಿವೆ. ಅವುಗಳು ವಿಕಾಸವಾಗಿರುವುದೇ ಜಿರಳೆಗಳನ್ನು ಆಹಾರವಾಗಿ ಬಳಸಲು. ಉಷ್ಣವಲಯದ ದಟ್ಟ ಕಾಡುಗಳ ಸಸ್ಯ ತ್ಯಾಜ್ಯಗಳು ಕೊಳೆಯಲು ಆರಂಭವಾಗುವುದೇ ಅಲ್ಲಿರುವ ಜಿರಳೆಗಳಿಂದ! ಹೀಗೆ ನಮಗೆ ಕಾಣದ ಜೈವಿಕ ವ್ಯವಸ್ಥೆಯನ್ನು ನಡೆಸುತ್ತಿರುವ ಜೀವಿಗಳಲ್ಲಿ ಜಿರಳೆಗಳಿಗೆ ಬಹಳ ಪ್ರಮುಖವಾದ ಸ್ಥಾನವಿದೆ. ಹಾಗಾಗಿ ಜಿರಳೆಗಳು ನೈಸರ್ಗಿಕ ದ್ವಾರಪಾಲಕರು- Nature’s Janitors!

ಇಡೀ ಭೂಮಿಯ ಹಿಮ ಖಂಡಗಳನ್ನು ಹೊರತುಪಡಿಸಿ ಎಲ್ಲಾ ಖಂಡಗಳನ್ನೂ ಆವರಿಸಿರುವ ಕಾಕ್ರೋಚುಗಳ ಸುಮಾರು 4,600 ಪ್ರಭೇದಗಳನ್ನು ಸುಮಾರು ಸುಮಾರು 9 ಕುಟುಂಬಗಳಲ್ಲಿ, 460 ಸಂಕುಲಗಳಾಗಿ ವಿಭಾಗಿಸಲಾಗಿದೆ. ಒಟ್ಟಾರೆಯ ಇಡೀ ಜಿರಳೆಗಳ ಸಮುದಾಯವನ್ನು ಕಾಕ್‌ರೋಚ್‌(Cockroach) ಎಂದು ಹೆಸರಿಸಲು ಸ್ಪ್ಯಾನಿಶ್‌ ಪದ Cucarachaದಿಂದ ಪಡೆಯಲಾಗಿದೆ. ಇದು 1,620ರ ಸುಮಾರಿಗೆ ಇಂಗ್ಲಿಷ್ ಜನಪದಕ್ಕೆ ಕಾಕ್‌-Cock ಮತ್ತು Roach-ರೋಚ್‌ ಪದಗಳ ಒಂದಾಗುವಲ್ಲಿ ವಿಕಾಸವಾಗಿದೆ. ಜಿರಳೆಗಳ ಸಮುದಾಯವನ್ನು ವೈಜ್ಞಾನಿಕವಾಗಿ ಬ್ಲಟೊಡಾ- Blattoda- ಎಂದು ಕರೆಯಲಾಗುತ್ತದೆ. ಈ ಪದವು ಲ್ಯಾಟಿನ್‌ ಮೂಲದ ಬೆಳಕಿಗೆ ಹೆದರುವ ಅಥವಾ ಬೆಳಕಿನಿಂದ ದೂರವಿರುವ ಕೀಟ ಎಂಬರ್ಥದ Blatta ಎಂಬುದರಿಂದ ಪಡೆಯಲಾಗಿದೆ.

ಮಾನವ ಪರಿಸರದಲ್ಲಿ ಕೇವಲ 4-5 ಬಗೆಯ ಜಿರಳೆಗಳ ಪ್ರಭೇದಗಳಷ್ಟೇ ಇವೆ. ಬಹುಪಾಲು ಕಾಕ್‌ರೋಚ್‌ಗಳು ಕಾಡುಗಳಲ್ಲಿ, ಗುಹೆಗಳಲ್ಲಿ, ಮರುಭೂಮಿಗಳಲ್ಲಿ ಹರಡಿಕೊಂಡಿವೆ. ನಮ್ಮ ಸುತ್ತಲಲ್ಲಿರುವ ಪ್ರಭೇದಗಳು ಎಂದರೆ…
1. ಜರ್ಮನ್‌ ಜಿರಳೆ -German cockroach (Blattella germanica)
2. ಅಮೆರಿಕನ್‌ ಜಿರಳೆ -American cockroach (Periplaneta americana)
3. ಓರಿಯೆಂಟಲ್‌ ಜಿರಳೆ -Oriental cockroach (Blatta orientalis)
4. ಆಸ್ಟ್ರೇಲಿಯನ್‌ ಜಿರಳೆ -Australian cockroach (Periplaneta australasiae)
5. ಕಂದು ಪಟ್ಟೆಯ ಜಿರಳೆ -Brown-banded cockroach (Supella longipalpa)

WhatsApp Image 2026 06 05 at 08.58.17 1

ಇವುಗಳಲ್ಲಿ ಜರ್ಮನ್‌, ಓರಿಯೆಂಟಲ್‌ ಮತ್ತು ಅಮೆರಿಕನ್‌ ಜಿರಳೆಗಳು ಮಾತ್ರವೇ ಹೆಚ್ಚು ಉಪದ್ರವಿ ಕೀಟಗಳು. ಜರ್ಮನ್‌ ಜಿರಳೆಗಳಂತೂ ಹೆಚ್ಚು ಹೆಚ್ಚು ಮೊಟ್ಟೆಗಳನ್ನಿಟ್ಟು ಮರಿ ಮಾಡುವುದರಲ್ಲಿ ನಿಸ್ಸೀಮವಾದದ್ದು. ಅದು ತನ್ನ ಜೀವಮಾನದಲ್ಲಿ 300ರಿಂದ 400 ಮರಿಗಳಿಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಜಿರಳೆಗಳು ಆರು ತಿಂಗಳಿಂದ ಒಂದು ವರ್ಷದವರೆಗೂ ಜೀವಿಸುತ್ತವೆ. ಅಮೆರಿಕನ್‌ ಜಿರಳೆಯು 2 ವರ್ಷಗಳವರೆಗೂ ಬದುಕಬಲ್ಲದು.

WhatsApp Image 2026 06 05 at 08.58.17
ಏಳು ಚಿಕ್ಕೆಗಳುಳ್ಳ ಜಿರಳೆ- Seven-spotted cockroach

ಭಾರತಕ್ಕೇ ಸೀಮಿತವಾದ ಒಂದು ಪ್ರಭೇದವಿದೆ. ಅದು ಹೆಚ್ಚಾಗಿ ದಕ್ಷಿಣ ಭಾರತದಲ್ಲಿ ಕಂಡುಬರುತ್ತದೆ. ಅಲ್ಲದೆ ಇದನ್ನು ಮರುಭೂಮಿಯ/ಒಣ ನೆಲದ ಜಿರಳೆಯೆಂದೂ, ಏಳು ಚಿಕ್ಕೆಗಳುಳ್ಳ ಜಿರಳೆಯೆಂದು ಕರೆಯುತ್ತಾರೆ. ತೆರಿಯಾ ಪೆಟಿವೇರಿಯಾ (Therea petiveriana) ಎಂಬ ವೈಜ್ಞಾನಿಕ ನಾಮಧೇಯದ ಈ ಜಿರಳೆಯು Seven-spotted cockroach ಅಥವಾ Indian domino cockroach ಎಂದೂ ಕೀಟಜಗತ್ತಿನಲ್ಲಿ ಜನಪ್ರಿಯವಾಗಿದೆ. ಜೊತೆಗೆ ಇದು ಸಾಕು ಪ್ರಾಣಿಗಳಂತೆಯೂ ನಮ್ಮ ಜೊತೆಯಲ್ಲಿ ಇಟ್ಟುಕೊಳ್ಳಬಹುದು. ಇದಲ್ಲದೆ ಬುಸುಗುಟ್ಟುವ ಜಿರಳೆ (Hissing Cockroach) ಎಂಬ ಒಂದು ಪ್ರಭೇದವಂತೂ ಜಗತ್ತಿನ ಅನೇಕ ಭಾಗಗಳಲ್ಲಿ ಸಾಕುವ ಜಿರಳೆ ಎಂದೇ ಹೆಸರುವಾಸಿ.

WhatsApp Image 2026 06 05 at 08.58.17 2
ಬುಸುಗುಟ್ಟುವ ಜಿರಳೆ- Hissing Cockroach

ವೈವಿಧ್ಯತೆಯ ದೃಷ್ಟಿಯಲ್ಲಿ ಮಳೆ -ಕಾಡುಗಳ ಜಿರಳೆಗಳಿಗೆ ಅಗ್ರ ಸ್ಥಾನ. ಅಮೆಜಾನ್‌ ಕಾಡುಗಳು, ಆಫ್ರಿಕಾದ ಕಾಡುಗಳು, ಪಶ್ಚಿಮ ಘಟ್ಟಗಳನ್ನೂ ಸೇರಿಸಿ ಈಶಾನ್ಯ ಏಶಿಯಾದ ಕಾಡುಗಳು ಜಿರಳೆಗಳ ಆವಾಸದ ಹಾಟ್‌ ಸ್ಪಾಟ್‌ಗಳು! ವಿವಿಧತೆಯಲ್ಲಿ ಗಾತ್ರವೂ ಪ್ರಮುಖವಾಗಿದ್ದು, ಒಂದೆರಡು ಮಿ.ಮೀ.ನಿಂದ ಆರಂಭವಾಗಿ ಸುಮಾರು 9 ಸೆಂ.ಮೀ. ಉದ್ದವಾದ ಜಿರಳೆಗಳಿವೆ. ಕೆಲವು ರೆಕ್ಕಗಳಿಲ್ಲದವು, ಹಾರಲಾರವು! ಕೆಲವೋ ಬೆಳಕಿಗೆ ಮಿಂಚುವ ಬಣ್ಣದವು. ಕೆಲವಂತೂ ಜೀವಮಾನವನ್ನು ಭೂಗತವಾಗಿಯೇ ಕಳೆಯುವಂತಹವು. ಇವೆಲ್ಲವೂ ಸೇರಿ ಹತ್ತಾರು ದಶಲಕ್ಷ ಟನ್ನುಗಳಷ್ಟು ಒಟ್ಟು ತೂಕದ ಜೀವಿಗಳಾಗಿ ಭೂಮಿಯಲ್ಲಿ ಹರಡಿವೆ.

ಗುಂಪು ನಿರ್ಧಾರ ಮತ್ತು ಸಮುದಾಯ ಜೀವಿ
ಜಿರಳೆಗಳು ಸಮುದಾಯ ಜೀವಿಗಳು. ಹೆಚ್ಚಾಗಿ ಸಾಮೂಹಿಕವಾಗಿಯೇ ಜೀವಿಸುತ್ತವೆ. ಸಹಜವಾಗಿ ಒಂದು ಜಿರಳೆಯನ್ನು ಕಂಡರೆ ಖಂಡಿತವಾಗಿ ಸುತ್ತಲೂ ಮತ್ತಷ್ಟು ಇರುವ ಸಾಧ್ಯತೆಯೂ ಹೆಚ್ಚು. ಕಾರಣ ಸಾಮೂಹಿಕ ನಿರ್ಧಾರವನ್ನು ಮಾಡುವಲ್ಲಿ ಜಿರಳೆಗಳು ಅತ್ಯಂತ ಶಿಸ್ತುಬದ್ಧವಾದವು. ಒಂದು ಜಾಗದ ಆಹಾರದ ಮೇಲೆ ಹಕ್ಕು ಸಾಧಿಸಲು, ತಮ್ಮ ಗುಂಪನ್ನು ನಿರ್ಧರಿಸಿಕೊಂಡ ಮೇಲೆ ಇತರೆ ಜಿರಳೆಗಳನ್ನು ಹತ್ತಿರಕ್ಕೆ ಸುಳಿಯದಂತೆ ನಿರ್ದೇಶಿಸಬಲ್ಲವು. ಜಿರಳೆ ಗುಂಪಿನ ನಿರ್ಧಾರ ತೆಗೆದುಕೊಳ್ಳುವ ನಡವಳಿಕೆಯಲ್ಲಿ ಸಹಕಾರ ಮತ್ತು ಸ್ಪರ್ಧೆಯು ಸಮತೋಲನದಲ್ಲಿರುತ್ತದೆ.

ಇದನ್ನು ಓದಿದ್ದೀರಾ?: ಭವಿಷ್ಯದ ʼಸೂಪರ್‌ ಆಂಟಿಜೆನ್‌ʼ; ಇದು AI ರೂಪಿಸಿದ ವಿಶ್ವದ ಮೊದಲ ಲಸಿಕೆ!

ಜಿರಳೆಗಳು ಎಲ್ಲಿಗೆ ಹೋಗಬೇಕೆಂದು ನಿರ್ಧರಿಸಲು ಕೇವಲ ಎರಡು ಮಾಹಿತಿಯ ತುಣುಕುಗಳನ್ನು ಬಳಸುತ್ತವೆ. ಅವುಗಳೆಂದರೆ, ಒಂದು ಎಷ್ಟು ಕತ್ತಲೆಯಾಗಿದೆ ಎಂದು, ಮತ್ತೊಂದು ಎಷ್ಟು ಇತರ ಜಿರಳೆಗಳಿವೆ ಎಂಬುದಾಗಿದೆ. ಜೊತೆಗೆ ಒಮ್ಮೆ ಒಂದು ಸ್ಥಳದಲ್ಲಿ ತಮ್ಮ ಗುಂಪನ್ನು ರೂಪಿಸಲು ಸಾಕಷ್ಟು ನಿರ್ಣಾಯಕವಾದ ಕೀಟಗಳಿದ್ದರೆ, ಸಾಕು ಕತ್ತಲಿರಲಿ, ಬೆಳಕಿರಲಿ ಹೇಗೆ ನಡೆದುಕೊಳ್ಳಬೇಕೆಂಬುದನ್ನು, ಎಲ್ಲಿ ಅಡಗಿಕೊಳ್ಳಬೇಕು ಎಂಬುದನ್ನು ಅಥವಾ ಎಲ್ಲೆಲ್ಲಿ ಹೋಗಬೇಕು ಎಂಬ ಸಾಮೂಹಿಕ ನಿರ್ಧಾರವನ್ನು ಒಪ್ಪಿಕೊಳ್ಳುತ್ತವೆ.

ಜಿರಳೆಗಳ ಭಯ
ಜಿರಳೆಗಳ ಭಯ ಕೇವಲ ವೈಯಕ್ತಿಕವಾದ ಮತ್ತು ಕ್ಷಣಿಕವಾದದ್ದು ಮಾತ್ರ ಅಲ್ಲ. ಏಕೆಂದರೆ ಕೆಲವರಂತೂ ಜೀವಮಾನವಿಡೀ ಜಿರಳೆಗಳಿಗೆ ಹೆದರುತ್ತಲೇ ಬದುಕುತ್ತಾರೆ. ಕೆಲವರಂತೂ ಕಿಟಾರನೇ ಚೀರುವುದೂ ಇದೆ. ಜಿರಳೆಯ ಭಯ ಸಾಮೂದಾಯಿಕವೂ ಹೌದು. ಕೆಲವೊಮ್ಮೆ ಸಮಾಜವು ಜಿರಳೆಗಳನ್ನು ಹಿಯಾಳಿಸುವ, ದ್ವೇಷಿಸುವ ವಿಪರೀತಕ್ಕೂ ಹೋಗುವುದಿದೆ. ಈ ಭಯಕ್ಕೆ ಪ್ರಮುಖ ಕಾರಣ ಕತ್ತಲನ್ನು ಪ್ರೀತಿಸುವ ಜಿರಳೆಗಳು ಇದ್ದಕ್ಕಿದ್ದಂತೆ ಪ್ರತ್ಯೇಕ್ಷವಾಗಿ ತಮ್ಮ ಇರುವನ್ನು ಭಯಂಕರವಾಗಿಯೇ ತೋರಿಸುವುದಾಗಿದೆ. ಆಗಂತೂ ಅವುಗಳ ನೋಟವು ಹೆದರಿಸಲು ತಯಾರಾದಂತೆಯೇ ಇರುವುದುಂಟು. ಜೊತೆಗೆ ಈ ಜಿರಳೆ ಭಯದ ಬಗ್ಗೆ ಮನೋವೈಜ್ಞಾನಿಕ ಅಧ್ಯಯನಗಳು ಜನಪ್ರಿಯವೇ! ಪಾಶ್ಚಿಮಾತ್ಯ ದೇಶಗಳಲ್ಲಿ ಈ ಭಯಕ್ಕೆ ಚಿಕಿತ್ಸೆಗಳೂ ಉಂಟು.

ಜಿರಳೆಗಳ ಉಪಯೋಗಗಳು
ಜಿರಳೆಗಳ ಉಪಯೋಗಗಳಲ್ಲಿ ಆಹಾರ ಮತ್ತು ಔಷಧಗಳ ಬಳಕೆಗಳು ಗಮನಾರ್ಹವಾದವು. ಮೆಕ್ಸಿಕೊ, ಥಾಯ್‌ಲ್ಯಾಂಡ್‌ಗಳಲ್ಲಿ ಜಿರಳೆಗಳ ತಲೆ ಮತ್ತು ಕಾಲುಗಳನ್ನು ತೆಗೆದು ಆಹಾರವಾಗಿ ಬಳಸುತ್ತಾರೆ. ಚೀನಿಯರು ಜಿರಳೆಗಳಿಂದ ಔಷಧ ತಯಾರಿಸುತ್ತಾರೆ. ಇದಕ್ಕೆಂದೇ ಜಿರಳೆಗಳನ್ನು ಸಾಕುವ ಕೇಂದ್ರಗಳೂ ಇವೆ. ಏನಿಲ್ಲವೆಂದರೂ ನೂರಾರು ಜಿರಳೆ ಸಾಕಾಣಿಕಾ ಕೇಂದ್ರಗಳು ಚೀನಾದಲ್ಲಿ ಇವೆ.

ಬಾಹ್ಯಾಕಾಶದಲ್ಲಿ ಜಿರಳೆಯ ಗರ್ಭಾವಸ್ಥೆ
ಜಿರಳೆಯು ವ್ಯೋಮಯಾನದಲ್ಲೂ ಭಾಗವಹಿಸಿ ಮಾನವರಿಗೆ ತನ್ನ ವಿಶೇಷತೆಯನ್ನು ಪ್ರದರ್ಶಿಸಿದೆ. ರಷಿಯಾ ದೇಶವು ಬಾಹ್ಯಾಕಾಶ ಪ್ರಯೋಗದಲ್ಲಿ ಜಿರಳೆಗಳನ್ನು ಬಳಸಿದೆ.  ನಂಬಿಕೆ- Hope ಎಂಬ ಅರ್ಥದ ರಷಿಯಾ ಪದ- Nadezhda- ಹೆಸರಿನ ಜಿರಳೆಯೊಂದನ್ನು 14-26ರ ಸೆಪ್ಟೆಂಬರ್‌ 2007ರಲ್ಲಿ ಆಗಸಕ್ಕೆ ಕಳಿಸಿತ್ತು. ನೆಲಕ್ಕೆ ಮರಳಿದ ನಂತರ- Nadezhda-  ಜಿರಳೆಯು 33 ಮರಿಗಳಿಗೆ ಕಾರಣವಾಗಿತ್ತು. ಈ ಜಿರಳೆಯು ಗುರುತ್ವದಾಚೆಗೆ ಗರ್ಭಧರಿಸಿದ ಮೊದಲ ಜೀವಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ರಷಿಯಾದ Foton-M ಎಂಬ ಬಾಹ್ಯಾಕಾಶಯಾನಗಳ ಪ್ರಯೋಗದಲ್ಲಿ ಜಿರಳೆಯೂ ಭಾಗವಹಿಸಿತ್ತು.

ಇಕಾಲಜಿಯ ಜೀವಿ ಪರಿಸ್ಥಿತಿಯ ನಿರ್ವಹಣೆಯಲ್ಲಿ ಜಿರಳೆಗಳ ಪಾತ್ರ ತುಂಬಾ ಮಹತ್ವದ್ದು. ಇಲ್ಲದಿದ್ದರೆ ಬಾಹ್ಯಾಕಾಶಕ್ಕೆ ಗರ್ಭಿಣಿ ಜಿರಳೆಯನ್ನು ಕಳಿಸುತ್ತಿದ್ದರೇ? ಅಷ್ಟೇ ಅಲ್ಲ, ಒಂದೊಂದೇ ಜಿರಳೆಗಳು ಸುಲಭವಾಗಿ ನಾಶವಾಗುವ ಹಾಗೆ ಕಾಣುತ್ತವೆ. ಒಂದು ಜಿರಳೆಯು ಸಾಮಾನ್ಯವಾಗಿ ದಿಕ್ಕು ತಪ್ಪಿದವರಂತೆ, ಬೆಳಕಿಗೆ ಗಲಿಬಿಲಿಗೊಂಡಂತೆ ತಪ್ಪಿಸಿಕೊಳ್ಳಲು ಹೋಗುವ ವೇಗವನ್ನು ಬಹಶಃ ಎಲ್ಲರೂ ಗಮನಿಸಿರುತ್ತೀರಿ. ಆದರೆ, ಅವುಗಳ ಸಾಮೂಹಿಕ ಕಾರ್ಯಾಚರಣೆಗೆ ತಡೆಯೊಡ್ಡುವುದು ಅಷ್ಟು ಸುಲಭದ ಮಾತಲ್ಲ. ಜಿರಳೆಗಳಿಲ್ಲದ ಮನೆಯನ್ನು ಹುಡುಕುವುದಾದರೂ ಹೇಗೆ ಹೇಳಿ! ಅದೂ ಇಂಡಿಯಾದಲ್ಲಿ! ಸಮೂಹ ಶಕ್ತಿಯ ಸಾಧ್ಯತೆಗಳಿಗೆ ವಿಕಾಸವನ್ನು ಕೊಟ್ಟದ್ದೇ ಜಿರಳೆ ಪ್ರಪಂಚ.

(ಇಕಾಲಜಿಗೆ ಸಂಬಂಧಿಸಿದ ಇನ್ನಷ್ಟು ಲೇಖನಗಳಿಗಾಗಿ ಭೇಟಿ ನೀಡಿ: https://cfpus.org/leadership/)

TS Channesh
ಡಾ. ಟಿ.ಎಸ್. ಚನ್ನೇಶ್
+ posts

ಲೇಖಕರು ಕೃಷಿ ವಿಜ್ಞಾನಿ. ಮಣ್ಣು ವಿಜ್ಞಾನದಲ್ಲಿ ಸ್ನಾತಕೋತ್ತರ ಮತ್ತು ಪಿಎಚ್.ಡಿ ಪದವಿ ಪಡೆದವರು. ಆಸಕ್ತಿಯನ್ನು ಅಷ್ಟಕ್ಕೆ ಸೀಮಿತಗೊಳಿಸದೆ ವಿಜ್ಞಾನ ಮತ್ತು ಸಮಾಜದ ಸಮೀಕರಣದ ಚರ್ಚೆಗಳನ್ನು ರೂಪಿಸುವಲ್ಲಿ ತಮ್ಮನ್ನು ವಿಸ್ತರಿಸಿಕೊಂಡವರು. ಸಾರ್ವಜನಿಕರಿಗೆ ವಿಜ್ಞಾನದ ಸಾಮಾನ್ಯ ತಿಳಿವಳಿಕೆಯನ್ನು ನೀಡಲು "ಸೆಂಟರ್ ಫಾರ್ ಪಬ್ಲಿಕ್ ಅಂಡರ್ಸ್ಟಾಂಡಿಂಗ್ ಆಫ್ ಸೈನ್ಸ್" - CPUS ಎಂಬ ವಿನೂತನವಾದ ಸಂಸ್ಥೆಯನ್ನು ಆರಂಭಿಸಿ ಅಲ್ಲಿ ಸಂಶೋಧನೆ, ಪುಸ್ತಕ ಪ್ರಕಟಣೆ, ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ವಿಜ್ಞಾನದ ಸರಿಯಾದ ತಿಳಿವಳಿಕೆ ನೀಡಲು ಕಾರ್ಯಾಗಾರಗಳು, ಸಸ್ಯಗಳು ಮತ್ತು ನೊಬೆಲ್ ಪುರಸ್ಕಾರ ಪಡೆದ ವಿಜ್ಞಾನಿಗಳ ಬಗ್ಗೆ ಮಾಹಿತಿಯುಳ್ಳ ವೀಡಿಯೋಗಳನ್ನು ಮಾಡುತ್ತಿರುವುದು ಅವರ ವಿಶಿಷ್ಟ ಆಸಕ್ತಿಗಳನ್ನು ಪ್ರತಿಫಲಿಸುವಂತಿವೆ. 'ಸಸ್ಯಯಾನ', 'ಅನುರಣನ', 'ಪ್ರತಿಫಲನ', 'ನೊಬೆಲ್ 2017', 'ಮಣ್ಣು ಮತ್ತು ಮಾನವ', 'ಕೃಷಿ ಮತ್ತು ಪೇಟೆಂಟ್', 'ಬೆಳಕಿನ ಬೆನ್ನು ಹತ್ತಿ', 'ಉಳುವವರ ಪರ ವಕಾಲತ್ತು', 'ಅನ್ನದ ಬಟ್ಟಲು' ಮುಂತಾದ ಮೂಲ ಕೃತಿಗಳು ಅಲ್ಲದೆ 'ಆಲ್ಬರ್ಟ್ ಐನ್ಸ್ಟೈನ್' ಮತ್ತು 'ಅಲೆಕ್ಸಾಂಡರ್ ಗ್ರಹಾಂ ಬೆಲ್' ಕೃತಿಗಳನ್ನು ರಚಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಡಾ. ಟಿ.ಎಸ್. ಚನ್ನೇಶ್
ಡಾ. ಟಿ.ಎಸ್. ಚನ್ನೇಶ್
ಲೇಖಕರು ಕೃಷಿ ವಿಜ್ಞಾನಿ. ಮಣ್ಣು ವಿಜ್ಞಾನದಲ್ಲಿ ಸ್ನಾತಕೋತ್ತರ ಮತ್ತು ಪಿಎಚ್.ಡಿ ಪದವಿ ಪಡೆದವರು. ಆಸಕ್ತಿಯನ್ನು ಅಷ್ಟಕ್ಕೆ ಸೀಮಿತಗೊಳಿಸದೆ ವಿಜ್ಞಾನ ಮತ್ತು ಸಮಾಜದ ಸಮೀಕರಣದ ಚರ್ಚೆಗಳನ್ನು ರೂಪಿಸುವಲ್ಲಿ ತಮ್ಮನ್ನು ವಿಸ್ತರಿಸಿಕೊಂಡವರು. ಸಾರ್ವಜನಿಕರಿಗೆ ವಿಜ್ಞಾನದ ಸಾಮಾನ್ಯ ತಿಳಿವಳಿಕೆಯನ್ನು ನೀಡಲು "ಸೆಂಟರ್ ಫಾರ್ ಪಬ್ಲಿಕ್ ಅಂಡರ್ಸ್ಟಾಂಡಿಂಗ್ ಆಫ್ ಸೈನ್ಸ್" - CPUS ಎಂಬ ವಿನೂತನವಾದ ಸಂಸ್ಥೆಯನ್ನು ಆರಂಭಿಸಿ ಅಲ್ಲಿ ಸಂಶೋಧನೆ, ಪುಸ್ತಕ ಪ್ರಕಟಣೆ, ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ವಿಜ್ಞಾನದ ಸರಿಯಾದ ತಿಳಿವಳಿಕೆ ನೀಡಲು ಕಾರ್ಯಾಗಾರಗಳು, ಸಸ್ಯಗಳು ಮತ್ತು ನೊಬೆಲ್ ಪುರಸ್ಕಾರ ಪಡೆದ ವಿಜ್ಞಾನಿಗಳ ಬಗ್ಗೆ ಮಾಹಿತಿಯುಳ್ಳ ವೀಡಿಯೋಗಳನ್ನು ಮಾಡುತ್ತಿರುವುದು ಅವರ ವಿಶಿಷ್ಟ ಆಸಕ್ತಿಗಳನ್ನು ಪ್ರತಿಫಲಿಸುವಂತಿವೆ. 'ಸಸ್ಯಯಾನ', 'ಅನುರಣನ', 'ಪ್ರತಿಫಲನ', 'ನೊಬೆಲ್ 2017', 'ಮಣ್ಣು ಮತ್ತು ಮಾನವ', 'ಕೃಷಿ ಮತ್ತು ಪೇಟೆಂಟ್', 'ಬೆಳಕಿನ ಬೆನ್ನು ಹತ್ತಿ', 'ಉಳುವವರ ಪರ ವಕಾಲತ್ತು', 'ಅನ್ನದ ಬಟ್ಟಲು' ಮುಂತಾದ ಮೂಲ ಕೃತಿಗಳು ಅಲ್ಲದೆ 'ಆಲ್ಬರ್ಟ್ ಐನ್ಸ್ಟೈನ್' ಮತ್ತು 'ಅಲೆಕ್ಸಾಂಡರ್ ಗ್ರಹಾಂ ಬೆಲ್' ಕೃತಿಗಳನ್ನು ರಚಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲೋಕಸಭೆಯ ಬಲ 850ಕ್ಕೆ ಏರಿಕೆ: ಕಲಾಪದ ಸಮಯ ಹೆಚ್ಚಳವಿಲ್ಲದಿದ್ದರೆ ಸಂಸದರ ಧ್ವನಿ ಕ್ಷೀಣ!

ಲೋಕಸಭೆಯ ಸದಸ್ಯರ ಬಲವನ್ನು 550ರಿಂದ 850ಕ್ಕೆ ಹೆಚ್ಚಿಸುವ ‘ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ–2026’...

ಸೌದಿ ಅರೇಬಿಯಾದ ಕಂಠನಾಳಕ್ಕೇ ಕೈಹಾಕಿರುವ ಯೆಮನ್!

ಸೌದಿ ಅರೇಬಿಯಾದ ಜೀವನಾಡಿಗೇ ಕೈಹಾಕಿರುವ ಯೆಮನ್‌ನ ಈ ಪ್ರತಿರೋಧವು ಕೇವಲ ಒಂದು...

ಏನಿದು ʼಮಶೀನ್‌ ರೀಡಬಲ್‌ʼ ಮತದಾರರ ಪಟ್ಟಿ? ಅದನ್ನು ಹಂಚಿಕೊಳ್ಳದೆ ಯಾಕೆ ಪ್ರತಿಪಕ್ಷಗಳ ವಂಚಿಸಿತ್ತು ಮೋಶಾ ಸರ್ಕಾರ?

17 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ಚುನಾವಣಾ...

ಮೋದಿ ಸರ್ಕಾರದ ದುರಾಡಳಿತದ ಬಗ್ಗೆ ಹೇಳಿದ್ದಕ್ಕೆ ಚಾರಿತ್ರ್ಯ ಹರಣ; ನಿರ್ಭೀತ ಗಾಯಕಿ ನೇಹಾ ಸಿಂಗ್ ಹೋರಾಟದ ಹಾದಿ

​ಪ್ರಭುತ್ವದ ಲೋಪಗಳನ್ನು ಜನಪದದ ಸರಳ ಧಾಟಿಯಲ್ಲಿ ಪ್ರಶ್ನಿಸುವ ಹೆಣ್ಣುಮಗಳೊಬ್ಬಳ ದನಿಯನ್ನು ಅಡಗಿಸಲು...