ಲಂಡನ್‌ನಲ್ಲಿ ನಡೆದ 2024ರ ವಿಂಬಲ್ಡನ್ ಟೂರ್ನಿಯ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಜಾಸ್ಮಿನ್ ಪಾವೊಲಿನಿ ಅವರನ್ನು 6-2, 2-6, 6-4 ಸೆಟ್‌ಗಳಿಂದ ಸೋಲಿಸಿದ ಬಾರ್ಬೊರಾ ಕ್ರೆಚಿಕೋವಾ 2024ರ ವಿಂಬಲ್ಡನ್ ಮಹಿಳಾ ಸಿಂಗಲ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಜಾಸ್ಮಿನ್ ಪಾವೊಲಿನಿ ವಿರುದ್ಧ ಜಯ ಸಾಧಿಸಲು 28ರ ಹರೆಯದ ಝೆಕ್ ರಿಪಬ್ಲಿಕ್‌ನ ಆಟಗಾರ್ತಿ ಬಾರ್ಬೊರಾ ಕ್ರೆಚಿಕೋವಾ ಒಂದು ಗಂಟೆ 56 ನಿಮಿಷಗಳನ್ನು ತೆಗೆದುಕೊಂಡರು.
2021ರಲ್ಲಿ ಬಾರ್ಬೊರಾ ಕ್ರೆಚಿಕೋವಾ 2021ರ ಫ್ರೆಂಚ್ ಓಪನ್ ಟ್ರೋಫಿಯನ್ನು ಗೆದ್ದಿದ್ದರು. ವಿಂಬಲ್ಡನ್ ಗೆಲ್ಲುವ ಮೂಲಕ ಎರಡನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ.
The moment a dream became reality ✨#Wimbledon | @BKrejcikova pic.twitter.com/38xPz9pCin
— Wimbledon (@Wimbledon) July 13, 2024
2017ರಲ್ಲಿ ನಿಧನರಾದ ಬಾರ್ಬೊರಾ ಕ್ರೆಚಿಕೋವಾ ಅವರ ಮಾರ್ಗದರ್ಶಕಿ ಜನಾ ನೊವೊಟ್ನಾ ಅವರು 1998ರ ವಿಂಬಲ್ಡನ್‌ನಲ್ಲಿ ತಮ್ಮ ಏಕೈಕ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದಿದ್ದರು.
ಜಾಸ್ಮಿನ್ ಪಾವೊಲಿನಿ ವಿಂಬಲ್ಡನ್ ಫೈನಲ್ ತಲುಪಿದ ಮೊದಲ ಇಟಾಲಿಯನ್ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಸಿಂಗಲ್ಸ್ ಗ್ರ್ಯಾಂಡ್ ಸ್ಲ್ಯಾಮ್ ಅನ್ನು ಗೆದ್ದ ಮೊದಲ ಇಟಾಲಿಯನ್ ಪುರುಷ ಅಥವಾ ಮಹಿಳೆಯಾಗುವ ಅವಕಾಶವನ್ನು ಜಾಸ್ಮಿನ್ ಪಾವೊಲಿನಿ ಹೊಂದಿದ್ದರು. ಆದರೆ ಕ್ರೆಚಿಕೋವಾ ವಿರುದ್ಧ ಸೋತದ್ದರಿಂದ ಇತಿಹಾಸ ಸೃಷ್ಟಿಸುವಲ್ಲಿ ವಿಫಲರಾಗಿದ್ದಾರೆ.
ಈ ವರ್ಷದ ಆರಂಭದಲ್ಲಿ ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ನಡೆದಿದ್ದ ಫ್ರೆಂಚ್ ಓಪನ್‌ನ ಫೈನಲ್‌ನಲ್ಲಿ ವಿಶ್ವ ನಂ.1 ಇಗಾ ಸ್ವಿಯಾಟೆಕ್ ವಿರುದ್ಧ ಸೋತು ಜಾಸ್ಮಿನ್ ಪಾವೊಲಿನಿ ಆಘಾತ ಅನುಭವಿಸಿದ್ದರು. ಜಾಸ್ಮಿನ್ ಪಾವೊಲಿನಿ ಮತ್ತೊಮ್ಮೆ ಸೋಲಿನ ವಿರುದ್ಧ ಹೋರಾಡಲು ಸಾಧ್ಯವಾಗಲಿಲ್ಲ. ಆದರೆ, ಬಾರ್ಬೊರಾ ಕ್ರೆಚಿಕೋವಾ ವಿರುದ್ಧ ದಿಟ್ಟ ಹೋರಾಟ ಪ್ರದರ್ಶಿಸುವಲ್ಲಿ ಯಶಸ್ವಿಯಾಗಿದ್ದಾರೆ.
A final photo before the action begins 📸#Wimbledon pic.twitter.com/z7bAasbhw1
— Wimbledon (@Wimbledon) July 13, 2024
2022ರ ಚಾಂಪಿಯನ್ ಎಲೆನಾ ರೈಬಾಕಿನಾ ವಿರುದ್ಧದ ಗೆಲುವಿನಿಂದ ತನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಂತೆ ತೋರುತ್ತಿದ್ದ ಬಾರ್ಬೊರಾ, ಮೊದಲ ಸೆಟ್‌ನಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದ್ದರು. ಬಳಿಕ ದಿಟ್ಟ ಹೋರಾಟ ಪ್ರದರ್ಶಿಸಿದ ಜಾಸ್ಮಿನ್ ಪಾವೊಲಿನಿ ಬ್ಯಾಕ್ ಟು ಬ್ಯಾಕ್ ಪಾಯಿಂಟ್ಸ್ ಗಳಿಸಿದರೆ, ಬಾರ್ಬೊರಾ 2 ಅಂಕದಲ್ಲೇ ಉಳಿದರು. ಈ ಮೂಲಕ ಜಾಸ್ಮಿನ್ 2ನೇ ಸುತ್ತನ್ನು 6-2 ಅಂತರದಿಂದ ಗೆದ್ದುಕೊಂಡರು.
ಆದರೆ ಅಂತಿಮ ಸುತ್ತಿನಲ್ಲಿ ಕಂಬ್ಯಾಕ್ ಮಾಡಿದ ಬಾರ್ಬೊರಾ, ದ್ವಿತೀಯ ಸುತ್ತಿನಲ್ಲಿ ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಂಡರು. ಅಲ್ಲದೆ ಚಾಣಾಕ್ಷ ಆಟದೊಂದಿಗೆ ಜಾಸ್ಮಿನ್ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು. ಅದಾಗ್ಯೂ ಒಂದು ಹಂತದಲ್ಲಿ ಇಬ್ಬರೂ ಕೂಡ 4-4 ಅಂತರದಿಂದ ಸಮಬಲ ಸಾಧಿಸಿದ್ದರಿಂದ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಯಿತು. ಆದರೆ ತಮ್ಮೆಲ್ಲಾ ಅನುಭವನ್ನು ಧಾರೆಯೆರೆದ ಬಾರ್ಬೊರಾ, ಅಂತಿಮವಾಗಿ 6-4 ಅಂತರದಿಂದ ಗೆಲ್ಲುವ ಮೂಲಕ ಚಾಂಪಿಯನ್ ಪಟ್ಟಕ್ಕೇರಿದರು.
A dream realised ✨
Barbora Krejcikova is a #Wimbledon singles champion for the first time, defeating Jasmine Paolini 6-2, 2-6, 6-4 🇨🇿 🏆 pic.twitter.com/k15QgL7Buz
— Wimbledon (@Wimbledon) July 13, 2024
