ಭಾರತದ ಆರ್. ಪ್ರಜ್ಞಾನಂದ ಹಾಗೂ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸೆನ್ ನಡುವೆ ಅಝರ್ಬೈಜಾನ್ನಲ್ಲಿ ನಡೆಯುತ್ತಿರುವ ಚೆಸ್ ವಿಶ್ವಕಪ್ 2023ರ ಫೈನಲ್ನ 2ನೇ ಪಂದ್ಯ ಕೂಡ ಡ್ರಾನಲ್ಲಿ ಅಂತ್ಯಗೊಂಡಿದೆ.
ಈ ಪಂದ್ಯದ ಮೊದಲ ಪಂದ್ಯ ಕೂಡ ಡ್ರಾ ಆಗಿತ್ತು. ಇದೀಗ ಫೈನಲ್ ಪಂದ್ಯದ 2ನೇ ಕ್ಲಾಸಿಕ್ ಆಟ ಕೂಡ ಸಮಬಲದೊಂದಿಗೆ 1-1 ಅಂತರದಿಂದ ಅಂತ್ಯವಾಗಿದೆ. ಹೀಗಾಗಿ ಬುಧವಾರ(ಆಗಸ್ಟ್ 24) ನಡೆಯಲಿರುವ ಟೈಬ್ರೇಕರ್ ಪಂದ್ಯದ ಮೂಲಕ ಅಂತಿಮ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ.
ಮಂಗಳವಾರ ನಡೆದ ಫೈನಲ್ ಪಂದ್ಯದ ಮೊದಲ ಗೇಮ್ನಲ್ಲಿ ನಾರ್ವೆಯ ಕಾರ್ಲ್‌ಸೆನ್ ಅವರನ್ನು ಆರಂಭದಲ್ಲೇ ಪ್ರಜ್ಞಾನಂದ ಅವರು ಒತ್ತಡಕ್ಕೆ ಸಿಲುಕಿಸುವಲ್ಲಿ ಯಶಸ್ವಿಯಾಗಿದ್ದರು. ಅಲ್ಲದೆ ಮೊದಲ ಸುತ್ತು 35 ನಡೆಗಳ ನಂತರ ಡ್ರಾದಲ್ಲಿ ಕೊನೆಗೊಂಡಿತ್ತು.
ಈ ಸುದ್ದಿ ಓದಿದ್ದೀರಾ? ಚೆಸ್‌ನಲ್ಲಿ ಮಿಂಚುತ್ತಿರುವ ತಮಿಳುನಾಡಿನ ಯುವಕ ಪ್ರಜ್ಞಾನಂದ ಬಗ್ಗೆ ನಿಮಗೆಷ್ಟು ಗೊತ್ತು?
ಬುಧವಾರ ನಡೆದ 2ನೇ ಪಂದ್ಯದಲ್ಲಿ ಕಪ್ಪು ಕಾಯಿಗಳೊಂದಿಗೆ ಆಟ ಆರಂಭಿಸಿದ್ದ ಪ್ರಜ್ಞಾನಂದ ಆರಂಭದಲ್ಲೇ ಸಮಬಲದ ಹೋರಾಟ ನಡೆಸಿದ್ದರು. ಕಾರ್ಲ್‌ಸೆನ್ ಆಟಕ್ಕೆ ಅತ್ಯುತ್ತಮ ಚೆಕ್ ನಡೆಗಳ ಮೂಲಕ ಪ್ರಜ್ಞಾನಂದ ಎದುರೇಟು ನೀಡಿದ್ದರು. ಅಂತಿಮವಾಗಿ 22 ನಡೆಗಳ ನಂತರ ಪಂದ್ಯವು ಸಮವಾಗಿತ್ತು. ಈ ಸಮಬಲವನ್ನು ಕಾಯ್ದುಕೊಳ್ಳುವಲ್ಲಿ ಇಬ್ಬರು ಆಟಗಾರರು ಯಶಸ್ವಿಯಾದರು. ಅಲ್ಲದೆ 30 ನಡೆಗಳ ನಂತರ ಪಂದ್ಯವನ್ನು ಡ್ರಾಗೊಳಿಸಲು ಇಬ್ಬರೂ ಆಟಗಾರರು ನಿರ್ಧರಿಸಿದರು.
ಟೈಬ್ರೇಕ್ರ್ನಲ್ಲಿ ಫಲಿತಾಂಶ ಹೇಗೆ?
ಎರಡು ಕ್ಲಾಸಿಕ್ ಗೇಮ್ಗಳಲ್ಲೂ ಫಲಿತಾಂಶ ಹೊರಬರದ ಕಾರಣ ಪಂದ್ಯವನ್ನು ಟೈಬ್ರೇಕರ್ನತ್ತ ಕೊಂಡೊಯ್ಯಲಾಗಿದೆ. ಇಲ್ಲಿ ಇಬ್ಬರು ಆಟಗಾರರಿಗೂ 10-10 ನಿಮಿಷಗಳ ರ್ಯಾಪಿಡ್ ಗೇಮ್ಗಳನ್ನು ಆಡಿಸಲಾಗುತ್ತದೆ. ಇದರಲ್ಲೂ ವಿಜೇತ ಯಾರೆಂದು ನಿರ್ಧಾರವಾಗದಿದ್ದರೆ 5 ನಿಮಿಷಗಳ ಎರಡು ರ್ಯಾಪಿಡ್ ಗೇಮ್ಗಳ ಅವಕಾಶ ನೀಡಲಾಗುತ್ತದೆ.
ಈ ಸುದ್ದಿ ಓದಿದ್ದೀರಾ? ಏಷ್ಯಾ ಕಪ್‌ಗೆ ಭಾರತ ತಂಡ ಪ್ರಕಟ: 18ರ ಬಳಗದಲ್ಲಿ ಇಬ್ಬರು ಕನ್ನಡಿಗರಿಗೆ ಸ್ಥಾನ
ಇನ್ನು ರ್ಯಾಪಿಡ್ ಗೇಮ್ಗಳು ಕೂಡ ಡ್ರಾಗೊಂಡರೆ ಸಡನ್ ಡೆತ್ ಮೋಡ್‌ನಲ್ಲಿ ಒಂದೇ ಬ್ಲಿಟ್ಝ್ ಗೇಮ್ ಆಡಲಾಗುತ್ತದೆ. ಇದರಲ್ಲಿ ಗೆದ್ದವರು ಚಾಂಪಿಯನ್ ಆಗಲಿದ್ದಾರೆ. ಹೀಗಾಗಿ ನಾಳಿನ ಪಂದ್ಯ ರೋಚಕತೆ ಪಡೆಯುವ ಸಾಧ್ಯತೆಯಿದೆ.
ಇದಕ್ಕೂ ಮುನ್ನ ವಿಶ್ವದ 3ನೇ ಚೆಸ್ ತಾರೆ ಫ್ಯಾಬಿಯಾನೊ ಕರುವಾನಾ ಅವರೊಂದಿಗೆ ನಡೆದ ಸೆಮಿಫೈನಲ್ನಲ್ಲಿ ಪ್ರಜ್ಞಾನಂದ ಟೈಬ್ರೇಕರ್ ಮೂಲಕವೇ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದ್ದರು.