ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಇಂದಿನಿಂದ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಪಂದ್ಯ ಆರಂಭಿಸಿರುವ ಭಾರತ ಒಂದು ಓವರ್‌ನಲ್ಲಿ 6 ರನ್ ಗಳಿಸಿದೆ. ರೋಹಿತ್ ಶರ್ಮಾ (5), ಜೈಸ್ವಾಲ್ (0) ಬ್ಯಾಟಿಂಗ್ ಮಾಡುತ್ತಿದ್ದಾರೆ.
ಟೀಂ ಇಂಡಿಯಾ ಆಡುವ 11ರ ಬಳಗದಲ್ಲಿ 4 ಬದಲಾವಣೆಗಳನ್ನು ಮಾಡಲಾಗಿದೆ. ಶ್ರೇಯಸ್ ಅಯ್ಯರ್ ಹಾಗೂ ಕೆ ಎಸ್ ಭರತ್ ಸ್ಥಾನಕ್ಕೆ ಮುಂಬೈನ ಸರ್ಫರಾಜ್ ಖಾನ್ ಹಾಗೂ ಧ್ರವ ಜುರೆಲ್ ಅವರನ್ನು ಆಯ್ಕೆ ಮಾಡಲಾಗಿದೆ. ಅಕ್ಸರ್ ಪಟೇಲ್ ಬದಲು ರವೀಂದ್ರ ಜಡೇಜಾ ಹಾಗೂ ಮುಕೇಶ್ ಕುಮಾರ್ ಅವರನ್ನು ರಣಜಿ ಆಡಲು ಕಳಿಸಲಾಗಿದ್ದು, ಮೊಹಮ್ಮದ್ ಸಿರಾಜ್ ಅವರನ್ನು ಆಯ್ಕೆ ಸೇರಿಸಿಕೊಳ್ಳಲಾಗಿದೆ.
ಆತಿಥೇಯ ಭಾರತ ತಂಡಕ್ಕೆ ಗುರುವಾರ ಆರಂಭವಾಗಲಿರುವ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಕಟ್ಟುನಿಟ್ಟಾದ ಮತ್ತು ಜಾಣ್ಮೆಯನ್ನು ಸಮನಾಗಿ ಬೆರೆಸಿದ ತಂತ್ರಗಾರಿಕೆಯೊಂದಿಗೆ ಆಡಬೇಕಾದ ಅವಶ್ಯಕತೆ ಇದೆ.
ಐದು ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು 1–1ರಿಂದ ಸಮಬಲ ಸಾಧಿಸಿವೆ. ಆತಿಥೇಯ ತಂಡಕ್ಕೆ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಪ್ರಮುಖ ಸಮಸ್ಯೆಯಾಗಿದೆ.
ನಾಯಕ ರೋಹಿತ್ ಶರ್ಮಾ ರನ್‌ಗಳನ್ನು ಗಳಿಸುವಲ್ಲಿ ವಿಫಲರಾಗಿದ್ದಾರೆ. ಅನುಭವಿಗಳಾದ ವಿರಾಟ್ ಕೊಹ್ಲಿ ಮತ್ತು ಕೆ.ಎಲ್. ರಾಹುಲ್ ಅವರ ಅನುಪಸ್ಥಿತಿ ಕೂಡ ಕಾಡುತ್ತಿದೆ. ಕೆ.ಎಸ್. ಭರತ್ ಅವರು ನಿರೀಕ್ಷೆಗೆ ತಕ್ಕಂತೆ ಆಡದಿರುವುದರಿಂದ ಅವರಿಗೆ ವಿಶ್ರಾಂತಿ ಕೊಟ್ಟು ಜುರೇಲ್‌ಗೆ ಸ್ಥಾನ ನೀಡಲಾಗಿದೆ.
ಹೈದರಾಬಾದಿನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಭಾರತಕ್ಕೆ ಆಘಾತ ನೀಡಿತ್ತು. ವಿಶಾಖಪಟ್ಟಣದಲ್ಲಿ ನಡೆದಿದ್ದ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ತಿರುಗೇಟು ನೀಡಿತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಾರ್ಪೊರೇಟ್‌ಗೆ ರೆಡ್ ಕಾರ್ಪೆಟ್, ರೈತರಿಗೆ ಮುಳ್ಳಿನ ಬೇಲಿ- ಇದು ಮೋದಿ ಶೈಲಿ
ತಂಡದ ಯಶಸ್ವಿ ಜೈಸ್ವಾಲ್ ದ್ವಿಶತಕ ಮತ್ತು ಜಸ್‌ಪ್ರೀತ್ ಬೂಮ್ರಾ ಅವರ ಅಮೋಘ ವೇಗದ ಬೌಲಿಂಗ್ ಮುಂದೆ ಇಂಗ್ಲೆಂಡ್ ತಂಡ ತತ್ತರಿಸಿತ್ತು. ಆ ಸೋಲಿಗೆ ಸೇಡು ತೀರಿಸಿಕೊಳ್ಳಲು ಇಂಗ್ಲೆಂಡ್ ಕಾತರದಿಂದ ಕಾಯುತ್ತಿದೆ.
ಬೆನ್ ಸ್ಟೋಕ್ಸ್‌ಗೆ 100ನೇ ಪಂದ್ಯ, 500ಕ್ಕೆ ಅಶ್ವಿನ್‌ಗೆ ಒಂದು ವಿಕೆಟ್ ಬಾಕಿ
ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಅವರು ತಮ್ಮ 100ನೇ ಟೆಸ್ಟ್ ಪಂದ್ಯವನ್ನು ಗೆದ್ದು ಅವಿಸ್ಮರಣೀಯ ಗೊಳಿಸಿಕೊಳ್ಳುವ ತವಕದಲ್ಲಿದ್ದಾರೆ. ಅನುಭವಿ ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಅವರಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್‌ಗಳ ಕ್ಲಬ್ ಸೇರಲು ಇನ್ನೊಂದು ವಿಕೆಟ್ ಮಾತ್ರ ಬಾಕಿ ಇದೆ.
97 ಟೆಸ್ಟ್‌ಗಳನ್ನು ಆಡಿರುವ 37 ವರ್ಷದ ಅಶ್ವಿನ್ ಅವರು ಐದನೂರರ ಗಡಿ ದಾಟಿದ ವಿಶ್ವದ 9ನೇ ಬೌಲರ್ ಆಗಲಿದ್ದಾರೆ. ಅನಿಲ್ ಕುಂಬ್ಳೆ ಅವರ ನಂತರ ಈ ಸಾಧನೆ ಮಾಡಿದ ಭಾರತದ ಸ್ಪಿನ್ನರ್ ಆಗಲಿದ್ದಾರೆ.
ಪಂದ್ಯವಾಡುವ 11ರ ಬಳಗದ ಉಭಯ ತಂಡಗಳು:
ಭಾರತ:
ರೋಹಿತ್ ಶರ್ಮಾ (ನಾಯಕ), ಜಸ್‌ಪ್ರೀತ್ ಬೂಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ರಜತ್ ಪಾಟೀದಾರ್, ಸರ್ಫರಾಜ್ ಖಾನ್, ಧ್ರುವ ಜುರೆಲ್, (ವಿಕೆಟ್‌ಕೀಪರ್), ಆರ್. ಅಶ್ವಿನ್, ರವೀಂದ್ರ ಜಡೇಜ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್,.
ಇಂಗ್ಲೆಂಡ್:
ಬೆನ್ ಸ್ಟೋಕ್ಸ್ (ನಾಯಕ), ರೆಹಾನ್ ಅಹಮದ್, ಜೇಮ್ಸ್ ಆ್ಯಂಡರ್ಸನ್, ಬೆನ್ ಡಕೆಟ್, ಜಾಕ್ ಕ್ರಾಲಿ, ಬೆನ್ ಫೋಕ್ಸ್ (ವಿಕೆಟ್‌ಕೀಪರ್), ಟಾಮ್ ಹಾರ್ಟ್ಲಿ, ಓಲಿ ಪೋಪ್, ಜೋ ರೂಟ್, ಮಾರ್ಕ್ ವುಡ್.