ಲಕ್ನೋ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಶುಕ್ರವಾರ ನಡೆದ ಐಪಿಎಲ್ನ 26ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಗೆದ್ದು ಬೀಗಿದೆ.
ಲಕ್ನೋ ನೀಡಿದ್ದ ಸಾಧಾರಣ ಮೊತ್ತದ ಗುರಿಯನ್ನು ಬೆನ್ನತ್ತಿದ ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ 18.1 ಓವರ್ನಲ್ಲಿ 4 ವಿಕೆಟ್ ನಷ್ಟಕ್ಕೆ 170 ರನ್ ಗಳಿಸುವ ಮೂಲಕ ಗೆಲುವು ಸಾಧಿಸಿದೆ.
DELHI CAPITALS – FIRST TEAM IN IPL HISTORY TO SUCCESSFULLY CHASE 160+ TOTAL VS LSG. 🤯
– Rishabh Pant and his army have created history. 💥 pic.twitter.com/wNL3p2l0XG
— Mufaddal Vohra (@mufaddal_vohra) April 12, 2024
ಡೆಲ್ಲಿ ಪರ ಆರಂಭಿಕ ಆಟಗಾರನಾಗಿ ಬಂದ ಪೃಥ್ವಿ ಶಾ ಕೇವಲ 22 ಎಸೆತದಲ್ಲಿ 6 ಬೌಂಡರಿಯ ನೆರವಿನಿಂದ 32 ರನ್ ಸಿಡಿಸಿದರು. ಜಾಕ್ ಫ್ರೇಸರ್ ತಾನು ಆಡಿದ ಮೊದಲ ಐಪಿಎಲ್ ಪಂದ್ಯದಲ್ಲೇ 35 ಎಸೆತದಲ್ಲಿ 5 ಸಿಕ್ಸರ್, 2 ಬೌಂಡರಿಯ ನೆರವಿನೊಂದಿಗೆ 55 ರನ್ ಗಳಿಸುವ ಮೂಲಕ ಮೊದಲ ಅರ್ಧಶತಕ ದಾಖಲಿಸಿ ಮಿಂಚಿದರು.
3 CONSECUTIVE SIXES BY JAKE FRASER-MCGURK AGAINST KRUNAL. 🤯💥pic.twitter.com/R8efQ8NeLr
— Mufaddal Vohra (@mufaddal_vohra) April 12, 2024
ಡೆಲ್ಲಿಯ ನಾಯಕ ರಿಷಭ್ ಪಂತ್ 24 ಎಸೆತದಲ್ಲಿ 2 ಸಿಕ್ಸರ್, 4 ಬೌಂಡರಿಯ ನೆರವಿನೊಂದಿಗೆ 41 ರನ್ ಗಳಿಸುವ ಮೂಲಕ ಮಿಂಚಿದರು. ಕೊನೆಯಲ್ಲಿ ಸ್ಟಬ್ಸ್ 15, ಶಾಯ್ ಹೋಪ್ 11 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ಬೌಲಿಂಗ್ನಲ್ಲಿ ಲಕ್ನೋ ಪರ ರವಿ ಬಿಷ್ನೋಯ್ 2 ವಿಕೆಟ್ ಪಡೆದರೆ, ಯಶ್ ಠಾಕೂರ್ ಹಾಗೂ ನವೀನುಲ್ ಹಕ್ ತಲಾ ಒಂದೊಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡ ಆಯುಷ್ ಬದೊನಿ ಅವರ ಏಕೈಕ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತ್ತು.
ಲಕ್ನೋ ತಂಡದ ಪರ ಡಿಕಾಕ್ 19 ಮತ್ತು ಕ್ಯಾಪ್ಟನ್ ಕೆ.ಎಲ್ ರಾಹುಲ್ 22 ಎಸೆತದಲ್ಲಿ 1 ಸಿಕ್ಸರ್, 5 ಬೌಂಡರಿ ಸಮೇತ 39 ರನ್ ಗಳಿಸಿದರು. ಬಳಿಕ ಆಯುಷ್ ಬದೊನಿ 35 ಎಸೆತದಲ್ಲಿ 1 ಸಿಕ್ಸರ್, 5 ಬೌಂಡರಿಯ ನೆರವಿನೊಂದಿಗೆ 55 ರನ್ ಗಳಿಸಿದರು.
For his skilful bowling display in the first innings, Kuldeep Yadav becomes the Player of the Match 🏆
Scorecard ▶️ https://t.co/0W0hHHG2sq#TATAIPL | #LSGvDC pic.twitter.com/rVfgFWWHiM
— IndianPremierLeague (@IPL) April 12, 2024
ಬೌಲಿಂಗ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಕುಲ್ದೀಪ್ ಯಾದವ್ 4 ಓವರ್ಗಳಲ್ಲಿ 20 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ಖಲೀಲ್ ಅಹ್ಮದ್ 4 ಓವರ್ಗಳಲ್ಲಿ 41 ರನ್ ನೀಡಿ 2 ವಿಕೆಟ್ ಪಡೆದರೆ, ಇಶಾಂತ್ ಶರ್ಮಾ ಮತ್ತು ಮುಕೇಶ್ ಕುಮಾರ್ ತಲಾ ಒಂದೊಂದು ವಿಕೆಟ್ ಪಡೆದಿದ್ದರು.
ಪಂದ್ಯಶ್ರೇಷ್ಠ ಪ್ರಶಸ್ತಿ: ಕುಲ್ದೀಪ್ ಯಾದವ್(ಡೆಲ್ಲಿ ಕ್ಯಾಪಿಟಲ್ಸ್)
