ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವೆ ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನ ಮೂರನೇ ದಿನದಾಟ ಮುಕ್ತಾಯ ಕಂಡಿದ್ದು, ಟೀಮ್ ಇಂಡಿಯಾದ ಬಲಿಷ್ಠ ಸ್ಪಿನ್ ದಾಳಿಯ ನಡುವೆಯೂ ಕೂಡ ಶತಕ ಗಳಿಸುವ ಮೂಲಕ ಓಲಿ ಪೋಪ್, ಆಂಗ್ಲನ್ನರ ಹೋಪ್(ನಂಬಿಕೆ) ಅನ್ನು ಇನ್ನೂ ಜೀವಂತವಿಟ್ಟಿದ್ದಾರೆ.
ಮೂರನೇ ದಿನದಾಟದಲ್ಲಿ ಇಂಗ್ಲೆಂಡ್ ಸಂಪೂರ್ಣ ಮೇಲುಗೈ ಸಾಧಿಸಿದ್ದು, ಎರಡನೇ ಇನ್ನಿಂಗ್ಸ್‌ನಲ್ಲಿ ಆರು ವಿಕೆಟ್ ಕಳೆದುಕೊಂಡು 316 ರನ್‌ಗಳಿಸಿದೆ. ಆ ಮೂಲಕ 126 ರನ್‌ಗಳ ಮುನ್ನಡೆ ಸಾಧಿಸಿದೆ.
Ollie Pope’s 148* leads England’s spirited fightback on Day 3 in Hyderabad 💪https://t.co/WzuwYpQ2Rp | #INDvENG pic.twitter.com/mfXzeFoiC6
— ESPNcricinfo (@ESPNcricinfo) January 27, 2024
ಮುತ್ತಿನಗರಿಯಲ್ಲಿ ಶನಿವಾರ ಉತ್ತಮ ಇನ್ನಿಂಗ್ಸ್ ಆಡಿರುವ ಇಂಗ್ಲೆಂಡ್‌ನ ಬಲಗೈ ಬ್ಯಾಟರ್ ಓಲಿ ಪೋಪ್ 208 ಎಸೆತಗಳನ್ನು ಎದುರಿಸಿ, 17 ಬೌಂಡರಿಗಳ ನೆರವಿನಿಂದ ಔಟಾಗದೆ 148 ರನ್ ಗಳಿಸಿದ್ದಾರೆ. ಔಟಾಗದೆ 16 ರನ್ ಗಳಿಸಿರುವ ರೆಹಾನ್ ಅಹ್ಮದ್ ಜೊತೆಗೆ ನಾಲ್ಕನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಪೋಪ್ ಅವರನ್ನು ಔಟ್ ಮಾಡಲು ಟೀಮ್ ಇಂಡಿಯಾ ಸ್ಪಿನ್ ಬೌಲರ್‌ಗಳು ಸತತ ಪ್ರಯತ್ನ ನಡೆಸಿದರಾದರೂ, ಕೊನೆಯವರೆಗೂ ಸಫಲರಾಗಲಿಲ್ಲ. ಇವರನ್ನು ಔಟ್ ಮಾಡುವುದು ನಿಜಕ್ಕೂ ಟೀಮ್ ಇಂಡಿಯಾದ ಸ್ಟಾರ್ ಬೌಲರ್‌ಗಳಿಗೆ ಸವಾಲಾಯಿತು. ಟೀಮ್ ಇಂಡಿಯಾದ ಎಲ್ಲ ಬೌಲಿಂಗ್ ತಂತ್ರವನ್ನು ಮೆಟ್ಟಿನಿಂತು ಪೋಪ್ ಶತಕ ದಾಖಲಿಸಿಕೊಂಡರು.
Some of those shots… 😮💨
Keep your appreciation for that innings coming! 👇
🇮🇳 #INDvENG 🏴 | @OPope32 pic.twitter.com/Mi8KiyS9Lq
— England Cricket (@englandcricket) January 27, 2024
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನ ಮೂರನೇ ದಿನವು ಟೀಮ್ ಇಂಡಿಯಾದ ಬ್ಯಾಟಿಂಗ್‌ನೊಂದಿಗೆ ಪ್ರಾರಂಭವಾಯಿತು. ಎರಡನೇ ದಿನದಾಟ ಮುಗಿದಾಗ 7 ವಿಕೆಟ್ ಕಳೆದುಕೊಂಡು 421 ರನ್ ಗಳಿಸಿತ್ತು. ರವೀಂದ್ರ ಜಡೇಜಾ 81 ಮತ್ತು ಅಕ್ಷರ್ ಪಟೇಲ್ 35 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು.
Stumps on Day 3 in Hyderabad!
England reach 316/6 with a lead of 126 runs.
An exciting Day 4 awaits ⏳
Scorecard ▶️ https://t.co/HGTxXf8b1E#TeamIndia | #INDvENG | @IDFCFIRSTBank pic.twitter.com/UqklfIiPKL
— BCCI (@BCCI) January 27, 2024
ಮೂರನೇ ದಿನದಾಟ ಪ್ರಾರಂಭಿಸಿದ ಟೀಮ್ ಇಂಡಿಯಾದ ಈ ಜೋಡಿ ಬ್ಯಾಟ್ಸ್‌ಮನ್ ಗಳು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲು ಸಾಧ್ಯವಾಗದೆ ಆತಿಥೇಯ ತಂಡದ ಇನ್ನಿಂಗ್ಸ್ 436 ರನ್ ಗಳಿಗೆ ಆಲೌಟಾದರು. ಇದರೊಂದಿಗೆ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 190 ರನ್‌ಗಳ ಮುನ್ನಡೆ ಸಾಧಿಸಿತು.
ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 246 ರನ್ ಗಳಿಸಿ ಆಲೌಟಾಗಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಪರವಾಗಿ ಕ್ರಾಲಿ 20, ಬೆನ್ ಡಕೆಟ್ 47, ಬೆನ್ ಫೋಕ್ಸ್ 34 ರನ್ ಗಳಿಸಿದರು. ಆದರೆ ಜೋ ರೂಟ್(2 ರನ್), ಬೆನ್ ಸ್ಟೋಕ್ಸ್(6 ರನ್), ಜಾನಿ ಬೈರ್‌ಸ್ಟೋವ್(10 ರನ್) ಬ್ಯಾಟ್‌ನಿಂದ ಉತ್ತಮ ರನ್ ಬರಲೇ ಇಲ್ಲ.
ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಇಂಗ್ಲೆಂಡ್, ಒಲಿ ಪೋಪ್ ಅವರ ಶತಕದ ನೆರವಿನಿಂದ ದಿನದಾಟದ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 316 ರನ್ ಸೇರಿಸಿದ್ದು, 126 ರನ್‌ಗಳ ಮುನ್ನಡೆ ಸಾಧಿಸಿದೆ.
ಮೂರನೇ ದಿನದ ಬೌಲಿಂಗ್‌ನಲ್ಲಿ ಟೀಮ್ ಇಂಡಿಯಾದ ಪರವಾಗಿ ರವೀಂದ್ರ ಜಡೇಜಾ ಹಾಗೂ ಬುಮ್ರಾ ತಲಾ 2 ವಿಕೆಟ್ ಪಡೆದುಕೊಂಡರೆ, ಅಕ್ಷರ್ ಪಟೇಲ್ ಹಾಗೂ ರವಿಚಂದ್ರನ್ ಅಶ್ವಿನ್ ತಲಾ ಒಂದೊಂದು ವಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.