ಏಳು ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದರು ಕೊನೆಯಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕ್ರೀಸ್‌ಗ ಬಂದ ಅಶುತೋಷ್ ಶರ್ಮಾ ಅವರ ಸ್ಫೋಟಕ ಬ್ಯಾಟಿಂಗ್‌ನಿಂದ ಡೆಲ್ಲಿ ತಂಡ ಲಖನೌ ವಿರುದ್ಧ 1 ವಿಕೆಟ್ ರೋಚಕ ಜಯ ಸಾಧಿಸಿದೆ.
ವಿಶಾಖಪಟ್ಟಣಂನಲ್ಲಿ ನಡೆದ 18ನೇ ಆವೃತ್ತಿಯ 4ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಲಖನೌ 8 ವಿಕೆಟ್ ನಷ್ಟಕ್ಕೆ 209 ರನ್ ಹೊಡೆಯಿತು. ಕಠಿಣ ಸವಾಲು ಬೆನ್ನತ್ತಿದ ಡೆಲ್ಲಿ ಆರಂಭದಲ್ಲೇ ವಿಕೆಟ್ ಕಳೆದುಕೊಂಡರೂ ಅಂತಿಮವಾಗಿ 19.3 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 211 ರನ್‌ಗಳಿಸಿ ಗೆಲುವು ಪಡೆಯಿತು.
ಡೆಲ್ಲಿ 7 ರನ್‌ಗಳಿಸುವಷ್ಟರಲ್ಲೇ 3 ವಿಕೆಟ್ ಕಳೆದುಕೊಂಡು ತೊಂದರೆಯಲ್ಲಿತ್ತು. ನಾಯಕ ಅಕ್ಷರ್ ಪಟೇಲ್ 22 ರನ್ (11 ಎಸೆತ, 3 ಬೌಂಡರಿ, 1 ಸಿಕ್ಸ್), ಡುಪ್ಲೆಸಿಸ್ 29 ರನ್(18 ಎಸೆತ, 3 ಬೌಂಡರಿ, 2 ಸಿಕ್ಸ್) ಸಿಡಿಸಿ ಸ್ವಲ್ಪ ಚೇತರಿಕೆ ನೀಡಿದರು. ಟ್ರಿಸ್ಟಾನ್ ಸ್ಟಬ್ಸ್ 34 ರನ್(22 ಎಸೆತ, 1 ಬೌಂಡರಿ, 3 ಸಿಕ್ಸ್) ಸಿಡಿಸಿ ಔಟಾದಾಗ ಪಂದ್ಯ ಲಖನೌ ಪರ ವಾಲಿತ್ತು.
7ನೇ ವಿಕೆಟಿಗೆ ಅಶುತೋಷ್ ಮತ್ತು ನಿಗಮ್ 22 ಎಸೆತಗಳಲ್ಲಿ 55 ರನ್ ಹೊಡೆಯುವ ಮೂಲಕ ಪಂದ್ಯಕ್ಕೆ ರೋಚಕ ತಿರುವು ನೀಡಿದರು. ಡೆಲ್ಲಿ ಪರ 16ನೇ ಓವರ್‌ನಲ್ಲಿ 20 ರನ್, 17 ನೇ ಓವರ್‌ನಲ್ಲಿ 3 ರನ್, 18ನೇ ಓವರ್‌ನಲ್ಲಿ 17 ರನ್, 19ನೇ ಓವರ್‌ನಲ್ಲಿ 16 ರನ್ ಬಂದಿತ್ತು. 20ನೇ ಓವರ್‌ನಲ್ಲಿ 6 ರನ್ ಬೇಕಿತ್ತು.
ಸ್ಟ್ರೈಕ್‌ನಲ್ಲಿದ್ದ ಮೋಹಿತ್ ಶರ್ಮಾ ಮೊದಲ ಎಸೆತದಲ್ಲಿ ಸ್ಟಂಪ್ ಔಟಾಗುವ ಸಾಧ್ಯತೆ ಇತ್ತು. ಎರಡನೇ ಎಸೆತದಲ್ಲಿ 1 ರನ್ ಓಡಿ ಅಶುತೋಷ್‌ಗೆ ಸ್ಟ್ರೈಕ್ ನೀಡಿದರು.3ನೇ ಎಸೆತವನ್ನು ಅಶುತೋಶ್ ಸಿಕ್ಸ್‌ಗೆ ಅಟ್ಟುವ ಮೂಲಕ ಡೆಲ್ಲಿ ತಂಡಕ್ಕೆ ಜಯವನ್ನು ತಂದುಕೊಟ್ಟರು.
ಈ ಸುದ್ದಿ ಓದಿದ್ದೀರಾ? ಪಾಕಿಸ್ತಾನ V/s ನ್ಯೂಜಿಲೆಂಡ್ | ಬ್ಯಾಟರ್ಗಳ ಅಬ್ಬರ; ವಿಶ್ವ ದಾಖಲೆ ಛಿದ್ರಗೊಳಿಸಿದ ಪಾಕ್ ತಂಡ
ವಿಪ್ರಜ್ ನಿಗಮ್ 39 ರನ್(15 ಎಸೆತ, 5 ಬೌಂಡರಿ, 2 ಸಿಕ್ಸ್) ಹೊಡೆದು ಔಟಾದರೆ ಅಶುತೋಷ್ ಔಟಾಗದೇ 66 ರನ್(31 ಎಸೆತ, 5 ಬೌಂಡರಿ, 5 ಸಿಕ್ಸ್) ಸಿಡಿಸಿ ಗೆಲುವು ತಂದರು.
ಈ ಮೊದಲು ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಲಖನೌ ಉತ್ತಮ ಆರಂಭ ಪಡೆಯಿತು. ಮಾಕ್ರಮ್ ಮತ್ತು ಮಿಚೆಲ್ ಮಾರ್ಶ್ ಮೊದಲ ವಿಕೆಟಿಗೆ 46 ರನ್ ಹೊಡೆದರು. ಎರಡನೇ ವಿಕೆಟಿಗೆ ಮಾರ್ಶ್ ಮತ್ತು ನಿಕೂಲಸ್ ಪೂರನ್ 42 ರನ್ ಎಸೆತಗಳಲ್ಲಿ 87 ರನ್ ಜೊತೆಯಾಟವಾಡಿದರು.
ಮಾರ್ಶ್ 72 ರನ್(36 ಎಸೆತ, 6 ಬೌಂಡರಿ, 6 ಸಿಕ್ಸರ್) ಹೊಡೆದರೆ ಪೂರನ್ 75 ರನ್(30 ಎಸೆತ, 6 ಬೌಂಡರಿ, 7 ಸಿಕ್ಸ್) ಹೊಡೆದು ಔಟಾದರು. ಕೊನೆಯಲ್ಲಿ ಡೇವಿಡ್ ಮಿಲ್ಲರ್ ಔಟಾಗದೇ 27 ರನ್( 19 ಎಸೆತ, 1 ಬೌಂಡರಿ, 2 ಸಿಕ್ಸ್) ಸಿಡಿಸಿದ ಪರಿಣಾಮ ಲಖನೌ 200 ರನ್‌ಗಳ ಗಡಿಯನ್ನು ದಾಟಿತು.
ಪಂತ್‌ಗೂ ಬಿಸಿ ಮುಟ್ಟಿಸಿದ ಲಖನೌ ಮಾಲೀಕ ಸಂಜೀವ್ ಗೋಯಂಕಾ!
ಐಪಿಎಲ್ನ 4ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಲಖನೌ ಸೂಪರ್ ಜೈಂಟ್ಸ್ 1 ವಿಕೆಟ್ನಿಂದ ಸೋಲೊಪ್ಪಿಕೊಂಡಿದೆ. ಈ ಸೋಲಿನ ಬೆನ್ನಲ್ಲೇ ಎಲ್‌ಎಸ್‌ಜಿ ತಂಡದ ಮಾಲೀಕರಾದ ಸಂಜೀವ್ ಗೊಯೆಂಕಾ ಅವರು ಮೈದಾನದಲ್ಲಿ ಕಾಣಿಸಿಕೊಂಡಿದ್ದಾರೆ.
ಕಳೆದ ಆವೃತ್ತಿಯಲ್ಲಿ ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಎಲ್‌ಎಸ್‌ಜಿ ತಂಡವು ಹೀನಾಯವಾಗಿ ಸೋಲನುಭವಿಸಿತ್ತು. ಈ ಸೋಲಿನ ಬಳಿಕ ಸಂಜೀವ್ ಗೊಯೆಂಕಾ ಎಲ್‌ಎಸ್‌ಜಿ ತಂಡದ ನಾಯಕರಾಗಿದ್ದ ಕೆ ಎಲ್ ರಾಹುಲ್ ಅವರನ್ನು ಮೈದಾನದಲ್ಲೇ ತರಾಟೆಗೆ ತೆಗೆದುಕೊಂಡಿದ್ದರು.
ಲಖನೌ ಸೂಪರ್ ಜೈಂಟ್ಸ್ ತಂಡದ ಮಾಲೀಕರ ಈ ನಡೆಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಆಕ್ರೋಶಗಳು ವ್ಯಕ್ತವಾಗಿದ್ದವು. ಅಲ್ಲದೆ ಇದೇ ಕಾರಣದಿಂದ ಕೆ ಎಲ್ ರಾಹುಲ್ ಕೂಡ ಎಲ್‌ಎಸ್‌ಜಿ ತಂಡವನ್ನು ತೊರೆದಿದ್ದರು. ಇದೀಗ ನಾಯಕ ಬದಲಾದರೂ, ಲಖನೌ ಸೂಪರ್ ಜೈಂಟ್ಸ್ ಮಾಲೀಕರು ಮಾತ್ರ ಬದಲಾಗಿಲ್ಲ.
ಮೊದಲ ಪಂದ್ಯದ ಸೋಲಿನ ಬೆನ್ನಲ್ಲೇ ಹೊಸ ನಾಯಕ ರಿಷಭ್ ಪಂತ್ ಅವರೊಂದಿಗೆ ಸಂಜೀವ್ ಗೊಯೆಂಕಾ ಪಂದ್ಯದ ಬಗ್ಗೆ ಚರ್ಚಿಸುತ್ತಿರುವುದು ದೃಶ್ಯಗಳಲ್ಲಿ ಕಾಣಿಸಿಕೊಂಡಿದೆ. ಇದ ಕೆ ಎಲ್ ರಾಹುಲ್ಗೆ ಆದ ಪರಿಸ್ಥಿತಿಯೇ ಪಂತ್‌ಗೂ ಬಂದು ಎರಗಲಿದೆಯಾ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
