ಪಾಕಿಸ್ತಾನ V/s ನ್ಯೂಜಿಲೆಂಡ್‌ | ಬ್ಯಾಟರ್​ಗಳ ಅಬ್ಬರ; ವಿಶ್ವ ದಾಖಲೆ ಛಿದ್ರಗೊಳಿಸಿದ ಪಾಕ್‌ ತಂಡ

Date:

ಟಿ20 ಕ್ರಿಕೆಟ್‌ನಲ್ಲಿ ಪಾಕಿಸ್ತಾನ ಕ್ರಿಕೆಟ್‌ ತಂಡ ಅಬ್ಬರ ಬ್ಯಾಟಿಂಗ್‌ ಮಾಡಿದ್ದು, ವಿಶ್ವ ದಾಖಲೆಯನ್ನು ಮುರಿದು, ಬೃಹತ್ ದಾಖಲೆ ಸೃಷ್ಟಿಸಿದೆ. 204 ರನ್‌ಗಳನ್ನು ಬೆನ್ನತ್ತಿದ ಪಾಕ್‌ ಬ್ಯಾಟರ್‌ಗಳು ಕೇವಲ 16 ಓವರ್‌ಗಳಲ್ಲಿಯೇ 207 ರನ್‌ ಬಾರಿಸಿ, ಪಂದ್ಯ ಗೆಲ್ಲುವ ಮೂಲಕ ವಿಶ್ವ ದಾಖಲೆ ಬರೆದಿದ್ದಾರೆ.

- Advertisement -

ಪಾಕಿಸ್ತಾನ ಮತ್ತು ನ್ಯೂಜಿಲೆಂಡ್‌ ತಂಡಗಳ ನಡುವೆ ಟಿ20 ಪಂದ್ಯಾವಳಿ ನಡೆಯುತ್ತಿದೆ. ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿದ ನ್ಯೂಜಿಲೆಂಡ್‌ ತಂಡ 19.5 ಓವರ್‌ಗಳಲ್ಲಿ 204 ರನ್‌ ಗಳಿಸಿ ಆಲ್‌ಔಟ್‌ ಆಗಿತ್ತು. ಪಾಕ್‌ ತಂಡಕ್ಕೆ 205 ರನ್‌ಗಳ ಗೆಲುವಿನ ಗುರಿ ನೀಡಿತ್ತು. ನಂತರ, ಬ್ಯಾಟಿಂಗ್‌ಗೆ ಇಳಿದ ಪಾಕ್‌ ತಂಡ ಕೇವಲ 16 ಓವರ್‌ಗಳಲ್ಲಿಯೇ 207 ರನ್‌ ಗಳಿಸಿದೆ. ಪಂದ್ಯವನ್ನು ಗೆದ್ದಿದೆ. ಮಾತ್ರವಲ್ಲದೆ, ಹೊಸ ದಾಖಲೆ ಸೃಷ್ಟಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ನ್ಯೂಜಿಲೆಂಡ್ ಪರವಾಗಿ ಬ್ಯಾಟಿಂಗ್‌ ಮಾಡಿದ ಮಾರ್ಕ್​ ಚಾಪ್ಮನ್ 44 ಎಸೆತಗಳಲ್ಲಿ 4 ಸಿಕ್ಸ್, 11 ಫೋರ್​ಗಳೊಂದಿಗೆ 94 ರನ್ ಬಾರಿಸಿದ್ದರು. ತಂಡವು 200 ರನ್‌ಗಳನ್ನು ದಾಟಲು ನೆರವಾದರು.

ಆದಾಗ್ಯೂ, ಕಠಿಣ ಸವಾಲಿನ ರನ್‌ಗಳ ಬೆನ್ನತ್ತಿದ ಪಾಕ್‌ ತಂಡದ ಆರಂಭಿಕ ಆಟಗಾರ ಹಸನ್ ನವಾಝ್ ಅಜೇಯರಾಗಿ ಉಳಿದು, ಕೇವಲ 45 ಎಸೆತಗಳಲ್ಲಿ 7 ಸಿಕ್ಸ್ ಮತ್ತು 10 ಫೋರ್​ಗಳೊಂದಿಗೆ 105 ರನ್ ಬಾರಿಸಿದರು. ಉಳಿದ ಜೊತೆ ಆಟಗಾರರು ಉತ್ತಮ ಪ್ರದರ್ಶನ ನೀಡಿದರು. ಪರಿಣಾಮವಾಗಿ, 16 ಓವರ್‌ಗಳಲ್ಲಿಯೇ ಪಾಕ್‌ ಪಡೆ ಪಂದ್ಯವನ್ನು ಗೆದ್ದು ಬೀಗಿದೆ.

ಟಿ20 ಕ್ರಿಕೆಟ್ ಇತಿಹಾಸದಲ್ಲೇ 200+ ರನ್​ಗಳ ಟಾರ್ಗೆಟ್ಅನ್ನು ಅತೀ ಕಡಿಮೆ ಓವರ್​ಗಳಲ್ಲಿ ಚೇಸ್ ಮಾಡಿದ ತಂಡ ಎಂಬ ಹೆಗ್ಗಳಿಕೆಗೆ ಪಾಕ್‌ ತಂಡ ಭಾಜನವಾಗಿದೆ.

ಈ ಹಿಂದೆ, 2007ರಲ್ಲಿ ವೆಸ್ಟ್‌ ಇಂಡೀಸ್ ಮತ್ತು ಸೌತ್‌ ಆಫ್ರಿಕಾ ನಡುವೆ ನಡೆದಿದ್ದ ಟಿ20 ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ತಂಡ ದಾಖಲೆ ಬರೆದಿತ್ತು. ಆ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ತಂಡವು 17.4 ಓವರ್‌ಗಳಲ್ಲಿ 206 ರನ್‌ಗಳನ್ನು ಚೇಸ್‌ ಮಾಡಿ, ಗೆದ್ದಿತ್ತು. ಅದೇ ವಿಶ್ವ ದಾಖಲೆಯಾಗಿತ್ತು. ಆದರೆ, ಈಗ ಪಾಕ್‌ ತಂಡ ಆ ದಾಖಲೆಯನ್ನು ಮುರಿದಿದೆ.

ಸದ್ಯ, 200+ ರನ್‌ಗಳನ್ನು ಚೇಸ್‌ ಮಾಡಿ, ಗೆದ್ದ ತಂಡಗಳ ಪಟ್ಟಿಯಲ್ಲಿ ಭಾರತ ತಂಡ 3ನೇ ಸ್ಥಾನದಲ್ಲಿದೆ. 2019ರಲ್ಲಿ ವೆಸ್ಟ್‌ ಇಂಡಿಯಾ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ಭಾರತ ತಂಡವು 18.4 ಓವರ್‌ಗಳಲ್ಲಿ 209 ರನ್‌ಗಳನ್ನು ಚೇಸ್‌ ಮಾಡಿ, ಗೆಲುವು ಸಾಧಿಸಿತ್ತು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಮೆರಿಕ ಹಿಂದಿಕ್ಕಿ ಭಾರತದ ನಂ.1 LNG ಪೂರೈಕೆದಾರನಾದ ಓಮನ್‌!

ಪಶ್ಚಿಮ ಏಷ್ಯಾದ ಸಂಘರ್ಷ ಮತ್ತು ಹಾರ್ಮುಜ್ ಜಲಸಂಧಿಯ ಮೂಲಕ ಅನಿಲ ಪೂರೈಕೆಯಲ್ಲಿ...

ರಷ್ಯಾದಿಂದ ತೈಲ ಖರೀದಿಸಿದ ಅಮೆರಿಕ -ಜಾಗತಿಕ ಸೋಜಿಗ

ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ರಷ್ಯಾದ ಮೇಲೆ ಕಠಿಣ ಆರ್ಥಿಕ ನಿರ್ಬಂಧಗಳನ್ನು ಹೇರಿ,...